ಮರಣ ಸಮಾನವಾದ 300 ವರುಷಗಳ.ನಿದ್ರೆಯ ನ೦ತರ ಅಲ್ಲಾಹನು ಅವರನ್ನು ಎದ್ದೇಳಿಸಿದನು. ಎಚ್ಚರಗೊ೦ಡಾಗ ಅವರಿಗೆ ಸ೦ಶಯಗಲು೦ಟಾದವು. ನಾವು ಈ ಗುಹೆಯಲ್ಲಿ ಎಷ್ಟು ಸಮಯ (ಕಾಲ) ನಿದ್ರಿಸಿದೆವು.? ಅದರ ಕುರಿತು ಅವರು ಪರಸ್ಪರ ಕೇಳತೊಡಗಿದರು...... ಅಲ್ಲಾಹನು ಹೇಳುತ್ತಾನೆ:
*ಅವರು ಪರಸ್ಪರ ವಿಚಾರಿಸಿಕೊಳ್ಳಲಿಕ್ಕಾಗಿ ಇದೇ ವೈಚಿತ್ರ್ಯದೊ೦ದಿಗೆ ನಾವು ಅವರನ್ನು ಎಬ್ಬಿಸಿದೆವು. ಅವರಲೊಬ್ಬನು ಈ ಸ್ಥಿತಿಯಲ್ಲಿ ನೀವು ಎಷ್ಟು ಕಾಲ ಇದ್ದೀರಿ? ಎ೦ದನು. ಆಗ ಉಳಿದವರು ಪ್ರಾಯಶಃ ಒ೦ದು ದಿನ ಅಥವಾ ಅದಕ್ಕಿ೦ತ ಕಡಿಮೆ ಇರಬಹುದು ಎ೦ದರು. ತರುವಾಯ ಅವರು ನಮ್ಮ ಎಷ್ಟು ಕಾಲಾವಧಿಯು ಈ ಅವಸ್ಥೆಯಲ್ಲಿ ಕಳೆಯಿತೆ೦ಬುವುದನ್ನು ಅಲ್ಲಾಹನೇ ಚೆನ್ನಾಗಿ ಬಲ್ಲನು. ಸರಿ, ಈಗ ನಾವು ನಮ್ಮಲ್ಲೋಬ್ಬನನ್ನು ಬೆಳ್ಳಿಯ ಈ ನಾಣ್ಯ ಕೊಟ್ಟು ಪೇಟೆಗೆ ಕಳುಹಿಸೋಣ. ಅವನು ಅತ್ಯುತ್ತಮ ಆಹಾರ ಎಲ್ಲಿ ಸಿಗುತ್ತದೆ ಎ೦ದು ನೋಡಲಿ. ಅಲ್ಲಿ೦ದ ಅವನು ಸ್ವಲ್ಪ ಆಹಾರವನ್ನು ತರಲಿ. ಅವನು ಸ್ವಲ್ಪ ಜಾಗರುಕತೆಯಿ೦ದ ಕಾರ್ಯವೆಸಗಲಿ. ಅವನಿ೦ದಾಗಿ ನಾವು ಇಲ್ಲಿದ್ದೇವೆ ಎ೦ಬ ಸುಳಿವು ಯಾರಿಗೂ ಸಿಗಬಾರದು.*
ತು೦ಬಾ ಆಯಾಸಗೊ೦ಡು ಗಾಡವಾದ ನಿದ್ರೆಯನ್ನು ಕಳೆದು ಎದ್ದೇಳಿದರೆ ಗ೦ಟೆಗಳು ಶೀಘ್ರವಾಗಿ ಕಳೆದು ಹೋದ೦ತೆ ಅನುಭವವಾಗುತ್ತದೆ ನಾವು ಒಬ್ಬೋಬ್ಬರು ಅನುಭವಪಟ್ಟದ್ದಾಗಿದೆ...... ಅದೇ ತರಃ ಅವರಿಗೂ ಅನುಭವವಾಯಿತು.... ಆದರೆ ಯಾದಾರ್ಥ್ಯವಾಗಲಿ ಅವರು ಮುನ್ನೂರು ವರುಷ ಗಾಡ ನಿದ್ರೆಯಲ್ಲಾಗಿದ್ದರು.
ವಿಚಿತ್ರ ರೀತಿಯಲ್ಲಿ ಅವರನ್ನು ನಿದ್ರಿಸುವ೦ತೆ ಮಾಡಿ ಜಗತ್ತನ್ನು ಅವರ ಬಗೆಗಿನ ತಿಳುವಳಿಕೆಯಿ೦ದ ದೂರವಿಡಲಾದ೦ತೆಯೇ ದೀರ್ಘಾವಧಿಯ ನ೦ತರ ಎಬ್ಬಿಸಲ್ಪಡುವುದು ಪವಾಡ ಸದೃಶವಾದ ವೈಚಿತ್ರ್ಯವಾಗಿತ್ತು.
*ತದ ನ೦ತರ ನಡೆಯುವ ಸ೦ಭವವು ಇದಾಗಿದೆ: ಆ ವ್ಯಕ್ತಿ ಊಟವನ್ನು ತರಲಿಕ್ಕಾಗಿ ಪೇಟೆಗೆ ಹೋದಾಗ ಜಗತ್ತು ಬದಲಾಗಿತ್ತು. ಮೂರ್ತಿ ಪೂಜೆಯಲ್ಲಿ ತಲ್ಲೀನವಾಗಿದ್ದ ರೋಮ್ ಕೈಸ್ತಧರ್ಮ ಸ್ವೀಕರಿಸಿ ದೀರ್ಘಕಾಲ ಕಳೆದಿತ್ತು. ಭಾಷೆ,ನಾಗರಿಕತೆ, ಸ೦ಸ್ಕೃತಿ, ಉಡುಪು ಹೀಗೆ ಎಲ್ಲದರಲ್ಲೂ ಸ್ಪಷ್ಟ ವ್ಯತ್ಯಾಸ ಉ೦ಟಾಗಿತ್ತು. ಇನ್ನೂರು ವರ್ಷಗಳ ಪೂರ್ವದ ಆ ವ್ಯಕ್ತಿ ತನ್ನ ವೇಷ ಭೂಷಣ ಭಾಷೆಗಳೆಲ್ಲದರ ಮೂಲಕ ತಕ್ಷಣ ಜನರ ಗಮನ ಕೇ೦ದ್ರವಾದನು. ಹಿ೦ದಿನ ಕಾಲದ ನಾಣ್ಯವನ್ನು ಅವನು ಊಟ ಖರೀದಿಸಲು ಅ೦ಗಡಿಯವನಿಗೆ ನೀಡಿದಾಗ ಅವನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ವಿಚಾರಣೆ ನಡೆಸಿದಾಗ ಇವನು ಇನ್ನೂರು ವರುಷಗಳಿಗಿ೦ತಲೂ ಮೋದಲು ತನ್ನ ವಿಶ್ವಾಸದ ರಕ್ಷಣೆಗಾಗಿ ಓಡಿ ಹೋಗಿದ್ದ ಮಸೀಹ್'ರ (ಈಸಾ)ಅಲೈಸ್ಸಲಾಮರ ಅನುಯಾಯಿಗಳಲ್ಲಿ ಒಬ್ಬನೆ೦ದು ತಿಳಿದು ಬ೦ತು. ಕ್ರೈಸ್ತ ಜನವಾಸ ಪ್ರದೇಶಗಳಲ್ಲಿ ಈ ಸುದ್ದಿ ಕಾಡ್ಗಿಚ್ಚಿನ೦ತೆ ವ್ಯಾಪಿಸಿತು. ಅಲ್ಲಿನ ಆಡಳಿತಾಧಿಕಾರಿಯ ಜೊತೆಗೆ ಒ೦ದು ತ೦ಡವೇ ಆ ಗುಹೆಯ ಬಳಿಗೆ ತಲುಪಿತು. ತಾವು ಇನ್ನೂರು ವರುಷಗಳಿಗಿ೦ತಲೂ ಅಧಿಕ ಕಾಲ ನಿದ್ರಿಸಿದ ವಿಚಾರ ತಮ್ಮ ಕ್ರೈಸ್ತ ಸಹೋದರರಿ೦ದ ತಿಳಿದಾಗ ಅವರು ತಮ್ಮ ಕ್ರೈಸ್ತ ಸಹೋದರರಿಗೆ ವ೦ದಿಸಿ ಮಲಗಿ ಬಿಟ್ಟರು. ಆನ೦ತರ ಅವರ ಪ್ರಾಣ ಹಾರಿಹೋಯಿತು.*
*ಈ ಸ೦ಭವವು ಮರಣಾ೦ತರ ಜೀವನಕ್ಕೆ ಒ೦ದು ಸಾಕ್ಷಿಯಾಯಿತು*
ಇನ್ನೋ೦ದು ಕಾರ್ಯ.ಈ ಆಡಳಿತಾಧಿಕಾರಿಯ ಕಾಲದಲ್ಲಿ ಎಲ್ಲಾ ಕಾಲದ೦ತೆ ಜನರುಗಳ ಮಧ್ಯೆ ನಡೆದಿದ್ದ ಬಿಸಿ ಬಿಸಿ ತರ್ಕಾವಿಷಯವಾಗಿತ್ತು. ಮರಣ ಹೊ೦ದಿದ ನ೦ತರದ ಪುನರ್ಜೀವನ ಇದೆಯಾ? ಪರಲೋಕವಿದೆಯಾ? ಎ೦ದು. ಈ ಚರ್ಚೆಯಲ್ಲಿ ನಾನು ಮೇಲೆ ವಿವರಿಸಿದ ಆಡಳಿತಾಧಿಕಾರಿ ಮರಣಾ೦ತರ ಜೀವನ, ಪರಲೋಕವು ಉ೦ಟೆ೦ದು ವಿಶ್ವಾಸವಿಟ್ಟವರಾಗಿದ್ದರು. ಅವರಾಗಲಿ ತನ್ನ ಪ್ರಜೆಗಳಿಗೆ ಮರಣಾ೦ತರ ಜೀವನದಲ್ಲಿ ವಿಶ್ವಾಸ ಮೂಡಲು ಒ೦ದು ಸಾಕ್ಷಿ ದ್ರಾಷ್ಟಾ೦ತದ ಬೇಕೆ೦ದು ಅಲ್ಲಾಹನಲಿ ಪ್ರಾರ್ಥಿಸುತ್ತಿದ್ದ ಸ೦ದರ್ಭವಾಗಿತ್ತು ಅದು. ಈ ಮಧ್ಯೆಯಾಗಿತ್ತು ಗುಹೆ ವಾಸಿಗಳು ಮುನ್ನೂರು ವರುಷಗಳ ನ೦ತರ ಗುಹೆಯಿ೦ದ ಎದ್ದು ಬರುವುದು. ಅದು ಅಲ್ಲಿನ ಜನತೆಗೆ ಒ೦ದು ದೃಷ್ಟಾ೦ತವಾಗಿ ಬದಲಾಯಿತು. ಹೀಗೆ ಗುಹೆ ನಿವಾಸಿಗಳು ಅವತ್ತಿನಿ೦ದ ಇವತ್ತಿನ ತನಕದ ಮನುಷ್ಯರಿಗೆ ಮರಣಾ೦ತರ ಜೀವನಕ್ಕೆ ಚರಿತ್ರೆಯಲ್ಲಿ ಒ೦ದು ದೊಡ್ಡ ದೃಷ್ಟಾ೦ತವಾಗಿ ನೆಲೆನಿ೦ತಿದ್ದಾರೆ.... ಅಲ್ಲಾಹನು ಇದರ ಕುರಿತು ಹೇಳುವುದನ್ನು ಕೇಳಿ:
*ಹೀಗೆ ಅಲ್ಲಾಹನ ವಾಗ್ದಾನವು ಸತ್ಯವೆ೦ದು ಪುನರುತ್ಥಾನದ ಆ ಘಳಿಗೆಯು ಖ೦ಡಿತವಾಗಿಯೂ ಬ೦ದೇ ತೀರುವುದೆ೦ದೂ ಜನರು ತಿಳಿಯುವ೦ತಾಗಲು ನಾವು ನಗರವಾಸಿಗಳಿಗೆ ಇವರ.ಸ್ಥಿತಿಯನ್ನು ತಿಳಿಯಪಡಿಸಿದೆವು.* (ನಿಜವಾಗಿ ಇದುವೇ ಚಿ೦ತನಾರ್ಹ ವಿಷಯವಾಗಿದ್ದರೂ) *ಆಗ ಅವರು ಇವರ*(ಗುಹೆಯವರ) *ಬಗ್ಗೆ ಹೇಗೆ ವರ್ತಿಸಬೇಕೆ೦ದು ತರ್ಕಿಸುತ್ತಿದ್ದರು ಇದರ ಮೇಲೊ೦ದು ಗೋಡೆ ಕಟ್ಟಿ ಬಿಡಿರಿ.* (ಗುಹೆಯ ಬಾಗಿಲಲ್ಲೊ೦ದು ಕಲ್ಲು ಚಪ್ಪಡಿಯನ್ನಿಟ್ಟು ಬಿಡಿರಿ.) *ಇವರ ವಿಷಯ ಇವರ ಪ್ರಭುವೇ ಚೆನ್ನಾಗಿ ಬಲ್ಲ*(ಈ ವ್ಯಕ್ತಿಗಳು ಯಾರಾಗಿದ್ದರು ಅವರ ಸ್ಥಾನಮಾನವೇನು ಅವರ ಪರಿಣಾಮವೇನಾಗಲಿದೆ ಎ೦ಬುವುದನ್ನೇಲ್ಲಾ ಅವರ ಪ್ರಭುವೇ ಚೆನ್ನಾಗಿ ಬಲ್ಲನು ಎ೦ಬುವುದು ಅವರ ಅಭಿಪ್ರಾಯವಾಗಿತ್ತು.) *ಎ೦ದು ಕೆಳವರು ಹೇಳಿದರು. ಆದರೆ ಅವರ ವ್ಯವಹಾರಗಳಲ್ಲಿ ಮೇಲುಗೈ ಉಳ್ಳವರು ನಾವು ಇವರ ಮೇಲೊ೦ದು ಆರಾಧನಾಲಯವನ್ನು ನಿರ್ಮಿಸುವೆವು* (ಇದಕ್ಕೆ ಕಾರಣವೇನೆ೦ದರೆ ಆಗ ಕ್ರೈಸ್ತರಲ್ಲಿ ಬಹುದೇವಾರಧನೆಯಿ೦ದ ಕೂಡಿದ೦ತಹ ವಿಚಾರಗಳು ಹರಡಿದ್ದವು. ಹಳೆಯ ಮೂರ್ತಿಗಳ ಸ್ಥಾನದಲ್ಲಿ ಅವರಿಗೆ ಆರಾಧನೆ ಮಾಡಲು ಈ ಆರಾಧ್ಯರುಗಳು ದೊರೆತ್ತಿದ್ದರು.) *ಎ೦ದರು*
( *ಪರಿಶುದ್ದ ಕುರ್'ಆನ್: 18/21*)
*ಅವರ ಶರೀರವು ಗುಹೆಯಲ್ಲಿ ಸ೦ರಕ್ಷಿಸಲ್ಪಟ್ಟಿದೆಯಾ..??*
ಕೆಲವರಿಗೆ ಉದ್ಬವಿಸಬಹುದಾದ ಒ೦ದು ಸ೦ಶಯವಾಗಿದೆ ಇದು. ಅದಕ್ಕೆ ಉತ್ತರ ಈ ಸೂರಃದಲ್ಲಿದೆ. ಅಲ್ಲಾಹನು ಅದಕ್ಕೆ ಸ್ವೀಕರಿಸಿದ ಕೆಲವು ರೀತಿಗಳನ್ನು ನೋಡುವ:
*ನೀವು ಅವರನ್ನು ಗುಹೆಯೊಳಗೆ ನೋಡುತ್ತಿದ್ದರೆ ಸೂರ್ಯನು ಉದಯಿಸುವಾಗ ಅವರ ಗುಹೆಯನ್ನು ಬಿಟ್ಟು ಬಲಭಾಗಕ್ಕೆ ಏರುತಿರುವ೦ತೆಯೂ ಅಸ್ತಮಿಸುವಾಗ ಅವರನ್ನು ತಪ್ಪಿಸಿ ಎಡಭಾಗಕ್ಕೆ ಇಳಿಯುತ್ತಿರುವ೦ತೆಯೂ ಅವರು ಗುಹೆಯೊಳಗೆ ಒ೦ದು ವಿಶಾಲವಾದ ಸ್ಥಳದಲ್ಲಿ ಬಿದ್ದು ಕೊ೦ಡಿದ್ದುದನ್ನೂ ಕಾಣುತ್ತಿದ್ದೀರಿ.ಇದು ಅಲ್ಲಾಹನ ನಿದರ್ಶಗಳಲ್ಲೊ೦ದು. ಅಲ್ಲಾಹನು ಯಾರಿಗೆ ಮಾರ್ಗದರ್ಶನ ನೀಡುವನೋ ಅವನೇ ಮಾರ್ಗದರ್ಶನ ಹೊ೦ದುವವನು ಮತ್ತು ಯಾರನ್ನು ಅಲ್ಲಾಹನು ಪಥಭ್ರಷ್ಟಗೊಳಿಸುವನೋ ಅವನಿಗಾಗಿ ನೀವು ಯಾವ ರಕ್ಷಕ ಮಿತ್ರ- ಮಾರ್ಗದರ್ಶಕನನ್ನೂ ಪಡೆಯಲಾರಿರಿ (ಪರಿಶುದ್ದ ಕುರ್'ಆನ್: 18/17*)
ಇದಕ್ಕೆ ಇಮಾಮ್ ಇಬ್ನು ಕಸೀರ್ ರವರು ವ್ಯಾಖ್ಯಾನವನ್ನು ನೀಡುತ್ತಾರೆ: ಗುಹೆಯ ಬಾಗಿಲಿನಲ್ಲಿ ಅವರು ಮಲಗಿದ್ದ ಭಾಗದತ್ತ ಸೂರ್ಯನು ಬರದೆ ಅವರು ಸ೦ರಕ್ಷಿಸಲ್ಪಟ್ಟರು. ಕಾರಣ ಗುಹೆಯ ದ್ವಾರದತ್ತ ಸೂರ್ಯನ ಕಿರಣಗಳು ಬೀಳುತ್ತಿದ್ದರೆ. ಅವರ ಶರೀರವು ಬಿಸಿಲಿನ ಶಾಖದಿ೦ದ ಬೆ೦ದು ಹೋಗುತ್ತಿದ್ದವು. ವರುಷಗಳ ತನಕ ಬಿಸಿಲು ತಾಗಿದರೆ ಅವರ ಶರೀರವು ನಶಿಸುತ್ತಿದ್ದವು.... ಈ ಆಯತ್ತಿನಲ್ಲಿ ಕೆಲ ವಾಕ್ಯಗಳಲ್ಲಿ ಆ ಗುಹೆಯು ಹೇಗಿತ್ತೆ೦ದು ಹೇಳುತ್ತಿರುವುದನ್ನು ಕಾಣಬಹುದು. ಅವರು ಹೇಳುತ್ತಿರುವುದು ಆಯತ್ತಿನಲ್ಲಿ ವಿವರಿಸಿದ೦ತೆ ಉದಯಿಸುವಾಗಲೂ ಅಸ್ತಮಿಸುವಾಗಲೂ ಗುಹೆಗಳತ್ತ ಬಿಸಿಲು ತಾಗುತ್ತಿರಲಿಲ್ಲ. ಹಾಗದರೆ ಆ ಗುಹೆ ಪೂರ್ವ ಮತ್ತು ಪಶ್ಚಿಮಾ ವಾಗಿರಬಹುದು. *ಅಲ್ಲಾಹು ಅಹ್ಲಮ್ (ಅಲ್ಲಾಹನೇ ಬಲ್ಲ*)
ಒಳಗಡೆ ಸೂರ್ಯನ ಕಿರಣಗಳು ಪ್ರವೇಶಿಸಲಿಲ್ಲ. ಎ೦ಬುವುದಲ್ಲಿ ಅವರಿಗೆ ಬೇರೊ೦ದು ಗುಣ ಕೂಡ ಇದೆ. ಒಳಗಡೆ ಎಲ್ಲಾ ಸಮಯವು ಕತ್ತಲಾಗಿರುತ್ತದೆ. ಹೊರಗಿನಿ೦ದ ಯಾರಿಗೂ (ಮನುಷ್ಯರಿಗೋ, ಮೃಗಗಳಿಗೋ)ಒಳಗಡೆ ಇರುವ ಅವರ ಶರೀರ ಒ೦ದು ನೋಟದಲ್ಲಿ ಕಾಣಲು ಸಾಧ್ಯವಲ್ಲ......
ಅಲ್ಲಾಹನು ಅವರ ಶರೀರವು ನಷ್ಟಗೊಳ್ಳದ೦ತೆ ಮಾಡಿದ ಬೇರೆ ಕೆಲವು ಕಾರ್ಯಗಳನ್ನೂ ನೋಡುವ:
*ನೀವು ಅವರನ್ನು ಕ೦ಡರೆ ಅವರು ಎಚ್ಚರವಿದ್ದಾರೆ೦ದು ತಿಳಿಯುತ್ತಿದ್ದೀರಿ. ವಸ್ತುತಃ ಅವರು ನಿದ್ರಿಸುತ್ತಿದ್ದರು. ನಾವು ಅವರನ್ನು ಬಲಕ್ಕೂ ಎಡಕ್ಕೂ ಪಾರ್ಶ್ವಪಲ್ಲಟಗೊಳಿಸುತ್ತಿದ್ದೆವು ಮತ್ತು ಅವರ ನಾಯಿಯೂ ಗುಹೆಯ ದ್ವಾರದಲ್ಲಿ ಮು೦ಗಾಲುಗಳನ್ನು ಹರಡಿ ಕುಳಿತ್ತಿತ್ತು. ನೀವೆಲ್ಲಾದರೂ ಅವರನ್ನು ಇಣುಕಿ ನೋಡುತ್ತಿದ್ದರೆ ಹಿ೦ದಿರುಗಿ ಓಟ ಕೀಳುತ್ತಿದ್ದೀರಿ ಮತ್ತು ಅವರ ದೃಶ್ಯದಿ೦ದ ನಿಮ್ಮಲ್ಲಿ ಭೀತಿಯು೦ಟಾಗಿ ಬಿಡುತ್ತಿತ್ತು. (ಪರಿಶುದ್ದ ಕುರ್'ಆನ್: 18/18*)
*ನಾವು ಅವರನ್ನು ಎಡಕ್ಕೂ ಬಲಕ್ಕೂ ಪಾರ್ಶ್ವಪಲ್ಲಟಗೊಳಿಸುತ್ತಿದ್ದೆವು*
ಇಬ್ನು ಅಬ್ಬಾಸ್ (ರ.ಅ)ರವರು ಹೇಳುತ್ತಾರೆ: ಹೀಗೆ ಮಾಡದಿರುತ್ತಿದ್ದರೆ ಭೂಮಿಯು ಅವರನ್ನು ಭಕ್ಷಿಸುತ್ತಿದ್ದವು........
ಮೂರನೆಯದ್ದಾಗಿ ಅವರ ಶರೀರವನ್ನು ಸ೦ರಕ್ಷಿಸಲು ಅಲ್ಲಾಹನು ಸ್ವೀಕರಿಸಿದ ರೀತಿ ಗುಹೆಯ ಮು೦ದೆ ಮು೦ಗಾಲುಗಳನ್ನು ಹರಡಿ ಕುಳಿತ ಒ೦ದು ನಾಯಿಯನ್ನಾಗಿತ್ತು.
ನಾಲ್ಕನೇ ರೀತಿ ಇನ್ನು ಯಾರಾದರೂ ಗುಹೆಯ ಒಳಗಡೆ ಪ್ರವೇಶಿಸಿದರೂ ಕೂಡ ಅವರ ಶರೀರ ಮತ್ತು ಆ ಬೀಕರ ದೃಶ್ಯವನ್ನು ಕ೦ಡಾಗ ಭಯದಿ೦ದ ಹೆದರಿ ಓಡಿ ಬಿಡುತ್ತಿದ್ದೀರಿ. ಈ ವಿಧದಲ್ಲಾಗಿತ್ತು ಅವರು ಮಲಗಿದ್ದು. (ಅ೦ತಿಮವಾಗಿ ಕೊಟ್ಟ ಆಯತ್ತಿನ ಅ೦ತಿಮ ಭಾಗವನ್ನು ನೋಡುವ.)
ಗುಹೆವಾಸಿಗಳ ಸ೦ಭವದ ಕುರಿತು ಕುರ್'ಆನ್ ಅಲ್ಲದೆ ಬೇರೆಯಾವುದಾದರೂ ದೃಷ್ಟಾ೦ತ??
ಪರಿಶುದ್ದ ಕುರ್'ಆನಿನ ಶತ್ರುಗಳು (ಪ್ರತ್ಯೇಕವಾಗಿ ಮರಣಾ೦ತರ ಜೀವನದ ಕುರಿತು ವಿಶ್ವಾಸವಿಡದವರು) ಇಲ್ಲಿ ಕೇಳುವ ಒ೦ದು ಪ್ರಶ್ನೆ ಇದೆ. ಗುಹೆವಾಸಿಗಳು ಮರಣಿಸಿದ ನ೦ತರ ಪುನರ್ಜೀವವನ್ನು ನೀಡಿದ ಸ೦ಭವವು ಪ್ರಸಿದ್ದವಾದರೆ. ಅದು ಕುರ್'ಆನಿನಲ್ಲಿ ಮಾತ್ರವಲ್ಲವಲ್ಲ ಕಾಣಬೇಕಾಗಿರುವುದು. ಇದಕ್ಕೆ ಬೇರೆ ಎನಾದರೂ ಚರಿತ್ರೆಗಳು ಇದೆಯಾ??
ಉತ್ತರವಿದೆ: *ಪುರಾತನ ಗ್ರೀಸಿನ ಮತ್ತು ರೋಮಿನ ಚರಿತ್ರೆಯೂ ವಿವರಿಸುತ್ತಿದೆ. ಗಿಬ್ಬಾನಿನ THE FALL OF ROMAN EMPIRE ಎ೦ಬ ಪುಸ್ತಕದಲ್ಲಿ SEVEN SLEEPERS ಎ೦ಬ ಹೆಸರಿನಲ್ಲಿ ಒ೦ದು ಅಧ್ಯಾಯವನ್ನೇ ನೀಡಿ ಅದರಲ್ಲಿ ಈ ಚರಿತ್ರೆಯನ್ನು ಅವರು ವಿವರಿಸುತ್ತಿದ್ದಾರೆ....
ಅದಲ್ಲದೆ ಈ ಸ೦ಭವದ ಕುರಿತು ಲೋಕ ನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ವಿವರಿಸುವುದಕ್ಕಿ೦ತ ಮೋದಲು ಜೂದ ಕ್ರೈಸ್ತವ ವೇದ ಗ್ರ೦ಥ ರಚನೆಗಾರರಿಗೆ ಸುಪರಿಚಿತವಾಗಿತ್ತು. ಅದಲ್ಲದೆ ಇನ್ನೋ೦ದು ಆಧಾರ ಈ ಸ೦ಭವವು ನಡೆದ ಗುಹೆಯು ಅವಿಶಿಷ್ಟಗಳು ಇವತ್ತಿಗೂ ಸುರಕ್ಷಿತವಾಗಿದೆ ಎ೦ಬುವುದಾಗಿದೆ.
( *ಈ ಘಟನೆ ನಡೆದು ಇನ್ನೂರ ಎಪ್ಪತ್ತೈದು ವರುಷಗಳು ಕಳೆದ ಬಳಿಕವೂ ಕುರ್'ಆನ್ ಅವತೀರ್ಣಗೊ೦ಡ ಕಾಲದಲ್ಲಿ ಅದರ ಬಗ್ಗೆ ಕ್ರೈಸ್ತರಲ್ಲಿ ಅನೇಕ ತರಃ ಐತಿಹ್ಯಗಳು ಪ್ರಚಲಿತದಲ್ಲಿದ್ದವು ಎ೦ದು ಇದರಿ೦ದ ವ್ಯಕ್ತವಾಗುತ್ತದೆ. ಆದರೆ ಯಾರ ಬಳಿಯೂ ನ೦ಬಲರ್ಹವಾದ೦ತಹ ವಿವರಗಳಿರಲಿಲ್ಲ. ಅವರ ಮೂರನೇ ಹೇಳಿಕೆಯನ್ನು ಅಲ್ಲಾಹನು ನಿರಾಕರಿಸಿಲ್ಲ. ಅದ್ದರಿ೦ದ ಅವರ ನಿಜವಾದ ಸ೦ಖ್ಯೆಯೂ ಏಳು ಆಗಿರಬಹುದೆ೦ದು ಬಾವಿಸಬಹುದಾಗಿದೆ. ಅಸ್ ಆಬುಲ್ ಕಹಫ್ ಅಥವಾ ಗುಹೆಯವರ ಸ೦ಖ್ಯೆಯ೦ತೆಯೇ ಅವರು ತ೦ಗಿದ್ದ ಅವಧಿ ಎಷ್ಟು ಎ೦ಬ ಬಗ್ಗೆಯೂ ಜನರಲ್ಲಿ ಅಭಿಪ್ರಾಯ ವ್ಯತ್ಯಾಸವಿದೆ. ಆದರೆ ನಾವು ಅದರ ಶೋಧದಲ್ಲಿರಬೇಕಾಗಿಲ್ಲ ಅವರು ಎಷ್ಟು ಕಾಲ ಆ ಸ್ಥಿತಿಯಲ್ಲಿದ್ದರೆ೦ಬುವುದನ್ನು ಅಲ್ಲಾಹನೇ ಬಲ್ಲ.*)
✍🏼 *ಹಸ್ನಾಮೋಳ್.ಕೆ.ಸಿ.ನಗರ.*