ಇರ್ಷಾದ್ ವೇಣೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಇರ್ಷಾದ್ ವೇಣೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜೂನ್ 9, 2017

ಮಂಗಳೂರಿನ ನಾಟೆಕಲ್ ನಲ್ಲಿರುವ ಸರಕಾರಿ ಮುಸ್ಲಿಂ ವಸತಿ


*ನಾನು ಕಲಿತಿದ್ದ ಹಾಗೂ ಪ್ರಸ್ತುತ ಮಂಗಳೂರಿನ ನಾಟೆಕಲ್ ನಲ್ಲಿರುವ ಸರಕಾರಿ ಮುಸ್ಲಿಂ ವಸತಿ ಶಾಲೆಯ ಬಗ್ಗೆ ಈ ಹಿಂದೆ ಒಮ್ಮೆ ಬರೆದಿದ್ದೆ‌‌. ಮುಚ್ಚುವ ಹಂತದಲ್ಲಿದ್ದ ವಸತಿ ಶಾಲೆಗೆ ಮತ್ತೆ ಹಳೆಯ ಮೆರುಗು ಬಂದಿದೆ. 100 ದಾಟದಿದ್ದ ದಾಖಲಾತಿ ಸಂಖ್ಯೆ ಈ ವರ್ಷ ಅಲ್ ಹಮ್ದುಲಿಲ್ಲಾಹ್ 140+ ಆಗಿದೆ.*

*ಮುಸ್ಲಿಂ ಸಮುದಾಯದ ಮಂದಿಯಲ್ಲಿ ಜಾಗೃತಿ ಮೂಡಿದ ಪರಿಣಾಮ ಈ ಫಲಿತಾಂಶ ಬಂದಿದೆ. ಇದಕ್ಕೆ ಒಂದು ಕಾರಣ ಹಳೆಯ ವಿದ್ಯಾರ್ಥಿಗಳ ಶ್ರಮ.*

*ಹಾಸ್ಟೆಲ್ ನ ಪರಿಸ್ಥಿತಿಯ  ಬಗ್ಗೆ ಅರಿತ ಹಳೆಯ ವಿದ್ಯಾರ್ಥಿಗಳು ಒಂದು ಬಾರಿ ಹಾಸ್ಟೆಲ್ ನಲ್ಲಿ ಸಭೆ ಸೇರಿ, ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿದ್ದರು. ಇದರ ಅಧ್ಯಕ್ಷರಾಗಿ ಮೊದಲ ಬ್ಯಾಚ್ ನ ವಿದ್ಯಾರ್ಥಿ ಹಾಗೂ ಪ್ರಸ್ತುತ ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅನ್ವರ್ ಅಮೆಮ್ಮಾರ್ ಹಾಗೂ ಕಾರ್ಯದರ್ಶಿಯಾಗಿ ನನ್ನ ಬ್ಯಾಚ್ ನ ಗೆಳೆಯ ಹಾಗೂ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಿರಾಜ್ ಕಿನ್ಯ ಆಯ್ಕೆಯಾಗಿದ್ದರು.*

*ಹಳೆ ವಿದ್ಯಾರ್ಥಿಗಳು, ಅಧ್ಯಾಪಕರು &  ಹಲವಾರು ಸಂಘ ಸಂಸ್ಥೆಗಳ ಸಹಕಾರದಿಂದ ಈ ಯಶಸ್ಸು ದೊರೆತಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೂ ಅಲ್ಲಾಹನು ಎಲ್ಲರ ಸೇವೆಯನ್ನು ಸ್ವೀಕರಿಸಿ, ಅನುಗ್ರಹಿಸಲಿ.....ಆಮೀನ್.*

*ಶಿಕ್ಷಣ ಪ್ರೇಮಿಗಳು/ದಾನಿಗಳು/ಹಳೆಯ ವಿದ್ಯಾರ್ಥಿ ಗಳಿಂದ ಬೇಕಿದೆ ನೆರವು:*

ನಮ್ಮೆಲ್ಲರ ಪ್ರಯತ್ನ ಫಲಪ್ರದವಾಗಿದೆ ಏನೋ ನಿಜ. ಹಳೆಯ ವಿದ್ಯಾರ್ಥಿಗಳ ಸಂಘವು ಈಗಿರುವ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನ ಮಾಡುತ್ತಿದೆ. ಜೊತೆಗೆ ಮದರಸಾ ಅಧ್ಯಾಪಕರಿಗೆ ಆರ್ಥಿಕ ವ್ಯವಸ್ಥೆ ಮಾಡಲು ಶ್ರಮಿಸುತ್ತಿದೆ. ಈಗಾಗಲೇ ಸಂಸ್ಥೆಯ ಮೇಲೆ ಪ್ರೀತಿ ಇಟ್ಟಿರುವ, ದೇಶವಿದೇಶಗಳಲ್ಲಿ ನೆಲೆಸಿರುವ ಹಲವು ಮಂದಿ ಹಳೆಯ ವಿದ್ಯಾರ್ಥಿಗಳು ತಮ್ಮ ಕೈಲಾದ ಮಟ್ಟಿಗೆ *ಆರ್ಥಿಕ ನೆರವು* ನೀಡುತ್ತಿದ್ದಾರೆ.

*ಈ ಹಾಸ್ಟೆಲ್ ನಲ್ಲಿ ಕಲಿತ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಇಂದು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಎಲ್ಲರನ್ನೂ ಸಂಪರ್ಕ ಮಾಡಲು ನಮಗೆ ಸಾಧ್ಯವಾಗಿಲ್ಲ. ಪ್ರಯತ್ನ ಮುಂದುವರಿದಿದೆ. ಇದರ ಜೊತೆಗೆ ದಾನಿಗಳು, ಶಿಕ್ಷಣ ಪ್ರೇಮಿಗಳು ಈ ಸಂಸ್ಥೆಗೆ ಆರ್ಥಿಕ ನೆರವು ಅಥವಾ ಇಫ್ತಾರ್ ಕೂಟ ಆಯೋಜಿಸಲು ಸಹಕರಿಸಬಹುದು.*

*ಬಡ ಹಾಗೂ ಮಧ್ಯಮ ವರ್ಗದ ಜನರ ಮಕ್ಕಳ ಪ್ರಾರ್ಥನೆ ಸೃಷ್ಟಿಕರ್ತ ಸ್ವೀಕರಿಸಿ, ಅನುಗ್ರಹಿಸಲಿ. ಆಮೀನ್.*

*ಹನಿ ಹನಿಗೂಡಿದರೆ ಹಳ್ಳ* ಎಂಬಂತೆ ಆಸಕ್ತರು, ಸಂಘ ಸಂಸ್ಥೆಗಳ ಯಾರಾದರೂ ಇದ್ದರೆ ನಮ್ಮ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಬಹುದು ಅಥವಾ ನೇರವಾಗಿ ಜಂಟಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದು.

Contact:

Anwar Amemmar : 9008385666

Siraj Kinya: 9880130994

ಖಾತೆಯ ವಿವರ:

Old Students Association, Government Muslim Residential School, Natekal, Mangaluru

Bank Account Details

Name Of the Bank: Karnataka Bank

Account Type: Current Account

Name In Account: Anwar A.S & Siraj
Joint Account

Account Number: 9432000100005501

Branch: Belma, Deralakatte

IFSC Code: KARB0000943

MICR Code: 575052034

ಪ್ರೀತಿಯಿಂದ
✍🏽 *ಇರ್ಷಾದ್ ವೇಣೂರ್*😍
ಹಳೆ ವಿದ್ಯಾರ್ಥಿ
ಸರಕಾರಿ ಮುಸ್ಲಿಂ ವಸತಿ ಶಾಲೆ

ಬುಧವಾರ, ಮೇ 24, 2017

ಜಾತಿ & ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ

http://www.nadakacheri.karnataka.gov.in/

*ಜಾತಿ & ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದೀರಾ?*

*ಅಲ್ಲಿ, ಇಲ್ಲಿ ಎಂದು ನಿಮ್ಮನ್ನು ಅಲೆದಾಡಿಸುತ್ತಿದ್ದಾರಾ?*

*ತೊಂದರೆ ಕೊಡುವ ಅಧಿಕಾರಿಗಳಿಂದ/ಏಜೆಂಟ್ ಗಳಿಂದ ಬೇಸತ್ತಿದ್ದೀರಾ?*

*_ಹಾಗಾದರೆ ಇನ್ನು ನೀವು ಬೇಸರ ಪಡಬೇಕಾದ ಅವಶ್ಯಕತೆ ಇಲ್ಲ._*

*ಇನ್ನು ನೀವು ಜಾತಿ ಮತ್ತು ಆದಾಯ ಪತ್ರ ಪಡೆಯಲು ಯಾರನ್ನೂ ಕಾಯಬೇಕಾಗಿಲ್ಲ. online ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಸರಕಾರ ಅವಕಾಶ ಕಲ್ಪಿಸಿದೆ.*

*www.nadakacheri.karnataka.gov.in*
*ಈ Website ನ ಮೂಲಕ ಅರ್ಜಿ ಸಲ್ಲಿಸಿ, ಬಳಿಕ ನಿಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನೆಮ್ಮದಿ ಕೇಂದ್ರಕ್ಕೆ ತೆರಳಿ ಪಡೆದುಕೊಳ್ಳಬಹುದು.*

*ಇಲಾಖೆ ಈಗಾಗಲೇ ನಿಗದಿಪಡಿಸಿದ ಶುಲ್ಕವನ್ನು Online ಮುಖಾಂತರವೇ ಕಟ್ಟಬಹುದು.*

*ನಿಮ್ಮಲ್ಲಿ ಇರಬೇಕಾದ ದಾಖಲೆಗಳು:*

1. ಬ್ಯಾಂಕ್ ಅಕೌಂಟ್
(ATM Card)

2. ವಿಳಾಸದ ಬಗೆಗಿನ ದಾಖಲೆಗಳ ಮೂಲ ಪ್ರತಿ.(ಒರಿಜಿನಲ್)
(ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ)

3. ಮೊಬೈಲ್ ಸಂಖ್ಯೆ

*_(ನಿಮ್ಮ ಪಂಚಾಯತಿಯ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇರಬೇಕು)_*

*_ನಿಮ್ಮ ಸಮಸ್ಯೆ, ನಮ್ಮ ಸೇವೆ_*

*(ವಾರದ ಪ್ರತೀ ಬುಧವಾರ & ಗುರುವಾರ ನಮ್ಮ ಕಚೇರಿಯಲ್ಲಿ ಉಚಿತ ಸೇವೆ ಲಭ್ಯ)*

*ಸಮಯ: ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ*

*ಮಾಹಿತಿ & ಉಚಿತ ಸೇವೆಗಾಗಿ:*

*ಇರ್ಷಾದ್ ವೇಣೂರ್*
*ಸಂಯೋಜಕರು,*
*ಸರಕಾರಿ ಸೌಲಭ್ಯಗಳ ಮಾಹಿತಿ ವಿಭಾಗ,*
*ಸಮಾಜ ಸೇವಾ ಘಟಕ,*
*ಜಮಾಅತೆ ಇಸ್ಲಾಮೀ ಹಿಂದ್,*
*ಹಿದಾಯತ್ ಸೆಂಟರ್,*
*ಬೀಬಿ ಅಲಾಬಿ ರಸ್ತೆ, ಬಂದರ್, ಮಂಗಳೂರು-575001*

ಮೊ:
9844963059
7676413059

E-mail: ssuhelpline@gmail.com

Facebook/Social Service Unit-SSU