ಆರೋಗ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆರೋಗ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 14, 2017

-------ನಿದ್ರೆ ಒ೦ದು ಮಹಾ ಅನುಗ್ರಹ------

ಜಾಗತಿಕ ನಿದ್ರಾ ದಿನವನ್ನು ಮಾರ್ಚ್ 11 ರ೦ದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಚರಿಸಿದ ಬೆನ್ನಲ್ಲೆ ದುಬೈ ಯಲ್ಲಿ ಕೂಡ ಈ ದಿನವನ್ನು ಆಚರಿಸಲಾಯ್ತು. 2012 ರ ಆರೋಗ್ಯ ಮ೦ತ್ರಾಲಯದ ವರದಿ ಪ್ರಕಾರ ಇಲ್ಲಿನ ಸ್ವದೇಶಿಗಳು ಮತ್ತು ವಿದೇಶಿಗಳೆ೦ಬ ವ್ಯತ್ಯಾಸವಿಲ್ಲದೇಸುಮಾರು 55 % ದಷ್ಟು ಜನರಿಗೆ ಸುಖ ನಿದ್ರೆ ಲಭಿಸುವುದಿಲ್ಲವೆ೦ಬ ವರದಿಯು ಹೊರಬಿತ್ತು. ಉತ್ತಮ ಆರೋಗ್ಯಕ್ಕೆ ಸರಿಯಾದ ನಿದ್ರೆ ಅನಿವಾರ್ಯವೆ೦ಬ ಸ೦ದೇಶದೊ೦ದಿಗೆ ಯುಎಇ ಯಲ್ಲಿ ಕೂಡ ಕೆಲವುಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಬಗ್ಗೆ ಚರ್ಚಿಸಲಾಯ್ತು. 35-54 ರ ಮದ್ಯೆ ಪ್ರಾಯವಿರುವ ಸ್ತ್ರೀ ಪುರುಷರೆ೦ಬ ಬೇಧವಿಲ್ಲದೇ ನಿದ್ರಾಹೀನತೆಯನ್ನು ಅನುಭವಿಸುವವರಾಗಿದ್ದಾರೆ.

ನಿದ್ರೆಯ ಕುರಿತು ನಾವು ಆಲೋಚಿಸುವಾಗ ಅದೊ೦ದು ಅವಿಸ್ಮರಣೀಯ ಅನುಭವ ಮತ್ತು ನೆಮ್ಮದಿಯಾಗಿದೆ ಹಾಗೂ ಅಪ್ಯಾಯಮಾನವಾಗಿದೆ, ಬಳಲಿದ ಶರೀರಕ್ಕೆ ಮತ್ತು ಮನಸ್ಸಿಗೆ ಸುಖಮತ್ತು ಶಾ೦ತಿಯನ್ನು ತ೦ದು ಕೊಡುತ್ತದೆ. ಹಾಗೂ ಅದು ಸೃಷ್ಟಿಕರ್ತನ ಅತ್ಯ೦ತ ದೊಡ್ಡ ಅನುಗ್ರಹವವೂ ಆಗಿದೆ. ನಿದ್ರೆಯಿಲ್ಲದ ರಾತ್ರಿಗಳನ್ನು ನಮಗೆ ಊಹಿಸಲೂ ಸಾಧ್ಯವಿಲ್ಲ. ನಿದ್ರೆಯನ್ನು ಒ೦ದು ಮರಣವೆ೦ದು ಬನ್ನಿಸಲಾಗಿದೆ ಆದ್ದರಿ೦ದಲೇ ಕೆಲವರು ರಾತ್ರಿ ನಿದ್ರೆ ಮಾಡಿದರೆ ಮು೦ಜಾನೆ ಎ೦ದಿನ೦ತೆ ಏಳದೇ ಒಮ್ಮೆಯೂ ಬಾರದಲೋಕಕ್ಕೆ ಪಯಣಿಸಿರುತ್ತಾರೆ. ಆದುದರಿ೦ದಲೇ ನಿದ್ರೆಯಿ೦ದ ಎಚ್ಚೆತ್ತ ಬಳಿಕ ಈ ರೀತಿ ಪ್ರಾರ್ಥಿಸಬೇಕೆ೦ದು ಪ್ರವಾದಿ (ಸ) ಯವರು ಕಲಿಸಿಕೊಟ್ಟಿದ್ದಾರೆ, “ನನಗೆ ಮರಣವನ್ನು ನೀಡಿದ ಬಳಿಕ ನನ್ನನ್ನು ಪುನರುಜ್ಜೀವನಗೊಳಿಸಿ ಅನುಗ್ರಹಿಸಿದ ಅಲ್ಲಾಹನೇ ನಿನಗೆಸರ್ವಸ್ತುತಿ”

ಪವಿತ್ರ ಕುರ್ ಆನಿನಲ್ಲಿ ಈ ರೀತಿ ಕಾಣಬಹುದು "ರಾತ್ರಿಯನ್ನು ನಿಮಗೆ ಉಡುಪಾಗಿಯೂ, ನಿದ್ದೆಯನ್ನು ಪ್ರಶಾ೦ತಿಯಾಗಿಯೂ ಹಗಲನ್ನು ಎದ್ದೇಳುವ ಸಮಯವಾಗಿಯೂ ಮಾಡಿದವನು ಅಲ್ಲಾಹನೇ ಆಗಿರುತ್ತಾನೆ"

ಕೆಲವರು ನಿದ್ರೆ ಮಾಡಲಿಕ್ಕೋಸ್ಕರ ಬದುಕುವವರಿದ್ದಾರೆ ಇನ್ನುಕೆಲವರುಬದುಕಲಿಕ್ಕೋಸ್ಕರ ನಿದ್ರೆ ಮಾಡುವವರಿದ್ದಾರೆ. ಹೌದು ಇದು ಸತ್ಯ, ಕೆಲವರಿಗ೦ತೂ ಎಷ್ಟು ನಿದ್ರೆ ಮಾಡಿದರೂ ಸಾಲದು,ಕೆಲಸವಿಲ್ಲದವರಿಗೆ ನಿದ್ರೆ ಮಾಡುವುದೇ  ಒ೦ದು ಕೆಲಸವಾದರೆ,ಕೆಲಸವಿರುವವರಿಗೆ ನಿದ್ದೆ ಮಾಡಿದ್ದು ಸಾಲದೇ ಕೆಲಸದ ಸ್ಥಳಗಳಲ್ಲೂ ಕಛೇರಿಯಲ್ಲೂ ತೂಕಡಿಸುವುದು ಕಾಣಬಹುದಾಗಿದೆ. ಇನ್ನು ಕೆಲವರು ಪ್ರಯಾಣದಲ್ಲಿ, ಓದುವ ಮತ್ತು ಪ್ರವಚನವನ್ನು ಆಲಿಸುವ ಸ೦ದರ್ಭಗಳಲ್ಲಿ ಹಾಗೂ ಎಲ್ಲೆಲ್ಲ ಸ೦ದರ್ಭ ಸಿಗುತ್ತದೋ ಅಲ್ಲೆಲ್ಲ ನಿದ್ರೆಮಾಡುವ ರೂಢಿಯನ್ನು ತಿಳಿದೋ ತಿಳಿಯದೆಯೋ ಬೆಳೆಸಿಕೊ೦ಡಿರುತ್ತಾರೆ.
ಅತ್ಯ೦ತ ಸ್ವಾರಸ್ಯಕರ ಸ೦ಗತಿಯೆ೦ದರೆ ಕೆಲವು ಕಟ್ಟಡಗಳಲ್ಲಿ, ಮನೆಗಳಲ್ಲಿ ಹಾಗೂ ವಸತಿ ಸಮುಚ್ಚಯಗಳಲ್ಲಿ ಕಾವಲಿನ ಜವಾಬ್ದಾರಿಯನ್ನು ನಿಭಾಯಿಸುವ ಉದ್ದೇಶದಿ೦ದ ಕಾವಲುಗಾರನನ್ನು ಅಥವಾ ಭದ್ರತಾ ಸಿಬ್ಬ೦ಧಿಗಳನ್ನು ನೇಮಿಸುತ್ತಾರೆಆದರೆ ಕಾವಲುಗಾರನೇ ಆರಾಮವಾಗಿ ನಿದ್ದೆ ಮಾಡುವುದನ್ನು ನಮಗೆಕಾಣಬಹುದಾಗಿದೆ. ಇದು ಕಾವಲುಗಾರನಿಗೆ ಮಾತ್ರ ಸೀಮಿತವಲ್ಲ ಬದಲಾಗಿ ಅಬಕಾರಿ ಇಲಾಖೆಗಳಲ್ಲಿ, ಸರಾಕಾರೀ ಹಾಗೂ ಸರಕಾರೇತರ  ಕಛೇರಿಗಳಲ್ಲಿ ಕೂಡ ಕಾಣಬಹುದಾಗಿದೆ.

ಸುಖ ನಿದ್ರೆಯೆ೦ಬುವುದು ಮನುಷ್ಯನ ಬದುಕಿನಲ್ಲಿ ಅತ್ಯ೦ತ ಅಮೂಲ್ಯವಾದ ಸ೦ಪತ್ತಾಗಿದೆ. ಎಷ್ಟೇ ಶ್ರೀಮ೦ತನಾಗಿದ್ದು ಎಲ್ಲ ಸುಖ ಸೌಕರ್ಯಗಳಿದ್ದು ನಿದ್ರೆಯಿಲ್ಲದಿದ್ದರೆ ಬದುಕಿನಲ್ಲಿ ನೆಮ್ಮದಿಯಿರುವುದಿಲ್ಲ ಹಾಗೂ ಅವನು ಏನೋ ಕಳೆದುಕೊ೦ಡವನ೦ತಿರುತ್ತಾನೆ. ವಾರದ ಕೊನೆಯಲ್ಲಿ ಪ್ರತಿಯೊಬ್ಬನಿಗೂ ಖುಷಿಯೇ ಖುಷಿ ಏಕೆ೦ದ್ರೆ ಒ೦ದೆರಡು ದಿನ ಆರಾಮವಾಗಿ ನಿದ್ರಿಸಬಹುದಲ್ವಾ ಎ೦ದು. ಕೆಲವರಿಗೆ ವಾರದ ಮೊದಲ ದಿನ ಬರುವುದೆ೦ದರೆ ಆಲಸ್ಯ, ಪುನಹ ಕೆಲಸ ಕಾರ್ಯಗಳಲ್ಲಿ ಮಗ್ನನಾಗಬೇಕೆ೦ಬ ಚಿ೦ತೆ. ಕೆಲವರ೦ತೂ ದಿನ ರಾತ್ರಿಯೆ೦ಬ ವ್ಯತ್ಯಾಸವಿಲ್ಲದೇ ನಿದ್ರಿಸಿ ನಿದ್ರೆಯನ್ನೇ ಸೋಲಿಸುವವರೂ ಇದ್ದಾರೆ.

ಇನ್ನು ಕೆಲವರ೦ತೂ ತಡ ರಾತ್ರಿಯವರೆಗೆ ಸಿನಿಮಾ ಹಾಗೂ ಸಾಮಾಜಿಕ ತಾಣಗಳಲ್ಲಿ ಸಮಯವನ್ನು ವ್ಯಯಿಸಿ ತಡವಾಗಿ ನಿದ್ರಿಸಿಮು೦ಜಾನೆ ಬೇಗನೆ ಕಛೇರಿಗೆ ಹೋಗುವ ಕಾರಣ ಸಾಕಷ್ಟು ಪ್ರಮಾಣದಲ್ಲಿ ನಿದ್ರಿಸದೆ ಇರುವುದರಿ೦ದ ನಮ್ಮ ಶರೀರದಲ್ಲಿ ಏರುಪೇರು ಸ೦ಭವಿಸುವ ಕಾರಣ ನಿದ್ರೆಗೆ ಜಾರುವುದು ಕೂಡ ಕ೦ಡುಬರುತ್ತದೆ, ವಿಶೇಷವಾಗಿ ವಾಹನ ಚಾಲಕರು ಸಾಕಷ್ಟು ಪ್ರಮಾಣದಲ್ಲಿ ನಿದ್ರಿಸದ ಕಾರಣ ರಸ್ತೆ ಅಫಘಾತ ಸಭವಿಸುವುದು ಇ೦ದು ದಿನನಿತ್ಯದ ಘಟನೆಯಾಗಿದೆ. ಇ೦ದು ಸ೦ಭವಿಸುವ ಅನೇಕರಸ್ತೆ ಅಫಘಾತಗಳಿಗೆ ಒ೦ದು ಕಾರಣವ೦ತೂ ಸಾಕಷ್ಟು ನಿದ್ರಿಸದೆ ವಾಹನ ಚಲಾಯಿಸುವ ಕಾರಣದಿ೦ದ ತೂಕಡಿಕೆ ಸ೦ಭವಿಸುವ ಮೂಲಕ ಅನೇಕ ಜೀವಗಳು ಪ್ರಾಣ ಕಳೆದುಕೊಳ್ಳಬೇಕಾಗಿ ಬರುವುದ೦ತೂ ಒ೦ದು ವಾಸ್ತವ ಸತ್ಯ.

ಇನ್ನು ಕೆಲವರು ನಿದ್ರೆ ಮಾಡಲು ಸಮಯವಿಲ್ಲದವರೂ ಇದ್ದಾರೆ.ಕೆಲಸದ ನಿಭಿಢತೆ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ದಿನರಾತ್ರಿಯೆ೦ಬ ವ್ಯತ್ಯಾಸವಿಲ್ಲದೆ ತಲ್ಲೀನರಾಗಿ ಅತ್ಯ೦ತ ಕಡಿಮೆ ಪ್ರಮಾಣದ ನಿದ್ರೆ ಮಾತ್ರ ಲಭಿಸುವುದರಿ೦ದ ಶರೀರದಲ್ಲಿ ಏರು ಪೇರುಸ೦ಭವಿಸುವುದರಿ೦ದ ರೋಗಗಳಿಗೆ ತುತ್ತಾಗುವುದು ಕ೦ಡುಬರುತ್ತದೆ.ಸರಾಸರಿ 6-8 ಗ೦ಟೆಯಷ್ಟು ನಿದ್ರಿಸಬೇಕಾದ ಮನುಷ್ಯ ಅದಕ್ಕಿ೦ತ ಕಡಿಮೆ ಪ್ರಮಾಣದಲ್ಲಿ ನಿದ್ರಿಸಿದರೆ ಸ್ವಾಭಾವಿಕವಾಗಿ ಅನೇಕ ರೋಗಗಳನ್ನು ಅವನು ಮೈಗೂಡಿಸಿಕೊಳ್ಳುವನು.

ಇನ್ನು ಕೆಲವರಿಗೆ ನಿದ್ರೆಯಿಲ್ಲದ ಸಮಸ್ಯೆ, ಇದನ್ನು ಇನ್ಸೋಮ್ನಿಯಾ ಎ೦ದು ಕರೆಯಲಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಶರೀರದ ತೂಕದಲ್ಲಿ ಅತಿಯಾದ ಹೆಚ್ಚಳ ಮತ್ತು ಗೊರಕೆಯ ಸಮಸ್ಯೆಯಾದರೆ ಇತರ ಕಾರಣಗಳು ಮಾನಸಿಕ ಅಸಮತೋಲನ, ದೀರ್ಘಾವಧಿ ಕಾಯಿಲೆಗಳು ಇತ್ಯಾದಿ.

ನಾನು ಔಷದಾಲಯಲ್ಲಿರುವಾಗ (ಫಾರ್ಮಸಿ) ಅನೇಕ ನಿದ್ರಾಹೀನತೆಯ ಕಾಯಿಲೆಯಿರುವವರು ಮತ್ತು ಅದರಿ೦ದಾಗಿ ಮಾನಸಿಕ ಸಮತೋಲನವನ್ನು ಕಳೆದುಕೊ೦ಡವರು ಔಷದಿಗಾಗಿ ಬರುತ್ತಿದ್ದರು, ಸ್ವಾಭಾವಿಕವಾಗಿ ವೈದ್ಯರ ಸೂಚಕ ಚೀಟಿಯಿಲ್ಲದೆ(prescription) ಔಷದವನ್ನು ಕೊಡುವ೦ತಿಲ್ಲ, ಹಾಗೂಸೂಚಕ ಚೀಟಿಯಿದ್ದರೂ ನಿದ್ರೆಯ ಔಷದಿಗಳಿಗೆ ಕೆಲವು ಇತಿಮಿತಿಗಳಿವೆ ಈ ಸ೦ದರ್ಭದಲ್ಲಿ ರೋಗಿಗಳು ಏನು ಮಾಡುತ್ತಾರೆ೦ದರೆ ಒ೦ದೇ ಔಷಧಿಗಾಗಿ ಒ೦ದಕ್ಕಿ೦ತ ಹೆಚ್ಚು ವೈದ್ಯರೊ೦ದಿಗೆ ಭೇಟಿ ಮಾಡಿ ಔಷಧಿಗೆ ಚೀಟಿಯನ್ನು ಪಡೆದು ಔಷಧಿಯನ್ನು ಖರೀದಿಸುತ್ತಿದ್ದರು. ಮಾತ್ರವಲ್ಲ ರಾತ್ರಿ ವೇಳೆ ಅಸಹನೀಯ ಸ೦ದರ್ಭಗಳಲ್ಲಿ ಕೆಲವು ಔಷದಾಲಯದ ಗಾಜನ್ನು ಪುಡಿಗೈದು ಓಳಪ್ರವೇಶಿಸಿ ನಿದ್ರೆಯ ಔಷದವನ್ನು ಕಳ್ಳತನ ಮಾಡಿದ್ದುಕೂಡ ಇದೆ.ಹಾಗಾದರೆ ನಿದ್ರಾಹೀನತೆ ಎಷ್ಟೊ೦ದು ಕಠೋರ ನಿಮಿಷಗಳನ್ನು ಮನುಷ್ಯನ ಬದುಕಿನಲ್ಲಿ ಸೃಷ್ಟಿಸುತ್ತದೆ ಎ೦ದು ಊಹಿಸಬಹುದು.

ಕೆಲವರ೦ತೂ ಇದಕ್ಕಿ೦ತ ಒ೦ದು ಹೆಜ್ಜೆ ಮು೦ದೆ ಹೋಗಿ ನಿದ್ರೆಯನ್ನು ಅದುಮಿಡಲು ಅಥವಾ ನಿದ್ರೆ ಬಾರದೇ ಇರಲು ಔಷದಕ್ಕಾಗಿ ಬರುವುದಿದೆ. ಹಾಗೂ ಕೆಲವರು ತಡ ರಾತ್ರಿಯವರೆಗೆ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಲು ಹಾಗೂ ನಿದ್ರೆಯನ್ನು ನಿಯ೦ತ್ರಣದಲ್ಲಿಡಲು ಅತಿಯಾದ ಕಾಫಿ, ಚಹಾ, ಹಾಗೂCaffeine ಮಿಶ್ರಿತ ದ್ರಾವಗಳನ್ನು ಕುಡಿಯುವುದು ಕ೦ಡುಬರುತ್ತದೆ ಆದರೆ ಇದು ಶರೀರಕ್ಕೆ ಅತಿಯಾದ ಪಾರ್ಶ್ವ ಫಲವನ್ನು ನೀಡಬಹುದೆ೦ಬ ಸತ್ಯವನ್ನು ನಾವು ಮರೆಯಬಾರದು.  

UAE ಯ ಜನಸ೦ಖ್ಯೆಯಲ್ಲಿ ಆರೋಗ್ಯ ಮ೦ತ್ರಾಲಯದ ಅ೦ಕಿಅ೦ಶದ ಪ್ರಕಾರ ಶೇಕಡಾ 55 ರಷ್ಟು ನಿದ್ರಾ ರಹಿತರಿದ್ದರೆ ಅ೦ಕಿಅ೦ಶಗಳಿಗೆ ಲಭಿಸದ ಎಷ್ಟು ನಿದ್ರಾ ರಹಿತರಿರಬಹುದು ಹಾಗೂಜಗತ್ತಿನ ಇತರ ರಾಷ್ಟ್ರಗಳ ಅವಸ್ಥೆ ಹೇಗಿರಬಹುದು ಎ೦ದುಊಹಿಸಲಸಾಧ್ಯ. ಹೀಗೆ ನೋಡಿದರೆ ನಿದ್ರೆ ಎ೦ಬುವುದು ಬದುಕಿನಒ೦ದು ಅವಿಭಾಜ್ಯ ಅ೦ಗ ಹಾಗೂ ನಿದ್ರೆಯಿಲ್ಲದ ಬದುಕೇಇಲ್ಲವೆ೦ಬುವುದು ಒ೦ದು ವಾಸ್ತವವಾಗಿದೆ. ಪ್ರತಿಯೊಬ್ಬ ಮನುಷ್ಯನುತನ್ನ ಬದುಕಿನ ಮೂರರಲ್ಲಿ ಒ೦ದ೦ಶವನ್ನು ನಿದ್ರೆಗಾಗಿ ವ್ಯಯಿಸುತ್ತಾನೆಮತ್ತು ಅತಿಯಾದ ನಿದ್ರೆಯು ಆರೋಗ್ಯದ ದೃಷ್ಟಿಯಲ್ಲಿ ಉಚಿತವಲ್ಲ.

ಸರ್ವ ಶಕ್ತನಾದ ಸೃಷ್ಟಿಕರ್ತನು ಮನುಷ್ಯನಿಗೆ ಪ್ರತಿಯೊ೦ದು ವಿಷಯಗಳಲ್ಲೂ ಮಾರ್ಗದರ್ಶನವನ್ನೂ, ಭೋದನೆಗಳನ್ನೂ ಹಾಗೂ ನೀತಿ ನಿಯಮಗಳನ್ನೂ ಕ್ರಮೀಕರಿಸಿದ್ದಾನೆ . ಅದನ್ನು ಉಲ್ಲ೦ಘಿಸಿ ತನ್ನದೇ ಸ್ವೇಚ್ಚೆಯನ್ನು ಮೈಗೂಡಿಸಿಕೊ೦ಡರೆ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ. ನಿದ್ರೆಯ ವಿಷಯದಲ್ಲೂ ಇದು ಭಿನ್ನವಾಗಿಲ್ಲ,
ರಾತ್ರಿಯ ಆಹಾರವನ್ನು ಭೋಜಿಸಿ ಬೇಗನೆ ವಿಶ್ರಾ೦ತಿ ಪಡೆದು ಮು೦ಜಾನೆ ಬೇಗನೆ ಎದ್ದು ಪ್ರಭಾಥದ ಸಾಮೂಹಿಕ ಪ್ರಾರ್ಥನೆಯಲ್ಲಿ ತಲ್ಲೀನರಾಗಬೇಕೆ೦ಬುವುದು ಸೃಷ್ಟಿಕರ್ತನ ಕಲ್ಪನೆಯಾಗಿದೆ. ಅದನ್ನುಉಲ್ಲ೦ಘಿಸಿ ತಡ ರಾತ್ರಿಯವರೆಗೂ ಮನರ೦ಜನೆಯಲ್ಲಿ ತಲ್ಲೀನರಾಗಿಮು೦ಜಾನೆ ತಡವಾಗಿ ಏಳುವ ಮೂಲಕ (ಇದನ್ನು Nonstop sleep ಎ೦ದು ಕರೆಯಬಹುದು) ಪ್ರಭಾತ ಪ್ರಾರ್ಥನೆಯೆ೦ಬಸೃಷ್ಟಿಕರ್ತನ ಕಲ್ಪನೆಯನ್ನು ಧಿಕ್ಕರಿಸಿದವನು ನಿಜವಾಗಿಯೂ ನಷ್ಟವ೦ತನಾಗಿದ್ದಾನೆ.

ಕೆಲವು ತುಣುಕುಗಳು....

-ಮನುಷ್ಯನು ತನ್ನ ಆಯುಷ್ಯದ ಮೂರರಲ್ಲಿ ಒ೦ದನ್ನು(ಸುಮಾರು 25 ವರ್ಷ) ನಿದ್ರೆಗೆ ವ್ಯಯಿಸುತ್ತಾನೆ.

ಮಗುವಿನ ಮೊದಲ 2 ವರ್ಷದಲ್ಲಿ ತಾಯಿಗೆ ಸುಮಾರು 6ತಿ೦ಗಳಿನಷ್ಟುನಿದ್ರೆಯು ನಷ್ಟ ಹೊ೦ದುತ್ತದೆ.

ಪ್ರತಿ ರಾತ್ರಿಯು 7 ಗ೦ಟೆಗಿ೦ತ ಕಡಿಮೆ ನಿದ್ರಿಸುವುದು ನಿಮ್ಮ ದಿನನಿತ್ಯದ ಚಟುವಟಿಕೆಗಳ ಗುಣಮಟ್ಟವನ್ನು ಕು೦ಠಿತಗೊಳಿಸುತ್ತದೆ.

ಆಹಾರ ಸೇವಿಸದೇ 2 ತಿ೦ಗಳು ಬದುಕಲು ಸಾಧ್ಯ ಆದರೆನಿದ್ರೆಯಿಲ್ಲದೆ ಗರಿಷ್ಟ 11 ದಿನ ಮಾತ್ರ ಬದುಕಬಹುದು.

ಉತ್ತಮ ಆರೋಗ್ಯಕ್ಕೂ ನಿದ್ರೆಗೂ ಕೆಲವು ಸಲಹೆಗಳು.....

1 ತಡ ರಾತ್ರಿಯವರೆಗೆ ಚಲನ ಚಿತ್ರ, ಮನರ೦ಜನೆ ಹಾಗೂಸಾಮಾಜಿಕ ತಾಣಗಳ ಉಪಯೋಗಕ್ಕೆ ಕಡಿವಾಣ ಹಾಕುವುದು.

2 ಬೇಗನೆ ನಿದ್ರಿಸಿ ಮು೦ಜಾನೆ ಬೇಗನೆ ಏಳುವ ಅಭ್ಯಾಸ ರೂಢಿಸಿ   ಕೊಳ್ಳುವುದು.

3 ಶಾಲಾ ಕಾಲೇಜು ವಿಧ್ಯಾರ್ಥಿಗಳು ಮು೦ಜಾನೆ ಬೇಗನೆ ಎದ್ದುಕಲಿತರೆ ಅದನ್ನು ಸರಿಯಾಗಿ ಜ್ಞಾಪಕದಲ್ಲಿಡಬಹುದು.

4 ತಡ ರಾತ್ರಿ ವಾಹನ ಚಲಾಯಿಸುವುದನ್ನು ದೂರಮಾಡುವುದುಹಾಗೂ ನಿದ್ರೆ ಬ೦ದರೆ ಸ್ವಲ್ಪ ಸಮಯ ವಿಶ್ರಾ೦ತಿ ಪಡೆದ ನ೦ತರಚಲಾಯಿಸುವುದು.

5 ನಿದ್ರೆ ಬಾರದೇ ಇರುವ ಅವಸ್ಥೆ ಬ೦ದರೆ ಔಷದಿಗಳ ಮೊರೆಹೋಗದೆ ಮನಸ್ಸನ್ನೂ ಮತ್ತು ಮೆದುಳನ್ನು ಎಲ್ಲ ಜ೦ಜಾಟಗಳಿ೦ದಮುಕ್ತಿಗೊಳಿಸುವುದು.

6 ಅತಿಯಾದ ಚಿ೦ತೆಗಳಿ೦ದ ದೂರವಿರಲು ಪ್ರಯತ್ನಿಸುವುದು.

7 ಸರಿಯಾದ ಪ್ರಮಾಣದಲ್ಲಿ ನಿದ್ರೆಮಾಡಲು ಪ್ರಯತ್ನಿಸುವುದು.

8 ನಿರ೦ತರವಾಗಿ ರಾತ್ರಿ ವೇಳೆ ಕೆಲಸದಲ್ಲಿರುವವರು (Night duty) ಇತರ ಸಮಯಗಳಲ್ಲಿ ಸರಿಯಾಗಿ ವಿಶ್ರಾ೦ತಿಪಡೆಯುವುದು.

9 ಧೂಮಪಾನ ಹಾಗೂ ಇತರ ಶರೀರದ ಆರೋಗ್ಯಕ್ಕೂ ಹಾಗೂ ನಿದ್ರೆಗೂ ತಡೆಯೊಡ್ದುವ೦ತಹ ಪಾನೀಯಗಳನ್ನೂ ಅಮಲು ಪಧಾರ್ಥಗಳ ಚಟಗಳನ್ನು ಉಪೇಕ್ಷಿಸುವುದು

ಔಷದಗಳ ಉಪಯೋಗ ಮತ್ತು ದುರುಪಯೋಗದ ಮಾಹಿತಿಗಾಗಿ ಕಾಯುತ್ತಿರಿ.....

ನಿಮ್ಮೆಲ್ಲರ ಪ್ರಾರ್ಥನೆಯನ್ನು ನಿರೀಕ್ಷಿಸುತ್ತಾ

Abdul Salam D'katte

ಶುಕ್ರವಾರ, ಮಾರ್ಚ್ 10, 2017

ವಿಚಿತ್ರ ಸತ್ಯಗಳು

*ನಮ್ಮ ಮೈ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು ಆದ್ಭುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇಹದಲ್ಲೇ ಇವೆ*

ನಮ್ಮ ದೇಹಕ್ಕೆ ಯಾವ್ದು ಸರಿ? ಚಳಿ ಇದ್ರೆ ಒಳ್ಳೆದಾ? ಬಿಸಿಲಾದ್ರೆ ಒಳ್ಳೆದಾ? ಯಾವ್ದು ಶೀತ ಯಾವ್ದು ಉಷ್ಣ, ಏನು ತಿಂದ್ರೆ ಒಳ್ಳೇದು ಏನು ಮಾಡಿದ್ರೆ ಒಳ್ಳೇದು... ಈ ಎಲ್ಲಾ ವಿಷಯಗಳು ನಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ನಮ್ಮ ದೇಹದ ಬಗ್ಗೆ ತಿಳ್ಕೊಳಕ್ಕೆ ಬ್ರಹ್ಮಾಂಡದಷ್ಟಿದೆ. ಅದರಲ್ಲಿ ನೀವು ಪ್ರಾಯಶಃ ಕೇಳಿಲ್ಲದಿರೋ 20 ವಿಷಯಗಳ್ನ ಹೇಳ್ತೀವಿ ಕೇಳಿ… ಮೊದಲು ಕೇಳಿದಾಗ ನಮಗೆ ಬಹಳ ಆಶ್ಚರ್ಯ ಆಯಿತು. ನಿಮಗೂ ಆಗೋದ್ರಲ್ಲಿ ಸಂದೇಹ ಇಲ್ಲ, ಓದ್ತಾ ಹೋಗಿ…

1. ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ - ಬೆರಳಚ್ಚು ಹೇಗೋ ಹಾಗೆ ಸೈನ್ ಹಾಕಕ್ಕೆ ಬರದೆ ಇರೋರು ಹೆಬ್ಬೆಟ್ಟು ಯಾಕೆ ಒತ್ತುತ್ತಾರೆ ಹೇಳಿ? ಯಾಕಂದ್ರೆ ಬೆರಳಚ್ಚು ಒಬ್ಬೊಬ್ಬರಿಗೂ ಬೇರ್ಬೇರೆ. ಹಾಗೇ ನಿಮ್ಮ ನಾಲಿಗೆ ಅಚ್ಚು ಕೂಡ ಬೇರೆಯೋರ ತರಹ ಇರಲ್ಲ.

2. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತೆ ಅದಕ್ಕೆ.

3. ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಲ್ಲೂ ಇರುತ್ವೆ. ಆದ್ರೆ ಅವು ತೊಂದ್ರೆ ಮಾಡಲ್ಲ ಬಿಡಿ.

4. ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಅಂತರ್ಥ.

5. ನಿಮ್ಮ ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚೆಲಿಸುತ್ತೆ.

6. ಮನುಷ್ಯನ ರಕ್ತದಲ್ಲಿ 29 ಬಗೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತೆ.

7. ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.

8. ನಮ್ಮ ದೇಹದ ನರಗಳನ್ನೆಲ್ಲ ಒಟ್ತುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.

9. ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡ್ತೀವಿ.

10. ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.

11. ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ - ವರ್ಷಕ್ಕೆ 0.25 mm ನಷ್ಟು

12. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.

13. ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕ 2 ಕಿಲೋ ಗೊತ್ತಾ!

14. ನಮ್ಮ ಚರ್ಮದ 1 sq.cm ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.

15. ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.

16. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.

17. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡ್ತಾರೆ

18. ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ವೆ.

19. ನೀವು ಶೀತ ಆದಾಗ ಸೀನ್ತೀರಲ್ಲ ಅದರ ವೇಗ ಗಂಟೆಗೆ 160 ಕಿ. ಮೀ ಇರುತ್ತೆ.

20. ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ… ಅತ್ತಾಗ 43... ಅಂದ್ರೆ ಅಳಕ್ಕೆ ಕೆಲಸ ಜಾಸ್ತಿ ಮಾಡಬೇಕು

21. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ

22. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದ ಸಿಗಲ್ಲ

23. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ

24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ

25. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.

26. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.

27. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.

28. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ

29. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!

30. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...

31. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ

32. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ

33. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.

34. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ

35. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ

ಚುಕ್ಕುಬುಕ್ಕು

36. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ

37. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.

38. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.

39. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ

40. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ

41. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ

42. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.

ಎಲ್ಲರಿಗೂ ಗೊತ್ತಾಗಲಿ ವಂಶಕ್ಕೆಲ್ಲಾ ಹಂಚ್ಕಳಿ...😊😊😀😀🙏🏽

ನಲ್ಮೆ...

ಸೋಮವಾರ, ಜನವರಿ 23, 2017

ಖಾಲಿ ಹೊಟ್ಟೆಯಲ್ಲಿ ನೀರು

*ಖಾಲಿ ಹೊಟ್ಟೆಯಲ್ಲಿ ನೀರು 💧ಕುಡಿದರೆ ಆಗುವ ದಶ ಲಾಭಗಳು:...*

ನೀರು ನಿಮ್ಮ ಹೆಚ್ಚಿನೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗ ಬಲ್ಲದು. ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣ ಪಡಿಸ ಬಹುದು ಎಂದು ತಿಳಿದಿದೆಯಾ?

ಹೆಚ್ಚಿನ ರೋಗಗಳು ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿ ಇರಿಸಲು ಇದು ನೆರವಾಗಲಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಯೋಚನೆಯು ಮೊದಲು ಆರಂಭವಾಗಿದ್ದು ಜಪಾನ್ ನಲ್ಲಿ. ಜಪಾನಿನಲ್ಲಿ ಜನರು ಹಲ್ಲುಜ್ಜುವ ಮೊದಲು ನಾಲ್ಕು ಲೋಟ ನೀರು ಕುಡಿದು ಇದರ ಬಳಿಕ ಅವರು ಅರ್ಧ ಗಂಟೆ ಏನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಈ ನೀರಿನ ಥೆರಪಿ ನಿಮ್ಮನ್ನು ಆರೋಗ್ಯಕರ ಹಾಗೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

ಜಪಾನ್ ನ ಜನರು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಟುವಟಿಕೆ ಹಾಗೂ ದಕ್ಷತೆಯನ್ನು ಹೊಂದಿರುವರೆಂಬ ಹೆಗ್ಗಳಿಕೆಯಿದೆ.

ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀರು ಜಾದು ಮಾಡ ಬಲ್ಲದು. ನೀವು ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ನೀವು ತಿಂದ ಆಹಾರದಲ್ಲಿರುವ ಎಣ್ಣೆ ಕೊಬ್ಬಾಗಿ ಪರಿವರ್ತಿತವಾಗುವುದಿಲ್ಲ. ಬೆಳಗ್ಗಿನ ಅವಧಿಯಲ್ಲಿ ಬಿಸಿನೀರು ಕುಡಿಯಲು ಪ್ರಯತ್ನಿಸಿ. ಬೆಳಗ್ಗಿನ ವೇಳೆ ಬಿಸಿ ನೀರು ಕುಡಿದರೆ ಆಗುವ ಅದ್ಭುತ ಆರೋಗ್ಯ ಲಾಭಗಳು ಇಲ್ಲಿವೆ:

*🔹 ಕರುಳಿನ ಕ್ರಿಯೆ ಸರಾಗ:* ಬೆಳಗ್ಗೆ ಎದ್ದು ನೀವು ನೀರು ಕುಡಿದ ಕೂಡಲೇ ಮಲ ವಿಸರ್ಜನೆ ಮಾಡುವ ಅಗತ್ಯತೆ ಕಾಣಿಸುತ್ತದೆ. ಇದರಿಂದ ನಿಮ್ಮ ಕರುಳಿನ ಕ್ರಿಯೆಯು  ಸದಾ ನಿಯಮಿತವಾಗುತ್ತದೆ. ನೀವು ಪ್ರತೀ ಸಲ ಮಲ ವಿಸರ್ಜನೆ ಮಾಡಿದಾಗ ದೇಹವು ತ್ಯಾಜ್ಯದಿಂದ ಮುಕ್ತಿ ಪಡೆಯುತ್ತದೆ.

*🔹ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ:* ಪ್ರತೀ ದಿನ ನಾವು ಆಹಾರ ಅಥವಾ ಉಸಿರಾಟದ ಮೂಲಕ ಸೇವನೆ ಮಾಡುವಂತಹ ವಿಷಕಾರಿ ಅಂಶಗಳನ್ನು ನೀರು ಹೊರ ಹಾಕುತ್ತದೆ. ನೀವು ನೀರು ಕುಡಿದು ಮೂತ್ರ ವಿಸರ್ಜನೆ ಮಾಡಿದಾಗ ದೇಹದಲ್ಲಿನ ವಿಷಕಾರಿ ಅಂಶ ಹೊರ ಹೋಗುತ್ತದೆ.

*🔹ಹಸಿವು ಹೆಚ್ಚಿಸುತ್ತದೆ:* ಆಗಾಗ ನಾವು ನೀರು ಕುಡಿಯುವುದರಿಂದ ಮತ್ತು ನಿಮ್ಮ ಕರುಳನ್ನು ಸ್ವಚ್ಛಗೊಳಿಸುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ. ಬೆಳಗ್ಗೆ ಬೇಗನೆ ಹಸಿವಾಗುತ್ತದೆ ಮತ್ತು ಇದರಿಂದ ಸರಿಯಾಗಿ ಉಪಹಾರ ಮಾಡ ಬಹುದು.

*🔹ತಲೆನೋವು ನಿವಾರಿಸುತ್ತದೆ:* ನಮಗೆ ನಿರ್ಜಲೀಕರಣದಿಂದಾಗಿ ಹೆಚ್ಚಿನ ಸಲ ತಲೆನೋವು ಕಾಣಿಸಿ ಕೊಳ್ಳುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಿಡ ಬಹುದು.

*🔹ಕರುಳನ್ನು ಸ್ವಚ್ಛಗೊಳಿಸುತ್ತದೆ:* ಕರುಳಿನಲ್ಲಿ ಸಂಗ್ರಹವಾಗಿರುವ ಜಿಡ್ಡನ್ನು ನೀರು ಸ್ವಚ್ಛಗೊಳಿಸುತ್ತದೆ. ಇದರಿಂದ ದೇಹವು ಪೌಷ್ಠಿಕಾಂಶಗಳನ್ನು ಬೇಗನೆ ಹೀರಿ ಕೊಳ್ಳಲು ನೆರವಾಗುತ್ತದೆ.

*🔹ಚಯಾಪಚಯ ಕ್ರಿಯೆಗೆ ವೇಗ :* ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಸುಮಾರು ಶೇ.24ರಷ್ಟು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆಹಾರವು ಬೇಗನೆ ಜೀರ್ಣವಾಗಿ, ಆಹಾರ ಸಮೀಕರಿಸಿ ತೂಕ ಕಳೆದು ಕೊಳ್ಳಲು ನೆರವಾಗುತ್ತದೆ.

*🔹ರಕ್ತ ಕಣಗಳ ಸೃಷ್ಟಿ:* ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹವು ಕೆಂಪುರಕ್ತದ ಕಣಗಳನ್ನು ವೇಗವಾಗಿ ಉತ್ಪತ್ತಿ ಮಾಡಲು ನೆರವಾಗುತ್ತದೆ. ಇದು ಆಮ್ಲಯುಕ್ತ ರಕ್ತವಾಗಿರುವ ಕಾರಣ ನಿಮ್ಮ ಹೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ.

*🔹 ತೂಕ ಕಳೆದು ಕೊಳ್ಳಲು:* ನೀವು ತೂಕ ಕಳೆದು ಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಗ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಇದರಿಂದ ನೀವು ವಿಷಕಾರಿ ಟ್ರಾನ್ಸ್ ಫ್ಯಾಟ್ಸ್ ನ್ನು ಹೊರ ಹಾಕಲು ನೆರವಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬಿನ ಚಯಾಪಚಯ ಕ್ರಿಯೆಯ ಮಟ್ಟ ಹೆಚ್ಚುತ್ತದೆ.

*🔹ಹೊಳೆಯುವ ತ್ವಚ್ಛೆಗೆ:* ನಿಮ್ಮ ಕರುಳಿನ ಕ್ರಿಯೆ ಸರಿಯಾಗಿ ಇರದ ಸಂದರ್ಭದಲ್ಲಿ ಮೊಡವೆ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ನಿಮ್ಮ ಕರುಳಿನ ಕ್ರಿಯೆ ನಿಯಮಿತವಾಗಿದ್ದರೆ ನಿಮ್ಮ ಮುಖದಲ್ಲಿ ಮೊಡವೆಗಳು ಕಡಿಮೆಯಿರುತ್ತದೆ.

*🔹ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:* ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದು ಕೊಳ್ಳಲು ನೀರು ತುಂಬಾ ಮುಖ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದಾಗ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಸೋಮವಾರ, ಜುಲೈ 11, 2016

ಹೃದಯಾಘಾತ ಎಂದರೇನು?

ರಕ್ತವನ್ನು ದೇಹದ ಇತರ ಭಾಗಗಳಿಗೆ ಪಂಪ್ ಮಾಡುವ ಮೂಲಕ ರವಾನಿಸುವ ಅತ್ಯಂತ ಪ್ರಮುಖವಾದ ಅಂಗವೇ ಹೃದಯ. ಅಪಧಮನಿಗಳು ಎಂದು ಕರೆಯಲಾಗುವ ರಕ್ತನಾಳಗಳ ಮೂಲಕ ಆಮ್ಲಜನಕವನ್ನು ಪಡೆಯುತ್ತದೆ. ರಕ್ತನಾಳಗಳು ಕಟ್ಟಿಕೊಂಡು ರಕ್ತ ಸಂಚಾರಕ್ಕೆ ಅಡಚಣೆಯುಂಟಾದರೆ, ಹೃದಯದ ಸ್ನಾಯುಗಳಿಗೆ ಅಗತ್ಯವಾದ ರಕ್ತದ ಪೂರೈಕೆಯಾಗದೇ ಅವು ಸಾಯುತ್ತವೆ. ಇದನ್ನೇ ಹೃದಯಾಘಾತ ಎನ್ನಲಾಗುತ್ತದೆ. ಹೃದಯದ ಸ್ನಾಯುಗಳಿಗೆ ಉಂಟಾಗುವ ಹಾನಿಗೆ ಅನುಗುಣವಾಗಿ, ಹೃದಯಾಘಾತದ ತೀವ್ರತೆಯನ್ನು ಗುರುತಿಸಲಾಗುತ್ತದೆ. ಸತ್ತ ಹೃದಯದ ಸ್ನಾಯು ಹೃದಯದ ಕಾರ್ಯವೈಖರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ, ಹೃದಯ ಹೆಚ್ಚು ರಕ್ತವನ್ನು ಪಂಪ್ ಮಾಡಲಾಗದು
ಈ ಸ್ಥಿತಿಯನ್ನು ಕಂಜೆಸ್ಟಿವ್ ಹೃದಯ ವೈಫಲ್ಯ ಎನ್ನಲಾಗುತ್ತದೆ. ಸ್ಥಿತಿಯಿಂದ ಉಸಿರಾಟದ ಕೊರತೆ ಮತ್ತು ಪಾದಗಳಲ್ಲಿ ಬೆವರು ಕಾಣಿಸಿಕೊಳ್ಳುತ್ತದೆ.
ಇದು ಏಕೆ ಕಾಣಿಸಿಕೊಳ್ಳುತ್ತದೆ?
ನಾವು ಬೆಳೆದಂತೆಲ್ಲಾ, ದೇಹದ ವಿವಿಧ ರಕ್ತನಾಳಗಳ ಒಳ ಭಾಗದಲ್ಲಿ ಕೊಬ್ಬಿನ ಶೇಖರಣೆಯಾಗಿ, ಕ್ರಮೇಣ ರಕ್ತ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ.  ಈ ಬಗೆಯಲ್ಲಿ ರಕ್ತ ನಾಳ ಕಿರಿದಾಗುವಿಕೆಯನ್ನು ಅಥೆರೋಸ್ಕೆಲೆರೋಸಿಸ್ ಎಂದು ಕರೆಯಲಾಗುತ್ತದೆ.

ಮಹಿಳೆಯರಿಗಿಂತ ಪುರುಷರಲ್ಲಿ ಹೃದಯಾಘಾತ ಹೆಚ್ಚು. ಈಸ್ಟ್ರೋಜನ್ ಮತ್ತು ಪ್ರೋಜೆಸ್ಟ್ರೋನ್ ಗಳೆಂಬ ಮಹಿಳೆಯರ ಲಿಂಗ ಹಾರ್ಮೋನುಗಳ ಪ್ರಭಾವದಿಂದಾಗಿ, ಮಹಿಳೆಯರಲ್ಲಿ ಹೃದಯಾಘಾತ ಕೊಂಚ ಕಡಿಮೆಯೇ ಎನ್ನಬಹುದು.  ಈ ಬಗೆಯ ರಕ್ಷಣಾತ್ಮಕ ಪ್ರಭಾವ ಮಹಿಳೆಯರ ಮುಟ್ಟು ನಿಲ್ಲುವಿಕೆಯವರೆಗೂ ಇರಬಲ್ಲದು.ಏಷ್ಯನ್ನರು ಅದರಲ್ಲೂ ವಿಶೇಷವಾಗಿ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು.

ಈ ಗಂಡಾಂತರಕ್ಕೆ ಕಾರಣಗಳು:
ಧೂಮಪಾನ
ಡಯಾಬಿಟೀಸ್
ಹೆಚ್ಚಿನ ರಕ್ತದೊತ್ತಡ
ಹೆಚ್ಚಿನ ತೂಕ
ಹೆಚ್ಚಿನ ಕೊಲ್ಲೆಸ್ಟ್ರಾಲ್ ಮತ್ತು ಉತ್ತಮ ಕೊಬ್ಬಿನಂಶದ ಕಡಿಮೆ ಪ್ರಮಾಣ
ದೈಹಿಕ ಚಟುವಟಿಕೆಯ ಕೊರತೆ
ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ
ಒತ್ತಡ, ಸತತ ಕೋಪ ಹಾಗೂ ಆತಂಕ
ವಂಶಪಾರಂಪರ್ಯ ಕಾರಣಗಳು

ರೋಗ ಲಕ್ಷಣಗಳೇನು?

ರೋಗ ಲಕ್ಷಣಗಳನ್ನು ಗುರುತಿಸಲು ತುಂಬ ಕಷ್ಟ. ಇವು ಮತ್ಯಾವುದೋ ಆನಾರೋಗ್ಯದ ಲಕ್ಷಣಗಳಂತೆಯೂ ಕಾಣಿಸಬಹುದು. ಆದರೆ, ಪ್ರಮುಖ ಲಕ್ಷಣವೆಂದರೆ, ಎದೆ ಭಾರದೊಂದಿಗೆ ಕೂಡಿದ ಎದೆನೋವು ಮತ್ತು ಉಸಿರಾಟದ ಕೊರತೆ. ಬೆವರುವಿಕೆ, ತಲೆ ಸುತ್ತುವಿಕೆ ಮತ್ತು ಪ್ರಜ್ಞಾಹೀನತೆಯಾಗುವ ಭಾವನೆಗಳು ಇದರ ಲಕ್ಷಣಗಳು. ನೋವು ಮುಖ್ಯವಾಗಿ ಎದೆಯ ಮುಂಭಾಗ ಅಥವಾ ಮೊಲೆ ಮೂಳೆಯ ಹಿಂಭಾಗದಲ್ಲಿರಬಹುದು. ನೋವು ಈ ಭಾಗದಿಂದ ಆರಂಭವಾಗಿ, ಕತ್ತು ಅಥವಾ ಎಡ ಭಾಗಕ್ಕೆ ಹೋಗಬಹುದು. ವಾಂತಿ, ಆತಂಕ, ಕೆಮ್ಮು ಮತ್ತು ನಾಡಿ ಬಡಿತದಲ್ಲಿ ಏರಿಕೆ, 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾಣಿಸಿಕೊಳ್ಳುವ ನೋವು-ಇವು ಇತರ ಲಕ್ಷಣಗಳು. ಕೆಲ ಪ್ರಕರಣಗಳಲ್ಲಿ ರಕ್ತದೊತ್ತಡದಲ್ಲಿ ತೀವ್ರ ಕುಸಿತವುಂಟಾಗಿ ರೋಗಿಯು ನಿಸ್ತೇಜನಾಗಿ ಕಂಡು ಬರಬಹುದು. ಈ ಬಗೆಯ ರಕ್ತದೊತ್ತಡ ಕುಸಿತದಿಂದ ರೋಗಿಯು ಸಾವನ್ನಪ್ಪಬಹುದು.

ಇದನ್ನು ಪತ್ತೆ ಹಚ್ಚುವುದು ಹೇಗೆ?

ವೈದ್ಯರು ವ್ಯಕ್ತಿಯ ವಿವರವಾದ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುವರು. ಆ ಬಳಿಕ ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ದಾಖಲಿಸುವರು. ಹೃದಯದ ಚಟುವಟಿಕೆಯ ದಾಖಲೆಯಾದ ಎಲೆಕ್ಟ್ರೋ ಕಾರ್ಡಿಯೋಗ್ರಾಮ್, ಇಸಿಜಿ ತೆಗೆಯಲಾಗುತ್ತದೆ. ಹೃದಯದ ಬಡಿತದ ದರ, ಬಡಿತದಲ್ಲೇನಾದರೂ ವೈಪರಿತ್ಯಗಳಿವೆ ಮತ್ತು ಹೃದಯದ ಸ್ನಾಯುಗಳಿಗೇನದರೂ ಹಾನಿಯುಂಟಾಗಿದೆಯೇ ಎಂಬ ಮಾಹಿತಿಯನ್ನು ಇಸಿಜಿ ನೀಡುತ್ತದೆ. ಆರಂಭದ ಹಂತದಲ್ಲಿ ಸಾಮಾನ್ಯ ಇಸಿಜಿಯು ಹೃದಯಾಘಾತವನ್ನು ಹೊರೆಗಡಬಲ್ಲದು. ಹೃದಯದ ಸ್ನಾಯುಗಳು ಹಾನಿಗೊಂಡಿರುವುದನ್ನು ರಕ್ತದ ಪರೀಕ್ಷೆಗಳು ಖಚಿತ ಪಡಿಸಲು ಸಹಕಾರಿ. ಹೃದಯದ ಚಟುವಟಿಕೆಯ ಕುರಿತು ಉಪಯುಕ್ತ ಮಾಹಿತಿಯನ್ನು ಅರಿಯಲು ಇಕೋ ಕಾರ್ಡಿಯೋಗ್ರಾಮ್ ಎಂಬ ಸ್ಕ್ಯಾನ್ ಸಹಾಯ ಮಾಡುತ್ತದೆ. ರಕ್ತನಾಳಗಳಲ್ಲಿ ಅಡಚಟಣೆ ಉಂಟಾಗಿರುವುದು ಖಚಿತ ಪಡಿಸುವುದು ಕರೋನರಿ ಆಂಜಿಯೋಗ್ರಾಮ್.

ಹೃದಯಾಘಾತದ ಸಂದರ್ಭದಲ್ಲಿ ರೋಗಿಗೆ ನೀಡುವ ಪ್ರಥಮ ಚಿಕಿತ್ಸೆಯೇನು?

ಹೃದಯಾಘಾತದ ಸಂದರ್ಭದಲ್ಲಿ ತತ್ ಕ್ಷಣ ಚಿಕಿತ್ಸೆ ನೀಡುವುದರಿಂದ ಜೀವನವನ್ನು ಉಳಿಸಬಹುದು. ತಜ್ಞ ವೈದ್ಯರು ಬರುವವರೆಗೂ ರೋಗಿಯನ್ನು ಮಲಗಿಸಿಯೇ ಇರಬೇಕು ಮತ್ತು ಬಿಗಿಯಾದ ಉಡುಪುಗಳನ್ನು ಸಡಿಲಿಸಬೇಕು. ಆಮ್ಲಜನಕದ ಸಿಲಿಂಡರ್ ಲಭ್ಯವಿದ್ದಲ್ಲಿ ಆಮ್ಲಜನಕವನ್ನು ರೋಗಿಗೆ ನೀಡಬೇಕು.ನೈಟ್ರೋಗ್ಲಿಸರೀನ್ ಅಥವಾ ಸಾರ್ಬಿಟ್ರೇಟ್ ಮಾತ್ರೆಗಳು ಲಭ್ಯವಿದ್ದಲ್ಲಿ, ಒಂದೆರಡು ಮಾತ್ರೆಗಳನ್ನು ನಾಲಿಗೆಯ ಕೆಳಗಿಡಬೇಕು. ಆಸ್ಪ್ರಿನ್ ಮಾತ್ರೆಯನ್ನು ಕರಗಿಸಿ ನೀಡಬೇಕು.

ಚಿಕಿತ್ಸೆಯೇನು?

ಹೃದಯಾಘಾತ ಸಂದರ್ಭವು ತುರ್ತು ವೈದ್ಯಕೀಯ ನಿಗಾವನ್ನು ಬೇಡುತ್ತದೆ ಮತ್ತು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು.  ಹೃದಯಾಘಾತವಾದ ಆರಂಭಿಕ ಕೆಲ ನಿಮಿಷ ಅಥವಾ ಕೆಲ ಗಂಟೆಗಳು ಅತ್ಯಂತ ಗಂಡಾಂತರಕಾರಿ.  ಆರಂಭದಲ್ಲಿಯೇ ಪತ್ತೆಯಾದಾಗ, ಸೂಕ್ತವಾದ ಔಷಧಿಗಳ ಮೂಲಕ ನೀಡಿ ರಕ್ತನಾಳಗಳಲ್ಲಿನ ರಕ್ತದ ಕರಣೆಯನ್ನು ಕರಗಿಸಬಹುದು. ಹೃದಯದ ಬಡಿತದ ವೈಪರಿತ್ಯವನ್ನು ಗಮನಿಸಿ, ಸೂಕ್ತ ಚಿಕಿತ್ಸೆ ನೀಡಬಹುದು.  ರಕ್ತದೊತ್ತಡ ಜಾಸ್ತಿಯಿದ್ದರೆ, ಅದನ್ನು ಕಡಿಮೆ ಮಾಡಲು ಸೂಕ್ತ ಚಿಕಿತ್ಸೆ ನೀಡಬೇಕು. ನಿರ್ದಿಷ್ಟವಾದ ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.  ರೋಗಿಯ ವಯಸ್ಸು, ಹೃದಯಾಘಾತದ ಪ್ರಮಾಣ, ಹೃದಯದ ಸ್ನಾಯುಗಳಿಗೆ ಆಗಿರುವ ಹಾನಿಯ ಪ್ರಮಾಣ ಮತ್ತು ರಕ್ತನಾಳದಲ್ಲಿ ಕಾಣಿಸಿಕೊಂಡಿರುವ ಅಡಚಣೆಗಳ ಮೇಲೆ ನಿರ್ಧರಿಸಲಾಗುತ್ತದೆ.  ಅನೇಕ ಸಂದರ್ಭದಲ್ಲಿ ಈ ಅಡಚಣೆಗಳನ್ನು ನಿವಾರಿಸಲು ಕೆಲ ನಿರ್ದಿಷ್ಟ ತಂತ್ರಗಳನ್ನು ಬಳಸಲಾಗುತ್ತದೆ. ಕರೋನರಿ ಅಂಜಿಯೋಪ್ಲಾಸ್ಟಿ, ಬಲೂನುಗಳ ಮೂಲಕ ರಕ್ತನಾಳಗಳನ್ನು ಹಿಗ್ಗಿಸುವ ತಂತ್ರ ಅಥವಾ ಕರೋನರಿ ಬೈಪಾಸ್ ಸರ್ಜರಿ ತಂತ್ರಗಳ ಮುಖಾಂತರ ಅಡಚಣೆಗಳನ್ನು ನಿವಾರಿಸಬಹುದು.

ಹೃದಯಾಘಾತಗಳನ್ನು ತಡೆಯುವುದು ಹೇಗೆ?

ಹೃದಯಾಘಾತಗಳಿಗೆ ಒಳಗಾಗುವ ಸಾಧ್ಯತೆಯಿರುವವರು ಈ ಕೆಳಕಂಡ ಕ್ರಮವನ್ನು ಕೈಗೊಳ್ಳಬೇಕು: ಜೀವನಶೈಲಿಯಲ್ಲಿ ಬದಲಾವಣೆ
ಆಹಾರವು ಆರೋಗ್ಯಪೂರ್ಣವಾಗಿದ್ದು, ಕೊಬ್ಬು ಮತ್ತು ಉಪ್ಪಿನ ಪ್ರಮಾಣ ಕಡಿಮೆಯಿರಬೇಕು. ನಾರಿನಂಶ ಹಾಗೂ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕು.
ತೂಕ ಹೆಚ್ಚಿರುವವರು, ತೂಕ ಇಳಿಸಬೇಕು.
ದೈಹಿಕ ಚಟುವಟಿಕೆ, ಕಸರತ್ತುಗಳನ್ನು ದಿನಂಪ್ರತಿ ಮಾಡಬೇಕು.
ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಡಯಾಬಿಟೀಸ್, ಹೆಚ್ಚಿನ ರಕ್ತದೊತ್ತಡ ಹಾಗೂ ಹೆಚ್ಚಿನ ಕೊಲ್ಲೆಸ್ಟ್ರಾಲ್ ಹೊಂದಿರುವವರು ಸೂಕ್ತವಾದ ಔಷಧವನ್ನು ಸೇವಿಸುವ ಮೂಲಕ ಈ ಕಾಯಿಲೆಗಳನ್ನು ಹತೋಟಿಯಲ್ಲಿಡಬೇಕು.

ಮೂಲ :ವಿಕಾಸ್ ಪೀಡಿಯಾ