ಸೋಮವಾರ, ಜುಲೈ 4, 2016

ಫೇಕ್ ಪೋಸ್ಟ್ ಗಳ ಬಗ್ಗೆ ಒಂದಿಷ್ಟು....

ಫೇಕ್ ಪೋಸ್ಟ್ ಗಳನ್ನೇ ತಯಾರಿಸಿ ಹರಿಯಬಿಡುವ ಅದೆಷ್ಟೋ ಕಾಲ್ ಸೆಂಟರ್ ಗಳಿವೆ ಎಂದರೆ ನಂಬುತ್ತೀರಾ?? ನಂಬಲೇಬೇಕು.

ಗುಡ್ ಮಾರ್ನಿಂಗ್, ಗುಡ್ ನೈಟ್ ಗಳನ್ನ ಮುದ್ರಿಸಿದ ಅದೆಷ್ಟೋ ಅಂದ ಚಂದದ ಫೋಟೋಗಳನ್ನ ನಾವು ನೋಡಿದ್ದೇವೆ. ಇದನ್ನೆಲ್ಲಾ ತಯಾರಿಸಿ ಹರಿಯಬಿಡುವುದೇ ಇಂತಹ ಕಾಲ್ ಸೆಂಟರ್ ಗಳ ಕೆಲಸ. ಇವೇನೂ "ಫೇಕ್" ಗಳಲ್ಲ ಬಿಡಿ. ಆದರೂ ಇಂತಹ ಕಾಲ್ ಸೆಂಟರ್ ಗಳನ್ನ ಹೆಚ್ಚಿನ ಎಲ್ಲಾ ಮೊಬೈಲ್ ಆಪರೇಟರ್ ಗಳು ಪೋಷಿಸುತ್ತವೆ. ಯಾಕೆ? ಗೊತ್ತಾಗಿಲ್ಲವೇ?? ನೀವು ಫಾರ್ವರ್ಡ್ ಮಾಡುವ ಪ್ರತಿಯೊಂದು ಫೋಟೋ ಕೂಡ ನೂರೋ ಇನ್ನೂರೋ mb ತಿನ್ನುತ್ತದೆ. ಅದರ ಪಾಲು ಮೊಬೈಲ್ ಕಂಪನಿಗಳಿಗೆ!! ಆಶ್ಚರ್ಯವೆ???

ಇನ್ನೂ ಕೇಳಿ... ಕೆಲವೊಂದು ರಾಜಕೀಯ ಪಕ್ಷಗಳ ಹಾಗೂ ಕೆಲವೊಂದು ಧಾರ್ಮಿಕ ಸಂಘಟನೆಗಳ ಹಿಂದೆ ಅದೆಷ್ಟೋ *Paid employees* ಇರ್ತಾರೆ. ಎಲ್ಲೋ ಇರುವ ಬರಹಗಳನ್ನ ತಿರುಚಿ ತಿದ್ದಿ ಇಲ್ಲ ಸಲ್ಲದ ವಿಷಯಗಳನ್ನ ಸಾಮಾನ್ಯ ಜನರ ತಲೆಗೆ ಹರಿಯಬಿಟ್ಟು ಯೋಚಿಸಬೇಕಾದ ವಿಚಾರ ಬಿಟ್ಟು ಇಂತಹವನ್ನೇ ಯೋಚಿಸುವಂತೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು.

ಮಗು ಸಿಕ್ಕಿದೆ, ಅಫಘಾತ ಆಗಿದೆ ಪರಿಚಯ ಇಲ್ಲ, ಸಾಕಷ್ಟು ಶೇರ್ ಮಾಡಿ, ರಕ್ತ ಬೇಕಾಗಿದೆ, ವೋಟ್ ಮಾಡಿ, ಅದು ಮಾಡಿ ಇದು ಮಾಡಿ ಅನ್ನೋ ಪ್ರತಿಯೊಂದು ಮೆಸೇಜ್ ಗಳ ಹಿಂದೆ ನಿರ್ದಿಷ್ಟ ಫಲಾನುಭವಿಗಳಿರುತ್ತಾರೆ ನೆನಪಿಡಿ. ನಮ್ಮಿಂದ ಹೋಗುವ ಐದು ಪೈಸೆಯೋ ಹತ್ತು ಪೈಸೆಯೋ ನಮಗೆ ಅಲ್ಪ ಎಂದೆನಿಸಬಹುದು. ಆದರೆ ದಿನಕ್ಕೆ ಲಕ್ಷಾನುಗಟ್ಟಳೆ ರೂಪಾಯಿ ಕಮಾಯಿ ಇಂತಹ ಕಂಪನಿಗಳು ಮಾಡಿಕೊಳ್ಳುತ್ತವೆ.

ಗೋಧಿಯ ಬಗ್ಗೆ ಅಪಪ್ರಚಾರದ ಹಿಂದೆ ಕಾಣದ ಕಂಪೆನಿಗಳು, ಮಾರಕ ರೋಗವಲ್ಲದಿದ್ದರೂ ಭಯ ಭಿತಿ ಹುಟ್ಟಿಸುವ ಔಷದಿ ಕಂಪನಿಗಳು, UNESCO ಹೆಸರಲ್ಲಿ ನಮ್ಮನ್ನ ಹುಚ್ಚರಾಗಿಸುವ ಹುಚ್ಚರು, ಜಗತ್ತಿನ ನಂ1 ರಾಷ್ಟ್ರಗೀತೆ ಹಾಗೆ ಹೀಗೆ ಅನ್ನೋ ಕಾಣದ ಕೈಗಳು, ಸುಮ್ಮನೆ ಕುಳಿತುಕೊಂಡು ನಮ್ಮ ಕೆಲಸ ಮಾಡಲು ಬಿಡದ ಮೊಬೈಲ್ ಕಂಪನಿಗಳು ಒಂದೇ ಎರಡೇ??

ಸ್ನೇಹಿತರೇ...ಯೋಚಿಸಿ,, ಪರಾಮರ್ಶಿಸಿ, ಸ್ಪಷ್ಟತೆ ಇಲ್ಲದ ಮೆಸೆಜ್ ಗಳನ್ನ ಫಾರ್ವರ್ಡ್ ಮಾಡಬೇಡಿ. ದೂರವಾಣಿ ಸಂಖ್ಯೆ ಇದ್ದರೆ ಮೊದಲು ನೀವೇ ಕರೆಮಾಡಿ ನೋಡಿ.

ಈ ದಿನಗಳಲ್ಲಿ ಮೊಬೈಲ್ ಕರೆನ್ಸಿ ದರ ಅತಿಯಾಗಿದೆ ಎಂಬುದು ನೆನಪಿರಲಿ. 2G ನೆಟ್ ವರ್ಕ್ ಗಿಂತ 3G ಸೇವೆಯನ್ನು ಕಡಿಮೆ ದರದಲ್ಲಿ ನೀಡಬಹುದಾಗಿದೆ ಎಂಬ ನಿಜಾಂಶವನ್ನು ಕಂಪೆನಿಗಳು ಯಾರಿಗೂ ಹೇಳುತ್ತಿಲ್ಲ.

ಪ್ರಜ್ಙಾವಂತರಾಗೋಣ...
ಅಲ್ವೇ?...

*ರಾಜಾರಾಮ ಶೆಟ್ಟಿ*