ಬುಧವಾರ, ಜೂನ್ 29, 2016

ಅಚ್ಚೇ ದಿನ್

ಕಸ ನಿಮ್ಮದು,  ಪೊರಕೆ ನಿಮ್ಮದು, ಬೆನ್ನು ಬಗ್ಗಿಸಿ ಗುಡಿಸಿದ್ದು ನೀವು ಆದರೆ ಅದು ಕೇಂದ್ರ ಸರಕಾರದ 
" *ಸ್ವಚ್ಛ ಭಾರತ ಯೋಜನೆ* ".
ಸರಕಾರಕ್ಕೆ ಈ ಯೋಜನೆಗೆ ಹತ್ತು ಪೈಸೆಯೂ ಖರ್ಚಿಲ್ಲ, ಆದರೆ  ಯೋಜನೆಯ ಪ್ರಚಾರಕ್ಕೆ ಇವರು ಖರ್ಚು ಮಾಡಿದ್ದು ಬರೋಬ್ಬರಿ _ಒಂಬೈನೂರು ಕೋಟಿ_ ರೂಪಾಯಿ.

ಬ್ಯಾಂಕ್‍ಗೆ ಹೋದದ್ದು ನೀವು, ಹಣ ನಿಮ್ಮದು, ಖಾತೆ ನಿಮ್ಮದು ಆದರೆ ಅದು ಮೋದಿ ಸರಕಾರದ
" *ಜನ್‍ಧನ್* " ಯೋಜನೆ.
ಈ ಯೋಜನೆಗೂ ಹತ್ತು ಪೈಸೆ ಖರ್ಚಿಲ್ಲ ಆದರೆ ಇದಕ್ಕೆ ಪ್ರಚಾರ ಕೊಡಲು ಇವರು ಖರ್ಚು ಮಾಡಿದ್ದು ಬರೋಬ್ಬರಿ
_ನಾನೂರೈವತ್ತು ಕೋಟಿ ರೂಪಾಯಿ_.

ಮೋಬೈಲ್ ನಿಮ್ಮದು, ಮುದ್ದಿನ ಮಗಳು ನಿಮ್ಮದು, ಪೋಟೋ ತಗೆದದ್ದು ನೀವು ಆದರೆ ಅದು ಕೇಂದ್ರದ " *ಭೇಟಿ ಭಚಾವೋ ಭೇಟಿ ಪಡಾವೋ* " ಯೋಜನೆ.
ಈ ಯೋಜನೆಗೆ  ಹತ್ತು ಪೈಸೆ ಯಾಕೆ ಒಂದು ಪೈಸೆನೂ ಸರ್ಕಾರಕ್ಕೆ ಖರ್ಚಿಲ್ಲ ,ಆದರೆ ಪ್ರಚಾರ ಪಡ್ಕೊಬೇಕಲ್ಲ ಅದಕ್ಕೆ ಮೋದಿ ಸರಕಾರ ಖರ್ಚು ಮಾಡಿದ್ದು ಬರೋಬ್ಬರಿ
_ಆರುನೂರು ಕೋಟಿ ರೂಪಾಯಿ_

ದೇಹ ನಿಮ್ಮದು, ಚಾಪೆ ನಿಮ್ಮದು, ಬೆವರು ಸುರಿದದ್ದು ನಿಮ್ಮದು ಇದುವೇ " *ಯೋಗ ದಿನ್* " .
ಆದರೆ ಈ ಯೋಜನೆ ಆಯೋಜಿಸಲು ಬಾಬಾ ರಾಮದೇವ್‍ಗೆ ಸರಕಾರ ಪಾವತಿಸಿದ್ದು ಅಷ್ಟಿಸ್ಟಲ್ಲ ಬರೋಬ್ಬರಿ _ಎರಡು ಸಾವಿರ ಕೋಟಿ_ ರೂಪಾಯಿ.

_*ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ*_