👉🏻ಹಿಂದೆ ಒಂದು ಕಾಲವಿತ್ತು.
ಪರಸ್ಪರ ಸ್ನೇಹಗಳಿಂದ ಕೂಡಿದಂತಹ ಸುಂದರ ಕಾಲ...
👉🏻ಮನುಷ್ಯನಲ್ಲಿ ಮಂದಹಾಸ ಬೀರುಂತಹ ಮುಖ ಹೊಂದಿದಂತಹ ಕಾಲ..
👉🏻ಅವ ನಮ್ಮವ, ಇವ ನಮ್ಮವ ಎಂದು ಒಂದಾಗಿ ಸೌಹಾರ್ದ ಭಾಂದವ್ಯತೆಯಿಂದ ಕೂಡಿದಂತಹ ಕಾಲ...
👉🏻ತಾಯಿಯ ಎಲ್ಲಾ ಮಕ್ಕಳು ಒಂದೇ ಮನೆಯಲ್ಲಿ ಜೊತೆಯಾಗಿ ಬದುಕುತ್ತಿದ್ದಂತಹ ಕಾಲ...
👉🏻ಕುಟುಂಬ ಸದಸ್ಯರೆಲ್ಲರೂ ಒಂದುಗೂಡಿ ಒಂದೇ ತಟ್ಟೆಯಲ್ಲಿ ಉಣ್ಣುತ್ತಿದ್ದಂತಹ ಕಾಲ...
👉🏻ಮಕ್ಕಳೆಲ್ಲರೂ ಒಟ್ಟಾಗಿ ಅಜ್ಜಿ ಬಳಿ ಕುಳಿತು ಅಜ್ಜಿಕತೆ ಕೇಳಿ ಮಲಗುತ್ತಿದ್ದಂತಹ ಕಾಲ...
👉🏻ಪರಸ್ಪರ ಜೊತೆಯಾಗಿ ಯಾವುದೇ ದ್ವೇಷ, ನಾಟಕೀಯ ಮುಖವಾಡ ಹೊಂದದೆ ಮನಸ್ಸಿನ ಅಂತರಾಳದಿಂದ ಹೊಮ್ಮುವಂತಹ ಸ್ನೇಹವನ್ನು ಹಂಚಿಕೊಂಡು ಜೊತೆಜೊತೆಯಾಗಿ ಕೂಡಿ ಬಾಳುತ್ತಿದ್ದಂತಹ ಕಾಲ...
👉🏻ಕುಟುಂಬದೊಳಗೆ ಎರಡು ಬಣಗಳನ್ನು ಮಾಡಿ ಹಲವು ಕ್ರೀಡೆಗಳನ್ನು ಆಡಿ ಕುಣಿದು ಕುಪ್ಪಳಿಸುತ್ತಿದ್ದಂತಹ ಕಾಲ...
👉🏻ತಂತ್ರಜ್ಞಾನ,ಮೊಬೈಲ್ ಗಳು ಇಲ್ಲದೆ ಹೆಚ್ಚಿನ ಸಮಯವು ಕುಟುಂಬದ ಜೊತೆಯಾಗಿ ಕಳೆಯುತ್ತಿದ್ದಂತಹ ಕಾಲ...
👉🏻ಸದಸ್ಯರಲ್ಲಿ ಒಬ್ಬರಿಗೆ ಆರ್ಥಿಕ,ಮಾನಸಿಕ ತೊಂದರೆ ಆದಲ್ಲಿ ಎಲ್ಲರೂ ಜೊತೆಗೂಡಿ ಪರಿಹರಿಸುವಂತಹ ಕಾಲ...
👉🏻ಎಲ್ಲರ ಕಷ್ಟಗಳಲ್ಲೂ, ಸಂತೋಷಗಳಲ್ಲಿಯೂ ಜೊತೆಯಾಗಿ ಅನುಭವಿಸುತ್ತಿದ್ದಂತಹ ಕಾಲ...
👉🏻ಮನೆಯಲ್ಲೇ ತರಕಾರಿ ಗಿಡಗಳನ್ನು ನಟ್ಟು ಬೆಳೆಸಿ ಮನೆಯಲ್ಲೇ ಅಡುಗೆ ಮಾಡಿ ಉಣ್ಣುತ್ತಿದ್ದಂತಹ ಕಾಲ...
ಮೊತ್ತದಲ್ಲಿ ಸ್ನೇಹಬಂಧ, ನಗುಮುಖ,ಸೌಹಾರ್ದತೆ, ಸಂತಸ ಕ್ಷಣ, ರೋಗಮುಕ್ತ ಜೀವನ, ಆರೋಗ್ಯಕರ ಶರೀರ, ತಲೆಬಿಸಿಯಿಂದ ಮುಕ್ತ , ಧೀರ್ಘಾಯುಷ್ಯ, ಇವೆಲ್ಲವನ್ನೂ ಹೊಂದಿದಂತಹ ಕಾಲ....
ಇನ್ನು ಬಯಸಿದರೂ ತಿರುಗಿ ಲಭಿಸದಂತಹ ಅತೀ ಸುಂದರವಾದ ಕಾಲ..
ಆದರೆ,
ಇಂದಿನ ಕಾಲ ಮೇಲೆ ತಿಳಿಸಿದಂತಹ ಎಲ್ಲಾ ವಿಷಯಗಳಿಗೂ ವ್ಯತಿರಿಕ್ತವಾದಂತಹ ಕಾಲ...
ಇಂದು ಸ್ನೇಹ ಸಂಬಂಧಗಳು ಕಡಿತಗೊಂಡಿದೆ.
ನೈಜತೆಯಿಂದ ಕೂಡಿದ ಮಾತುಗಳು ಕಡಿಮೆಯಾಗತೊಡಗಿದೆ.
ಮಂದಹಾಸಭರಿತ ನಗುಮುಖಗಳು ಮಾಯವಾಯಿತು..
ತಾಯಿಯ ಎಲ್ಲಾ ಮಕ್ಕಳು ಬೇರೆಬೇರೆಯಾಗತೊಡಗಿದರು.
ಸಣ್ಣ ಮಕ್ಕಳ ಜೀವನದಲ್ಲಿ ಸ್ವತಂತ್ರ್ಯ ಇಲ್ಲವಾಯಿತು.
ಸಣ್ಣ ಪ್ರಾಯದಲ್ಲಿಯೇ ಮಕ್ಕಳಿಗೆ ಶಾಲೆ, ಪುಸ್ತಕ ಎಂಬಿತ್ಯಾದಿಗಳನ್ನು ತಲೆಗೆ ಹೊರಿಸಲಾಯಿತು.
ಹೊಸಹೊಸ ತಂತ್ರಜ್ಞಾನಗಳು, ಮೊಬೈಲ್ ಗಳಿಂದಾಗಿ ಮನುಷ್ಯನ ಸಮಯವೆಲ್ಲವೂ ಇದರ ಜೊತೆಗಾಯಿತು.
ಇದರಿಂದಾಗಿ ತಮ್ಮವರ ಜೊತೆಗಿನ ಸಂಪರ್ಕ ಕಡಿಮೆಯಾಗತೊಡಗಿತು..
ಹಣಕ್ಕಾಗಿ ನಡೆಸುವಂತಹ ಪೈಪೋಟಿಗಳು, ಚಿಂತನೆಗಳು ಅಧಿಕಗೊಂಡು ಮನುಷ್ಯನ ತಲೆಕೂದಲು ಬಿಳಿಯಾಗಿ ಅತಿ ಬೇಗನೆ ಮುದುಕನಾದನು.
ಕೀಟನಾಶಕ ಮದ್ದುಗಳನ್ನು ಸಿಂಪಡಿಸಿ ಫ್ರಿಜ್ ಗಳಲ್ಲಿ ಇಟ್ಟಂತಹ ತರಕಾರಿ ಪದಾರ್ಥಗಳನ್ನು ಸೂಪರ್ ಮಾರ್ಕೆಟ್ ಗಳಿಂದ ತಂದು ಅದನ್ನು ತಿಂದು ರೋಗಗಳ ಜೊತೆ ಚೆಲ್ಲಾಟವಾಡತೊಡಗಿದೆವು.
ಕಾಲಕ್ಕಣುಸಾರವಾಗಿ, ನಡತೆಗನುಸಾರವಾಗಿ ಮನುಷ್ಯನ ಆಯುಷ್ಯವು ಕಡಿಮೆಯಾಗತೊಡಗಿತು.
ಸ್ನೇಹದಿಂದ ಕೂಡಿದ ಕಾಲವು ನನಗೆ ಬೆರಳೆನಿಕೆಯಷ್ಟು ವರ್ಷಗಳು ದೊರೆತರೂ ದೊರೆತಂತಹ ಸಮಯ ಅತೀ ಮನಮೋಹಕವಾಗಿತ್ತು..
ಆ ಕಾಲವು ಇನ್ನು ಎಂದೆಂದಿಗೂ ದೊರೆಯದು.
ಆದರೆ, ಮನುಷ್ಯ ಮನಸ್ಸು ಮಾಡಿ ಪ್ರಯತ್ನಪಟ್ಟರೆ ಕಡಿಮೆಪಕ್ಷ ಆ ಕಾಲದಂತೆಯೆ ಜೀವಿಸಲು ಸಾಧ್ಯ..
*ಪ್ರಯತ್ನಿಸೋಣ..*
*ಸ್ನೇಹದಿಂದ ಕೂಡಿದಂತಹ ಬಾಳು ನಮ್ಮದಾಗಿಸೋಣ..*
*✍🏻 ಇಮ್ತಿ ಬೈರಿಕಟ್ಟೆ*