ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ 'ಆಳ್ವಾಸ್ ಪ್ರಗತಿ 2016' ಜುಲೈ 2 ಮತ್ತು 3 ರಂದು ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ.
ಯಾರಿಗೆ ಅವಶ್ಯಕ?
ಆಳ್ವಾಸ್ ಪ್ರಗತಿ ಎಲ್ಲರಿಗೂ ಸೂಕ್ತವಾದದ್ದು ಮತ್ತು ಉಚಿತವಾಗಿ ಉದ್ಯೋಗಾವಕಾಶವನ್ನು
ಪಡೆಯುವ ಅವಕಾಶ. ಕಂಪೆನಿಗಳಿಗೂ ಉಚಿತ ಉದ್ಯೋಕಾಂಕ್ಷಿಗಳಿಗೂ ಉಚಿತ ಪ್ರವೇಶ.
ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಡಿಪ್ಲಮಾ ಮತ್ತು ಎಲ್ಲಾ ಪದವೀಧರರಿಗೆ, ಇಂಜಿನಿಯರಿಂಗ್, ನರ್ಸಿಂಗ್, ಪ್ಯಾರಾ ಮೆಡಿಕಲ್ ಉದ್ಯೋಕಾಂಕ್ಷಿಗಳಿಗೂ ಅವಕಾಶ.
ಉದ್ದೇಶಗಳು:
ಜಾಗತಿಕವಾಗಿ ಇರುವ ಬೃಹತ್ ಉದ್ಯೋಕಾವಕಾಶದ ಕುರಿತು ಗ್ರಾಮೀಣ ಅಭ್ಯರ್ಥಿಗಳಲ್ಲಿ ಸ್ಪಷ್ಟತೆ ಮತ್ತು ಅರಿವು ಮೂಡಿಸುವುದು.
ಆಳ್ವಾಸ್ ಪ್ರಗತಿ 2016 ರ ಮುನ್ನೋಟಗಳು
• ಈ ಬಾರಿ 400ಕ್ಕೂ ಮಿಕ್ಕಿ ಕಂಪನಿಗಳು ಭಾಗವಹಿಸುವ ನಿರೀಕ್ಷೆ
• SSLC ಮತ್ತು P.U.C ಅಭ್ಯರ್ಥಿಗಳಿಗೆ ಬೃಹತ್ ಉದ್ಯೋಗಾವಕಾಶ.
• I.T.I ಮತ್ತು ಡಿಪ್ಲಮಾ ಅಭ್ಯರ್ಥಿಗಳಿಗೆ ಮ್ಯಾನ್ಯುಫ್ಯಾಕ್ಚರಿಂಗ್(ಉತ್ಪಾದನಾ) ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶದ ಸಾಧ್ಯತೆ
• B.H.M ಮತ್ತು ನರ್ಸಿಂಗ್, ಪ್ಯಾರಾ ಮೆಡಿಕಲ್ ವಿಭಾಗದ ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ.
• B.COM, BBM, BSc, BCA, BA ಪದವೀಧರರಿಗೂ ಎಲ್ಲಾ ವಿಭಾಗಗಳಲ್ಲಿ ವಿವಿಧ ಕಾರ್ಯನಿರ್ವಹಣೆಯ ಅವಕಾಶ
•M.COM, MBA, MSC, ಹಾಗೂ ಇತರ ಸ್ನಾತಕೋತ್ತರ ಪದವೀದರರಿಗೆ ವಿಪುಲ ಅವಕಾಶ.
• IT ಇಂಜಿನಿಯರ್ ಅಭ್ಯರ್ಥಿಗಳಿಗೆ ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಕೆಲಸ ಮಾಡುವ ವಿಪುಲ ಅವಕಾಶ
• ಅತ್ಯಂತ ಕಡಿಮೆ ಉದ್ಯೋಗಾವಕಾಶ ಇರುವ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪಧವೀದರರಿಗೆ ಪೂರಕ ಇತರ ಉದ್ಯೋಗಾವಕಾಶದ ಸಾಧ್ಯತೆಗಳು.
• ಮಾರಾಟ ಮತ್ತು ರೀಟೈಲ್ ವಿಭಾಗದಲ್ಲಿ ಅತೀ ಹೆಚ್ಚು ಉದ್ಯೋಗಾವಕಾಶಗಳು
• ಬ್ಯಾಂಕಿಂಗ್ ಮತ್ತು ಇತರ ಹಣಕಾಸು ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶ
• HR ವಿಭಾಗದ ಅಭ್ಯರ್ಥಿಗಳಿಗೆ ಉತ್ತಮ ಕಂಪನಿಗಳಲ್ಲಿ ಉದ್ಯೋಗದ ಸಾಧ್ಯತೆಗಳು
ನೊಂದಾವಣೆ
ಅಭ್ಯರ್ಥಿಗಳ ನೊಂದಾವಣೆ ವಿಭಾಗಕ್ಕೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಬೇಕಾದ ಮಾಹಿತಿಯನ್ನು ನೀಡಲು ಮತ್ತು ಮುಂದೆ ವರ್ಷಪೂರ್ತಿ ನಡೆಯುವ ಉದ್ಯೋಗ ಮೇಳಗಳ ಕುರಿತು ಅಭ್ಯರ್ಥಿಗಳಿಗೆ ನಿರ್ದೇಶನ ಮಾಡುವ ಉದ್ದೇಶದಿಂದ ಮಾಡಲಾಗುತ್ತದೆ.
http:/alvaspragati.com ಗೆ log in ಆಗಿ candidate registration ಎಂಬಲ್ಲಿ ಕ್ಲಿಕ್ ಮಾಡಿ 5 ಹಂತದಲ್ಲಿ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಬೇಕು. ನೋಂದಾವಣಿಯ ನಂತರ ಅಭ್ಯರ್ಥಿಗೆ ಒಂದು sms ಮೂಲಕ ಅಭ್ಯರ್ಥಿಯ ಐ.ಡಿ ಮತ್ತು ಆಳ್ವಾಸ್ ಪ್ರಗತಿಯ mobile app ಡೌನ್ಲೋಡ್ ಮಾಡಬಹುದಾದ link ಬರುತ್ತದೆ. ಅದರ ಮೂಲಕ ಈ ಉದ್ಯೋಗ ಮೇಳದ ಎಲ್ಲಾ ಮಾಹಿತಿಗಳನ್ನು ಮೊಬೈಲ್ ಮೂಲಕವೇ ಪಡೆಯಲು ಸಾಧ್ಯವಾಗುತ್ತದೆ.
ಉದ್ಯೋಗ ಮೇಳದಂದು ಅಭ್ಯರ್ಥಿಗಳು ತಮ್ಮ ಆನ್ಲೈನ್ ನೊಂದಣಿ ಸಂಖ್ಯೆಯೊಂದಿಗೆ ಕಲರ್ ಕೋಡಿಂಗ್ ವಿಭಾಗಕ್ಕೆ ಹೋಗಬೇಕು. ನೋಂದಾವಣೆ ಮತ್ತು ಕಲರ್ ಕೋಡಿಂಗ್ ಕೌಂಟರ್ಗಳು ಅದೇ ದಿನ ಬೆಳಗ್ಗೆ 8 ಗಂಟೆಯಿಂದ ಲಭ್ಯವಿರಲಿದೆ. ದೂರದ ಊರುಗಳಿಂದ ಆಗಮಿಸುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.
ಅಭ್ಯರ್ಥಿಗಳೇ,
ಈ ಉದ್ಯೋಗಮೇಳ ಪ್ರತಿಯೊಬ್ಬರಿಗೂ ಅರ್ಥಪೂರ್ಣವಾಗಿ ಉದ್ಯೋಗದ ಸಾಧ್ಯತೆಗಳನ್ನು ತೋರಿಸಿಕೊಂಡುವುದೇ ಆಗಿದೆ. ಈ ಕುರಿತು ಅಭ್ಯರ್ಥಿಗಳಲ್ಲಿ ಸ್ಪಷ್ಟತೆಯನ್ನು ತರುವ ಇಚ್ಚೆ ನಮ್ಮದು. ಕಂಪನಿ ರಿಜಿಸ್ಟ್ರೇಷನ್ ಆದಂತೆ ಅಭ್ಯರ್ಥಿಗಳಿಗೆ ಪೂರಕ ಮಾಹಿತಿಗಳು ಆಳ್ವಾಸ್ ಪ್ರಗತಿಯ ವೆಬ್ಸೈಟ್ ಮತ್ತು mobile app ನಲ್ಲಿ ಪೂರ್ಣವಾಗಿ ಮಾಹಿತಿ ದೊರಕುತ್ತದೆ. ಲಭ್ಯವಿರುವ ತಂತ್ರಜ್ಞಾನದ ಮೂಲಕ ಆಳ್ವಾಸ್ ಪ್ರಗತಿಯ ಮಾಹಿತಿಗಳನ್ನು ಪಡೆಯಬೇಕಾಗಿ ಅಭ್ಯರ್ಥಿಗಳಲ್ಲಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಸಂಪಕಿ9ಸಿ:
9611686198, 8494934852, 8152977886, 7353618867, 9008907716
ಧನ್ಯವಾದಗಳು,
ಪ್ರಗತಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ
ಮೂಡಬಿದಿರೆ.