ಸಮಾಜ ಸೇವೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಮಾಜ ಸೇವೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜೂನ್ 29, 2016

ಉದ್ಯೋಗ ಮೇಳ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ 'ಆಳ್ವಾಸ್ ಪ್ರಗತಿ 2016' ಜುಲೈ 2 ಮತ್ತು 3 ರಂದು ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ.

ಯಾರಿಗೆ ಅವಶ್ಯಕ?
ಆಳ್ವಾಸ್ ಪ್ರಗತಿ ಎಲ್ಲರಿಗೂ ಸೂಕ್ತವಾದದ್ದು ಮತ್ತು ಉಚಿತವಾಗಿ ಉದ್ಯೋಗಾವಕಾಶವನ್ನು
ಪಡೆಯುವ ಅವಕಾಶ. ಕಂಪೆನಿಗಳಿಗೂ ಉಚಿತ ಉದ್ಯೋಕಾಂಕ್ಷಿಗಳಿಗೂ ಉಚಿತ ಪ್ರವೇಶ.
ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಡಿಪ್ಲಮಾ ಮತ್ತು ಎಲ್ಲಾ ಪದವೀಧರರಿಗೆ, ಇಂಜಿನಿಯರಿಂಗ್, ನರ್ಸಿಂಗ್, ಪ್ಯಾರಾ ಮೆಡಿಕಲ್ ಉದ್ಯೋಕಾಂಕ್ಷಿಗಳಿಗೂ ಅವಕಾಶ.

ಉದ್ದೇಶಗಳು:
ಜಾಗತಿಕವಾಗಿ ಇರುವ ಬೃಹತ್ ಉದ್ಯೋಕಾವಕಾಶದ ಕುರಿತು ಗ್ರಾಮೀಣ ಅಭ್ಯರ್ಥಿಗಳಲ್ಲಿ ಸ್ಪಷ್ಟತೆ ಮತ್ತು ಅರಿವು ಮೂಡಿಸುವುದು.

ಆಳ್ವಾಸ್ ಪ್ರಗತಿ 2016 ರ ಮುನ್ನೋಟಗಳು

• ಈ ಬಾರಿ 400ಕ್ಕೂ ಮಿಕ್ಕಿ ಕಂಪನಿಗಳು ಭಾಗವಹಿಸುವ ನಿರೀಕ್ಷೆ
• SSLC ಮತ್ತು P.U.C ಅಭ್ಯರ್ಥಿಗಳಿಗೆ ಬೃಹತ್ ಉದ್ಯೋಗಾವಕಾಶ.
• I.T.I ಮತ್ತು ಡಿಪ್ಲಮಾ ಅಭ್ಯರ್ಥಿಗಳಿಗೆ ಮ್ಯಾನ್ಯುಫ್ಯಾಕ್ಚರಿಂಗ್(ಉತ್ಪಾದನಾ) ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶದ ಸಾಧ್ಯತೆ
• B.H.M ಮತ್ತು ನರ್ಸಿಂಗ್, ಪ್ಯಾರಾ ಮೆಡಿಕಲ್ ವಿಭಾಗದ ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ.
• B.COM,  BBM, BSc, BCA, BA ಪದವೀಧರರಿಗೂ ಎಲ್ಲಾ ವಿಭಾಗಗಳಲ್ಲಿ ವಿವಿಧ ಕಾರ್ಯನಿರ್ವಹಣೆಯ ಅವಕಾಶ
•M.COM,  MBA, MSC, ಹಾಗೂ ಇತರ ಸ್ನಾತಕೋತ್ತರ ಪದವೀದರರಿಗೆ ವಿಪುಲ ಅವಕಾಶ.
• IT ಇಂಜಿನಿಯರ್ ಅಭ್ಯರ್ಥಿಗಳಿಗೆ ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಕೆಲಸ ಮಾಡುವ ವಿಪುಲ ಅವಕಾಶ
• ಅತ್ಯಂತ ಕಡಿಮೆ ಉದ್ಯೋಗಾವಕಾಶ ಇರುವ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪಧವೀದರರಿಗೆ ಪೂರಕ ಇತರ ಉದ್ಯೋಗಾವಕಾಶದ ಸಾಧ್ಯತೆಗಳು.
• ಮಾರಾಟ ಮತ್ತು ರೀಟೈಲ್ ವಿಭಾಗದಲ್ಲಿ ಅತೀ ಹೆಚ್ಚು ಉದ್ಯೋಗಾವಕಾಶಗಳು
• ಬ್ಯಾಂಕಿಂಗ್ ಮತ್ತು ಇತರ ಹಣಕಾಸು ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶ 
• HR ವಿಭಾಗದ ಅಭ್ಯರ್ಥಿಗಳಿಗೆ ಉತ್ತಮ ಕಂಪನಿಗಳಲ್ಲಿ ಉದ್ಯೋಗದ ಸಾಧ್ಯತೆಗಳು

ನೊಂದಾವಣೆ

ಅಭ್ಯರ್ಥಿಗಳ ನೊಂದಾವಣೆ ವಿಭಾಗಕ್ಕೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಬೇಕಾದ ಮಾಹಿತಿಯನ್ನು ನೀಡಲು ಮತ್ತು ಮುಂದೆ ವರ್ಷಪೂರ್ತಿ ನಡೆಯುವ ಉದ್ಯೋಗ ಮೇಳಗಳ ಕುರಿತು ಅಭ್ಯರ್ಥಿಗಳಿಗೆ ನಿರ್ದೇಶನ ಮಾಡುವ ಉದ್ದೇಶದಿಂದ ಮಾಡಲಾಗುತ್ತದೆ.
http:/alvaspragati.com ಗೆ log in ಆಗಿ candidate registration  ಎಂಬಲ್ಲಿ ಕ್ಲಿಕ್ ಮಾಡಿ 5 ಹಂತದಲ್ಲಿ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಬೇಕು. ನೋಂದಾವಣಿಯ ನಂತರ ಅಭ್ಯರ್ಥಿಗೆ ಒಂದು sms ಮೂಲಕ ಅಭ್ಯರ್ಥಿಯ ಐ.ಡಿ ಮತ್ತು ಆಳ್ವಾಸ್ ಪ್ರಗತಿಯ mobile app ಡೌನ್ಲೋಡ್ ಮಾಡಬಹುದಾದ link ಬರುತ್ತದೆ. ಅದರ ಮೂಲಕ ಈ ಉದ್ಯೋಗ ಮೇಳದ ಎಲ್ಲಾ ಮಾಹಿತಿಗಳನ್ನು ಮೊಬೈಲ್ ಮೂಲಕವೇ ಪಡೆಯಲು ಸಾಧ್ಯವಾಗುತ್ತದೆ.
ಉದ್ಯೋಗ ಮೇಳದಂದು ಅಭ್ಯರ್ಥಿಗಳು ತಮ್ಮ ಆನ್ಲೈನ್ ನೊಂದಣಿ ಸಂಖ್ಯೆಯೊಂದಿಗೆ ಕಲರ್ ಕೋಡಿಂಗ್ ವಿಭಾಗಕ್ಕೆ ಹೋಗಬೇಕು. ನೋಂದಾವಣೆ ಮತ್ತು ಕಲರ್ ಕೋಡಿಂಗ್ ಕೌಂಟರ್ಗಳು ಅದೇ ದಿನ ಬೆಳಗ್ಗೆ 8 ಗಂಟೆಯಿಂದ ಲಭ್ಯವಿರಲಿದೆ. ದೂರದ ಊರುಗಳಿಂದ ಆಗಮಿಸುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

ಅಭ್ಯರ್ಥಿಗಳೇ,

ಈ ಉದ್ಯೋಗಮೇಳ ಪ್ರತಿಯೊಬ್ಬರಿಗೂ ಅರ್ಥಪೂರ್ಣವಾಗಿ ಉದ್ಯೋಗದ ಸಾಧ್ಯತೆಗಳನ್ನು ತೋರಿಸಿಕೊಂಡುವುದೇ ಆಗಿದೆ. ಈ ಕುರಿತು ಅಭ್ಯರ್ಥಿಗಳಲ್ಲಿ ಸ್ಪಷ್ಟತೆಯನ್ನು ತರುವ ಇಚ್ಚೆ ನಮ್ಮದು. ಕಂಪನಿ ರಿಜಿಸ್ಟ್ರೇಷನ್ ಆದಂತೆ ಅಭ್ಯರ್ಥಿಗಳಿಗೆ ಪೂರಕ ಮಾಹಿತಿಗಳು ಆಳ್ವಾಸ್ ಪ್ರಗತಿಯ ವೆಬ್ಸೈಟ್ ಮತ್ತು mobile app ನಲ್ಲಿ ಪೂರ್ಣವಾಗಿ ಮಾಹಿತಿ ದೊರಕುತ್ತದೆ. ಲಭ್ಯವಿರುವ ತಂತ್ರಜ್ಞಾನದ ಮೂಲಕ ಆಳ್ವಾಸ್ ಪ್ರಗತಿಯ ಮಾಹಿತಿಗಳನ್ನು ಪಡೆಯಬೇಕಾಗಿ ಅಭ್ಯರ್ಥಿಗಳಲ್ಲಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಸಂಪಕಿ9ಸಿ:
9611686198, 8494934852, 8152977886, 7353618867, 9008907716

ಧನ್ಯವಾದಗಳು,
ಪ್ರಗತಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ
ಮೂಡಬಿದಿರೆ.

ಪ್ರೋತ್ಸಾಹ ಧನ ವಿದ್ಯಾರ್ಥಿ ವೇತನ

*ಪ್ರೋತ್ಸಾಹ ಧನ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ*

2016-17 ಪ್ರೋತ್ಸಾಹ ಧನ(ಉತ್ತೇಜನ) ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತ ಸಮುದಾಯದ(ಮುಸ್ಲಿಂ/ಕ್ರಿಶ್ಚಿಯನ್/ಜೈನ) ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯಾರಿಗೆ ಅನ್ವಯ:
👉🏼ಪಿಯುಸಿ(Puc)
👉🏼ಪದವಿ(Degree)
👉🏼ಸ್ನಾತಕೋತ್ತರ(Post Graduation)
(ಪ್ರೊಫೆಶನಲ್ ಕೋರ್ಸ್ ಗಳಿಗೆ ಅನ್ವಯಿಸುವುದಿಲ್ಲ)

ಅರ್ಹತೆ:
👉🏼 *₹ರೂ.2 ಲಕ್ಷ ಆದಾಯ ಮಿತಿ*
(ತಹಶೀಲ್ದಾರ್ ರಿಂದ ನೀಡಲ್ಪಟ್ಟ ಪ್ರಮಾಣಪತ್ರ ಮಾತ್ರ)*
*ಪ್ರತಿಭಾವಂತ ಹಾಗೂ ಉತ್ತಮ ಅಂಕ ಗಳಿಸಿರಬೇಕು*

ಬೇಕಾದ ದಾಖಲೆಗಳು:
1. ಹಿಂದಿನ ವರ್ಷದ ಮಾರ್ಕ್ ಕಾರ್ಡ್ ನ ಪ್ರತಿ 
2. ಆದಾಯ ಪ್ರಮಾಣ ಪತ್ರ
3. ರೇಷನ್ ಕಾರ್ಡ್/ ಆಧಾರ್ ಕಾರ್ಡ್/ ವಾಸ್ತವ್ಯ ಪ್ರಮಾಣ ಪತ್ರದ ಪ್ರತಿ.
4. ಪಾಸ್ ಪೋರ್ಟ್ ಸೈಝ್ ನ ಫೋಟೋ.
5. ಫೀಸ್ ಕಟ್ಟಿದ ರಶೀದಿಯ ಪ್ರತಿ.
6. ಬ್ಯಾಂಕು ಅಕೌಂಟ್ ಪ್ರತಿ. 
7. STUDY CERTIFICATE.

(ಎಲ್ಲಾ ದಾಖಲೆಗಳನ್ನು ಅಟೆಸ್ಟೆಡ್ ಮಾಡಿಸಿರಬೇಕು)

 
*ಅರ್ಜಿ ಸಲ್ಲಿಕೆಗೆ ಕೊನೆಯ ದಿನ : 31, ಆಗಸ್ಟ್ 2016*
*(31-08-2016)*

(ಆಯಾ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಜಿಲ್ಲೆಯ ಅಧಿಕಾರಿಗಳನ್ನು  ಸಂಪರ್ಕ ಮಾಡಬಹುದು.)

ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಳಿಗಾಗಿ ಸಂಪರ್ಕಿಸಿ:

*ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಕಂಕನಾಡಿ, ಮಂಗಳೂರು*
ಅಥವಾ
*ಇರ್ಷಾದ್ ವೇಣೂರ್*
*ಸಮಾಜ ಸೇವಾ ಘಟಕ*
*ಜಮಾಅತೆ ಇಸ್ಲಾಮೀ ಹಿಂದ್*
*ಹಿದಾಯತ್ ಸೆಂಟರ್*
*ಬೀಬಿ ಅಲಾಬಿ ರಸ್ತೆ, ಬಂದರ್*
*ಮಂಗಳೂರು, ದ.ಕ. ಜಿಲ್ಲೆ*

ಮೊಬೈಲ್:

*9844963059(WhatsApp)*
*7676413059*

*E-Mail: ssuhelpline@gmail.com*

ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ

*ದಯವಿಟ್ಟು  ಈ ಸಂದೇಶವನ್ನು  ಎಲ್ಲರಿಗೂ ತಲುಪಿಸಿ*

*ಎಲ್ಲಾ ಅಲ್ಪಸಂಖ್ಯಾತ ಸಮುದಾಯದ (ಮುಸ್ಲಿಂ/ಕ್ರಿಶ್ಚಿಯನ್/ಜೈನ/ಬೌದ್ಧ/ಸಿಖ್/ಪಾರ್ಸಿ) ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ*

*ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ*ವು 2016-17 ನೇ ಸಾಲಿನಲ್ಲಿ ಪ್ರೀ-ಮೆಟ್ರಿಕ್, ಪೋಸ್ಟ್ ಮೆಟ್ರಿಕ್ ಹಾಗೂ ಮೆರಿಟ್ ಕಂ ಮೀನ್ಸ್  ವಿದ್ಯಾರ್ಥಿ ವೇತನಗಳಿಗೆ 2016 ಜುಲೈ ತಿಂಗಳ 15 ನೇ ತಾರೀಖಿನ ( *15-07-2016* ) ಬಳಿಕ ಅರ್ಜಿ ಆಹ್ವಾನಿಸಲಿದ್ದು, ವಿದ್ಯಾರ್ಥಿಗಳು/ಪೋಷಕರು/ವಿದ್ಯಾ ಸಂಸ್ಥೆಯವರು & BEO ಅಧಿಕಾರಿಗಳು ಈ ಕೆಳಗಿನ ಸೂಚನೆಗಳನ್ನು  ಪಾಲಿಸಲು ಸೂಚಿಸಿದೆ.

ಸೂಚನೆಗಳು:👇🏽
👉🏼ರಾಷ್ಟ್ರೀಕೃತ (Nationalised Bank) ಬ್ಯಾಂಕ್ ಗಳಲ್ಲಿ ಪ್ರತೀ ವಿದ್ಯಾರ್ಥಿ ಖಾತೆ ಹೊಂದಿರಬೇಕು. ಮತ್ತು ಅದು ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಖಾತೆ ಇಲ್ಲದಿದ್ದರೆ ಅರ್ಜಿ ಹಾಕಿ ಖಾತೆ ತೆರೆಯಬೇಕು.
👉🏼ಇನ್ನೂ  ಆಧಾರ್ ಕಾರ್ಡ್ ಮಾಡಿಸದ & ಪಡೆದುಕೊಳ್ಳದ ವಿದ್ಯಾರ್ಥಿಗಳು ಕೂಡಲೇ ಅರ್ಜಿ ಹಾಕಬೇಕು.
👉🏼ಆಧಾರ್ ಕಾರ್ಡ್ ಇರುವ ವಿದ್ಯಾರ್ಥಿಗಳು ABP(Adhaar Based Payments) ಸೇವೆಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಕಾರ್ಡ್ ನಂಬರನ್ನು  ಕೂಡಲೇ ಲಿಂಕ್ ಮಾಡಿಸಿಕೊಳ್ಳಿ
👉🏼E.I.D Number ಪಡೆದವರು U.I.D. Number ಪಡೆದುಕೊಳ್ಳಿ.
👉🏼ಸಂಸ್ಥೆಯ (ಶಾಲೆ & ಕಾಲೇಜು) ಹೆಸರು ನ್ಯಾಷನಲ್ ಸ್ಕಾಲರ್ ಶಿಪ್ ಫೋರ್ಟಲ್(NSP) ನಲ್ಲಿ ನೋಂದಾವಣೆಯಾಗಿರದಿದ್ದಲ್ಲಿ ಕೂಡಲೇ ಸಂಸ್ಥೆಯವರು ನೋಂದಾವಣೆ ಮಾಡಬೇಕು. ಅದಕ್ಕಾಗಿ ಅರ್ಜಿ ನಮೂನೆಯನ್ನು ಇಲಾಖೆಯ ವೆಬ್ ಸೈಟ್ www.gokdom.kar.nic.in ನಲ್ಲಿ ಈಗಾಗಲೇ ಅಪ್ಲೋಡ್ ಮಾಡಲಾಗಿದ್ದು, ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಬಳಿಕ NSP Website- www.scholarships.gov.in ಗೆ Upload ಮಾಡಬೇಕು‌.
ಸಂಸ್ಥೆಯವರು ವೆಬ್ ಸೈಟಿನಲ್ಲಿ ನೀಡಿರುವ ಸೂಚನೆಗಳನ್ನು  ಪಾಲಿಸಿ, ನೋಂದಾವಣೆ ಮಾಡಿಕೊಳ್ಳಬಹುದು.

ಈ ಬಗ್ಗೆ  ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:

*ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಕಂಕನಾಡಿ, ಮಂಗಳೂರು*
ಅಥವಾ
*ಇರ್ಷಾದ್ ವೇಣೂರ್*
*ಸಮಾಜ ಸೇವಾ ಘಟಕ*
*ಜಮಾಅತೆ ಇಸ್ಲಾಮೀ ಹಿಂದ್*
*ಹಿದಾಯತ್ ಸೆಂಟರ್*
*ಬೀಬಿ ಅಲಾಬಿ ರಸ್ತೆ, ಬಂದರ್*
*ಮಂಗಳೂರು, ದ.ಕ. ಜಿಲ್ಲೆ*

ಮೊಬೈಲ್:
*9844963059(WhatsApp)*
*7676413059*

*E-Mail: ssuhelpline@gmail.com*

ಶನಿವಾರ, ಜೂನ್ 18, 2016

ಅಭಿಪ್ರಾಯ

ನಮ್ಮ ಧಾರ್ಮಿಕ ಮುಖಂಡರು ಮಸಿದಿ
ಗಳಲ್ಲಿ ಜನರಿಗೆ ನಿಜ ಜೀವನವನ್ನು ಶಿಕ್ಷಣ
ದಿಂದ ಹೇಗೆ ಸುಂದರ ಗೊಳಿಸಿಕೊಳ್ಲಬೇಕು
ಎಂದು ಯಾರೂ ಹೇಳಲ್ಲ.ಕೇವಲ ಅವರಿಗೆ
ಸ್ವರ್ಗ,ನರಕಗಳ ಭಯ ಹುಟ್ಟಿಸಿ ಮನಸು
ಕೆಡಿಸಿ ಕಳಿಸುತ್ತಾರೆ.

ನಮ್ಮ ಜನ ಮೀಸಲಾತಿಗೆ ಅಂಗಲಾಚುವು
ದಕ್ಕಿಂತ ಮೆರಿಟ್ಗೆ ಮುಗಿಬೀಳುವ ಶಿಕ್ಷಣ
ಪಡೆಯುವಂತೆ ತಯಾರಾಗಬೇಕು.ಜೊತೆಗೆ
ಮೀಸಲಾತಿಯ ನಮ್ಮ ಹಕ್ಕನ್ನು ಬಿಡ
ಬಾರದು.ಅದಕ್ಕೆಂದೆ ನಾನು,ನಮ್ಮ ಜನ
ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು.

ಧಾರ್ಮಿಕ ವಿಚಾರ ನಮಗೆ ಬೇಡ.ಆದ್ಯತೆ ಶಿಕ್ಷಣ ಸಾಮಾಜಿಕ  ಉದ್ಯೋಗ ವಿಶೇಷವಾಗಿ ಸರ್ಕಾರಿ ಉದ್ಯೋಗ ಮತ್ತು ಆರ್ಥಿಕವಾಗಿರವಲಿ.ದೀನಿನ ಬಗ್ಗೆ ಚರ್ಚೆಗೆ ಬೇರೆ ಗ್ರೂಪ್ ಮಾಡಿ. ಕಾರಣ ಅನೇಕ ವೈರುಧ್ಯ ವಿಚಾರಗಳಿಂದ ಅನೇಕ ಗುಂಪುಗಳಿವೆ.ಈ ಕಾರಣದಿಂದ ನಮ್ಮಲ್ಲಿ ಒಡಕು ಬರಬಾರದು.ಇಸ್ಲಾಂ ಶಾಂತಿ ಸೌಹಾರ್ದತೆಯ ಸಂಕೇತ.

🏻ಮುಸ್ಲಿಮರ ಅಭಿವೃದ್ಧಿ ಕುರಿತು ಚರ್ಚಿಸಲಾಗುತ್ತಿರುವ ಅಭಿಪ್ರಾಯಗಳು.

ನಮ್ಮ ಧಾರ್ಮಿಕ ಮುಖಂಡರು ಮಸಿದಿ
ಗಳಲ್ಲಿ ಜನರಿಗೆ ನಿಜ ಜೀವನವನ್ನು ಶಿಕ್ಷಣ
ದಿಂದ ಹೇಗೆ ಸುಂದರ ಗೊಳಿಸಿಕೊಳ್ಲಬೇಕು
ಎಂದು ಯಾರೂ ಹೇಳಲ್ಲ.ಕೇವಲ ಅವರಿಗೆ
ಸ್ವರ್ಗ,ನರಕಗಳ ಭಯ ಹುಟ್ಟಿಸಿ ಮನಸು
ಕೆಡಿಸಿ ಕಳಿಸುತ್ತಾರೆ.

ಪ್ರಜ್ಞಾವಂತ ಮುಸ್ಲಿಮ ನಾಯಕರುಗಳು ಮತ್ತು ಯುವಕರು ಮೊದಲು ಧಾರ್ಮಿಕತೆ ಇಂದಾ ಈಚೆಗೆ ಬರಬೇಕು,ಏನು ಚೆರ್ಚೆಯನ್ನು ಮಾಡಿದರು ಧರ್ಮದಲ್ಲೇ ಹುಡಕುತ್ತಾಹೋಗುವದು ಮತ್ತು ನಮ್ಮ ಧರ್ಮದ ಬಗ್ಗೆ ನಾವೇ ಚೆರ್ಚೆಯನ್ನು ಮಾಡುವದು ಬಿಟ್ಟು ಸಾಮಜಿಕ ಚಿಂತನೆ ಮಾಡಿ

ನಾವಿರುವ ನಗರ, ಪಟ್ಟಣ ಊರುಗಳಲ್ಲಿ
ಕನಿಷ್ಟ ಹತ್ತಾರು ಯುವಕರು,ಸಾಮಾಜಿಕ
ಕಾಳಜಿಉಳ್ಲ ನಿವ್ರುತ್ತ ಹಿರಿಯರ ತಂಡ
ರಚಿಸಿ ಎಲ್ಲರೂ ಒಟ್ಟಾಗಿ ಸ್ತಳಿಯ ಸಮಸ್ಯೆ
ಗಳಬಗ್ಗೆ ಚರ್ಚಿಸಿ ಮುಂದುವರಿಯಬೇಕು.
ಸ್ತಳೀಯ ಬಡವರು,ಬಿ.ಪಿ.ಏಲ್ ಕಾರ್ಡು
ದಾರರ ಸಮಸ್ಯೆ ಗಳಿಗೆ ಉತ್ತರ ಹುಡುಕಲು
ಶ್ರಮಿಸಬೇಕು.ಅವರಿಗೆ ಶೈಕ್ಷಣಿಕ ಮಾರ್ಗ
ದರ್ಶನ ಸಿಗಬೇಕು.ಹೀಗೆ ಆರಂಭಿಸಿದರೆ
ಎಲ್ಲವು ಅರ್ಥವಾಗುತ್ತಾ ಹೋಗಿತ್ತೆ.

ಐಷಾರಾಮಿ ಮಸೀದಿಗಳ ನೆರಳಲ್ಲೇ ಎಷ್ಟೋ ಬಡ ಕುಟುಂಬಗಳು ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲದೇ ಇರುತ್ತಿವೆ‌‌.

ರಂಜಾನ್ ತಿಂಗಳಲ್ಲಿ ಮಸೀದಿಗಳ ನವೀಕರಣ, ಸಿಂಗಾರ, ಖಚು೯ ವೆಚ್ಚಗಳಿಗೆ ಸಂಗ್ರಹವಾಗುವ ಹಣದಲ್ಲಿ ನೂರಾರು ಕುಟುಂಬಗಳ ಬದುಕು ಸಿಂಗರಿಸಬಹುದು.....ಅದೇ ರೀತಿ ಮದರಸಾಗಳಿಗೆ ಹೋಗುವ ಹಣದಿಂದಲೂ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಬಹುದು

ಇಸ್ಲಾಂ ಧರ್ಮ ಈ ಭಾರತಕ್ಕೆ ಯಾವತ್ತೂ ಅಪಥ್ಯ ವಾಗಲಿಲ್ಲ, ಆಕಾರಣ ದಿಂದಲೇ ಇಂದು ಬಡ- ದಲಿತರು ಇಸ್ಲಾಂ ಧರ್ಮಕ್ಕೆ ಮತಾಂತರ ವಾಗಿದ್ದಾರೆ, ಸಮಸ್ಯೆ ಇರುವುದು, ಭಾರತದ ಸಂಧರ್ಭದಲ್ಲಿ ಇಸ್ಲಾಂ ಧಾರ್ಮಿಕ ಮುಖಂಡರು ಯಾಕೆ ಮುಸ್ಲಿಮರ ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತೀ ಕ ನಾಯಕತ್ವ ವನ್ನು ಹತೋಟಿ ಯಲ್ಲಿ ಇಟ್ಟದ್ದಾರೆ, ಧಾರ್ಮಿಕ-ರಾಜಕೀಯ-ಆರ್ಥಿಕ ನಾಯಕತ್ವ ಗಳು ಸಾಮಾಜಿಕ ನಾಯಕ ತ್ವ ದ ಗುಣಗಳನ್ನು ಅಳ್ಳವಡಿ ಸಿಕೊಳ್ಳಬೆಕು ಹಾಗು ಅನುರಿಸಬೆಕು, ಯಾಕೆಂದರೆ ಇದು ಜಾತಿ/ಸಮುದಾಯ ಆಧಾರಿತ ರಾಜಕಾರಣದ ಮೇಲೆ ಅವಲಂಬಿತ ಸಾಂ ಸ್ಕೃತಿ ಕ ರಾಜಕಾರಣ ಅವಲಂಬಿತ ದೇಶದ ಸಮಾಜ ವಾಗಿದೆ.

1. ಸ್ವಾರ್ಥವಿಲ್ಲದ ಪರೋಪಕಾರಿ ಸೇವಾ ಮನೋಭಾವ
2. ಇಸ್ಲಾಮ್ ನಲ್ಲಿ ತಿಳಿಸಿರುವಂತೆ  ನೀತಿ ಧರ್ಮ  ನಡೆನುಡಿ
3. ಬೇಧಭಾವ ಗಳನ್ನು ತೊರೆದು
ಸಮಾಜದಲ್ಲಿ ರುವ  ಎಲ್ಲಾ ಧರ್ಮ ದವರೊಂದಿಗೆ , ಎಲ್ಲಾ ಭಾಷೆ ಯವರೊದಿಗೆ ಸ್ಪಂದಸಬೇಕು
4.ಧರ್ಮ ಮತ್ತು
ರಾಜಕೀಯ ,ಸಾಮಾಜಿಕ ವಿಷಯಗಳನ್ನು ಬೆರಸಬಾರದು
5. ರಾಷ್ಟ್ರ ಮತ್ತು ರಾಜ್ಯ ಗಳ ಸಮಸ್ಯೆ ಗಳಿಗೆ ಒಮ್ಮತ ದಿಂದ
ಧ್ವನಿ ಎತ್ತಬೇಕು.
6. ಅಪರಾಧಿ ಗಳು ಯಾರೆ ಇರಲಿ
ಅವರಿಗೆ  ಶಿಕ್ಷೆ ಯಾಗುವಂತೆ
ನಿರಫರಾಧಿ ಗೆ  ಶಿಕ್ಷೆ ಯಾಗದಂತೆ
ಹೋರಾಟ ಹಮ್ಮಿಕೊಳ್ಳಬೇಕು

ನನಗೆ ತೋಚಿದ್ದನ್ನು ತಮ್ಮೆಲ್ಲರ ಮುಂದೆ ಇಟ್ಟಿದ್ದೇನೆ. ತಪ್ಪಿದ್ದರೆ ದಯವಿಟ್ಟು ಮನ್ನಿಸಿ.

ಒಟ್ಟಿನಲ್ಲಿ ನಮ್ಮ ಮುಸ್ಲಿಂ ಸಮುದಾಯ ದವರು ಎಚ್ಚೆತ್ತುಕೊಳ್ಳುವ ಅವಶ್ಯಕತೆ  ಇದೆ.

                    ಸಕೀನಾ ಬೇಗಂ

ಪಿಂಚಣಿ

ವೇದಿಕೆಯ ಗೌರವಾನ್ವಿತ ಸಹೋದರರಲ್ಲಿ ವಿನಂತಿ, ಸರಕಾರದ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಿಸಲು ಸರಳವಾಗಿ ತಿಳುವಳಿಕೆ ನೀಡುವ ಕಾರ್ಯ ನಮ್ಮೆಲ್ಲರಿಂದ ಆಗಬೇಕಾಗಿದೆ. ಅದು ಕೇಂದ್ರ ಸರಕಾರದ ಯೋಜನೆಗಳಾಗಿರಬಹುದು ಅಥವಾ ರಾಜ್ಯ ಸರಕಾರದ ಯೋಜನೆಗಳಾಗಿರಬಹುದು.

ಒಂದು ಉದಾಹರಣೆಃ-

ವೃದ್ಧಪ್ಪ ಯೋಜನೆಯ ಪಿಂಚಣಿ ಪಡೆಯಬೇಕಾರೆ ಮಾಡಬೇಕಾದ ಕಾರ್ಯ.
೧) ನಿಗದಿತ ಅರ್ಜಿ ನಮೂನೆ ಎಲ್ಲಾ ಮಾರಾಟ ಅಥವಾ ಝರಾಕ್ಸ್ (ಜಾಬ್ ವರ್ಕ್) ಕೇಂದ್ರಗಳಲ್ಲಿ ದೊರಕುತ್ತದೆ , ಅದನ್ನು ಪಡೆಯಬೇಕು.

೨) ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಬೇಕು. (ಇತ್ತೀಚಿನ ಭಾವ ಚಿತ್ರದೊಂದಿಗೆ)

೩)ಸರಕಾರಿ ವೈದ್ಯರಿಂದ ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ (Age certificate) ಪಡೆಯಬೇಕು.

೪) ಗ್ರಾಮ ಲೇಖಪಾಲಕರಿಂದ ದೃಡೀಕರಿಸಿಕೊಳ್ಳಬೇಕು.

೫) ಕಂದಾಯ ನಿರೀಕ್ಷಕರಿಂದ ವರದಿ ಸಲ್ಲಿಸಿಕೊಳ್ಳಬೇಕು.

೬) ಪೋಸ್ಟ್/ಬ್ಯಾಂಕ್ ಖಾತೆ ಹೊಂದಬೇಕು.

೭) ಕಂದಾಯ ನಿರೀಕ್ಷಕರ ವರದಿಯೊಂದಿಗೆ ತಹಸೀಲ್ದಾರರ ಸಂಬಂಧಪಟ್ಟ ವಿಭಾಗ ,ನೆಮ್ಮದಿ ಕೇಂದ್ರ ಅಥವಾ ನೇರವಾಗಿ ಸಲ್ಲಿಸಬೇಕು.

೮) ತಹಸೀಲ್ದಾರರು ತಮ್ಮ ಅರ್ಜಿ ಹಾಗೂ ದಾಖಲೆಗಳನ್ನು ಪರಿಶಿಪರಿಶೀಲಿಸಿ ಮಂಜೂರಾತಿ ಆದೇಶವನ್ನು, ಜಿಲ್ಲಾ/ತಾಲೂಕು ಖಜಾನೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಫಲಾನುಭವಿಗೆ ನೀಡುವರು.

ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

*ನ್ಯಾಷನಲ್ ಓವರ್ ಸೀಸ್ ಸ್ಕಾಲರ್ ಶಿಪ್ ಗೆ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ*

ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಕಲಿಯಲು ಆಸಕ್ತಿ ಇರುವ ಅಲ್ಪಸಂಖ್ಯಾತ ಸಮುದಾಯದ( *ಮುಸ್ಲಿಂ/ಕ್ರಿಶ್ಚಿಯನ್/ಜೈನ/ಬೌದ್ಧ/ಸಿಖ್/ಪಾರ್ಸಿ*) ವಿದ್ಯಾರ್ಥಿಗಳಿಗೆ ನೀಡಲಾಗುವ ನ್ಯಾಷನಲ್ ಓವರ್ ಸೀಸ್ ಸ್ಕಾಲರ್ ಶಿಪ್ ಗೆ 2016-17 ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.
*ಜುಲೈ 15, 2016 ಕೊನೆಯ ದಿನಾಂಕವಾಗಿದ್ದು, ಆಫ್ ಲೈನ್ ಪ್ರಕ್ರಿಯೆಯಾಗಿದೆ.*
ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ವೆಬ್ ಸೈಟ್ *www.gokdom.kar.nic.in*ಗೆ ಭೇಟಿ ನೀಡಬಹುದು ಅಥವಾ ಅಲ್ಪಸಂಖ್ಯಾತ ಮಾಹಿತಿ ಕೇಂದ್ರಕ್ಕೂ ಭೇಟಿ ನೀಡಬಹುದು.
ನ್ಯಾಷನಲ್ ಓವರ್ ಸೀಸ್ ಸ್ಕಾಲರ್ ಶಿಪ್ ನ ಮೂಲಕ ಕರ್ನಾಟಕದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಎರಡು ವರ್ಷದ ಕೋರ್ಸ್ ಗಳಿಗೆ ವರ್ಷಕ್ಕೆ 10 ಲಕ್ಷ ರೂ. ಯಂತೆ ಎರಡು ವರ್ಷಕ್ಕೆ 20 ಲಕ್ಷದ ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವಾರ್ಷಿಕ ಆದಾಯ ಮಿತಿ; 6 ಲಕ್ಷದೊಳಗೆ.
6 ರಿಂದ 15 ಲಕ್ಷದೊಳಗೆ ಆದಾಯ ಇರುವವರಿಗೆ ಶೇ.50 ರಷ್ಟು ಮಾತ್ರ ನೆರವು ನೀಡಲಾಗುತ್ತದೆ.

ಅರ್ಜಿಯನ್ನು ಈಗಾಗಲೇ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಬೆಂಗಳೂರಿನ ಕಚೇರಿಗೆ ಕಳುಹಿಸಬೇಕು.
ಕಳುಹಿಸಬೇಕಾದ ವಿಳಾಸ:

*ನಿರ್ದೇಶಕರು*
*ಅಲ್ಪಸಂಖ್ಯಾತರ ಕಲ್ಯಾಣ* *ನಿರ್ದೇಶನಾಲಯ*
*20 ನೇ ಮಹಡಿ, ವಿ.ವಿ. ಟವರ್*
*ಬೆಂಗಳೂರು-560001*
**********************"

ಮಾಹಿತಿಗಳಿಗೆ:
ಇರ್ಷಾದ್ ವೇಣೂರ್,
ಸಮಾಜ ಸೇವಾ ಘಟಕ,
ಜಮಾಅತೆ ಇಸ್ಲಾಮೀ ಹಿಂದ್,
ದ.ಕ. ಜಿಲ್ಲೆ
9844963059(WhatsApp)
7676413059
ಇ-ಮೇಲ್ ವಿಳಾಸ: ssuhelpline@gmail.com

ಶನಿವಾರ, ಜೂನ್ 11, 2016

ಸಾವಿರಾರು ಗಿಡನೆಟ್ಟ ಸರದಾರ

ಸಾವಿರಾರು ಗಿಡನೆಟ್ಟ ಸರದಾರ ಜೀತ್‌ಮಿಲನ್

*ದುಡಿಮೆ ಅರ್ಧ ಹಣ ಸಸ್ಯಸಂಕುಲ ಉದ್ಧಾರಕ್ಕೆ*

ದುಡಿದ ಅರ್ಧ ಹಣವನ್ನು ಗಿಡ ನೆಡುವುದಕ್ಕೆ ಖರ್ಚು ಮಾಡುತ್ತಾರೆ. ಎಲ್ಲೇ ಖಾಲಿ ಜಾಗ ಇರಲಿ ಅಲ್ಲಿ ತನ್ನ ಮಗನ ಜತೆ ಬಂದು ಗಿಡ ನೆಡುತ್ತಾರೆ.
ಇವರ ಹೆಸರು *ಜೀತ್ ಮಿಲನ್ ರೋಶ್* ಇವರ  ಉದ್ಯೋಗ ರಾತ್ರಿ ಶ್ರೀಮಂತರ ಕಾಕ್‌ಟೈಲ್ ಪಾರ್ಟಿ ಆಯೋಜಿಸೋದು. ಬಂದ ಹಣವನ್ನು ಗಿಡ ನೆಡಲು ಉಪಯೋಗಿಸೋದು. ಹೀಗಾಗಿ ಇವರು ಎಷ್ಟೇ ಸಂಪಾದನೆ ಮಾಡಿದರೂ ಇರೋದು ಬಾಡಿಗೆ ಮನೆಯಲ್ಲಿ.
ಮಹಾನಗರ ಪಾಲಿಕೆಯಿಂದ ಹಿಡಿದು ಸಾಮಾನ್ಯ ಜನರ ವರೆಗೂ ಆಧುನೀಕರಣ ಹೆಸರಲ್ಲಿ ಸಿಕ್ಕ, ಸಿಕ್ಕಲ್ಲಿ ಮರ ಕಡಿದು ಹಾಕುವವರೇ ಹೆಚ್ಚುತ್ತಿರುವಾಗ ಜೀತ್ ಮಿಲನ್ ಅಂಥವರ ಸಾಧನೆ ಅರ್ಥಪೂರ್ಣ.  ಪರಿಸರ ಕಾಳಜಿಯ ಅತಿ ದೊಡ್ಡ ಸಮಾಜ ಸೇವೆ.
ಎಲ್ಲಿ ಖಾಲಿ ಜಾಗ ಕಂಡು ಬರುತ್ತದೆಯೋ ಅಲ್ಲಿಗೆ ಹೋಗಿ ಖುದ್ದು ಹಾರೆ ಪಿಕ್ಕಾಸು ಹಿಡಿದು ಗಿಡ ನೆಡುತ್ತಾರೆ. ಇವರ ಸಸ್ಯಸಂಕುಲ ಬೆಳೆಸುವ ಮಹತ್ಕಾರ್ಯಕ್ಕೆ ಸಹಾಯ ಮಾಡೋದು ಇವರ ಮಗಶಾನ್‌ಎಥನ್‌ರಾಜ್. 
ಜೀತ್ ಅವರ ತಂದೆ ವಿನ್ಸೆಂಟ್ ಕೃಷಿಕರು ಹೀಗಾಗಿ ಗಿಡ ನೆಡೋದು ರಕ್ತದಲ್ಲಿಯೇ ಬಂದಿದೆ. ಮಗ 9ನೇ ಕ್ಲಾಸ್. ವಾರಾಂತ್ಯದಲ್ಲಿ, ರಜಾದಿನದಲ್ಲಿ ತಂದೆ ಜತೆ ಗಿಡ ನೆಡೊದೇ ಕೆಲಸ.
ಪಡೀಲ್‌ನಿಂದ ಪರಂಗಿ ಪೇಟೆ ವರೆಗೆ ಇವರು ನೆಟ್ಟ ಗಿಡಗಳು ಆಳೆತ್ತರಕ್ಕೆ ಈಗ ಬೆಳೆಯುತ್ತಿದ್ದು, ಮುಂದೆ ಸಾಲು ಮರಗಳಾಗಲಿವೆ. ಕೂಳೂರಿಂದ ಮಂಗಳಾದೇವಿ ವರೆಗೆ 3 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ.
*25ಗಿಡದಿಂದ ಶುರು*
ಮೋರ್ಗನ್ ಗೇಟ್ ನಿವಾಸಿ ಜೀತ್ 2003 ರಲ್ಲಿ ಗಿಡ ನೆಡುವ ಕೆಲಸ ಶುರು  ಮಾಡಿದರು. ಆರಂಭದಲ್ಲಿ 25 ಗಿಡ ನೆಟ್ಟರು. ಈಗ ಬೆಳೆದು ಎತ್ತರವಾಗಿವೆ. ಮಳೆಗಾಲ ಬಂದ ತಕ್ಷಣ ಇವರ ಕೆಲಸ ಶುರು. ಆರಂಭದ ಮೂರು ವರ್ಷದಲ್ಲಿ 800 ಗಿಡ ನೆಟ್ಟರು. ಈಗ ಪ್ರತಿ ವರ್ಷ 5ರಿಂದ 6 ಸಾವಿರ ಗಿಡ ನೆಡುತ್ತಿದ್ದಾರೆ. 
ಸರಕಾರಿ ಜಾಗಕ್ಕೆ ಪ್ರಾಶಸ್ತ್ಯ. ರಸ್ತೆ ಬದಿಗಳಲ್ಲಿ, ರೈಲು ಹಳಿಗಳ ಬಳಿ ಗಿಡ ನೆಡುತ್ತಿದ್ದಾರೆ. ಆರಂಭದಲ್ಲಿ ತೋಟಗಾರಿಕೆ ಇಲಾಖೆಯಿಂದ ಗಿಡ ಖರೀದಿಸಿ ನೆಡುತ್ತಿದ್ದರು. ಬಳಿಕ ಇವರ ಸೇವಾ ಕಾರ್ಯ ನೋಡಿ ತೋಟಗಾರಿಕೆ ಇಲಾಖೆಯವರೇ ಗಿಡಗಳನ್ನು ಉಚಿತವಾಗಿ ನಿಡುತ್ತಿದ್ದಾರೆ. 
ದನಗಳು ಗಿಡ ತಿಂದು ಹಾಳುಮಾಡುತ್ತವೆ ಎಂದು ಹೇಳುತ್ತಾರೆ. ಆದರೆ ಪ್ರಾಣಿಗಳೇ ವಾಸಿ. ಮಾನವರೇ ಗಿಡ, ಮರ ಕಡಿದು ನಾಶ ಮಾಡುತ್ತಾರೆ. ಮಹಾನಗರ ಪಾಲಿಕೆಯ ಸಿಬ್ಬಂದಿಯೇ ಕೆಲವೊಮ್ಮೆ ನಗರ ಸ್ವಚ್ಛ ಮಾಡುವ ಸಂದರ್ಭದಲ್ಲಿ ನೆಟ್ಟ ಗಿಡಗಳನ್ನು ಸರಾಸಗಟಾಗಿ ತುಂಡರಿಸಿದ್ದೂ ಇದೆ ಎನ್ನುತ್ತಾರೆ ಜೀತ್. 
ಗುಜ್ಜರಕೆರೆ ಬಳಿತ ಗಿಡಗಳನ್ನು ಸ್ಥಳೀಯ ಮಂದಿಯೇ ಕತ್ತರಿಸಿದ್ದಾರೆ. ಜನರಿಗೆ ಸೆಕೆಗಾಲದಲ್ಲಿ ಮನೆಯೊಳಗೆ ತಂಪಾಗಿರಬೇಕು. ಗಾಳಿ ಬಿಸುತ್ತಿರಬೇಕು. ಆದರೆ ಗಿಡ, ಮರಗಳನ್ನು ಕತ್ತರಿಸುವುದನ್ನು ಬಿಡುವುದಿಲ್ಲ. ಗಿಡ ನೆಡುವುದಿಲ್ಲ ಎನ್ನುತ್ತಾರೆ.
ಜಾಗತಿಕ ತಾಪಮಾನ ಕುರಿತು ಎಲ್ಲರೂ ಮಾತನಾಡುತ್ತಾರೆ, ಭಾಷಣ ಬಿಗಿಯುತ್ತಾರೆ. ಯಾರೂ ಕೂಡಾ ಪ್ರಾಯೋಗಿಕವಾಗಿ ಜಾರಿ ಮಾಡುತ್ತಿಲ್ಲ. ನನ್ನ ಕೈಲಾದ ಕೆಲಸ ಮಾಡಲು ಗಿಡ ನೆಡಲು ಆರಂಭಿಸಿದೆ ಎನ್ನುತ್ತಾರೆ ಜೀತ್.
*ವಾರ್ಷಿಕ 5 ಸಾವಿರ ಮರ* ನೆಡುತ್ತಿದ್ದೇನೆ. ಆರಂಭದಲ್ಲಿ ಲೆಕ್ಕ ಇಡುತ್ತಿದ್ದೆ. ಈಗ ಲೆಕ್ಕ ಇಡುವುದನ್ನೇ ಬಿಟ್ಟಿದ್ದೇನೆ. ಸುಮಾರು 60 ಸಾವಿರ ಮರ ನೆಟ್ಟಿರಬಹುದು. ಈ ವರ್ಷ6 ಸಾವಿರ ಗಿಡ ನೆಟ್ಟಿದ್ದೇನೆ. ಈಗ ಗಿಡಗಳು ಮೇಲೆ ಬರುತ್ತಿದೆ.
ಪರಿಸರ ಕುಟುಂಬ
ಮಳೆಗಾಲದ ಮೂರು ತಿಂಗಳಲ್ಲಿ ತಂಡದವರು ಜತೆ  ಇಡೀ ದಿನ ಗಿಡ ನೆಡುತ್ತೇವೆ. ಮಗ ವಾರಾಂತ್ಯದಲ್ಲಿ ಸೇರಿಕೊಳ್ಳುತ್ತಾನೆ. ಮಳೆಗಾಲದಲ್ಲಿ ನಾನು ಇದರಲ್ಲಿಯೇ ಬ್ಯುಸಿ ಆಗಿರುವ ಕಾರಣ ಸಣ್ಣ ಪುಟ್ಟ ಕಾಕ್‌ಟೈಲ್ ಪಾರ್ಟಿಗಳನ್ನ ಹೆಂಡತಿಯೇ ನೋಡಿಕೊಳ್ಳುತ್ತಾರೆ. ಮೊದಲೆಲ್ಲಾ ನಾನು ಮತ್ತು ಮಗ ಇಬ್ಬರೇ ಗಿಡ ನೆಡುತ್ತಿದ್ದೆವು. ನಾನು ಗುಂಡಿ ತೋಡುವಾಗ ಮಗ ಬಂದು ಗಿಡ ಕೊಡುತ್ತಿದ್ದ ಎನ್ನುತ್ತಾರೆ ಜೀತ್.
*ಖಾಸಗಿ ಕಾಡು ನಿರ್ಮಾಣ !*
ಅದ್ಯಪಾಡಿಯಲ್ಲಿ ಒಬ್ಬರು ನನಗೆ 38 ಎಕರೆ ಖಾಲಿ ಗುಡ್ಡದ ಜಾಗದಲ್ಲಿ ಕಾಡು ಮಾಡುವಂತೆ ಕೇಳಿಕೊಂಡರು. ಅಷ್ಟು ಜಾಗದಲ್ಲಿ 6 ಸಾವಿರ ಗಿಡಗಳನ್ನು ನನ್ನ ತಂಡದ ಜತೆ ನೆಟ್ಟಿದ್ದೇವೆ. ಅದು ಸಂಪದ್ಭರಿತ ಕಾಡಾಗಲಿದೆ. ಅಲ್ಲಿ ಗಂಧ, ಹಲಸು, ಹೆಬ್ಬಲಸು ಸಹಿತ 45 ತಳಿಯ ಗಿಡಗಳು ಬೆಳೆಯುತ್ತಿದೆ. ಇದೇ ರೀತಿ ಖಾಸಗಿ ಖಾಲಿ ಜಾಗದಲ್ಲಿ ಕಾಡು ನಿರ್ಮಾಣ ಮಾಡುವ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಜೀತ್. 

-- Article by *JITENDRA kundeshwara*

ವಿದ್ಯಾರ್ಥಿ ವೇತನ

*ಈ ಸಂದೇಶವನ್ನು  ದಯವಿಟ್ಟು  ಅರ್ಹರಿಗೆ ತಲುಪಿಸಿ* 🎓
*******★★★********

2015-16 ನೇ ಸಾಲಿನಲ್ಲಿ ಬ್ಯಾಂಕ್ ಅಕೌಂಟಿನ ಸಮಸ್ಯೆಯಿಂದ ಈವರೆಗೂ ಅಲ್ಪಸಂಖ್ಯಾತ ಪ್ರೀ-ಮೆಟ್ರಿಕ್ ವಿದ್ಯಾರ್ಥಿ ವೇತನ(ಮೈನಾರಿಟಿ ಸ್ಕಾಲರ್ ಶಿಪ್)ವನ್ನು  ಪಡೆಯದ ವಿದ್ಯಾರ್ಥಿಗಳು ಈ ಕೆಳಗಿನ ವಾಟ್ಸಪ್ ನಂಬರಿಗೆ ನಿಮ್ಮ ಬ್ಯಾಂಕ್ ಅಕೌಂಟಿನ ಮೊದಲ ಪುಟದ ಪ್ರತಿಯನ್ನು  ಕಳುಹಿಸಬೇಕಾಗಿ ವಿನಂತಿ.

*ಬ್ಯಾಂಕ್ ಅಕೌಂಟ್ ನಂಬರ್ & ಬ್ಯಾಂಕ್ IFSC CODE ಸ್ಪಷ್ಟವಾಗಿ ಕಾಣುವಂತಿರಬೇಕು. ಹಾಗೂ ಕಲಿಯುತ್ತಿರುವ ತರಗತಿಯ ಮಾಹಿತಿಯನ್ನು ಜೊತೆಗೆ ನೀಡಬೇಕು*

ಮಾಹಿತಿ ಕಳುಹಿಸಬೇಕಾದ ವಾಟ್ಸಪ್ ನಂ: *7760888119*

*******************

ಮಾಹಿತಿಗಳಿಗಾಗಿ ಸಂಪರ್ಕಿಸಿ:

*ಇರ್ಷಾದ್ ವೇಣೂರ್*
*ಸಮಾಜ ಸೇವಾ ಘಟಕ*
*ಜಮಾಅತೆ ಇಸ್ಲಾಮೀ ಹಿಂದ್*
*ಹಿದಾಯತ್ ಸೆಂಟರ್*
*ಬೀಬಿ ಅಲಾಬಿ ರಸ್ತೆ*
*ಮಂಗಳೂರು. ದ.ಕ*
ಮೊ:
*9844963059* (WhatsApp)
*7676413059*

----------------------

*Please Note*
Attention To Pre-Matric Minority Students Of Karnataka.
Dear Students, Who are Not Received Pre Matric Scholarships Due To Bank Account Problem. Please Send Your bank Passbook Photo Copy 1st Page(Account Number & IFSC Code Must Shown) With Class to WhatsApp No: 7760888119 for Transfer  Of Pre Matric Scholarship 2015-16.

*Director Of Minorities*
*Karnataka*
******************

*Please Inform Eligible Students-As Soon As Possible*