ಜುಮ್ಮಾ ಪ್ರವಚನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಜುಮ್ಮಾ ಪ್ರವಚನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಏಪ್ರಿಲ್ 14, 2017

ಮುಸ್ಲಿಮರು ಜಗತ್ತಿನಾಧ್ಯಂತ ಬೀದಿಯಲ್ಲೇ ಇದ್ದಾರೆ.

ಮುಸ್ಲಿಮರು ಜಗತ್ತಿನಾಧ್ಯಂತ ಬೀದಿಯಲ್ಲೇ ಇದ್ದಾರೆ.ಬೀದಿಯಿಂದ ಎತ್ತುವ ಕಾರ್ಯ ಆಗಬೇಕು:- ಸಿದ್ದೀಕ್ ಜಲಾಲಿ*

ರಾಜಕಾರಣಿಗಳ ಮತ್ತು ಪ್ರತಿಭಟನೆಗಳ ಹಿಂದೆ ಹಾಕಿದ ಹೆಜ್ಜೆ ಮತ್ತು ವ್ಯಯಿಸಿದ ಹಣ ಹಾಗೂ ಸಮಯವನ್ನು ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಖರ್ಚುಮಾಡಿದ್ದರೆ ನಮ್ಮ ಸಮುದಾಯ ಇಂದು ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ದಿಯ ಹಂತದಲ್ಲಿರುತ್ತಿತ್ತು ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು ಅವರಿಂದು ಜುಮ್ಮಾ ಭಾಷಣದಲ್ಲಿ ಮಾತನಾಡುತ್ತಾ ಕೆಲವರು ದ್ವೇಷ ಮತ್ತು ಹತಾಶೆಯ ಹೋರಾಟಗಳಿಗೆ ಧರ್ಮ ಮತ್ತು ಇಸ್ಲಾಮಿನ ಬ್ರಾಂಡ್ ಹಾಕುತ್ತಾರೆ.ಇಸ್ಲಾಮಿನಲ್ಲಿ ಮಹತ್ವ ಇರುವುದು ಅಲ್ಲಾಹನ ಮಾರ್ಗದಲ್ಲಿ ಮಾನವ ಕಲ್ಯಾಣ ಮತ್ತು ಜಗತ್ತಿನ ಶಾಂತಿಸ್ಥಾಪನೆಗೆ ಇರುವ ಹೋರಾಟಕ್ಕೆ ಎಂದವರು ಹೇಳಿದರು.

ಒಂದು ಕಾಲದಲ್ಲಿ ಮಸೀದಿಗಳನ್ನು ಕಾಣುವಾಗ ಅನ್ಯ ಧರ್ಮೀಯರು  ದೂರದಲ್ಲಿ ಭಕ್ತಿಯಿಂದ ಚುಂಬಿಸುತ್ತಿದ್ದರು ಇಂದು ಅದು ಮಾಯವಾಗಿದೆ. ಇದಕ್ಕೆ ಕಾರಣ ಮಸೀದಿಯಲ್ಲ ಹೊರತಾಗಿ ಆ ಮಸೀದಿಗೆ ಸೂಟು ಮತ್ತು ಪೈಜಾಮು ಹಾಕಿ ಬರುವ ಜನರಲ್ಲಿ ನಶಿಸಿ ಹೋಗುತ್ತಿರುವ ತಖ್ವಾ ಆಗಿದೆ. *ಇತ್ತೀಚೆಗೆ ಒಬ್ಬರು ಹೇಳಿಕೆ ಕೊಟ್ಟರು, ಮುಸ್ಲಿಮರು ಜನಾಂದೋಲನಕ್ಕಾಗಿ ಬೀದಿಗೆ ಬರಬೇಕು ಎಂದು.ನಾನು ಹೇಳುತ್ತೇನೆ  ಮುಸ್ಲಿಮರು ಈಗಾಗಲೇ ಬೀದಿಯಲ್ಲೇ ಇದ್ದಾರೆ ಎಂದು.ಉತ್ತರ ಭಾರತದಲ್ಲಿ ಅದೆಷ್ಟೋ ನಾಡುಗಳಿಂದ ಮುಸ್ಲಿಮರು ಬೀದಿಗೆ ಬಂದಿದ್ದಾರೆ.ಕರ್ನಾಟಕದ ಬಿಜಾಪುರ ಹಾಗೂ ಇನ್ನಿತರ ಸ್ಲಂಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸ್ಥಾನವಿಲ್ಲದೆ ಮುಸ್ಲಿಮರ ಭವಿಷ್ಯ ಬೀದಿಯಲ್ಲಿದೆ.ನಮ್ಮ ಕರಾವಳಿಯಲ್ಲಿ ಮೂವತ್ತು ವರ್ಷ ದಾಟಿಯೂ ಮದುವೆಯಾಗದೆ ಉಳಿದಿರುವ ಹೆಣ್ಣು ಮಕ್ಕಳು ಇದ್ದಾರೆ ಎನ್ನುವುದು ಸಮುದಾಯದ ಪ್ರತಿಷ್ಟಿತರ ಮಾನವನ್ನೂ ಬೀದಿಪಾಲಾಗಿಸಿದೆ ಎಂದ ಅವರು ನಾವು ಬೀದಿಯಿಂದ ಮೇಲೆದ್ದು ಬರಬೇಕು.*ಅದಕ್ಕೆ ಬೇಕಾಗಿರುವುದು ಸಮುದಾಯ ಎಂಬ ಆತ್ಮಾಭಿಮಾನ ಹಾಗೂ ಅಲ್ಲಾಹನ ಮೇಲೆ ತವಕ್ಕುಲ್ ಮಾಡಿದ ಬಲವಾದ ಇಮಾನ್ ಆಗಿದೆ ಎಂದರು.

ಒಂದು ಯುದ್ದದಲ್ಲಿ  ಹಝ್ರತ್ ಅಲೀ
ರವರು ಒಬ್ಬ ಮುಶ್ರಿಕನನ್ನು ನೆಲಕ್ಕೆ ತಳ್ಳಿ ಆತನ ಎದೆಗೆ ಚುಚ್ಚಲು ಖಡ್ಗವನ್ನು ಎತ್ತಿದರು.ಆ ಕ್ಷಣ ಆ ಮುಶ್ರಿಕ್ ಅಲೀ ರವರ ಮುಖಕ್ಕೆ ಕ್ಯಾಕರಿಸಿ ಉಗಿದನು.ತಕ್ಷಣ ಅಲೀ ತಲ್ವಾರನ್ನು ಹಿಂದಕ್ಕೆ ಎಳೆದರು ಮತ್ತು ಆ ವ್ಯಕ್ತಿಯನ್ನು ಕೊಲ್ಲದೇ ಬಿಟ್ಟರು.ಆಗ ಉಳಿದ ಸಹಾಬಿಗಳು ಕೇಳಿದರು.ಅಮೀರುಲ್ ಮುಹ್ಮಿನೀನ್ ಯಾಕೆ ಹಾಗೆ ಮಾಡಿದಿರಿ ಎಂದು.ಅದಕ್ಕೆ
ಹೀಗೆ ಹೇಳಿದರು. *ನಾನು ಹಝ್ರತ್ ಅಲೀ, ಅದುವರೆಗೂ ಅಲ್ಲಾಹನ ಧರ್ಮಕ್ಕಾಗಿ ರಹ್ಮಾನಿನ ತೃಪ್ತಿಯನ್ನು ಸಂಪಾದಿಸಲು ಯುದ್ದ ಮಾಡಿದ್ದೆ.ಆದರೆ ಆ ವ್ಯಕ್ತಿ ನನ್ನ ಮುಖಕ್ಕೆ ಉಗಿದ ನಂತರ ನಾನು ಆ ವ್ಯಕ್ತಿಯನ್ನು ಕೊಂದರೆ ಅದು ನಾನು ಆ ವ್ಯಕ್ತಿ ಉಗಿದ ಕಾರಣಕ್ಕೆ ದ್ವೇಷದಿಂದ ಕೊಂದೆ ಎಂಬ ಅಪವಾದ ಸೃಷ್ಟಿಸಬಹುದು ಅಥವಾ ನನ್ನ ಆತ್ಮವು ನನ್ನಲ್ಲಿ ಅದನ್ನು ಮತ್ತೇ ಮತ್ತೇ ಕೇಳಬಹುದು ಎಂದರು.* ಅದೇ ರೀತಿ ಇನ್ನೊಂದು ಯುದ್ದದಲ್ಲಿ ಸಹಾಬತ್ತ್ ಒಬ್ಬರು ಕೋಪದಿಂದ ತನ್ನ ಕೈಯನ್ನೇ ಕಡಿದರು ಮತ್ತು ಆವೇಶದಿಂದ ಶತ್ರುಗಳೊಂದಿಗೆ ಹೋರಾಡಿದರು .ಇದನ್ನು ಕಂಡು ಪ್ರವಾದಿ (ಸ) ಹೇಳಿದರು ಆ ವ್ಯಕ್ತಿ ನರಕವನ್ನು ಸೇರುವನು ಎಂದು.ಸಹಾಬತ್ತ್ ಗೆ ಆಶ್ಚರ್ಯವಾಯಿತು ಯಾಕಾಗಿ ಎಂದು ಅವರು ನಬಿಯವರಲ್ಲಿ ಪ್ರಶ್ನಿಸಿದರು ಅದಕ್ಕೆ ಪ್ರವಾದಿ ಹೇಳಿದರು ಆ ವ್ಯಕ್ತಿ ತನ್ನ ಶಕ್ತಿ ಮತ್ತು ಶೌರ್ಯದ ಬಗ್ಗೆ ಅಭಿಮಾನ ಪಡುತ್ತಿದ್ದಾನೆ.ಅವನು ಅಹಂಕಾರವನ್ನು ಹೃದಯ ತುಂಬಿಸಿದ್ದಾನೆ.ಅವನ ಹೋರಾಟವು ಅಲ್ಲಾಹನಿಗೆ ಬೇಕಾಗಿಲ್ಲ.ಅಲ್ಲಾಹನಿಗೆ ಬೇಕಾಗಿರುವುದು ತಖ್ವಾ ಇರುವ ನಿಷ್ಕಲ್ಮಶ ಹೋರಾಟವಾಗಿದೆ ಎಂದು ಖತೀಬರು ಚರಿತ್ರೆಯನ್ನು ಉಲ್ಲೇಖಿಸಿ ಹೇಳಿದರು.

*ನಮ್ಮ ನಂತರದ ತಲೆಮಾರು ಕೇಳಬಹುದು ನಮ್ಮ ಪೂರ್ವಜರ ಇತಿಹಾಸವೇನು ?  ಅವರ ಸಾಧನೆಗಳೇನು ? ಆಗ ನಾವು ಅದೇ ಟಿಪ್ಪುಸುಲ್ತಾನ್,ಮೌಲಾನ ಅಜಾದ್,ಅಬ್ದುಲ್ ಕಾಲಾಂ ರ ಹೆಸರನ್ನೂ ಹಾಗೇ ಚಾರಿತ್ರಿಕ ಮಿನಾರ್ ಮತ್ತು ಗುಂಬಝ್ ಗಳನ್ನು ತೋರಿಸುವುದಲ್ಲ.ಅದಕ್ಕಾಗಿ ನಮ್ಮಲ್ಲಿ ಚರಿತ್ರೆಗಳನ್ನು ನಿರ್ಮಿಸುವ ಒಂದು ಬೃಹತ್ತ್ ಜನಕೂಟ ಇರಬೇಕು.ವಿಜ್ನಾನ,ರಾಷ್ಟ್ರೀಯ ಸುರಕ್ಷೆ,ರಾಷ್ಟ್ರೀಯ ನಾಗರಿಕ ಸೇವೆಯಲ್ಲಿ ತೊಡಗಿಸಿ ದೇಶದ ಹೆಸರನ್ನು ಜಗತ್ತಿನಲ್ಲಿ ಬೆಳಗಿಸುವ ಪ್ರತಿಭೆಗಳು ಬೇಕು.ಅವರಿಗೆ ಬೇಕಾದ ಸೌಲಭ್ಯ ಮತ್ತು ಸಾಧನಾನುಕೂಲತೆಯನ್ನು ನಾವು ಮಾಡಬೇಕು.* ನಮಗೆ ಬೇಕಾಗಿರುವುದು ಇನ್ ಪ್ಲ್ಯುಯೆಂನ್ಸ್ ಮಾಡುವ ನಾಯಕರಲ್ಲ ಹೊರತಾಗಿ ಇಚ್ಚಾಶಕ್ತಿಯಿಂದ ಸಮುದಾಯವನ್ನು ಎಲ್ಲಾ ಕ್ಷೇತ್ರದಲ್ಲಿ ಪ್ರಬಲರನ್ನಾಗಿ ಮಾಡುವ ಸೌಲಭ್ಯ ಕಲ್ಪಿಸುವ ನಾಯಕರಾಗಿದ್ದಾರೆ.ನಮ್ಮ ಇಮಾನ್ ರಾಷ್ಟ್ರೀಯ ಪಕ್ಷದ ಮೇಲೆ ಮತ್ತು ಭರವಸೆ ಪಕ್ಷದ ನಾಯಕನ ಮೇಲೆ ಇರುವುದು ನಾವು ಕಾಣುತ್ತೇವೆ.ಇದು ನಮ್ಮ ಈಮಾನ್ ಕಲುಷಿತಗೊಳಿಸಬಹುದು ಮತ್ತು ನಮ್ಮನ್ನು ದುರ್ಬಲರನ್ನಾಗಿಸಬಹುದು ಎಂದ ಖತೀಬರು ನಮ್ಮೊಂದಿಗೆ ಅಲ್ಲಾಹನಿದ್ದಾನೆ.ಆತ್ಮರಕ್ಷಣೆ ತಿರುಗೇಟನ್ನು ನಮ್ಮ ದೇಶದ ಸಂವಿಧಾನ ಮತ್ತು ಇಸ್ಲಾಮ್ ಕೂಡ ಅಂಗೀಕರಿಸುತ್ತದೆ.ತನ್ನ ಮರಿಗಳ ಮೇಲೆ ದಾಳಿ ಮಾಡಿದಾಗ ಕೋಳಿಯು ಪ್ರತಿಕ್ರಿಯಿಸುತ್ತದೆ.ಇದನ್ನೆ ಕುರ್ ಆನ್ ಹೇಳುತ್ತದೆ.ನಿಮ್ಮ ಮೇಲೆ ಆಕ್ರಮಣ ಮಾಡುವ ಮತ್ತು ಮನೆಯಿಂದ ಹೊರಗೆ ಹಾಕುವ ಜನರೊಂದಿಗೆ ಹೋರಾಟ ಮಾಡಿ ಎಂದು.ಹಾಗಾಗಿ ನಾವು ಜನರಿಗೆ ಶಾಂತಿ ಮತ್ತು ಸಮಾಧಾನವನ್ನು ಭೋದಿಸಿ ನಮ್ಮ ಸ್ವಭಾವವನ್ನು ಉತ್ತಮಗೊಳಿಸಿ ಬದುಕೋನ.ನಮ್ಮ ಜೀವ,ಸಂಸಾರ,ಸೊತ್ತು ಮತ್ತು ಅಸ್ಥಿತ್ವದ ವಿರುದ್ದ ಬರುವ ಎಲ್ಲಾ ಆತಂಕವನ್ನು ಅಲ್ಲಾಹನ ಮೇಲೆ ಭರವಸೆ ಇಟ್ಟು ನಿವಾರಿಸುವ ಎಂದು ಖತೀಬರು ಹೇಳಿದರು.
🖋
*ಹನೀಫ್ ಪುತ್ತೂರು*
   *ಸುನ್ನೀಟುಡೇ*

ಪೋಲೀಸ್ ಇಲಾಖೆ ಸೇರಿ ಫಿಟ್ನೆಸ್ ಮಾಡಿ

ಪೋಲೀಸ್ ಇಲಾಖೆ ಸೇರಿ ಫಿಟ್ನೆಸ್ ಮಾಡಿ.ಬ್ಯಾಟ್ ಹಿಡಿಯುವ ಕೈಯಲ್ಲಿ ಲಾಠಿ ಹಿಡಿಯಿರಿ ಸಂವಿಧಾನದ ಸೇವೆ ಅಲ್ಲಾಹನ ಬಳಿ ಪುಣ್ಯ ಇರುವಂತದ್ದು :-
ಅಜೀಜ್ ದಾರಿಮಿ ಚೊಕ್ಕಬೆಟ್ಟು*

ನಬಿ (ಸ) ರವರ ಹದೀಸೊಂದನ್ನು ಇಬ್ನು ಮಾಜಃ (ರ)1298 ವರದಿ ಮಾಡುತ್ತಾರೆ. ಅನ್ಸಾರಿ ಸಹಾಬಿಯೋರ್ವರು ನಬಿ(ಸ) ಬಳಿ ಬಂದು ಬೇಡುತ್ತಾರೆ.ಆಗ ಪ್ರವಾದಿವರ್ಯರು ನಿನ್ನ ಮನೆಯಲ್ಲಿ ಏನಿದೆ ? ಸ್ವಹಾಬಿವರ್ಯರು ಹೇಳುತ್ತಾರೆ ನಮ್ಮಲ್ಲಿ ಒಂದು ಹೊದಿಕೆ ಇದೆ.ಅದರ ಅರ್ಧ ಭಾಗ ಹಾಸಿದರೆ ಇನ್ನೊಂದು ಭಾಗವನ್ನು ಹೊದ್ದು ಕೊಳ್ಳುತ್ತೇವೆ.
ಮತ್ತೊಂದು ನೀರು ಕುಡಿಯೋ ಪಾತ್ರೆ. ಪ್ರವಾದಿ ಸ ರವರು ಅವೆರಡನ್ನೂ ತರಿಸಿ ಹರಾಜು ಮಾಡುತ್ತಾರೆ. ಎರಡು ದಿರ್ಹಂ ಗೆ ಸ್ವಹಾಬಿಯೋರ್ವರು ಖರೀದಿಸುತ್ತಾರೆ.ಆ ಎರಡು ದಿರ್ಹಮನ್ನು ಅನ್ಸಾರಿಯ ಕೈಗಿತ್ತು ನೀವು ಹೋಗಿ ಕಟ್ಟಿಗೆಯನ್ನು ಕಾಡಿಂದ ತಂದು ವ್ಯಾಪಾರ ಮಾಡಿ, ಹದಿನೈದು ದಿನಗಳ ಕಾಲ ಈ ಕಡೆ ಬರಬಾರದು.ಹದಿನೈದು ದಿನ ಬಿಟ್ಟು ಅವರು ಮರಳುತ್ತಾರೆ ಅವರ ಕೈಯಲ್ಲಿ ಹತ್ತು ದಿರ್ಹಮುಗಳಿರುತ್ತವೆ.ನಬಿ ಸ ಹೇಳುತ್ತಾರೆ. ನಿಮಗೆ ಬೇಕಾದ ಆಹಾರ ಮತ್ತು ಬಟ್ಟೆಯನ್ನು ಖರೀದಿಸಿ.
*ನೀವು ಯಾರೊಂದಿಗೂ ಯಾಚಿಸಬೇಡಿ ಅದು ಅಂತ್ಯ ದಿನದಲ್ಲಿ ನಿಮ್ಮ ಮುಖದ ಕಪ್ಪು ಚುಕ್ಕೆಯಾಗಿರುತ್ತದೆ.*ಈ ಹದೀಸಿನಲ್ಲಿ ಮನವರಿಕೆ ಮಾಡಬೇಕಾದ ವಿಷಯ ಮೊದಲನೆಯದು ನಾವು ಯಾವುದೇ ಸಂಕಷ್ಟಕ್ಕೊಳಗಾದರೂ ದುಡಿದು ತಿನ್ನಬೇಕೆನ್ನುದಾಗಿದೆ. ಇದರಲ್ಲಿ ಅಡಗಿದ ಅದ್ಭುತವಾದ ಇನ್ನೊಂದು ಸಂದೇಶ ನಮ್ಮ ಸಮಸ್ಯೆಗೆ ನಮ್ಮಲ್ಲೇ ಪರಿಹಾರವಿದೆ ಎನ್ನುವುದಾಗಿದೆ.ನಾವು ಹಾಗಲ್ಲ ಒಂದು ಪರಿಹಾರಕ್ಕೆ ಹೋಗಿ ಹತ್ತು ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವವರಾಗಿರುತ್ತೇವೆ.ಲೋನ್ ಸಿಗುತ್ತದೆಂದು ಬ್ಯಾಂಕಿಂದ ಸಾಲ ಮಾಡಿ ಮನೆ ಕಟ್ಟಿ ಮನೆ ಮತ್ತು ಇರೋ ಜಾಗ ಕಳಕೊಳ್ಳುತ್ತೇವೆ.ಲೋನಲ್ಲಿ ಕಾರು ತಗೊಂಡು ನಾಲ್ಕು ತಿಂಗಳು ಸುತ್ತಾಡಿ ಕಾರಿನೊಂದಿಗೆ ಸ್ವಂತ ಮನೆ ಕಳಕೊಂಡು ಬಾಡಿಗೆ ಮನೆಯಲ್ಲಿ ಕೂರುವವರು!.ಬಂಗಾರ ಅಡವಿಟ್ಟು ಒಡವೆಯನ್ನೇ ಹಾರಜಿಗಿಡುವವರು!ಆದರೆ ನಾವು ಹಾಗಾಗಬಾರದು ಎರಡು ರುಪಾಯಿಗೆ ಹತ್ತು ರುಪಾಯಿ ಸಂಪಾದನೆ ಮಾಡಬೇಕು.ಇದು ನಬಿ ಸ ಆದರ್ಷ.ನಾನು ಇದನ್ನು ಯಾಕೇ ಹೇಳುತ್ತೇನೆಂದರೆ ನಮಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.ನಮ್ಮ ಸಮಸ್ಯೆಗೆ ನಮ್ಮಲ್ಲೇ ಪರಿಹಾರ ಕಾಣಬೇಕು ಅದು ಇರೋ ಹೊದಿಕೆ ಮಾರಿಯಾದರೂ ಸರಿ!
ನಾವು ಬುದ್ದಿವಂತಿಕೆ, ತಂತ್ರಗಾರಿಕೆ ,ವಿವೇಕದಿಂದ ವರ್ತಿಸಬೇಕು.

ಅಹ್ಮದ್ ಕುರೇಶಿ ವಿಷಯದಲ್ಲಿ ಏನೆಲ್ಲಾ ಕೋಲಾಹಲ ನಡೆಯಿತು. ಅದರ ಹಿಂದೆ ಅನೇಕ ವಿಷಯಗಳನ್ನು ನಾವು ಮನವರಿಕೆ ಮಾಡಬೇಕು.ಅದೇನೆಂದರೆ ಯಾಕೆ ಈ ರೀತಿ ದೌರ್ಜನ್ನ,ಅನ್ಯಾಯ ಅಕ್ರಮ ನಡೆಯುತ್ತದೆ ನಮಗೆ ಯಾಕೆ ಇದಕ್ಕೆ ಪರಿಹಾರ ಕಾಣಲಾಗುತ್ತಿಲ್ಲ.ಕುರೇಶಿ ವಿಚಾರ ಮಾತ್ರವಲ್ಲ ಮೊನ್ನೆ ಬಿಡುಗಡೆಯಾದ ಭಟ್ಕಳದ ಶಬೀರ್ ಮೌಲವೀ ಬಗ್ಗೆ ಯಾರಿಗೂ ಗೊತ್ತಿಲ್ಲ.ಒಂಬತ್ತು ವರ್ಷ ಹಿಂದೆ ಪೂನಾದ ಮಸೀದಿಯಲ್ಲಿ ಇಮಾಮ್ ಆಗಿ ಕೆಲಸ ಮಾಡುತ್ತಿದ್ದ ಮೌಲವೀಯನ್ನು ಟೆರರಿಸ್ಟ್ ಎಂಬ ಕಾರಣ ಹೇಳಿ ಬಂಧಿಸಿ ಇನ್ನಿಲ್ಲದ ಹಿಂಸೆ ನೀಡಿ ನಿರಪರಾಧಿ ಎಂದು ಬಿಡುಗಡೆಯಾಗಿ ಬಂದದ್ದು  ಪತ್ರಿಕೆಯಲ್ಲಿ ಒಂದು ಚಿಕ್ಕ ವರದಿ ಮಾತ್ರವಾಗಿತ್ತು.ಎಲ್ಲಿ ನಾವು ಎಡವುತ್ತಿದ್ದೇವೆ? ಎಲ್ಲಿ ಸೋಲುತ್ತಿದ್ದೇವೆ?ಪೋಲೀಸರಿಂದ ಅನ್ಯಾಯವಾದರೆ ಇಡೀ ಪೋಲೀಸ್ ವ್ವವಸ್ಥೆಯನ್ನೂ ಅಪರಾಧಿಯಾಗಿಸಬಾರದು.ಅದು ದೊಡ್ಡ ಅನಾಹುತವಾದಿತು.ಕಾರಣ ನಮ್ಮಲ್ಲಿ ಕಾನೂನು ಸುವ್ಯವಸ್ಥೆ ಇರೋದ್ರಿಂದ ಕೊರಳಿಗೆ ಕೈಗೆ ಇಡೀ ದೇಹಕ್ಕೆ  ಕಿಲೋ ಲೆಕ್ಕ ಒಡವೆ ಹಾಕಿ ನಮ್ಮ ಅಕ್ಕ ತಂಗಿಯರು ನಡೆದಾಡುತ್ತಾರೆ.ಕೋಟಿಗಟ್ಟಲೆ ವ್ಯಾಪಾರ ವಹಿವಾಟು ವಸ್ತು ಬಝಾರಲ್ಲಿ ಹಾಕಿ ಬೀಗ ಹಾಕಿ ಮನೆಯಲ್ಲಿ ಆರಾಮವಾಗಿರುತ್ತೇವೆ.ನಮ್ಮ ಮನೆಯಲ್ಲಿ ಮಡದಿ ಮಕ್ಕಳನ್ನು ಬಿಟ್ಟು  ಗಲ್ಪ್ ಗೆ ಹೋಗಿ ದುಡಿಯುತ್ತೇವೆ. ಇದು ಸುಖಾಸುಮ್ಮನೆ ಲಭಿಸೋದಲ್ಲ ಸುವ್ಯವಸ್ಥೆ ಕಾಪಾಡೋ ಪೋಲಿಸರ ಕಾರಣದಿಂದ ಮಾತ್ರ ಸಾಧ್ಯವಾಗುತ್ತದೆ. ಆ ಇಲಾಖೆಯನ್ನು ದೂರಕೂಡದು. ಯಾರು ಅನ್ಯಾಯ ಮಾಡುತ್ತಾರೋ ಅವರನ್ನು ಮಾತ್ರ ಕಾನೂನಿನ ಕೈಗೆ ಒಪ್ಪಿಸಬೇಕು. ಅದಕ್ಕಾಗಿ ಕಾನೂನಿನ ಬಲದೊಂದಿಗೆ ಹೋರಾಡಬೇಕು.

law and order ದೊಡ್ಡ ವಿಚಾರ!
ನಮ್ಮ ಊರಲ್ಲಿ ಶಾಂತಿ ಸಮಧಾನ ತರಲು ಸಾಧ್ಯವಿರುವ ಇಲಾಖೆ  ಪೋಲೀಸ್ ಇಲಾಖೆ ಎಲ್ಲ ಅನೈತಿಕ ಚಟುವಟಿಕೆಗಳನ್ನು ಮಟ್ಟ ಹಾಕಲು ಇರುವ ಇಲಾಖೆ ಅದು.ಗಾಂಜಾ ಅಮಲು ಪದಾರ್ಥ ದಂಧೆಗೆ ಕಡಿವಾಣ ಹೇರಲು ಅದಕ್ಕೆ ಸಾಧ್ಯ.
*ನಾನು ಪ್ರಶ್ನೆ ಮಾಡತ್ತೇನೆ ಯಾಕೆ ನಮಗೆ ಆ ಇಲಾಖೆಯಲ್ಲಿ ಸೇವೆ ಸಲ್ಲಿಸಬಾರದು.?ದೊಡ್ಡ ಸಂಖ್ಯೆಯಲ್ಲಿ ಯಾಕೆ ಸೇರಬಾರದು?*
*ಲಾಠಿಯಿಂದ ಪೆಟ್ಟು ತಿನ್ನುವವರು ಯಾಕೆ ಲಾಠಿ ಹಿಡಿಯಬಾರದು?ಕೆಲವರು ಹೇಳ್ತಾರೆ ನಮಗೆ ಅಲ್ಲಿ ಕೆಲಸ ಸಿಗಲ್ಲ ಅಂತ. ನಮ್ಮ ಹೋರಾಟ ಅಲ್ಲಿ ನಡೆಯಬೇಕು ಮುಸ್ಲಿಮರಿಗೆ ಸಿಗಬೇಕಾದ ಅರ್ಹವಾದ ಸ್ಥಾನಮಾನ, ಪ್ರಾತಿನಿಧ್ಯ ಕ್ಕಾಗಿ ಹೋರಾಡಬೇಕು.*ಪೋಲೀಸ್ ಇಲಾಖೆಯಲ್ಲ್ಲಿ ಮುಸ್ಲಿಮರ ಸಂಖ್ಯೆ ಎಷ್ಟಿದೆ? ನಮ್ಮ ದೇಶದಲ್ಲಿ ಸುಮಾರು ಹದಿನೇಳು ಲಕ್ಷ ಪೋಲೀಸರಿದ್ದರೆ,ಒಂದು ಲಕ್ಷ ಮಂದಿಗೆ  137 ರಷ್ಟು ಪೋಲೀಸರಿದ್ದಾರೆ.2015 ರ ಲೆಕ್ಕ ಪ್ರಕಾರ 17,31537 ಪೋಲೀಸರಲ್ಲಿ ಮುಸ್ಲಿಮರು 1,08,602. 2005 ರಲ್ಲಿ 13 ಲಕ್ಷ ಪೋಲೀಸರಲ್ಲಿ ಮುಸ್ಲಿಮರಿದ್ದುದು 1,00,634?
ಕರ್ನಾಟಕದಲ್ಲಿ  74,699 ಪೋಲೀಸರಲ್ಲಿ ಮುಸ್ಲಿಮರ ಪ್ರಾತಿನಿಧ್ಯ 4766 ಶೇಕಡಾ 6.04%.ಕರ್ನಾಟಕದಲ್ಲಿ ಈಗ ಕಾರ್ಯಾಚರಿಸುವ IAS.  ಅಧಿಕಾರಿಗಳು ಕೇವಲ ಹದಿಮೂರು.
ಶಮೀಮ್ ಬಾನು,ಮುಹಮ್ಮದ್ ಸನಾವುಲ್ಲಾ,ಜವಾದ್ ಅಕ್ತರ್,ಝಮೀರ್ ಪಾಶ,ಎಲ್ ಕೆ ಅತಿಕ್ರಮಣ,ಏ ಸಾದಿಲ್ವಾರು,ಅಂಜುಮ್ ಫರ್ವೀಝ್ ಎಮ್ ಮುಹ್ಸಿನ್,ಅಬ್ದುಲ್ ಕಲಾಂ,ಸಲ್ಮಾ,ಸಯ್ಯಿದ್ ಸಲೀಂ,ಅನ್ವರ್ ಪಾಶಾ, ಜಾಫರ್ ಪಿ ಸಿ.IPS ಅಧಿಕಾರಿಗಳು ಕೇವಲ ಎಂಟು ಮಾತ್ರ? ಏ ಆರ್ ,ಇನ್ಫೆಂಟ್,ಜಿ ಎಂ ಹಯಾತ್,ಹಫೀಝ್,ನಿಸಾರ್ ಅಹ್ಮದ್,ಮುಹಮ್ಮದ್ ಎಸ್,ವಾಝಿರ್ ಅಹ್ಮದ್, ಅಬ್ದುಲ್ಲಾ ಸಲೀಂ, ಉಲ್ಫತ್ ಹುಸೇನ್?
ಆರು ಕೋಟಿ ಕನ್ನಡಿಗರಗಲ್ಲಿ ಶೇಕಾಡಾ %13 ರಷ್ಟು ಮುಸ್ಲಿಮರಿಗಾಗಿ ಇರುವ ಪ್ರಾತಿನಿಧ್ಯ? ನಾವು ಆಲೋಚಿಸುತ್ತಿಲ್ಲ!74,699 ಪೋಲೀಸರಲ್ಲಿ ಮುಸ್ಲಿಮರು 4796?

2001ರಲ್ಲಿ ನಮ್ಮ ಜನಸಂಖ್ಯೆ 13 ಕೋಟಿ 81 ಲಕ್ಷ?
2011ರಲ್ಲಿ 17 ಕೋಟಿ 22 ಲಕ್ಷ?
2006 IPS ಅಧಿಕಾರಿಗಳು 3209 ,ಮುಸ್ಲಿಂ IPS ಕೇವಲ 125.
2016 IPS ಅಧಿಕಾರಿಗಳು  3754 ಮುಸ್ಲಿಂ IPS ಕೇವಲ. 120
ಹತ್ತು ವರ್ಷದಲ್ಲಿ  5 ಕಮ್ಮಿ!
2006 ರಲ್ಲಿ IAS ಅಧಿಕಾರಿಗಳು 4790 .ಮುಸ್ಲಿಂ IAS ಕೇವಲ 142 .
2016 ರಲ್ಲಿ IAS ಅಧಿಕಾರಿಗಳು 4926 .ಮುಸ್ಲಿಂ IAS 164.ಮಾತ್ರ
ಇದೆಲ್ಲಾ ಸಾಚಾರ್ ವರದಿ!
ಟೋಟಲಿ ಇಂಡಿಯನ್ ಮುಸ್ಲಿಂ ಒಬ್ಬನಿಗೆ 1000 ರೂಪಾಯಿ ಖರ್ಚು ಮಾಡುವ ತಾಕತ್ತು ಇಲ್ಲ.ದೊಡ್ಡ ಅಹಂ ನಲ್ಲಿದ್ದೇವೆ. sc/st ಗಿಂತ ಕೆಲವರ್ಗದಲ್ಲಿದ್ದೇವೆ.ಹಿಂದುಳಿದಿದ್ದೇವೆ ಎಂದು ಅರ್ಥ. ಸಾಚಾರ್ ವರದಿ ಬಳಿಕವೂ ನಾವು ಬದಲಾಗಲಿಲ್ಲ.
the Indian times ಹೇಳುತ್ತದೆ (26/12/2016) ten years after sacha report.
ಗೌಜಿ ಗಮ್ಮತ್ತಿನಲ್ಲೇ ಇದ್ದೇವೆ.ನಮ್ಮ ಹೆಂಗಸರಿಗೆ ಮನೆಯಲ್ಲಿ ಸೀರೆ ಇಡಲು ಜಾಗ ಇಲ್ಲ. ಉಡಲು ಹೊಸ ಸಾರಿ ಇಲ್ಲ.!ಕಾಸರಗೋಡು, ದ.ಕ ಜಿಲ್ಲೆಯ ಹೆಂಗಸರಲ್ಲಿರುವ ಒಂದೊಂದು ಲಕ್ಷದ ಸಾರಿ ಒಮ್ಮೆ ಉಟ್ಟದ್ದು ಒಂದರ ಮೇಲೊಂದರಂತೆ ಇಟ್ಟರೆ ಹಿಮಾಲಯ ಮುಟ್ಟಬಹುದು.ಉದ್ದಕ್ಕಿಟ್ಟರೆ ಕನ್ಯಾಕುಮಾರಿಯವರೆಗೂ ತಲುಪಬಹುದು. ಒಡವೆ ಬಂಗಾರದಿಂದ ಬೆಂಗಳೂರಿನ ನಗರದ ಮೇಲೆ ಓವರ್ ಫ್ಲೋ ಬೆಳ್ಳಿ ಬ್ರಿಡ್ಜ್ ನಿರ್ಮಿಸಬಹುದೇನೋ?
ಆದರೆ ಸಂಪತ್ತಿನ ಸದುಪಯೋಗ ಇಲ್ಲ.
ನಮ್ಮ ಹುಡುಗರು ಗ್ರೌಂಡಲ್ಲಿದ್ದಾರೆ ಫಿಟ್ನೆಸ್ಗಾಗಿ ಜಿಮ್ಮಿಗೆ ಹೋಗ್ತಾರೆ.ಹಣ. ಸಾವಿರಾರು ಫೋಲ್ ಮಾಡ್ತಾರೆ. ಆದರೆ ಪೋಲೀಸ್ ಇಲಾಖೆಗೆ ಸೇರಿದರೆ ಪಿಟ್ನೆಸ್ ಬರುತ್ತದೆ ಸಂಬಳ,ಫುಡ್,ಉದ್ಯೋಗ ಸಿಗುತ್ತದೆ.ಕೆಲಸವಿಲ್ಲದೇ ಬರೀ ರೋಡ್ ರೋಮಿಯೋ ಆಗಿ ಹೆಣ್ಮಕ್ಕಳನ್ನು ಚುಡಾಯಿಸೋದಕ್ಕಿಂತ ಪೋಲಿಸ್ ಅಧಿಕಾರಿಯಾಗಿ ನಿರುದ್ದೋಗಿ ಯುವಕರನ್ನು ಲಾಠಿ ಹಿಡಿದು ಸರಿ ದಾರಿಗೆ ತರಬಹುದು.ನಮ್ಮ ಬೆವರು ,ಶಕ್ತಿ,ಕರೇಜ್ ವೇಸ್ಟಾಗಬಾರದು.ಪೋಲೀಸ್ ಇಲಾಖೆ ಪುಣ್ಯಕಾರ್ಯ ಎಂದು ತಿಳಿಯಬೇಕು.

Responsible for the prevention and deduction  Of crime and the maintenance of public order. ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವದಾಗಿದೆ ಅಪರಾಧ ವನ್ನು ನಿಗ್ರಹಿಸೋದಾಗಿದೆ ಅದು ಧರ್ಮ ಕಾರ್ಯ.ಪೋಲೀಸ್ power
Obedient
Liberty
Intelligent
Courageous
Efficient
ಆಗಿದೆ.ಏನಾದರೂ ಎಡವಟ್ಟಾದರೆ ಕಾನೂನಾತ್ಮಕವಾಗಿ ನ್ಯಾಯ ಕೇಳಬೇಕು.ಅದಕ್ಕೆ ನಮ್ಮಲ್ಲಿ ಹೆಚ್ಚು ಅಧಿಕಾರಿಗಳು ಬೇಕು.ನಾವು ಇಂಗ್ಲಿಷ್ ಕಂಪನಿ,ಇಂಗ್ಲೆಂಡ್ ಕಂಪನಿಯನ್ನು ಹುಡುಕುತ್ತೇವೆ?ಎರಡು ಲಕ್ಷ ಸಂಬಳ ಬರಬೇಕು?
ಡಾಕ್ಟರ್ ಆಗಿ ಇಂಜಿನಿಯರ್ ಆಗಿ ಕೋಟಿ ಸಂಪಾದನೆ ಮಾಡಿ ಮನೆ ,ಬಂಗಲೆಕಟ್ಟಬಹುದು ಆದರೆ ಕಾನೂನು ಸುವ್ಯವಸ್ಥೆ ಕಾಪಡಲು ಪೋಲಿಸ್ ಬೇಕು.ಇಲ್ಲವಾದರೆ ಕಿಲೋ ಬಂಗಾರ ಹಾಕ್ಕೊಂಡು ಹೇಗೆ ದಾರಿಯಲ್ಲಿ ನಡೆಯಬಹುದು?
ಆದ್ದರಿಂದ ಬೀದಿ ಪೆಟ್ಟಿಗಿಂತ ಲಾಠಿ ಹಿಡಿದು ನ್ಯಾಯ ವನ್ನು ಕಾಪಾಡಬೇಕು.ನಮ್ಮಪ್ರಾತಿನಿದ್ಯ ಅಲ್ಲಿ ಅನಿವಾರ್ಯ.ನಮ್ಮ ಚಿಂತನೆ ಬದಲಾಗಬೇಕು.ಎರಡು ರುಪಾಯಿಗೆ ಹತ್ತು ರೂ ಸಂಪಾದಿಸಬೇಕು.
ಗೋಣಿಯಲ್ಲಿ ಭತ್ತ ತುಂಬಲು ಸುಲಭ ಆದರೆ ಭತ್ತ ಬೆಳೆವವರಾಗಬೇಕು.
ಮೊಟ್ಡೆಯ ಒಳಗಿಂದ ಒಂದು ಜೀವ ವನ್ನು ತರಲೂ ಸಾದ್ಯವಿದೆ‌.ಅದು ಬುಧ್ದಿವಂತಿಕೆಯಿಂದ. ಅನ್ಯಾಯಕ್ಕೆ ನ್ಯಾಯ ಒದಗಿಸಲು ಪೋಲಿಸ್ ಇಲಾಖೆ ಸೂಕ್ತ ಪರಿಹಾರ. ಶಬೀರ್ ಮೌಲ್ವಿ ಮಾತ್ರವಲ್ಲ ಅಮೀರ್ ಖಾನ್ ಬಗ್ಗೆ ಗೊತ್ತಿದೆಯಾ?
ನಮಗೆ ಗೊತ್ತು ರೀಲ್ ಅಮೀರ್ ಮಾತ್ರ ರಿಯಲ್ ಅಮೀರ್ ಯಾರು? Hindustan times ಬರೆದಿದೆ. (27/01/2016) my fourteen years struggle to prove my innocence
ಹದಿನಾಲ್ಕು ವರ್ಷ ತನ್ನ ನಿರಪರಾಧಿತ್ವ ವನ್ನು ಸ್ತಾಪಿಸಲು ಹೋರಾಡಿದ ಅಮೀರ್
1998 ರಲ್ಲಿ ಬಂದಿಯಾದ ಅಮಾಯಕ?
ತಂದೆಯ ಸಾವಿಗೂ ಬರಲಿಲ್ಲ.
ತಾಯಿಯ ಕಷ್ಟಕ್ಕೂ ಬರಲಾಗಲಿಲ್ಲ.
ಅವಾಗಲೆಲ್ಲಾ ಗಾಝಿಯಾಬಾದ್,ತಿಹಾರ್ ಜೈಲಲ್ಲಿ
ಕೀಳಲ್ಪಟ್ಟ ಉಗುರಿನ ನೋವನ್ನು ಅನಭವಿಸುತ್ತಿದ್ದ.
ರಾಷ್ಟ್ರೀಯ ಮಾನವ ಹಕ್ಕು ಐದು ಲಕ್ಷ ಪರಿಹಾರ ಕೊಡಿಸಿತು‌ ಆದರೆ ಕಳೆದು ಹೋದ ಯವ್ವನ ,ಶಿಕ್ಷಣ, ಮಾನ ಮರ್ಯಾದಿ ಎಲ್ಲಿ ಸಿಗುತ್ತೆ?ಮರ್ಮಾಂಗಕ್ಕೆ ಕೊಟ್ಟ ಶಾಕ್ ಅದಕ್ಕೇನಿದೆ ಪರಿಹಾರ?
ಇಂತಹಾ ನೂರಾರು ಕಥೆಗಳು ವ್ಯಥೆಯಾಗಿ ದಾರಿ ತಪ್ಪದಿರಲು ನಾವು ಎಚ್ಚರಿಕೆ ವಹಿಸಬೇಕು.ಪ್ರತಿಭಟನೆ ಕಾನೂನಾತ್ಮಕ ವಾಗಿರಬೇಕು.
ಇಲ್ಲವಾದರೆ ಎನ್ಕೌಂಟರ್ ಕಸ್ಟಡಿ ಸಾವು ಸಹಜವಾಗಬಹುದು!
ಬುದ್ಧಿವಂತಿಕೆ, ಎಚ್ಚರಿಕೆಯಿಂದ ಇರಬೇಕು.ಹೆಚ್ಚುಹೆಚ್ಚು ಯುವಕರು
ಪೋಲಿಸ್ ಇಲಾಖೆ ಸೇರಿ ರಾಷ್ಟ್ರೀಯ ಸೇವೆಯಲ್ಲಿ ನಿರತರಾಗಬೇಕು.ಅದಕ್ಕಾಗಿ ಹೋರಾಡೋಣ.

*ಪ್ರವಾದಿ ಹೇಳಿದರು ಮುಸಲ್ಮಾನನಿಗೆ ಒಂದು ಹುತ್ತದಲ್ಲಿ ಎರಡು ಸಲ ಹಾವು ಕಚ್ಚದು!*
🖋
Sunnitoday