ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ನವೆಂಬರ್ 26, 2016

ಯೋಗ

ಗಂಡ ಹೆಂಡತಿಯನ್ನು ಬೆಳಿಗ್ಗೆ ಎಬ್ಬಿಸುತ್ತಾನೆ:

ಗಂಡ: ಬಾರೇ, ಬೆಳಿಗ್ಗೆ ಯೋಗಾ ಮಾಡಿದ್ರೆ ಒಳ್ಳೆಯದು.

ಹೆಂಡತಿ: ನೀವು ಹೇಳೋದು ಏನೂಂತಾ? ನಾನು ದಪ್ಪ ಅಂತಾನ?

ಗಂ: ಇಲ್ಲ. ಯೋಗಾ ಆರೋಗ್ಯಕ್ಕೆ ಒಳ್ಳೆಯದು ಅಂತ.

ಹೆಂ: ಅಂದ್ರೆ ನನ್ನ ಆರೋಗ್ಯ ಸರಿ ಇಲ್ಲ ಅಂತಾನ?

ಗಂ: ಹೋಗ್ಲಿ ಬಿಡು. ಏಳಬೇಡ.

ಹೆಂ: ಅಂದರೆ ನಾನು ಸೋಮಾರಿ ಅಂತ...

ಗಂ: ಹಾಗಲ್ಲ. ನಿನಗೆ ನಾನು ಹೇಳಿದ್ದು ಅರ್ಥ ಆಗಿಲ್ಲ.

ಹೆಂ: ಅಂದ್ರೆ ನಾನು ನಿಮ್ಮನ್ನ ಅರ್ಥ ಮಾಡಿಕೊಂಡಿಲ್ಲ ಅಂತ ನಿಮ್ಮರ್ಥ..

ಗಂ: ನಾನು ಹಾಗೆ ಹೇಳಲಿಲ್ಲ

ಹೆಂ: ಅಂದರೆ ನಾನು ಸುಳ್ಳು ಹೇಳ್ತೀನಿ ಅಂತ...

ಗಂ: ಎ.. ಸುಮ್ಮನೆ ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಬೇಡ..

ಹೆಂ: ಅಂದ್ರೆ ನಾನು ಜಗಳಗಂಟಿ ಅಂತ...

ಗಂ: ಹೋಗ್ಲಿ ಬಿಡು.. ನಾನೂ ಯೋಗಕ್ಕೆ ಹೋಗದಿರೋದೇ ಒಳ್ಳೆದು..

ಹೆಂ: ನೋಡಿ ಅದೇ ನಾನು ಹೇಳಿದ್ದು. ನಿಮಗೂ ಹೋಗಕ್ಕೆ ಮನಸ್ಸಿರಲಿಲ್ಲ.. ಸುಮ್ಮನೆ ನನ್ನ ತಲೆ ಮೇಲೆ ಗೂಬೆ ಕೂರ್ಸೋದು..

ಗಂ: ಸರಿ ಮಹಾತಾಯಿ.. ನೀನು ನಿದ್ದೆ ಮಾಡು.. ನಾನು ಒಬ್ನೇ ಹೋಗ್ತೀನಿ.. ಸರೀನಾ?

ಹೆಂ: ಅದೇ... ನಿಮಗೆ ಎಲ್ಲ ಕಡೆಗೂ ಒಬ್ರೇ ಹೋಗಕ್ಕೆ ಇಷ್ಟ.

ಗಂ: ಅಯ್ಯೋ ಮಹಾತಾಯಿ.. ನಿಲ್ಸು.. ನನ್ನ ತಲೆ ಸುತ್ತುತ್ತಾ ಇದೆ...

ಹೆಂ: ಅದೇ ನೋಡಿ.. ನಿಮಗೆ ಯಾವಾಗ್ಲೂ ನಿಮ್ಮ ಆರೋಗ್ಯದ ಬಗ್ಗೆಯೇ ಯೋಚನೆ. ನನ್ನ ಬಗ್ಗೆ ಚೂರೂ ಚಿಂತೆಯಿಲ್ಲ ನಿಮಗೆ...
👌😄😜😜😜😉👌

ಗುರುವಾರ, ಆಗಸ್ಟ್ 4, 2016

ಆರ್ಡರ್

ಇತ್ತೀಚೆಗೆ ಮನೆಯಲ್ಲಿ ಕುಳಿತು ಮೊಬೈಲ್ನಲ್ಲಿ ಏನನ್ನು ಬೇಕಾದ್ರೂ ಆರ್ಡರ್ ಮಾಡಿ ಕೊಳ್ಳಬಹುದು.

ನಾನು ಆರ್ಯಭವನ್ ಸ್ವೀಟ್ ಸ್ಟಾಲ್ಗೆ  ಫೋನ್ ಮಾಡಿದೆ.  ಟ್ರಿಂಗ ಟ್ರಿಂಗ.....

ಆರ್ಯಭವನಕ್ಕೆ ನಿಮಗೆ ಸ್ವಾಗತ.. ಹೇಳಿ, ಏನು ಬೇಕಾಗಿತ್ತು??

ನನಗೆ ಯಾವುದಾದರೂ ಸಿಹಿ ತಿಂಡಿ ಬೇಕಿತ್ತು

ಲಾಡೂ ಬೇಕಾದರೆ ಒಂದನ್ನು ಒತ್ತಿ, ಹಲ್ವ ಬೇಕಾದರೆ ಎರಡನ್ನು ಒತ್ತಿ, ಒಬ್ಬಟ್ಟು ಬೇಕಾದರೆ ಮೂರನ್ನು ಒತ್ತಿ...

ನಾನು ಒಂದನ್ನು ಒತ್ತಿದೆ

ಬೂ0ದಿ ಲಾಡೂಗಾಗಿ ಒಂದನ್ನು ಒತ್ತಿ, ಡ್ರೈ ಫ್ರುಟ್ ಲಾಡೂ ಬೇಕಾದರೆ ಎರಡನ್ನು ಒತ್ತಿ, ಬೇಸನ್ ಲಾಡೂ ಬೇಕಾದರೆ ಮೂರನ್ನು ಒತ್ತಿ...

ನಾನು ಒಂದನ್ನು ಒತ್ತಿದೆ

ಕಾಲು ಕೆಜಿ ಗಾಗಿ ಒಂದನ್ನು ಒತ್ತಿ, ಒಂದು ಕೆಜಿ ಬೇಕಾದರೆ ಎರಡನ್ನು ಒತ್ತಿ, ಒಂದು  ಕ್ವಿಂಟಲ್  ಬೇಕಾದರೆ ಮೂರನ್ನು ಒತ್ತಿ...

ಅಚಾತುರ್ಯದಿಂದ ನಾನು ಮೂರನ್ನು ಒತ್ತಿಬಿಟ್ಟೆ 😮
ಹೆದರಿ ಕಾಲ್ ಕಟ್ ಮಾಡಿ ಬಿಟ್ಟೆ.

ಮುಂದಿನ ಮೂರು ನಿಮಿಷದಲ್ಲಿ ಆರ್ಯಭವನ್ ದಿಂದ ನನಗೆ ಫೋನ್ ಕಾಲ್!!!😱

ನಿಮ್ಮ ಕಡೆಯಿಂದ ನಮಗೆ ಒಂದು ಕ್ವಿಂಟಲ್ ಬೂ0ದಿ ಲಾಡೂಗಾಗಿ ಆರ್ಡರ್ ಬಂದಿದೆ.  ನಿಮ್ಮ ಮನೆಯ ವಿಳಾಸ ತಿಳಿಸಿ.

ನಾನಂದೆ ... ನಾನು ಫೋನ್ ಮಾಡಿಲ್ಲವಲ್ಲ

ಹಾಗಾದರೆ ನಿಮ್ಮ ತಮ್ಮ ಕಾಲ್ ಮಾಡಿರಬಹುದು, ಇದೇ ನಂಬರ್ ನಿಂದಲೇ ಕಾಲ್ ಬಂದಿದ್ದು.  ನಿಮ್ಮ ತಮ್ಮನಿಗೆ ಫೋನ್ ಕೊಡಿ..

ನಾವು ಆರು ಜನ ಅಣ್ಣ ತಮ್ಮಂದಿರಿದ್ದೆವೆ.  ಮೊದಲನೆಯವರಿಗಾಗಿ ಒಂದನ್ನು ಒತ್ತಿ,  ಎರಡನೇಯವರಿಗಾಗಿ ಎರಡನ್ನು ಒತ್ತಿ,  ಮೂರನೇ ಯವರಿಗಾಗಿ  ಮೂರನ್ನು ಒತ್ತಿ...

ಎದುರಿನ ಫೋನ್ ಕಾಲ್ ಕಟ್ ಆಗಿ ಹೋಯ್ತು 😅
😂😬😂😬😂😬😂
🙏🙏🙏🙏🙏

ಸೋಮವಾರ, ಜುಲೈ 11, 2016

ಇದು ಇಂದಿನ ಜನರ ಮನಸ್ಥಿತಿ

ಗೆಳೆಯರಿಬ್ಬರು ದಿನ ಪತ್ರಿಕೆ ಓದುತ್ತಿದ್ದರು.

ಬೊಮ್ಮ> ಕಳಪೆ ಬಿತ್ತನೆ ಬೀಜ, ಇಳುವರಿ ಕಡಿಮೆ ಮತ್ತು ಬೆಳೆಯ ಬೆಲೆ ಕುಸಿತದಿಂದಾಗಿ ನಷ್ಟ ಅನುಭವಿಸಿ, ಸಾಲಭಾದೆ ತಾಳಲಾರದೆ ರೈತರಿಬ್ಬರ ಆತ್ಮಹತ್ಯೆ.

ತಿಮ್ಮ> ಅವರೆಲ್ಲೋ ಕುಡುಕರೋ, ಜೂಜುಕೋರರೋ ಆಗಿರಬೇಕು. ಅದಕ್ಕೆ ಸಾಲಮಾಡ್ಕೊಂಡು ತೀರಿಸೋಕೂ ಆಗ್ದೆ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಇದಕ್ಕೆ ಸರ್ಕಾರ ಹೇಗೆ ಹೊಣೆಯಾಗುತ್ತೆ ಹೇಳಿ. ಬೀಜ ನಕಲೀನೋ ಅಸಲೀನೋ ನೋಡಿ ತಕೋಬೇಕಿತ್ತು. ಬೆಳೆನಾಶ ಆದ್ರೆ, ಬೆಳೆಯ ಬೆಲೆ ಕುಸಿದರೆ ಸರ್ಕಾರ ಏನ್ಮಾಡ್ಬೇಕು? ಕೆಲವು ರೈತರಂತೂ ಸರ್ಕಾರದಿಂದ ಲಕ್ಷಾಂತರ ರೂ ಪರಿಹಾರ ಸಿಗುತ್ತೆ ಅಂತಾನೆ ಆತ್ಮಹತ್ಯೆ ಮಾಡ್ಕೊತ್ಕಾರೆ ಬಿಡಿ.

ಬೊಮ್ಮ> ಸಾಲಬಾಧೆ ತಾಳಲಾರದೆ ನಗರದ ದಂಪತಿಗಳು ತಮ್ಮೆರಡು ಮಕ್ಕಳಿಗೂ ವಿಷ ಉಣಿಸಿ ನೇಣಿಗೆ ಶರಣು. ಪತಿ ಪತ್ನಿ ಇಬ್ಬರು ದುಡಿದರೂ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸಲು ಮತ್ತು ಕುಟುಂಬ ಸದಸ್ಯರ ಆರೋಗ್ಯ ವೆಚ್ಚಕ್ಕಾಗಿ ಮಾಡಿದ ಸಾಲ ತೀರಿಸಲಾಗದೆ, ಬರುವ ಆಧಾಯದಲ್ಲಿ ಬಡ್ಡಿ ಕಟ್ಟಿ ಸಂಸಾರ ತೂಗಿಸಲಾಗದೆ ಮಾಡಿದ ಸಾಲದಿಂದಾಗಿ ಮನನೊಂದು ಇಡೀ ಕುಟುಂದ ಆತ್ಮಹತ್ಯೆಗೆ ಶರಣಾಗಿದೆ.

ತಿಮ್ಮ> ಮುಂಡೇವು ಹಾಸಿಗೆ ಇದ್ದಷ್ಟು ಕಾಲುಚಾಚೋದು ಬಿಟ್ಟು ಅದ್ಯಾಕೆ ಸಾಲ ಮಾಡ್ಕೊಂಡ್ ಸಾಯ್ತಾವೋ? ಕಡಿಮೆ ವೇತನ ಸಿಗೋದ್ರಲ್ಲೋ, ಶಿಕ್ಷಣ ಮತ್ತು ಆರೋಗ್ಯದ ವೆಚ್ಚ ಹೆಚ್ಚಾಗಿರೋದ್ರಲ್ಲೋ, ಅಥವಾ ಅಧಿಕ ಬಡ್ಡಿ ದಂದೆ ಮಾಡುವವರ ವ್ಯವಹಾರದಲ್ಲೋ ಸರ್ಕಾರದ ಪಾತ್ರ ಏನೂ ಇಲ್ಲ ಬಿಡಿ.

ಬೊಮ್ಮ> ಕಂಪನಿಯೊಂದು ಕೆಲಸದಿಂದ ತೆಗೆದು ಹಾಕಿದ್ದನ್ನು ವಿರೋದಿಸಿ ಹಲವು ತಿಂಗಳ ಹೋರಾಟ ನಡೆಸಿಯೂ ಪರಿಹಾರ ಸಿಗದ ಕಾರಣ ಬೇಸತ್ತ ಕಾರ್ಮಿಕನೊಬ್ಬ ಆತ್ಮಹತ್ಯೆ.

ತಿಮ್ಮ> ಕಂಪನಿಯವರು ಕೆಲಸದಿಂದ ತೆಗೆದು ಹಾಕಿದ್ರೆ ಇನ್ನೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರ್ಕೋಬಹುದಿತ್ತು. ಈ ಹೋರಾಟ ಹಾರಟ ಎಲ್ಲಾ ಯಾಕ್ ಬೇಕಿತ್ತು? ಕಾರ್ಮಿಕ ಇಲಾಖೆಯಾಗಲೀ, ಸರ್ಕಾರ ಆಗಲಿ ಏನ್ಮಾಡೋಕೆ ಆಗುತ್ತೆ ಹೇಳಿ? ಅವನ್ಯಾವನೊ ಬುದ್ದಿಗೇಡಿ ಇರ್ಬೇಕು. ಬೇರೆ ಸುದ್ದಿ ಓದು.

ಬೊಮ್ಮ> ರಸ್ತೆ ನಡುವಿನಲ್ಲಿದ್ದ ಗುಂಡಿಗೆ ಬಿದ್ದ ಬೈಕ್ ಸವಾರ ಸಾವು. ಸೂಚನಾ ಫಲಕವಿಲ್ಲದ, ಹೊಗೆಯಿಂದಾಗಿ ಕಪ್ಪು ಬಣ್ಣ ತುಂಬಿಕೊಂಡಿದ್ದರಿಂದಾಗಿ ಚಾಲಕನ ಗಮನಕ್ಕೆ ಬಾರದೆ  ರಸ್ತೆ ವಿಭಜಕದ ಮೇಲೆ ಹತ್ತಿದ ಕಾರು, ಚಾಲಕ ಸಾವು. ಯಾವುದೇ ಸೂಚನೆ ಇಲ್ಲದೆ ವೇಗನಿಯಂತ್ರಿಸಲು ಪೊಲೀಸರು ರಸ್ತೆ ಮಧ್ಯದಲ್ಲಿ ಇಟ್ಟಿದ್ದ ಬ್ಯಾರಿಕೇಡ್ ಕಂಡ ಚಾಲಕನಿಂದ ಇದ್ದಕ್ಕಿದ್ದಂತೆ ಭ್ರೇಕ್. ಹಿಂದಿನಿಂದ ಬರುತ್ತಿದ್ದ ಡಿಕ್ಕಿ. ಒಬ್ಬನ ಸಾವು,  ಎರಡೂ ವಾಹನಗಳ ಜಕಂ. ಒಳಚರಂಡಿಯ ತೆರೆದ ಮ್ಯಾನ್ ಹೋಲ್ ಗೆ ಬಿದ್ದು ಪಾದಚಾರಿಯೊಬ್ಬನ ಸಾವು.

ತಿಮ್ಮ> ಇವರೆಲ್ಲಾ ಕುಡಿದು ರಸ್ತೆಗೆ  ಬರ್ತಾರೇನೊಪ್ಪ. ನೋಡ್ಕೊಂಡು ಓಡಾಡ್ಬೇಕಲ್ವ. ಇವರು ಮಾಡೋ 'ಅಜಾರೂಕತೆ ವಾಹನ ಚಾಲನೆ'ಗಳಿಗೆಲ್ಲಾ ಪೋಲೀಸರು ಹೊಣೆಯಾಗ್ತಾರಾ? ಅದ್ಯಾರೋ ಸರಿಯಾಗಿ ರಸ್ತೆ ನೋಡ್ಕೊಂಡ್ ಬರ್ದೆ ಮ್ಯಾನ್ ಹೋಲ್ ಗೆ ಬಿದ್ದು ಸತ್ರೆ ಇಲಾಖೆನಾ ದೂರೋಕಾಗುತ್ತಾ? 

ಬೊಮ್ಮ> ಮಂತ್ರಿ ಮತ್ತು ಮೇಲಧಿಕಾರಿಗಳ ಕಿರುಕುಳ, ಅಧಿಕಾರಿ ಆತ್ಮಹತ್ಯೆ.

ತಿಮ್ಮ> ಏನ್ ಸರ್ಕಾರ ರೀ ಇದು. ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ ಅಂದ್ರೆ ಈ ಸರ್ಕಾರ ಆತನಿಗೆ ಎಷ್ಟ್ ಕಿರುಕುಳ ಕೊಟ್ಟಿರಬಹುದು. ಧರಿದ್ರ ಸರ್ಕಾರ ರೀ ಇದು. ಆಧಿಕಾರಿಯ ಆತ್ಮಹತ್ಯೆಗೆ ಕಾರಣರಾದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸ್ ಹಾಕ್ಬೇಕ್ರಿ.

ಶನಿವಾರ, ಜೂನ್ 11, 2016

ಜಡ್ಜ್

ಈಗಷ್ಟೇ ಓದಿದ್ದು...

ಅದೊಂದು ಪುಟ್ಟ ಊರು. ಕೋರ್ಟ್ ನಲ್ಲಿ ಒಂದು ಕೇಸ್ ನ ವಿಚಾರಣೆ ನಡೆಯುತ್ತಾ ಇರುತ್ತೆ. ಆ ಕೇಸ್ ನಲ್ಲಿ ನಮ್ಮ ಗುಂಡಮ್ಮಜ್ಜಿಯನ್ನು ಸಾಕ್ಷಿಯಾಗಿ ಕರೆದಿದ್ದರು.

ಅಷ್ಟೊಂದು ವಯಸ್ಸಾಗಿದೆ ಅಂದ ಮೇಲೆ ಅಷ್ಟು ವಯಸ್ಸಾಗಿದ್ದರೂ ಅವರು ಹುಷಾರಾಗಿ ಇದ್ದಾರೆ .. ಅವರಿಗೆ ಎಲ್ಲ ವಿಷಯ ಗೊತ್ತು.. ಯಡವಟ್ಟಾಗೋದಿಲ್ಲ ಅಂತ ಜಡ್ಜ್ ಗೆ ಮನವರಿಕೆ ಮಾಡಿ ಕೊಡಬೇಕಾಗುತ್ತೆ ಅಲ್ವಾ?

ಹಾಗಾಗಿ ಅಜ್ಜಿಯನ್ನು ಕಟಕಟೆಯಲ್ಲಿ ನಿಲ್ಲಿಸಿದ ನ್ಯಾಯವಾದಿಗಳು ಕೇಳಿದರು "ಅಜ್ಜಿ, ನಿಮಗೆ ನಾನು ಯಾರು ಅಂತ ಗೊತ್ತಾ?"

ಗುಂಡಮ್ಮಜ್ಜಿ ಕೂಲ್ ಆಗಿ ಉತ್ತರಿಸಿದರು "ಗೊತ್ತಿಲ್ಲದೆ ಏನು? ನೀನು ಮೂರ್ತಿ ಅಲ್ವಾ? ಮುಂಡೇದೆ... ನೀನು ಕೂಸಿದ್ದಾಗಿನಿಂದ ನಿನ್ನ ನೋಡಿದ್ದೀನಿ. ಹೇತು ಕೊಳ್ತಾ ಇದ್ದ್ಯ. ಎಷ್ಟು ಸಲ ತೊಳೆದಿಲ್ಲ! ದೊಡ್ಡೋನಾದ್ ಮೇಲೆ ಕಮ್ಮೀನಾ? ಬರೀ ಸುಳ್ಳು ಹೇಳೋದು.. ಹೆಂಡತಿಗೆ ಮೋಸ ಮಾಡಿರೋದು.. ಜನರ ಬೆನ್ನ ಹಿಂದೆ ಮಾತಾಡೋದು.. ನಿನ್ನ ಬಗ್ಗೆ ನನಗೆ ಗೊತ್ತಿಲ್ವಾ? ಪಾಪಿ ಮುಂಡೇದೆ.." ಅಂದರು.

ಮೂರ್ತಿ ತಬ್ಬಿಬ್ಬಾದ. ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಸರಿ.. ಅಲ್ಲಿಯೇ ಇದ್ದ ಡಿಫೆನ್ಸ್ ಲಾಯರ್ ಕಡೆ ಕೈ ತೋರಿಸಿ ಕೇಳಿದ:

"ಹೋಗಲಿ.. ಅಜ್ಜಿ.. ಇವರು ಯಾರು ಅಂತ ಗೊತ್ತಾ?"

"ಅಯ್ಯೋ.. ಇವನು ನಮ್ಮ ಕೃಷ್ಣಸ್ವಾಮಿ ಅಲ್ವೇ... ಕಿಟ್ಟಪ್ಪ ಅಂತ ಇದ್ದೇ.. ಈ ಮುಂಡೇದು ಗೊತ್ತಿಲ್ಲ ಅಂದರೆ ಏನು? ಇವನ್ನೂ ಕೂಸಿದ್ದಾಗನಿಂದ ನೋಡಿದ್ದೀನಿ. ನಮ್ಮ ವಠಾರ ದಲ್ಲಿಯೇ ಇದ್ದಿದ್ದು. ಮುಂಡೇದು.. ಬರೀ ಸೊಂಭೇರಿ.. ಇನ್ನೊಬ್ಬರು ಹೇಳಿದ್ದು ಕೇಳೋದಿಲ್ಲ. ತನ್ನದೇ ತನಗೆ... ಕೆಟ್ಟ ಕುಡುಕ ಬೇರೆ.. ಯಾರ ಹತ್ತ್ರಾನೂ ಸಂಬಂಧ ನೆಟ್ಟಗಿರೋದಿಲ್ಲಾ. ಇಡೀ ಊರಲ್ಲಿರೋ ದರಿದ್ರ ಲಾಯರ್ ಅಂದರೆ ಇವನೇ.. ಹೆಂಡತಿಗೆ ಮೋಸ ಮಾಡಿ 3 ಜನ ಹೆಂಗಸರ ಜೊತೆ ಸಂಬಂಧ ಇಟ್ತ್ಕೊಂಡಿದಾನೆ. ಅದರಲ್ಲಿ ಒಬ್ಬಳು ನಿನ್ನ ಹೆಂಡತಿ.. ಈ ಮುಂಡೆದಾ? ಗೊತ್ತಿಲ್ಲದೆ ಏನು?" ಅಂದರು.

ವಕೀಲ ಮೂರ್ಛೆ ಬೀಳೋದೊಂದೇ ಬಾಕಿ.

ಅಲ್ಲಿಯೇ ಕೂತಿದ್ದ ಜಡ್ಜ್ ಸಾವರಿಸಿಕೊಂಡು ಇಬ್ಬರು ವಕೀಲರನ್ನೂ ಕರೆದರು.. "ನೀವಿಬ್ಬರೂ ಈಡಿಯಟ್ ಗಳು ಈ ಅಜ್ಜೀನ ಏನಾದ್ರೂ "ಈ ಜಡ್ಜ್ ಗೊತ್ತಾ?" ಅಂತ ನನ್ನ ಬಗ್ಗೆ ಕೇಳಿದರೆ.. ನಿಮ್ಮಿಬ್ಬರಿಗೂ ಎಲೆಕ್ಟ್ರಿಕ್ ಕುರ್ಚಿ ಮೇಲೆ ಕೂರಿಸಿಬಿಡ್ತೀನಿ.. ಹುಷಾರು!"

😂😂😂