*ಹೆಸರು ಬೇಡ. ಊರು ಬೇಡ. ಜಾತಿ ಬೇಡ. ಕೆಳಗಿನ ಎರಡೂ ಘಟನೆಗಳನ್ನು ಗಮನವಿಟ್ಟು ಓದಿನೋಡಿ.*
1. ಆಕೆಗೆ ಮದುವೆ ಆಗಿ ನಾಲ್ಕು ವರ್ಷವಾಯಿತು. ಎರಡು ಮಕ್ಕಳ ತಾಯಿ. ಆಕೆಯ ಪತಿ, ಮನೆಯ ಜವಾಬ್ದಾರಿಕೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮನೆಯ ಖರ್ಚಿಗೂ ಕೊಡುತ್ತಿಲ್ಲ. ಆತ ಗಾಂಜಾದ ಗುಲಾಮ. ದುಡಿದ ಹಣವನ್ನೆಲ್ಲಾ ಕುಡಿತಕ್ಕೇ ಮುಗಿಸುತ್ತಾನೆ. ಕಾಸಿಲ್ಲದಾಗ ಪತ್ನಿಯೊಂದಿಗೆ ಯಾಚುತ್ತಾನೆ, ಕೊಡದಿದ್ದಲ್ಲಿ ರೇಗುತ್ತಾನೆ. ಜಗಳಕ್ಕಿಳಿಯುತ್ತಾನೆ. ಕೆಟ್ಟು ಹೋದ ಆತನ ಚಾರಿತ್ರ್ಯದಿಂದಾಗಿ ಆಕೆ ರೋಸಿ ಹೋಗಿದ್ದಾಳೆ. ಆತನನ್ನು ಸರಿದಾರಿಗೆ ತರಲು ಆಕೆ ಬಹಳಷ್ಟು ವಿಫಲ ಯತ್ನ ನಡೆಸಿದ್ದಳು. ಆತನೊಂದಿಗಿನ ಬದುಕು ಆಕೆಗೆ ಸಾಕು ಸಾಕಾಗಿದೆ. ಅಸಹ್ಯವಾಗಿದೆ. ಪತಿಯೊಂದಿಗಿನ ಪ್ರೀತಿ - ಪ್ರೇಮ ಎಲ್ಲವೂ ಸತ್ತು ಹೋಗಿದೆ. ಪೆಟ್ಟು ತಿನ್ನುವುದನ್ನೇ ಅಭ್ಯಾಸವನ್ನಾಗಿಸಿದ್ದಾಳೆ. ದುಃಖ ತಡೆಯಲಾಗದೆ, "ನನಗೆ ಗಂಡನೇ ಬೇಡ"ವೆಂದು ಹಲವು ಬಾರಿ ತವರಿಗೆ ಓಡಿದ್ದಳು. ಆದರೆ ಮನೆಯ ಹಿರಿಯರು ಸಮಾಧಾನಿಸಿ, ತಾಳಿ ಕಟ್ಟಿದ ಮೇಲೆ ಹಾಗೆಲ್ಲ ಮಾಡಬಾರದು... ಸಾಯುವ ತನಕ ಗಂಡನೊಂದಿಗಿರಬೇಕೆಂದು ಶಾಸ್ತ್ರ ಹೇಳಿ ವಾಪಸ್ಸು ಕಳುಹಿಸಿದ್ದರು. ಮಡುಗಟ್ಟಿದ ದುಃಖದೊಂದಿಗೆ ಆಕೆ ಮತ್ತೆ ಆ ನರಕದ ಬದುಕಿಗೆ ತನ್ನನ್ನು ಅರ್ಪಿಸುತ್ತಾಳೆ.*
*2. ಆತನಿಗೆ ಮದುವೆ ಆಗಿ ಎರಡು ವರ್ಷವಾಯಿತು. ಆಕೆಯೊಂದಿಗಿನ ದಾಂಪತ್ಯ ಬದುಕು ಆತನಿಗೆ ಅಸಹ್ಯ ಮೂಡಿಸಿದೆ. ಪತಿಯ ಅನುಸರಣೆ ಇಲ್ಲದ ಆಕೆಯ ಸೊಕ್ಕು - ವರ್ತನೆ, ದಾಂಪತ್ಯದ ಮನಶ್ಯಾಂತಿ ಮತ್ತು ಸೌಂದರ್ಯವನ್ನು ಹದಗೆಡಿಸಿದೆ. ದೂರದ ನೋಟಕ್ಕೆ ದಂಪತಿಗಳಂತಿದ್ದರೂ, ಅಲ್ಲಿ ಪರಸ್ಪರ ಪ್ರೀತಿ-ಪ್ರೇಮ, ಆಕರ್ಷಣೆ, ಅನುಕಂಪ ಯಾವುದೂ ಉಳಿದಿಲ್ಲ. ಹಲವು ಬಾರಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಹಿತೋಪದೇಶ ನಡೆದರೂ ಆಕೆಯ ಮದ ಇಳಿಯಲಿಲ್ಲ. ಆಕೆ ಹೆಚ್ಚಿನ ಸಮಯವನ್ನು ವಾಟ್ಸಪ್, ಫೇಸ್ಬುಕ್ ನ ಚಾಟಿಂಗ್ ನಲ್ಲೇ ಕಳೆಯುತ್ತಾಳೆ. ಆತನ ಸಂತಸಗಳೂ ನಶಿಸುತ್ತಿವೆ. ಅಂದರೆ ಪತಿ-ಪತ್ನಿಯರೆಂಬ ನೆಲೆಯಲ್ಲಿ ಇರಬೇಕಾದ ಯಾವ ಸಂಬಂಧಗಳೂ ಅವರ ಮಧ್ಯೆ ಉಳಿದಿಲ್ಲ.*
👉🏿 *ಮೇಲಿನ ಎರಡು ಪ್ರತ್ಯೇಕ ಘಟನೆಗಳನ್ನು ವಸ್ತುನಿಷ್ಟವಾಗಿ ನೀವೇ ಅಭ್ಯಸಿಸಿ! ಪರಿಹಾರವೇನು?*
*ಸಾಯುವ ತನಕ ದಾಂಪತ್ಯದ ಮುಖವಾಡ ಧರಿಸಿ ನರಕ ಸದ್ರಶವಾಗಿ ಅವರು ಬದುಕಬೇಕಾ? ನೆನಪಿಡಿ! ಯಾರಿಗೂ ರಗಾಲೆ ಬೇಡವೆಂದು, ಅವರು ಆತ್ಮಹತ್ಯೆಯ ಹಾದಿ ಹಿಡಿದರೆ, ಅದು ಫೋರ ಅಪರಾಧ ಮತ್ತು ಮಹಾ ಪಾಪವಾಗಿದೆ. ಅದಕ್ಕೆ ಅನುವು ಮಾಡಿಕೊಡುವ ನಮ್ಮಂತಹ ಮೂಕ ಸಾಕ್ಷಿಗಳೂ ದೇವನ ಶಾಪಕ್ಕೆ ಅರ್ಹರು.*
👉🏿 *ಹಾಗಾದರೆ, ಹೊಂದಾಣಿಕೆಯ ಯಾವ ಸಾಧ್ಯತೆಯೂ ಕಾಣದಾಗ ಪರಿಹಾರವೇನು? ಅವರಿಗೂ ಆಸೆ ಕನಸುಗಳಿಲ್ಲವೇ? ಬದುಕುವ ಹಂಬಲವಿಲ್ಲವೇ? ಹೌದು, ವಿಚ್ಛೇದನವೇ ಸೂಕ್ತ ಪರಿಹಾರವೆಂದು ಎಲ್ಲರೂ ಒಪ್ಪುತ್ತಾರೆ. ನೀವೂ ಒಪ್ಪುತ್ತೀರಿ! ಅದು ಸರಿ ಕೂಡಾ!*
👉🏿 *"ವಿಚ್ಛೇದನ" ಎಂಬ ಕನ್ನಡ ಪದವನ್ನೇ ಅರಬಿಯಲ್ಲಿ "ತಲಾಕ್" ಅನ್ನುತ್ತಾರೆ. ಆದರೆ, ಇಸ್ಲಾಮಿನಲ್ಲಿ ತಲಾಕ್ ಗೆ ಮೊದಲು ಪರಸ್ಪರ ಹಿತೋಪದೇಶ, ಚರ್ಚೆ, ಕುಟುಂಬದ ಹಿರಿಯರಿಂದ ಆಪ್ತ ಸಮಾಲೋಚನೆ ನಡೆಯಲೇಬೇಕು. ಒಂದೇ ಬಾರಿಗೆ ಏಕ ಕಾಲದಲ್ಲಿ ಮೂರು ತಲಾಕ್ ಹೇಳುವಂತಿಲ್ಲ. ಸಮಯಾವಕಾಶದ ನಿಬಂಧನೆಯಿದೆ.*
👉🏿 *ಇಸ್ಲಾಮಿನಲ್ಲಿ ಮೇಲಿನ ಇಬ್ಬರ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರವಿದೆ. ಮೊದಲನೆಯದಾಗಿ, ಅಂತಹ ಸಮಸ್ಯೆಗಳು ಉಂಟಾಗದಂತೆ ಮದುವೆಗೆ ಮೊದಲೇ ಪಾಲಿಸ ಬೇಕಾದ ಮತ್ತು ಗಮನಿಸ ಬೇಕಾದ ಹಲವು ಎಚ್ಚರಿಕೆಗಳನ್ನು ಸೂಚಿಸುತ್ತದೆ. ಅಚಾನಕ್ ಎಚ್ಚರಿಕೆ ವಹಿಸಿಯೂ ಮೇಲಿನಂತೆ ಸಮಸ್ಯೆಗಳು ಸಂಭವಿಸಿದರೆ, ಇಬ್ಬರಿಗೂ ವಿಮೋಚನೆಯ ಮತ್ತು ಬದುಕುವ ಮಾರ್ಗವಿದೆ. ಹೊಸ ದಾಂಪತ್ಯಕ್ಕೆ ಹೆಜ್ಜೆಯನ್ನಿಡಲು ಸರಳ ಅವಕಾಶವಿದೆ.*
👉🏿 *ಮೇಲಿನ ಪ್ರಥಮ ಫಟನೆಯಲ್ಲಿನ ಮಹಿಳೆಗೆ ಇಸ್ಲಾಮೀ ಶರೀಅತ್ ನಲ್ಲಿ ವಿಚ್ಛೇದನದ ಹಾದಿ ಪುರುಷನಿಗಿಂತ ಅತಿ ಸುಲಭ ಮತ್ತು ಸರಳ.*
*ಅದನ್ನು "ಖುಲಾ" ಅನ್ನುತ್ತಾರೆ. ಇಸ್ಲಾಮ್ ಸ್ತ್ರೀಗೆ ಕೊಟ್ಟ ಈ ಅತ್ಯುತ್ತಮ ಅವಕಾಶವನ್ನು ಮಾಧ್ಯಮಗಳು, ವಿಚಾರವಾದಿಗಳೆಂದೆನಿಸಿಕೊಂಡವರು ಚರ್ಚಿಸುವುದಿಲ್ಲ. ಕೊಂಡಾಡುವುದಿಲ್ಲ. ಬದಲಾಗಿ ಪಕ್ಷಪಾತ ಪೀಡಿತರಂತೆ, "ತಲಾಕ್" ಎಂಬ ಪದವನ್ನೇ ಭೀಕರವಾಗಿ ಚಿತ್ರೀಕರಿಸಿ ಇಸ್ಲಾಮಿನ ಬಾಹ್ಯ ಸೌಂದರ್ಯವನ್ನು ಕೆಡಿಸಲು ಮತ್ತೆಮತ್ತೆ ಪ್ರಯತ್ನಿಸುತ್ತಾರೆ. ಆದರೆ ಇಸ್ಲಾಮಿನ ಆದರ್ಶಗಳು ಜೀವಂತವಿದೆ. ಅದನ್ನು ಶುದ್ಧ ಮನಸ್ಸಿನಿಂದ ವಸ್ತುನಿಷ್ಠವಾಗಿ ಅಭ್ಯಸಿಸುವುದು ನಮ್ಮೆಲ್ಲರ ಭಾಧ್ಯತೆಯಾಗಿದೆ. ಆ ಮೂಲಕ ಅಪನಂಬಿಕೆಯ, ಸಂಶಯದ, ನಿಗೂಢತೆಯ ಗೋಡೆಯನ್ನು ಸರಿಸೋಣ! ನೀವೇನಂತೀರಿ?*
ಪ್ರೀತಿಯಿಂದ🌹🌹*
ಅಬೂ ಅಬ್ದುಲ್ಲಾ, ಮಂಗಳೂರು.*