ಸೋಮವಾರ, ಜುಲೈ 4, 2016

ಈದ್‌-ಉಲ್‌-ಫಿತರ್‌

ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ  ಈದ್‌-ಉಲ್‌-ಫಿತರ್‌ ಒಂದು. ಒಂದು ತಿಂಗಳ ರಂಝಾನ್‌ ಅಥವಾ ರಮಾದಾನ್‌ ಉಪವಾಸ ಆಚರಣೆಯ ಅನಂತರ ಈದ್‌- ಉಲ್‌-ಫಿತರನ್ನು ಆಚರಿಸಲಾಗುತ್ತದೆ. ಇಸ್ಲಾಂ ಕ್ಯಾಲೆಂಡರ್ ನಲ್ಲಿ ವರ್ಷದ ಒಂಬತ್ತನೇ ತಿಂಗಳು ಇದಾಗಿರುತ್ತದೆ. ಇಸ್ಲಾಂನ ಐದು ಪ್ರಮುಖ ಕಂಬಗಳಲ್ಲಿ  ಇದು ನಾಲ್ಕನೇಯದ್ದು. ದಾನ-ಧರ್ಮ ಕ್ಕೆ ಈ ಹಬ್ಬದಲ್ಲಿ ಹೆಚ್ಚಿನ ಪ್ರಾಮುಖ್ಯವಿದೆ. ಹಾಗೇ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಹಾರೈಸುವುದಕ್ಕೂ ಈ ಹಬ್ಬದಲ್ಲಿ  ಮಹತ್ವ ಹೆಚ್ಚು.ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಧಾರ್ಮಿಕವಾಗಿ ಈದ್-ಉಲ್-ಫಿತರ್ ಎಂತಲೂ ಕರೆಯುತ್ತಾರೆ.

ಒಂದು ತಿಂಗಳುಗಳ ಕಾಲ ಅಲ್ಲಾಹುವಿನ ಆಜ್ಞೆ - ನಿಷೇಧಗಳನ್ನು ಅನುಸರಿಸಿ ಉಪವಾಸ ಕೈಗೊಂಡ ಜಾಗತಿಕ ಮುಸ್ಲಿಂ ಸಮುದಾಯದ ಬಳಿಗೆ ರಂಝಾನ್ ಉಪವಾಸದ ಸಮಾರೋಪ ಎಂಬಂತೆ ಈದುಲ್ ಫಿತ್‌ರ್ ಅಥವಾ ಪೆರ್ನಾಲ್ ಹಬ್ಬ ಸಮಾಗತವಾಗಿದೆ.

ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಈದ್ -ಉಲ್ - ಫಿತರ್ ಬಂದಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿದರು. ಬಡವ - ಶ್ರೀಮಂತರೆನ್ನುವ ಭೇದವಿಲ್ಲದೆ ಎಲ್ಲರೂ ಒಂದು ತಿಂಗಳ ಕಠಿಣ ವ್ರತಾಚರಣೆ ನಡೆಸಿ ಹಸಿವಿನ ತೀವ್ರತೆಯ ಬಗ್ಗೆ ಅರಿತು ವಿಶ್ವದ ಮುಸಲ್ಮಾನರೆಲ್ಲ ಸಮಾನರು ಎಂದು ಸಾರುವುದು. ಉಪವಾಸ ಆಚರಣೆಯಿಂದ ಬಡತನದ ಹಸಿವಿನ ಬೇಗೆಯ ಬಗ್ಗೆ ಅರಿವು ಮೂಡಿಸಿ ಬಡವರಿಗೆ ಶ್ರೀಮಂತರು ದಾನ-ಧರ್ಮಗಳನ್ನು ಮಾಡುವಂತೆ ಪ್ರೇರಿಸುವುದು ಹಬ್ಬದ ಆಚರಣೆಯ ಉದ್ದೇಶ ಗಳಲ್ಲಿ  ಒಂದು.ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ಥಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್ -ಉಲ್ - ಫಿತರ್ ಬಂದಿದೆ.

ಇದು ದಾನದ ಹಬ್ಬ. ಒಂದು ತಿಂಗಳ ಹಸಿವೆ ಯ ಪಾಠದಿಂದ ಬಡತನ -ಹಸಿವು ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಇಸ್ಲಾಂ ಎಂದೂ ಸಂಪತ್ತಿನ ಕೇಂದ್ರೀಕರಣ ವನ್ನು ವಿರೋಧಿಸುತ್ತದೆ. ಯಾವತ್ತೂ ಶೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾದ ’ಝಕಾತ್’ ಇದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯಗೊಳಿಸುತ್ತದೆ. ಅಂತಹ ಒಂದು ಹಬ್ಬವಾಗಿದೆ ಈದ್ -ಉಲ್ - ಫಿತರ್. ಇಸ್ಲಾಂ ಆಚರಿಸುವ ಎರಡೂ ಹಬ್ಬಗಳೂ ದಾನವನ್ನು ಪ್ರೋತ್ಸಾಹಿಸುತ್ತದೆ. ಅದರಲ್ಲೂ ಈಗ ಬಂದಿರುವ ಈದ್ -ಉಲ್ - ಫಿತರ್ ಸಂದರ್ಭೋಚಿತವಾಗಿ ’ದಾನ್ಯ’ ದಾನ ಮಾಡುವುದನ್ನು ಹೇಳುತ್ತದೆ. ಇದು ಪ್ರತೀ ಮುಸ್ಲಿಮನ ಕಡ್ಡಾಯ ಕರ್ಮವಾಗಿದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದಿಂದ ಉಧ್ದೇಶಿಸಲಾಗಿದೆ. ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆರಾತ್ರಿಯ ಖರ್ಚುಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಖಡ್ಡಾಯ ವಾಗಿ ದಾನ ನೀಡ ತಕ್ಕದ್ದು. ಅದು ಆ ಊರಿನ ಆಹಾರ ದಾನ್ಯ ವಾಗಿರಬೇಕು ಮತ್ತು ಅದಕ್ಕಾಗಿ ಒಂದು ಅಳತೆಯನ್ನು ನಿಗದಿಪಡಿಸಿದೆ. ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನಪಡಯಲು ಅರ್ಹರು. ಆದರೆ ಈ ದಾನದ ಲೆಕ್ಕಾಚಾರದಲ್ಲಿ ಒಬ್ಬಾತನ ಮನೆಯಲ್ಲಿರುವ ಪಾತ್ರೆ ಮೊದಲಾದ ವಸ್ತುಗಳೂ ಒಳಗೊಳ್ಳುತ್ತದೆ. ಅಂದರೆ ಪಾತ್ರೆಗಳನ್ನು ಮಾರಿಯಾದರೂ ದಾನ ನಿಡಬೇಕು, ಮಾತ್ರವಲ್ಲ ಒಂದು ಮನೆಯಲ್ಲಿರುವ ಪ್ರತಿವ್ಯಕ್ತಿಯ ಮೇಲೂ ಈ ದಾನ ಖಡ್ಡಾಯ ವಾಗಿದೆ.

ಮಾನವ ಸೌಹಾರ್ದತೆ ಹಾಗೂ ವಿಶ್ವಭ್ರಾತೃತ್ವದ ಮಹೋನ್ನತ ಸಂದೇಶಗಳನ್ನು ಸಾರುತ್ತಾ ಆಗಮಿಸಿರುವ ಈದುಲ್ ಫಿತ್‌ರ್ ಹಬ್ಬ ಕೂಡ ಅಖಂಡ ಜಗತ್ತಿನ ಕೋಟ್ಯಂತರ ಮಾನವ ಸಮುದಾಯದ ಒಳಿತಿಗಾಗಿ ಆಗಮಿಸಿದೆ. ಬಡವರ ಹಾಗೂ ಹಸಿದವರ ಪಾಲಿಗೆ ಅಮೃತವಾಗಿ ಈದುಲ್ ಫಿತ್‌ರ್ ಹಬ್ಬ ಕಂಗೊಳಿಸುತ್ತಿದೆ. ಈದುಲ್ ಫಿತ್‌ರ್ ಹಬ್ಬದಂದು ಯಾರೊಬ್ಬರೂ ಹಸಿದಿರಬಾರದೆಂಬ ಧ್ಯೇಯ ಇಸ್ಲಾಂ ಧರ್ಮಕ್ಕಿದೆ. ಸಾಹೋದರ್ಯ ಭಾವ ತುಂಬಿಸುವ ಈದ್ ನ ಈ ದಿನ ಎಲ್ಲರೂ ದಾನ ಕರ್ಮಗಳಿಂದ ಸುಂದರವಾಗಿಸಲು, ಸೃಷ್ಟಿಕರ್ತ ನಮನ್ನು ಕರುಣಿಸಲೀ  ಎಂದು ಪ್ರಾರ್ಥಿಸುತ್ತಾ. ಎಲ್ಲರಿಗೂ ಈದ್ -ಉಲ್ - ಫಿತರ್ ಹಬ್ಬದ ಶುಭಾಶಯಗಳು....

ಕೃಪೆ: ನಮ್ಮ ಬೆದ್ರ