ಆತ್ಮ ಕತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆತ್ಮ ಕತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಫೆಬ್ರವರಿ 2, 2017

ನಾನು ಹಲೀಮ ೨

*"ನಾನು ಹಲೀಮ"*
   *ಆತ್ಮಕಥೆ*   
      ಭಾಗ 0⃣2⃣
......
ಸಿರಿವಂತರಾದ ಅರಬಿಗಳು ತಮ್ಮ ಮಕ್ಕಳನ್ನು ಬೇರೆ ಸ್ತ್ರೀಗಳಿಗೆ ಮೊಲೆಯಾಲುಣಿಸಲು ನೀಡುವುದರಲ್ಲಿ ಹಲವು ಗುಣಗಳನ್ನು ಕಂಡಿರಬಹುದು.
ಶುಧ್ದವಾದ ಅರಬಿ ಭಾಷೆ ಕಲಿಯಲು ಈ ದಾರಿಯಾಗಿದೆ ಅವರು ಕಂಡು ಕೊಂಡದ್ದು.
ಪಟ್ಟಣ ಪ್ರದೇಶಗಳಲ್ಲಿ ಮಾತೃ್ ಭಾಷೆ ಅರಬಿಯಾದರೂ
ಹಲವು ಭಾಗದಿಂದ ಬಂದು ಅಲ್ಲಿ ವಾಸ ಮಾಡುವುದರಿಂದ ಹಲವು ಭಾಷೆಗಳು ಅವರ ಮಾತುಗಳಲ್ಲಿ ಮಿಶ್ರಿತವಾಗುತ್ತಿತ್ತು.
ಸಾಹಿತ್ಯಕ್ಕೂ,ಭಾಷೆಗೂ ಬಹಳವಾಗಿ ಪ್ರಾಧಾನ್ಯತೆ ನೀಡುತ್ತಿದ್ದ ನಾಡಿನ ಬಹುಮುಖ ಜನರು ತಮ್ಮ ಮಕ್ಕಳು ನೈಜವಾದ ಅರಬಿ ಭಾಷೆ ಕಲಿಯಬೇಕೆಂದು ಆಶಿಸುವುದರಲ್ಲಿ ಅದ್ಭುತವಿಲ್ಲ ತಾನೇ..?
ಮಕ್ಕಳು ಸಂಶುಧ‍್ದವಾದ ಪ್ರಕೃತಿಯ ವಾತಾವರಣದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯವಂತರಾಗಿ ಬೆಳೆಯಲಿ ಎಂದು ಸಹ ಅವರ ಆಗ್ರಹವಾಗಿರಲೂ ಬಹುದು.!?
ಏನಿದ್ದರೂ ನಮಗದು ಬಹಳ ಉಪಕಾರವಾಯಿತ್ತು.
ಕಾರಣ ಅದು ಕ್ಷಾಮ ಕಾಲವಾಗಿತ್ತು.
ನಾನು ಅಬ್ದುಲ್ಲಾಹ್ ಎಂಬ ಮಗುವಿಗೆ ಜನ್ಮವಿತ್ತ ಸಮಯ.
ಅತಿ ಶಕ್ತವಾದ ಉಷ್ಣತೆಯಲ್ಲಿ ಸಸ್ಯಾದಿಗಳೆಲ್ಲವು ಒಣಗಿ ಹೋಗಿದ್ದವು.
ಆಡುಗಳಿಗೆ ತಿನ್ನಲು  ಹುಲ್ಲಿರಲಿಲ್ಲ.
ಕುಡಿಯಲು ನೀರು ಸಹ ಇಲ್ಲದ ಅವಸ್ಥೆ ...
ಆದ ಕಾರಣ ಆಡಿನ ಹಾಲು ಇಲ್ಲವಾದವು.
ನಮ್ಮ ಜೀವನ ಮಾರ್ಗ ತಟಸ್ಥಗೊಂಡಿತ್ತು.
.
ಮಕ್ಕ, ಅಥವಾ ಇತರ ಪ್ರದೇಶಕ್ಕೆ ಹೋಗಿ  ನಮಗೊಂದು ಮಗುವನ್ನು ಮೊಲೆಯುಣಿಸಲು ಪಡೆದರೆ ಹೇಗೆ?

ನನ್ನಲ್ಲಿ ಅಧಿಕವಾಗಿ ಸ್ತನಹಾಲು ಇಲ್ಲದಿದ್ದರೂ,
ನಮ್ಮ ಜೀವನ ಮಾರ್ಗಕ್ಕೆ ಏನಾದರೊಂದು ಸಿಗಬಹುದಲ್ವಾ..?
ನಾನು ನನ್ನ ಪತಿ ಹಾರಿಸಿನೊಂದಿಗೆ ಇದರ ಕುರಿತು ಸಮಾಲೋಚನೆ ನಡೆಸಿದೆ.
ಅವರ ವಿರೋಧವೇನೂ ಇರಲಿಲ್ಲ ..ಅದೇ ರೀತಿ ಒಂದು ಮಗುವನ್ನು ಹುಡುಕ್ಕುತ್ತಾ ಮಕ್ಕಾ ನಾಡಿಗೆ ಮುಖ ಮಾಡಿದೆವು!
............
ಮುಂದುವರಿಯುವುದು

ಮೂಲ ಮಲಯಾಳಂ.
ಅನುವಾದ
✍🏻ಕೆ ಎಂ ಅಶ್ರಫ್ ಸಖಾಫಿ, ಕನ್ಯಾನ.

ನಾನು ಹಲೀಮ 1

*"ನಾನು ಹಲೀಮ"*
ಆತ್ಮಕಥೆ
.
ಭಾಗ 0⃣1⃣
......

ಮಗುವನ್ನು ಹುಡುಕಿ
..........

ನಾನು ಹಲೀಮತ್ತುಸ್ಸಅದಿಯ್ಯ :
ಗೊತ್ತಿಲ್ವಾ?
ಮಸ್ಲಿಂಗಳಲ್ಲಿ ನನ್ನನ್ನು ತಿಳಿಯದವರು ಯಾರು?
ಪುಣ್ಯಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸಾಕು ತಾಯಿ.
ಅತ್ಯಂತ ಮಹಾಭಾಗ್ಯದ ಸ್ಥಾನವಾಗಿದೆ ಅದು ;
ವಿಶ್ವ ದೂತರ ಮಾತೆ ಎಂಬ ಸ್ಥಾನ!
ಮೊದಲನೇ ಸ್ಥಾನ ಏನಿದ್ದರೂ ಅದು ಹೆತ್ತ ತಾಯಿಗೆ ಮಾತ್ರ ಸೀಮಿತ;
ಅಥವಾ ಬೀವಿ ಆಮಿನಾ (ರ)ರಿಗೆಯಾಗಿದೆ.
ಅವರಿಗೆ ಸಹ ಸಿಗದ ಸೌಭಾಗ್ಯವಾಗಿದೆ ಅವರ ಪುತ್ರನ ಮೂಲಕ ನನಗೆ ಸಿಕ್ಕಿದ್ದು.

ಇದು ಯಾವುದೂ ನನ್ನ ಸ್ಥಾನಮಾನದಿಂದವಲ್ಲ .
ಎಲ್ಲವೂ ಅಲ್ಲಾಹನ ಔದಾರ್ಯ, ಕಾರುಣ್ಯದಿಂದ ಮಾತ್ರ ಸಿಕ್ಕಿದ್ದು.
ಅತ್ಯಾದ್ಭುತವಾದ ಕತೆಯಾಗಿದೆ ನನಗೆ ಹೇಳಲಿಕ್ಕಿರುವುದು.
ಅದನ್ನು ಹೇಳುತ್ತೇನೆ.

......

ಮಕ್ಕಾದಿಂದ ಸರಿ ಸುಮಾರು ಎಪ್ಪತ್ತರಷ್ಟು ಕಿಲೋ ಮೀಟರ್ ದೂರವಾಗಿದೆ
ನಮ್ಮ "ಬನೂ ಸಅದ್" ಗ್ರಾಮ.
ಅದೊಂದು ಕುಗ್ರಾಮವಾಗಿದೆ.
ಜನ ವಾಸ ಕಡಿಮೆ ಇರುವ ಕುಗ್ರಾಮ.
ಅದೂ ಸಹ ಅತ್ಯಂತ ಬಡವರು ವಾಸ ಮಾಡುವ ನಾಡು.
ಆಡು ಮೇಯಿಸುವುದನ್ನೇ ತಮ್ಮ ಕಾಯಕಮಾಡಿ ಜೀವಿಸುವ ಗ್ರಾಮ.
ಮಂದ ಮಾರುತದ ಮರುಭೂಮಿಯಲ್ಲಿ
ಪಯಣಿಸಿ.
ಗುಡ್ಡಗಾಡುಗಳಲ್ಲಿ ,ಅಲ್ಲಿನ ಪರ್ವತಶ್ರೇಣಿಗಳಲ್ಲಿ ಅದನ್ನು ಮೇಯಲು ಬಿಟ್ಟು
ಅದಕ್ಕೆ ಬೇಕಾದಷ್ಟು ನೀರು ಕುಡಿಸಿ ಸಂಜೆ ಹೊತ್ತಾಗುವಾಗ ಆಡಿನ ಹಿಂಡಿನೊಂದಿಗೆ
ಮನೆಗೆ ಮರಳುವುದಾಗಿದ್ದವು ಅಲ್ಲಿನ ಸ್ತ್ರೀ, ಪುರಷರ ದೈನಂದಿನ ಕಸುಬು.
ಅದರ ಹಾಲು ಕುಡಿದು,ಮಾಂಸ ತಿಂದಾಗಿದ್ದವು ನಮ್ಮ ಜೀವನವು..
......
ಮತ್ತೆ ,ನಾವು -- ಸ್ತ್ರೀಗಳು ಮತ್ತೊಂದು ರೀತಿಯಲ್ಲಿ ಕುಟುಂಬವನ್ನು ಸಹಾಯ ಮಾಡುತ್ತಿದ್ದವು.
ಮಕ್ಕಾ, ಅದೇ ರೀತಿ ಇತರ ಪಟ್ಟಣಗಳಿಗೆ  ತೆರಳಿ ನಾವು  ಮೊಲೆಯುಣಿಸಲು ಪುಟ್ಟ ಮಕ್ಕಳನ್ನು ಸ್ವೀಕರಿಸುತ್ತಿದ್ದವು.
ಸಂಪನ್ನರಾದ ಅರಬಿಗಳ ಶೈಲಿಯಾಗಿದ್ದವು ತಮ್ಮ ಮಕ್ಕಳಿಗೆ ಮೊಲೆಯುಣಿಸಲು ಬೇರೆ ಸ್ತ್ರೀಗಳಿಗೆ ನೀಡುವುದು.
ಅದು ಅವರ ಪ್ರತಾಪದ ಬಾಗವೂ ಆಗಿತ್ತು.
ಅಭಿಮಾನದ ಪ್ರಶೆಯು..
ನಮಗಾದರೆ ಉಪಜೀವನದ ಒಂದು ಭಾಗವೂ ಅದೇ.

....
ಮೂಲ ಮಲಯಾಳಂ.

ಅನುವಾದ
📝ಕೆ ಎಂ ಅಶ್ರಫ್ ಸಖಾಫಿ ,ಕನ್ಯಾನ.
....

ಮುಂದುವರಿಯುವುದು