ತಾಯಿಯ ಕಾಲು ಬುಡದಲ್ಲಿ ಆಗಿದೆ ಸ್ವಗ೯ವೆಂದು
ಕಲಿಸಿದ ನಮ್ಮ ಪ್ರವಾದಿ (ಸ ಅ)
ಬೆಳುಬೇಳುಪಿನ ಸಲ್ಮಾನುಲ್ ಫಾರಿಸ್ ರನ್ನು [ರಅ] ಕಪ್ಪುಕಪ್ಪಗಿರುವ ಬಿಲಾಲ್ ರನ್ನು [ರಅ] ಒಂದೇ ಸಾಲಿನಲ್ಲಿ ನಿಲ್ಲಿಸಿ ವರ್ಣ ತಾರತಮ್ಯ ಮಾಡಬಾರದೆಂದು ವಿಶ್ವಕ್ಕೆ ಕಲಿಸಿದ ನಮ್ಮ ಪ್ರವಾದಿ [ಸಅ]
🌹ನೆರೆಹೊರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣಬಾರದೆಂದು ಕಲ್ಪಿಸಿ, ಅದರಲ್ಲಿ ಜಾತಿ ನೋಡಬಾರದೆಂದು ಕಲಿಸಿದ ನಮ್ಮ ಪ್ರವಾದಿ [ಸಅ]
🌹ಕದ್ದದ್ದು ನನ್ನ ಮಗಳು ಫಾತಿಮಾ [ರಅ] ಆದರೂ ಕೈ ಕಡಿಯುವೆನೆಂದು ವಿಶ್ವಕ್ಕೆ ನೀತಿ ಕಲಿಸಿದ ನಮ್ಮ ಪ್ರವಾದಿ [ಸಅ]
🌹ಮರಣ ಹೊಂದಿದ ಮಕ್ಕಳು ನಮ್ಮ ಧರ್ಮದಲ್ಲಿ ಒಳಪಟ್ಟವರಲ್ಲವೆಂದು ಅನುಯಾಯಿಗಳು ಹೇಳಿದಾಗ, ಮಕ್ಕಳಿಗೆ ಎಂತಹಾ ಧರ್ಮ ಎಂದು ಕೇಳಿ ಅನುಯಾಯಿಗಳಿಗೆ ತಾಕಿತ್ತು ಮಾಡಿದ ನಮ್ಮ ಪ್ರವಾದಿ [ಸಅ]
🌹ಮಾತಪಿತರಲ್ಲಿ "ಛೆ " ಎಂಬ ಮಾತು ಕೂಡ ಹೇಳಬಾರದೆಂದು ಹೇಳಿ ಸ್ನೇಹದ ಪಾಠ ಕಲಿಸಿದ ನಮ್ಮ ಪ್ರವಾದಿ [ಸಅ]
🌹ಮರಣ ಸಮಯದಲ್ಲಿಯೂ ನನ್ನ ಸಮುದಾಯ ಎಂದು ನೆನದು ಅತ್ತ, ಬದಲಿಗಾರನಿಲ್ಲದ ನಮ್ಮ ಪ್ರವಾದಿ [ಸಅ]
🌹ಗಂಡನನ್ನು ಶಪಿಸಬಾರದೆಂದು, ಮಡದಿಯನ್ನು ನೋಟದಿಂದವಾದರು ನೋಯಿಸಬಾರದೆಂದು ಕಲಿಸಿದ ಕುಟುಂಬ ಬಂಧ ಕಲಿಸಿದ ನಮ್ಮ ಪ್ರವಾದಿ [ಸಅ]
🌹ತಂದೆಯವರ ಬೆವರು ಕುಟುಂಬದ ಆಸರೆ ಎಂದು ನೆನಪಿಸಲು ಕಲಿಸಿದ ನಮ್ಮ ಪ್ರವಾದಿ [ಸಅ]
🌹ಒಬ್ಬ ಮುಸ್ಲಿಮೇತರ ಶವ ಮಂಚದಲ್ಲಿ ಹೊತ್ತು ಕೊಂಡು ಜನರು ನಡೆದುಕೊಂಡು ಹೋಗುವಾಗ ಎದ್ದು ನಿಂತ ಪೈಗಂಬರ್ [ಸಅ] ಹತ್ತಿರ ಬಂದು ಅದು ಮುಸ್ಲಿಂನದಲ್ಲ ಎಂದು ಅನುಯಾಯಿಗಳು ಹೇಳಿದಾಗ ಅವನೊಬ್ಬ ಮನುಷ್ಯನಲ್ಲವೇ ಎಂದು ಹೇಳಿ ಕೊಟ್ಟು ಮನುಷ್ಯರನ್ನು ಬಹುಮಾನಿಸಲು ಕಲಿಸಿದ ನಮ್ಮ ಪ್ರವಾದಿ [ಸಅ]
🌹ಗಂಡ ತಲಾಕ್ ಹೇಳುವ ಹಾಗೆ ಅವನಿಂದ ನಿನಗೆ ತ್ರಪ್ತಿಕರವಾದ ಜೀವನ ಲಬಿಸದಿದ್ದರೆ ತಿರುಗಿ ನಿನಗೂ ಗಂಡನನ್ನು ತಲಾಕ್ [ಫಾಸ್ಕ್] ಹೇಳಬಹುದೆಂದು ಕಲಿಸಿ, ಗಂಡನಿಗೂ ಹೆಣ್ಣಿಗೂ ಸಮಾನ ನ್ಯಾಯ ಒದಗಿಸಿದ ನಮ್ಮ ಪ್ರವಾದಿ [ಸಅ]
🌹ಒಬ್ಬರ ಹತ್ತಿರ ಮುಗುಳ್ನಗೆ ಅದು ದಾನವಾಗಿದೆಂದು ಕಲಿಸಿದ ನಮ್ಮ ಪ್ರವಾದಿ [ಸಅ]
🌹ನಿನಗೆ ನಿನ್ನ ಧರ್ಮ ಅವರಿಗೆ ಅವರ ಧರ್ಮ, ಬೇರೆಯೊಬ್ಬರ ಧರ್ಮವನ್ನು ಪರಿಹಾಸ ಮಾಡಬಾರದೆಂದು ಕಲಿಸಿದ ನಮ್ಮ ಪ್ರವಾದಿ [ಸಅ]
🌹ಸ್ತ್ರೀ ಎಂದರೆ ಬಹುಮಾನಿಸುವವಳು, ಆದರಿಸಬೇಕಾದವಳು ಎಂದು ಮೊದಲೇ ಕಲಿಸಿದ ನಮ್ಮ ಪ್ರವಾದಿ [ಸಅ]
🌹ದಾರಿಯಲ್ಲಿ ಒಂದು ಮುಳ್ಳು ತಡಸ್ಥವಾಗಿ ಕಂಡರೂ ಕೂಡ ಆ ತಡಸ್ಥವನ್ನು ಸರಿಸದೆ ಮುಂದಕ್ಕೆ ಹೋಗಬಾರದೆಂದು ಕಲಿಸಿದ ನಮ್ಮ ಪ್ರವಾದಿ [ಸಅ]
🌹ಆದಷ್ಟು ಖರ್ಚು ಕಡಿಮೆ ಮಾಡಿದ ವಿವಾಹವಾಗಿದೆ, ಬಹಳ ಮಹತ್ವವೇರಿದ ವಿವಾಹವೆಂದು ಸಮುದಾಯಕ್ಕೆ ಕಲಿಸಿದ ನಮ್ಮ ಪ್ರವಾದಿ [ಸಅ]
🌹ಅರಿವು ಒಬ್ಬ ವಿಶ್ವಾಸಿಯ ಸಂಪತ್ತಾಗಿದೆ, ಅದು ಎಲ್ಲಿ ನೋಡಿದರೂ ಹೆಕ್ಕಿ ತೆಗೆಯಬೇಕೆಂದು ಕಲಿಸಿದ ನಮ್ಮ ಪ್ರವಾದಿ [ಸಅ]
🌹ಹೆಣ್ಣಿನ ಸುರಕ್ಷಿತ್ವವಾಗಿದೆ ಸಮುದಾಯದ ಸುರಕ್ಷೆಯೆಂದು ಕಲಿಸಿದ ನಮ್ಮ ಪ್ರವಾದಿ [ಸಅ]
🌹ಹೆಣ್ಣು ಮಕ್ಕಳು ಇರುವ ಕುಟುಂಬವಾಗಿದೆ ಉತ್ತಮ ಕುಟುಂಬವೆಂದು ಕಲಿಸಿದ ನಮ್ಮ ಪ್ರವಾದಿ [ಸಅ]
🌹ನಿನ್ನ ಬೆರಳುಗಳಲ್ಲಿ ನಿನ್ನನ್ನು ತಿಳಿದುಕೊಳ್ಳುವ ನಿಶಾನಿ ಇದೆಯೆಂದು ಕಲಿಸಿದ ವಿಜ್ಞಾನಿಯಾದ ನಮ್ಮ ಪ್ರವಾದಿ [ಸಅ]
🌹ಅನಾಥ ಮಕ್ಕಳ ಎದುರಿನಲ್ಲಿ ಸ್ವಂತ ಮಕ್ಕಳನ್ನು ಲಾಲಿಸಬಾರದೆಂದು ಕಲಿಸಿದ ಕಾರುಣ್ಯ ನಿಧಿಯಾದ ನಮ್ಮ ಪ್ರವಾದಿ [ಸಅ]
ಎಷ್ಟು ಬರೆದರೂ, ಎಷ್ಟು ಹೇಳಿದರೂ, ಮುಗಿಯದ ನಮ್ಮ ಪ್ರವಾದಿಯವರ ಮಹಿಮೆಯನ್ನು ವಿಮರ್ಶಿಸಲು ಯಾರ ಪೆನ್ನಿಗೋ, ಪತ್ರಕೋ, ನಾಲಗೆಗೊ ಒಮ್ಮೆಯೂ ಸಾದ್ಯವಿಲ್ಲ.
ಕಾರುಣ್ಯದ ನಿಧಿಯಾದ ಪ್ರವಾದಿಯರನ್ನು
[ಸಅ] ಅರಿಯಿರಿ ತಿಳಿಯಿರಿ, ಕಲಿಯಿರಿ ನಿಮಗೂ ಅವರ ಹತ್ತಿರ ಸ್ನೇಹವಾಗಬಹುದು .