*ನಾನು ಕಲಿತಿದ್ದ ಹಾಗೂ ಪ್ರಸ್ತುತ ಮಂಗಳೂರಿನ ನಾಟೆಕಲ್ ನಲ್ಲಿರುವ ಸರಕಾರಿ ಮುಸ್ಲಿಂ ವಸತಿ ಶಾಲೆಯ ಬಗ್ಗೆ ಈ ಹಿಂದೆ ಒಮ್ಮೆ ಬರೆದಿದ್ದೆ. ಮುಚ್ಚುವ ಹಂತದಲ್ಲಿದ್ದ ವಸತಿ ಶಾಲೆಗೆ ಮತ್ತೆ ಹಳೆಯ ಮೆರುಗು ಬಂದಿದೆ. 100 ದಾಟದಿದ್ದ ದಾಖಲಾತಿ ಸಂಖ್ಯೆ ಈ ವರ್ಷ ಅಲ್ ಹಮ್ದುಲಿಲ್ಲಾಹ್ 140+ ಆಗಿದೆ.*
*ಮುಸ್ಲಿಂ ಸಮುದಾಯದ ಮಂದಿಯಲ್ಲಿ ಜಾಗೃತಿ ಮೂಡಿದ ಪರಿಣಾಮ ಈ ಫಲಿತಾಂಶ ಬಂದಿದೆ. ಇದಕ್ಕೆ ಒಂದು ಕಾರಣ ಹಳೆಯ ವಿದ್ಯಾರ್ಥಿಗಳ ಶ್ರಮ.*
*ಹಾಸ್ಟೆಲ್ ನ ಪರಿಸ್ಥಿತಿಯ ಬಗ್ಗೆ ಅರಿತ ಹಳೆಯ ವಿದ್ಯಾರ್ಥಿಗಳು ಒಂದು ಬಾರಿ ಹಾಸ್ಟೆಲ್ ನಲ್ಲಿ ಸಭೆ ಸೇರಿ, ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿದ್ದರು. ಇದರ ಅಧ್ಯಕ್ಷರಾಗಿ ಮೊದಲ ಬ್ಯಾಚ್ ನ ವಿದ್ಯಾರ್ಥಿ ಹಾಗೂ ಪ್ರಸ್ತುತ ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅನ್ವರ್ ಅಮೆಮ್ಮಾರ್ ಹಾಗೂ ಕಾರ್ಯದರ್ಶಿಯಾಗಿ ನನ್ನ ಬ್ಯಾಚ್ ನ ಗೆಳೆಯ ಹಾಗೂ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಿರಾಜ್ ಕಿನ್ಯ ಆಯ್ಕೆಯಾಗಿದ್ದರು.*
*ಹಳೆ ವಿದ್ಯಾರ್ಥಿಗಳು, ಅಧ್ಯಾಪಕರು & ಹಲವಾರು ಸಂಘ ಸಂಸ್ಥೆಗಳ ಸಹಕಾರದಿಂದ ಈ ಯಶಸ್ಸು ದೊರೆತಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೂ ಅಲ್ಲಾಹನು ಎಲ್ಲರ ಸೇವೆಯನ್ನು ಸ್ವೀಕರಿಸಿ, ಅನುಗ್ರಹಿಸಲಿ.....ಆಮೀನ್.*
*ಶಿಕ್ಷಣ ಪ್ರೇಮಿಗಳು/ದಾನಿಗಳು/ಹಳೆಯ ವಿದ್ಯಾರ್ಥಿ ಗಳಿಂದ ಬೇಕಿದೆ ನೆರವು:*
ನಮ್ಮೆಲ್ಲರ ಪ್ರಯತ್ನ ಫಲಪ್ರದವಾಗಿದೆ ಏನೋ ನಿಜ. ಹಳೆಯ ವಿದ್ಯಾರ್ಥಿಗಳ ಸಂಘವು ಈಗಿರುವ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನ ಮಾಡುತ್ತಿದೆ. ಜೊತೆಗೆ ಮದರಸಾ ಅಧ್ಯಾಪಕರಿಗೆ ಆರ್ಥಿಕ ವ್ಯವಸ್ಥೆ ಮಾಡಲು ಶ್ರಮಿಸುತ್ತಿದೆ. ಈಗಾಗಲೇ ಸಂಸ್ಥೆಯ ಮೇಲೆ ಪ್ರೀತಿ ಇಟ್ಟಿರುವ, ದೇಶವಿದೇಶಗಳಲ್ಲಿ ನೆಲೆಸಿರುವ ಹಲವು ಮಂದಿ ಹಳೆಯ ವಿದ್ಯಾರ್ಥಿಗಳು ತಮ್ಮ ಕೈಲಾದ ಮಟ್ಟಿಗೆ *ಆರ್ಥಿಕ ನೆರವು* ನೀಡುತ್ತಿದ್ದಾರೆ.
*ಈ ಹಾಸ್ಟೆಲ್ ನಲ್ಲಿ ಕಲಿತ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಇಂದು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಎಲ್ಲರನ್ನೂ ಸಂಪರ್ಕ ಮಾಡಲು ನಮಗೆ ಸಾಧ್ಯವಾಗಿಲ್ಲ. ಪ್ರಯತ್ನ ಮುಂದುವರಿದಿದೆ. ಇದರ ಜೊತೆಗೆ ದಾನಿಗಳು, ಶಿಕ್ಷಣ ಪ್ರೇಮಿಗಳು ಈ ಸಂಸ್ಥೆಗೆ ಆರ್ಥಿಕ ನೆರವು ಅಥವಾ ಇಫ್ತಾರ್ ಕೂಟ ಆಯೋಜಿಸಲು ಸಹಕರಿಸಬಹುದು.*
*ಬಡ ಹಾಗೂ ಮಧ್ಯಮ ವರ್ಗದ ಜನರ ಮಕ್ಕಳ ಪ್ರಾರ್ಥನೆ ಸೃಷ್ಟಿಕರ್ತ ಸ್ವೀಕರಿಸಿ, ಅನುಗ್ರಹಿಸಲಿ. ಆಮೀನ್.*
*ಹನಿ ಹನಿಗೂಡಿದರೆ ಹಳ್ಳ* ಎಂಬಂತೆ ಆಸಕ್ತರು, ಸಂಘ ಸಂಸ್ಥೆಗಳ ಯಾರಾದರೂ ಇದ್ದರೆ ನಮ್ಮ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಬಹುದು ಅಥವಾ ನೇರವಾಗಿ ಜಂಟಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದು.
Contact:
Anwar Amemmar : 9008385666
Siraj Kinya: 9880130994
ಖಾತೆಯ ವಿವರ:
Old Students Association, Government Muslim Residential School, Natekal, Mangaluru
Bank Account Details
Name Of the Bank: Karnataka Bank
Account Type: Current Account
Name In Account: Anwar A.S & Siraj
Joint Account
Account Number: 9432000100005501
Branch: Belma, Deralakatte
IFSC Code: KARB0000943
MICR Code: 575052034
ಪ್ರೀತಿಯಿಂದ
✍🏽 *ಇರ್ಷಾದ್ ವೇಣೂರ್*😍
ಹಳೆ ವಿದ್ಯಾರ್ಥಿ
ಸರಕಾರಿ ಮುಸ್ಲಿಂ ವಸತಿ ಶಾಲೆ