ವಿಚಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಚಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಅಕ್ಟೋಬರ್ 17, 2017

ಕರುಣಾಳು ಬಾ ಬೆಳಕೇ..

ಬಾಲ್ಯದಿಂದ ಇಂದಿನವರೆಗೂ ಬೆಳಕಿಗೊಂದು ಉಪಮೆಯನ್ನು ಹುಡುಕಿ ಸೋತಿದ್ದೇನೆ. ಬೆಳಕಿಗೆ ನಾನು ಕಂಡುಕೊಂಡ ಕನಿಷ್ಠ ಉಪಮೆಯೆಂದರೆ ಅದು ’ಜ್ಞಾನ’ ಮಾತ್ರ. ಯಾವ ರೀತಿ ಬೆಳಕು ಯಾವ ಮೂಲದಿಂದ ಬಂದರೂ ಸ್ವೀಕಾರಾರ್ಹವೋ ಅದೇ ರೀತಿ ಜ್ಞಾನ ಕೂಡಾ. ಈ ಮಾತು ಜ್ಞಾನದ ಹೊರತಾಗಿ, ಸಂಪತ್ತು-ವಾಯು-ಜಲವೂ ಸೇರಿ, ಬೇರಾವುದಕ್ಕೂ ಅನ್ವಯವಾಗದು. ಆದ್ದರಿಂದ ಜ್ಞಾನವನ್ನು ಮಾತ್ರ ಬೆಳಕಿಗೆ ಪರ್ಯಾಯವಾಗಿ ಗುರುತಿಸಲು ಸಾಧ್ಯ.

ಬೆಳಕು ದೇವರಲ್ಲ ಆದರೆ ದೇವರೇ ಬೆಳಕು; ಬೆಳಕು ಜ್ಞಾನವಲ್ಲ ಆದರೆ ಜ್ಞಾನವೇ ಬೆಳಕು; ಬೆಳಕು ಧರ್ಮವಲ್ಲ ಆದರೆ ಧರ್ಮವೆಂಬುವುದೇ ಬೆಳಕು; ಬೆಳಕು ಭಕ್ತಿಯಲ್ಲ ಆದರೆ ಭಕ್ತಿಯೆಂಬುವುದು ಬೆಳಕು; ಬೆಳಕು ಪ್ರೇಮವಲ್ಲ ಆದರೆ ಪ್ರೇಮವೆಂಬುವುದು ಬೆಳಕು; ಬೆಳಕು ಆತ್ಮವಲ್ಲ ಆದರೆ ಆತ್ಮವೆಂಬುವುದು ಬೆಳಕು- ಈ ರೀತಿ ಸ್ವಯಂ ತಾನೇನೂ ಅಲ್ಲವಾದರೂ ಎಲ್ಲವೂ ತಾನೇ ಆಗಿರುವುದು ಬೆಳಕಿನ ಶ್ರೇಷ್ಟತೆ; ನಿರಾಕಾರಿ, ಸರ್ವಾಂತರ್ಯಾಮಿ ಪರಮಾತ್ಮನಂತೆ.

ಬೆಳಕಿಗೆ ಹೊರತಾದ ಜಗತ್ತು ಒಂದು ಗಾಡಾಂಧಕಾರದ ಭಯಾನಕ ಗೂಡು. ಕಣ್ಣಿಲ್ಲದ ಮನುಷ್ಯನಂತೆ. ಬೆಳಕಿಲ್ಲದ ಜಗತ್ತಿನಲ್ಲಿ ಮನುಷ್ಯ ಕಣ್ಣಿದ್ದೂ ಕುರುಡ. ಅಲ್ಲಿ ಬಣ್ಣಗಳಿಲ್ಲ, ಸೌಂದರ್ಯವಿಲ್ಲ, ಕನಸುಗಳಿಲ್ಲ, ವರ್ಣನೆಗಳಿಲ್ಲ- ಇರುವುದು ಕೇವಲ ನಿರ್ಲಿಪ್ತ ಭಾವನೆಗಳು ಮಾತ್ರ. ಎಲ್ಲವನ್ನೂ, ಎಲ್ಲರನ್ನೂ ಬೆಚ್ಚಿ ಬೀಳಿಸುವ ಅಂಧಕಾರ ಬೆಚ್ಚಿ ಬೀಳುವುದು ಬೆಳಕಿಗೆ ಮಾತ್ರ! ಕತ್ತಲೆಯನ್ನು ಒದ್ದೋಡಿಸಲು ಸೂರ್ಯನೇ ಬೇಕೆಂದಿಲ್ಲ; ಮನೆಯ ಮೂಲೆಯಲ್ಲಿರುವ ಒಂದು ಪುಟ್ಟ ಹಣತೆಯೂ ಸಾಕು- ಜ್ಞಾನದ ಬೆಳಕು ಅಜ್ಞಾನದ ಕತ್ತಲೆಯನ್ನು ಒದ್ದೋಡಿಸುವಂತೆ.

ವೇದಗ್ರಂಥ ಕುರುಆನ್ ಬೆಳಕನ್ನು ವರ್ಣಿಸುವುದು ಹೀಗೆ- "ಅಲ್ಲಾಹನು ಭೂಮಿ ಆಕಾಶಗಳ ಬೆಳಕಾಗಿರುವನು. ಅವನ ಬೆಳಕಿನ ಉಪಮೆ ಒಂದು ಗೋಡೆ-ಗೂಡಿ ನಂತಿದೆ. ಅದರಲ್ಲಿ ಒಂದು ದೀಪವಿದೆ. ದೀಪವು ಒಂದು ಗಾಜಿನೊಳಗಿದೆ. ಗಾಜು ಮುತ್ತಿನಂತೆ ಹೊಳೆಯುವ ತಾರೆಯಂತಿದೆ. ಪೂರ್ವದಲ್ಲಾಗಲಿ ಪಶ್ಚಿಮದಲ್ಲಾಗಲಿ ಬೆಳೆಯದ ಅನುಗ್ರಹೀತ ಮರವೊಂದರ ತಿಪ್ಪೆಯ ಎಣ್ಣೆಯಿಂದ ಅದನ್ನು ಬೆಳಗಿಸಲಾಗುತ್ತದೆ. ಅದರ ಎಣ್ಣೆಗೆ ಬೆಂಕಿ ತಾಗದಿದ್ದರೂ ಅದು ತಾನಾಗಿಯೇ ಪ್ರಜ್ವಲಿಸುತ್ತದೆ. ಹೀಗೆ ಬೆಳಕಿನ ಮೇಲೆ ಬೆಳಕು ಬೀರಿ ಅಲ್ಲಾಹನು ತಾನಿಚ್ಚಿಸಿದವರನ್ನು ಬೆಳಕಿನೆಡೆಗೆ ಒಯ್ಯುತ್ತಾನೆ". ತಮಸೋಮ ಜ್ಯೋತಿರ್ಗಮಯ ಎಂದರೂ ಇದುವೇ.

ಬೆಳಕಿನ ಹಬ್ಬ ದೀಪಾವಳಿಯಂದು ದೇಶ ಬಾಂಧವರು ಸಾಂಕೇತಿಕವಾಗಿ ಹಚ್ಚುವ ಪುಟ್ಟ ಹಣತೆಗಳ ಬೆಳಕು ನಮ್ಮ ಸುತ್ತ-ಮುತ್ತ ಮತ್ತು ನಮ್ಮ ಹೃದಯದಲ್ಲಿ ತುಂಬಿರುವ ಕತ್ತಲೆಯನ್ನು ಶಾಶ್ವತವಾಗಿ ನಿರ್ಮೂಲನ ಮಾಡಲಿ ಎಂಬ ಆಶಯದೊಂದಿಗೆ ನನ್ನ ಪ್ರಾರ್ಥನೆ- "ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲ್ಲಿ ಕೈ ಹಿಡಿದು ನಡೆಸೆಮ್ಮನು.."  ಆ ಬೆಳಕು ದೇವರೂ ಆಗಿರಬಹುದು, ಧರ್ಮವೂ ಆಗಿರಬಹುದು, ಜ್ಞಾನವೂ ಆಗಿರಬಹುದು, ಪ್ರೇಮವೂ ಆಗಿರಬಹುದು; ಆ ಬೆಳಕು ಮಾತ್ರ ಸದಾ ಬೆಳಗುತ್ತಿರಲಿ.

ಅಬ್ದುಲ್ ರಹೀಮ್ ಟೀಕೆ

Article published in Udayavani Deepavali special issue 2012

ಗುರುವಾರ, ಮೇ 18, 2017

ವಿಚ್ಛೇದನ

*ಹೆಸರು ಬೇಡ. ಊರು ಬೇಡ. ಜಾತಿ ಬೇಡ. ಕೆಳಗಿನ ಎರಡೂ ಘಟನೆಗಳನ್ನು ಗಮನವಿಟ್ಟು ಓದಿನೋಡಿ.*

1. ಆಕೆಗೆ ಮದುವೆ ಆಗಿ ನಾಲ್ಕು  ವರ್ಷವಾಯಿತು. ಎರಡು ಮಕ್ಕಳ ತಾಯಿ. ಆಕೆಯ ಪತಿ, ಮನೆಯ ಜವಾಬ್ದಾರಿಕೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮನೆಯ ಖರ್ಚಿಗೂ ಕೊಡುತ್ತಿಲ್ಲ. ಆತ ಗಾಂಜಾದ ಗುಲಾಮ. ದುಡಿದ  ಹಣವನ್ನೆಲ್ಲಾ  ಕುಡಿತಕ್ಕೇ ಮುಗಿಸುತ್ತಾನೆ. ಕಾಸಿಲ್ಲದಾಗ  ಪತ್ನಿಯೊಂದಿಗೆ ಯಾಚುತ್ತಾನೆ, ಕೊಡದಿದ್ದಲ್ಲಿ ರೇಗುತ್ತಾನೆ.  ಜಗಳಕ್ಕಿಳಿಯುತ್ತಾನೆ. ಕೆಟ್ಟು ಹೋದ ಆತನ  ಚಾರಿತ್ರ್ಯದಿಂದಾಗಿ ಆಕೆ ರೋಸಿ ಹೋಗಿದ್ದಾಳೆ.  ಆತನನ್ನು ಸರಿದಾರಿಗೆ ತರಲು ಆಕೆ ಬಹಳಷ್ಟು ವಿಫಲ ಯತ್ನ ನಡೆಸಿದ್ದಳು. ಆತನೊಂದಿಗಿನ ಬದುಕು ಆಕೆಗೆ ಸಾಕು ಸಾಕಾಗಿದೆ. ಅಸಹ್ಯವಾಗಿದೆ. ಪತಿಯೊಂದಿಗಿನ ಪ್ರೀತಿ - ಪ್ರೇಮ ಎಲ್ಲವೂ ಸತ್ತು ಹೋಗಿದೆ. ಪೆಟ್ಟು ತಿನ್ನುವುದನ್ನೇ ಅಭ್ಯಾಸವನ್ನಾಗಿಸಿದ್ದಾಳೆ. ದುಃಖ ತಡೆಯಲಾಗದೆ, "ನನಗೆ ಗಂಡನೇ ಬೇಡ"ವೆಂದು ಹಲವು ಬಾರಿ ತವರಿಗೆ ಓಡಿದ್ದಳು. ಆದರೆ ಮನೆಯ ಹಿರಿಯರು ಸಮಾಧಾನಿಸಿ,  ತಾಳಿ ಕಟ್ಟಿದ ಮೇಲೆ ಹಾಗೆಲ್ಲ ಮಾಡಬಾರದು... ಸಾಯುವ ತನಕ ಗಂಡನೊಂದಿಗಿರಬೇಕೆಂದು ಶಾಸ್ತ್ರ  ಹೇಳಿ ವಾಪಸ್ಸು  ಕಳುಹಿಸಿದ್ದರು. ಮಡುಗಟ್ಟಿದ ದುಃಖದೊಂದಿಗೆ ಆಕೆ ಮತ್ತೆ ಆ ನರಕದ ಬದುಕಿಗೆ ತನ್ನನ್ನು ಅರ್ಪಿಸುತ್ತಾಳೆ.*

*2. ಆತನಿಗೆ ಮದುವೆ ಆಗಿ ಎರಡು ವರ್ಷವಾಯಿತು. ಆಕೆಯೊಂದಿಗಿನ ದಾಂಪತ್ಯ ಬದುಕು ಆತನಿಗೆ ಅಸಹ್ಯ ಮೂಡಿಸಿದೆ. ಪತಿಯ ಅನುಸರಣೆ ಇಲ್ಲದ ಆಕೆಯ ಸೊಕ್ಕು - ವರ್ತನೆ, ದಾಂಪತ್ಯದ ಮನಶ್ಯಾಂತಿ ಮತ್ತು  ಸೌಂದರ್ಯವನ್ನು  ಹದಗೆಡಿಸಿದೆ. ದೂರದ ನೋಟಕ್ಕೆ ದಂಪತಿಗಳಂತಿದ್ದರೂ, ಅಲ್ಲಿ ಪರಸ್ಪರ ಪ್ರೀತಿ-ಪ್ರೇಮ, ಆಕರ್ಷಣೆ, ಅನುಕಂಪ ಯಾವುದೂ ಉಳಿದಿಲ್ಲ. ಹಲವು ಬಾರಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಹಿತೋಪದೇಶ ನಡೆದರೂ ಆಕೆಯ ಮದ    ಇಳಿಯಲಿಲ್ಲ. ಆಕೆ ಹೆಚ್ಚಿನ ಸಮಯವನ್ನು ವಾಟ್ಸಪ್, ಫೇಸ್ಬುಕ್ ನ ಚಾಟಿಂಗ್ ನಲ್ಲೇ ಕಳೆಯುತ್ತಾಳೆ. ಆತನ ಸಂತಸಗಳೂ ನಶಿಸುತ್ತಿವೆ. ಅಂದರೆ ಪತಿ-ಪತ್ನಿಯರೆಂಬ ನೆಲೆಯಲ್ಲಿ ಇರಬೇಕಾದ ಯಾವ ಸಂಬಂಧಗಳೂ ಅವರ ಮಧ್ಯೆ ಉಳಿದಿಲ್ಲ.*

👉🏿 *ಮೇಲಿನ ಎರಡು ಪ್ರತ್ಯೇಕ ಘಟನೆಗಳನ್ನು ವಸ್ತುನಿಷ್ಟವಾಗಿ ನೀವೇ ಅಭ್ಯಸಿಸಿ!  ಪರಿಹಾರವೇನು?*

*ಸಾಯುವ ತನಕ ದಾಂಪತ್ಯದ ಮುಖವಾಡ ಧರಿಸಿ ನರಕ ಸದ್ರಶವಾಗಿ ಅವರು ಬದುಕಬೇಕಾ?  ನೆನಪಿಡಿ!  ಯಾರಿಗೂ ರಗಾಲೆ ಬೇಡವೆಂದು, ಅವರು  ಆತ್ಮಹತ್ಯೆಯ ಹಾದಿ ಹಿಡಿದರೆ, ಅದು ಫೋರ ಅಪರಾಧ ಮತ್ತು ಮಹಾ ಪಾಪವಾಗಿದೆ. ಅದಕ್ಕೆ ಅನುವು ಮಾಡಿಕೊಡುವ ನಮ್ಮಂತಹ ಮೂಕ ಸಾಕ್ಷಿಗಳೂ ದೇವನ ಶಾಪಕ್ಕೆ ಅರ್ಹರು.*
👉🏿 *ಹಾಗಾದರೆ, ಹೊಂದಾಣಿಕೆಯ ಯಾವ ಸಾಧ್ಯತೆಯೂ ಕಾಣದಾಗ ಪರಿಹಾರವೇನು? ಅವರಿಗೂ ಆಸೆ ಕನಸುಗಳಿಲ್ಲವೇ? ಬದುಕುವ ಹಂಬಲವಿಲ್ಲವೇ? ಹೌದು, ವಿಚ್ಛೇದನವೇ ಸೂಕ್ತ ಪರಿಹಾರವೆಂದು ಎಲ್ಲರೂ ಒಪ್ಪುತ್ತಾರೆ. ನೀವೂ ಒಪ್ಪುತ್ತೀರಿ! ಅದು ಸರಿ ಕೂಡಾ!*

👉🏿 *"ವಿಚ್ಛೇದನ" ಎಂಬ ಕನ್ನಡ ಪದವನ್ನೇ  ಅರಬಿಯಲ್ಲಿ "ತಲಾಕ್" ಅನ್ನುತ್ತಾರೆ. ಆದರೆ, ಇಸ್ಲಾಮಿನಲ್ಲಿ ತಲಾಕ್ ಗೆ ಮೊದಲು ಪರಸ್ಪರ ಹಿತೋಪದೇಶ, ಚರ್ಚೆ, ಕುಟುಂಬದ ಹಿರಿಯರಿಂದ ಆಪ್ತ ಸಮಾಲೋಚನೆ ನಡೆಯಲೇಬೇಕು. ಒಂದೇ ಬಾರಿಗೆ ಏಕ ಕಾಲದಲ್ಲಿ ಮೂರು ತಲಾಕ್ ಹೇಳುವಂತಿಲ್ಲ. ಸಮಯಾವಕಾಶದ ನಿಬಂಧನೆಯಿದೆ.*

👉🏿 *ಇಸ್ಲಾಮಿನಲ್ಲಿ ಮೇಲಿನ ಇಬ್ಬರ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರವಿದೆ.  ಮೊದಲನೆಯದಾಗಿ, ಅಂತಹ  ಸಮಸ್ಯೆಗಳು ಉಂಟಾಗದಂತೆ ಮದುವೆಗೆ ಮೊದಲೇ ಪಾಲಿಸ ಬೇಕಾದ ಮತ್ತು ಗಮನಿಸ ಬೇಕಾದ ಹಲವು ಎಚ್ಚರಿಕೆಗಳನ್ನು ಸೂಚಿಸುತ್ತದೆ. ಅಚಾನಕ್  ಎಚ್ಚರಿಕೆ ವಹಿಸಿಯೂ ಮೇಲಿನಂತೆ ಸಮಸ್ಯೆಗಳು ಸಂಭವಿಸಿದರೆ, ಇಬ್ಬರಿಗೂ ವಿಮೋಚನೆಯ ಮತ್ತು ಬದುಕುವ ಮಾರ್ಗವಿದೆ. ಹೊಸ ದಾಂಪತ್ಯಕ್ಕೆ ಹೆಜ್ಜೆಯನ್ನಿಡಲು ಸರಳ ಅವಕಾಶವಿದೆ.*
👉🏿 *ಮೇಲಿನ ಪ್ರಥಮ ಫಟನೆಯಲ್ಲಿನ ಮಹಿಳೆಗೆ ಇಸ್ಲಾಮೀ ಶರೀಅತ್  ನಲ್ಲಿ  ವಿಚ್ಛೇದನದ ಹಾದಿ ಪುರುಷನಿಗಿಂತ ಅತಿ ಸುಲಭ ಮತ್ತು ಸರಳ.*
*ಅದನ್ನು "ಖುಲಾ" ಅನ್ನುತ್ತಾರೆ. ಇಸ್ಲಾಮ್ ಸ್ತ್ರೀಗೆ ಕೊಟ್ಟ ಈ  ಅತ್ಯುತ್ತಮ ಅವಕಾಶವನ್ನು ಮಾಧ್ಯಮಗಳು,  ವಿಚಾರವಾದಿಗಳೆಂದೆನಿಸಿಕೊಂಡವರು  ಚರ್ಚಿಸುವುದಿಲ್ಲ. ಕೊಂಡಾಡುವುದಿಲ್ಲ. ಬದಲಾಗಿ ಪಕ್ಷಪಾತ ಪೀಡಿತರಂತೆ,  "ತಲಾಕ್" ಎಂಬ ಪದವನ್ನೇ ಭೀಕರವಾಗಿ ಚಿತ್ರೀಕರಿಸಿ ಇಸ್ಲಾಮಿನ ಬಾಹ್ಯ ಸೌಂದರ್ಯವನ್ನು ಕೆಡಿಸಲು ಮತ್ತೆಮತ್ತೆ ಪ್ರಯತ್ನಿಸುತ್ತಾರೆ. ಆದರೆ ಇಸ್ಲಾಮಿನ ಆದರ್ಶಗಳು ಜೀವಂತವಿದೆ. ಅದನ್ನು ಶುದ್ಧ ಮನಸ್ಸಿನಿಂದ ವಸ್ತುನಿಷ್ಠವಾಗಿ ಅಭ್ಯಸಿಸುವುದು ನಮ್ಮೆಲ್ಲರ ಭಾಧ್ಯತೆಯಾಗಿದೆ. ಆ ಮೂಲಕ ಅಪನಂಬಿಕೆಯ, ಸಂಶಯದ, ನಿಗೂಢತೆಯ ಗೋಡೆಯನ್ನು ಸರಿಸೋಣ! ನೀವೇನಂತೀರಿ?*

ಪ್ರೀತಿಯಿಂದ🌹🌹*

ಅಬೂ ಅಬ್ದುಲ್ಲಾ, ಮಂಗಳೂರು.*

    

ಮಂಗಳವಾರ, ಮೇ 2, 2017

ವಾಟ್ಸಾಪ್ ಬಳಸುವವರು ಓದಲೇಬೇಕು..


ವಾಟ್ಸಾಪ್ ಬಳಸುವವರು ಓದಲೇಬೇಕು..

ದಯವಿಟ್ಟು ಇದನ್ನು ಓದಿದ ನಂತರ ಶೇರ್ ಮಾಡಿ..
ಒಂದು ಕುಟುಂಬ ಅಂದಮೇಲೆ ವಾಟ್ಸಾಪ್ ನಲ್ಲಿ ಫ್ಯಾಮಿಲಿ ಗ್ರೂಪ್ ಇದ್ದೇ ಇರುತ್ತದೆ. ಅದು ಎಲ್ಲರಿಗೂ ಗೊತ್ತಿರುವ ವಿಷಯ. ಫ್ಯಾಮಿಲಿ ಗ್ರೂಪುಗಳಲ್ಲಿ ನಿಮ್ಮ ಸಹೋದರರು, ಸಹೋದರಿಯರು, ಸಹೋದರ-ಸಹೋದರಿಯರ ಗಂಡು ಮಕ್ಕಳು, ಹೆಣ್ಣು ಮಕ್ಕಳು ಹೀಗೆ ನಿಮ್ಮ ಕುಟುಂಬದಲ್ಲಿರುವ ಶೇಕಡ 50 ರಷ್ಟು ಕುಟುಂಬ ಸದಸ್ಯರು ಆ ಗ್ರೂಪಿನಲ್ಲಿ ಇರಬಹುದು. ಮನೆಯಲ್ಲಿ ಮದುವೆಯ ವೇಳೆ ಅಥವಾ ಬೇರೆ ಏನಾದ್ರೂ ಕಾರ್ಯಕ್ರಮಗಳು ಇದ್ದಲ್ಲಿ ಅದರ ಫೋಟೋಗಳನ್ನು ಫೋರ್ವಾರ್ಡ್ ಮಾಡಿಕೊಂಡು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು, ವಿದೇಶದಲ್ಲಿ ದುಡಿಯುವ ಸಂಬಂದಿಕರೊಂದಿಗೆ ಕಷ್ಟ-ಸುಖ ಮಾತನಾಡಿಕೊಳ್ಳುವುದು ಫ್ಯಾಮಿಲಿ ಗ್ರೂಪಲ್ಲಿ ಇದ್ದೇ ಇರುತ್ತದೆ.
ಫ್ಯಾಮಿಲಿ ಗ್ರೂಪ್ ಮಾಡಿಕೊಂಡು ಚಾಟ್ ಮಾಡುವುದು ತಪ್ಪು ಅಂತ ಹೇಳುವುದಕ್ಕೆ ನಾನಿಲ್ಲಿ ಬಂದಿಲ್ಲ. ಹಾಗೆ ಹೇಳುವ ಅಧಿಕಾರವನ್ನು ನನಗೆ ಯಾರೂ ಕೊಟ್ಟೂ ಇಲ್ಲ.
ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದ ವಿಷಯ ಏನೆಂದರೆ..
ನಿಮ್ಮ ವಾಟ್ಸಾಪ್ ಫ್ಯಾಮಿಲಿ ಗ್ರೂಪಿನಲ್ಲಿ ಈ ಹಿಂದೆ ಇದ್ದ ಕೆಲವು ನಿಮ್ಮ ಸಂಬಂಧಿಕರ ಸಿಮ್ ಕಾರ್ಡ್ ಈಗ ಚಾಲ್ತಿಯಲ್ಲಿ ಇರದೇ ಇರಬಹುದು, ಅಂದರೆ ಸಿಮ್ ಕಳೆದು ಹೋಗಿರಬಹುದು, ಅಥವಾ ವಿದೇಶದಲ್ಲಿ ದುಡಿಯುವವರಾದರೆ ತಮ್ಮ ಮನೆಯಲ್ಲಿರುವ ಗೋದ್ರೇಜಿನಲ್ಲಿ ಜೋಪಾನವಾಗಿ ಇಟ್ಟಿರಬಹುದು. ಅಥವಾ ಬೇರೊಂದು ಸಿಮ್ ಕಾರ್ಡ್ ಇರೋದ್ರಿಂದ ಇದನ್ನು ಸ್ವಿಚಾಫ್ ಮಾಡಿಟ್ಟಿರಬಹುದು. ಅಥವಾ ತಾಂತ್ರಿಕ ದೋಷಗಳಿಂದ ಸಿಮ್ ಕಾರ್ಡಿಗೆ ಏನಾದರು ತೊಂದರೆ ಇರಬಹುದು. ಈ ಕಾರಣಗಳಿಂದ ನೀವು ಅದನ್ನು ಬಳಸದೇ ಇಟ್ಟಿರಬಹುದು.
ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೇನಾದರೂ ಅರಿವಿದೆಯೇ..?? ಹಾಗಾದರೆ ಮುಂದೆ ಓದಿ.
ಈಗೀಗ ಕೆಲವು ಮೊಬೈಲ್ ಸಿಮ್ ಕಾರ್ಡಿನ ಕಂಪೆನಿಗಳು ಚಾಲ್ತಿಯಲ್ಲಿಲ್ಲದ ಸಿಮ್ ನಂಬರುಗಳನ್ನು ಬೇರೆ ಗ್ರಾಹಕರಿಗೆ ನೀಡುತ್ತಿದೆ. ಅಂದರೆ ಈ ಕಾಲದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಈ ರೀತಿಯ ರೂಡಿಯನ್ನು ಸಿಮ್ ಕಂಪೆನಿಗಳು ಮಾಡಿಕೊಂಡಿವೆ.
ಇದು ಹೇಗೆ ಯಾಕೆ ಯಾರಿಗೆ ನೀಡುತ್ತಾರೆ ಗೊತ್ತಾ?
ಒಂದು ವೇಳೆ ನೀವು ಮೂರು ತಿಂಗಳಿಗಿಂತ ಅಧಿಕವಾಗಿ ಸಿಮ್ ಕಾರ್ಡ್ ಉಪಯೋಗಿಸದೇ ಇದ್ದಲ್ಲಿ ನಿಮ್ಮ ನಂಬರ್ ಬೇರೆಯವರಿಗೆ ರವಾನೆಯಾಗುತ್ತದೆ.
ಅಂದರೆ ಯಾರಾದರು ಹೊಸದಾಗಿ ಸಿಮ್ ಕಾರ್ಡ್ ಖರೀದಿಸುವಾಗ ಅವರಿಗೆ ಸಿಗುವುದು ನಿಮ್ಮ ಈ ಚಾಲ್ತಿಯಲ್ಲಿರದ ನಂಬರ್ ಆಗಿರುತ್ತದೆ.
ಅದು ಯಾರಿಗೆ ಸಿಗುತ್ತದೆ?
ಹಮೀದ್ ಎಂಬವರ ಹೆಸರಿನಲ್ಲಿರುವ ಸಿಮ್ ಸುರೇಶ ಎಂಬವರಿಗೆ ಸಿಗಬಹುದು.
ಹಸೀನಾಳ ಹೆಸರಿನಲ್ಲಿರುವ ನಂಬರ್ ರಮೇಶನಿಗೆ ಸಿಗಬಹುದು.
ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ಹೊಸದಾಗಿ ಸಿಮ್ ಖರೀದಿಸುವಾಗ ಶೇಖಡ ನೂರರಷ್ಟು ಹೀಗೆ ಸಂಭವಿಸುತ್ತದೆ.
ಇಲ್ಲಿ ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ವಿಷಯ ಏನೆಂದರೆ..
ನಿಮ್ಮ ಫ್ಯಾಮಿಲಿ ಗ್ರೂಪಲ್ಲಿರುವ ಹಮೀದ್ ಈಗ ಸುರೇಶ ಆಗಿ ಬದಲಾಗಿದ್ದಾನೆ..!!
ಹಸೀನಾ, ರಮೇಶ ಆಗಿ ಬದಲಾಗಿದ್ದಾಳೆ.
ಹೊಸ ಸಿಮ್ ಖರೀದಿಸಿದ ರಮೇಶ ಈಗ ನಿಮ್ಮ ಫ್ಯಾಮಿಲಿ ಗ್ರೂಪಿನ ಹಸೀನಾ ಇರುವ ಸ್ಥಾನದಲ್ಲಿದ್ದಾನೆ. ಹಮೀದ್ ಸುರೇಶನ ಸ್ಥಾನದಲ್ಲಿ.
ಆದರೆ ನಮಗೆ ಇದರ ಯಾವುದೇ ಅರಿವು ಇರುವುದಿಲ್ಲ. ನಾವು ಪರಸ್ಪರ ಮಾತನಾಡಿಕೊಳ್ಳುವ ಅಥವಾ ಫೋರ್ವಾರ್ಡ್ ಮಾಡಿಕೊಳ್ಳುವ ಇಮೇಜುಗಳು ಸುರೇಶನಿಗೆ ತಲುಪುತ್ತದೆ. ಒಂದು ವೇಳೆ ಸುರೇಶ ಒಳ್ಳೆಯವನಾಗಿದ್ದಲ್ಲಿ ಪರಿಚಯ ಇಲ್ಲದ ವಾಟ್ಸಾಪ್ ಗ್ರೂಪಿನಿಂದ ಲೆಫ್ಟ್ ಆಗುವ ಸಾಧ್ಯತೆ ಇರಬಹುದು. ಅಥವಾ ಅವನು ಪಡ್ಡೆಹುಡುಗರ ಸಾಲಿನಲ್ಲಿ ಸೇರಿದವನಾದರೆ ??
ಸಹೋದರಿಯರು ಫ್ಯಾಮಿಲಿ ಗ್ರೂಪಲ್ಲಿ ಫೊರ್ವಾರ್ಡ್ ಮಾಡಿಕೊಳ್ಳುವ ಸ್ವಂತ ಭಾವಚಿತ್ರಗಳನ್ನು ಈ ಸುರೇಶ ಏನು ಮಾಡಿಯಾನು? (ಇಲ್ಲಿ ಸುರೇಶ, ರಮೇಶ ಎಂಬ ಹೆಸರು ಬರೀ ಉದಾಹರಣೆಗಾಗಿ ನೀಡಲಾಗಿದೆ ಹೊರತು ಅನ್ಯ ಧರ್ಮದವರ ಮನಸ್ಸನ್ನು ನೋಯಿಸುವುದಕ್ಕಲ್ಲ.. ಕ್ಷಮೆಯಿರಲಿ)
ಪಡ್ಡೆ ಹುಡುಗರು ನಮ್ಮ ಸಮುದಾಯದಲ್ಲೂ ಇದ್ದಾರೆ ಎಂಬ ಕಹಿ ಸತ್ಯವನ್ನು ನಾವು ಮರೆಯಬಾರದು.
ಈ ಸಂದೇಶ ಫ್ಯಾಮಿಲಿ ಗ್ರೂಪುಗಳಿಗೆ ಮಾತ್ರ ಅಲ್ಲ ಇತರ ಎಲ್ಲಾ ಗ್ರೂಪುಗಳಿಗೂ ಅನ್ವಯಿಸುತ್ತದೆ.
ಗ್ರೂಪ್ ಎಡ್ಮಿನ್ ಗಳು ಗಮನಿಸಿ.
ಆಕ್ಟಿವ್ ಅಲ್ಲದ ಅಂದರೆ ಕ್ರಿಯಾಶೀಲ ವಾಗಿರದ ಸದಸ್ಯರು ನಿಮ್ಮ ಗ್ರೂಪಲ್ಲಿ ಇದ್ದರೆ ಆ ನಂಬರನ್ನು ಪರೀಕ್ಷಿಸಿ. ಪ್ರತೀ ದಿನ ನಿಮ್ಮ ಗ್ರೂಪುಗಳ ಸದಸ್ಯರ ಮೇಲೆ ಗಮನವಿರಲಿ. ಅವರು ಯಾರು, ಅವರ ಪರಿಚಯ ನಿಮಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ.
ಇದು ಶಿಲಾಯುಗವಲ್ಲ.. ಇದು ಇಂಟರ್ನೆಟ್ ಯುಗ ಎಂಬುವುದನ್ನು ಮರೆಯದಿರಿ

ಶನಿವಾರ, ಮಾರ್ಚ್ 4, 2017

ಅಪ್ಪ

ನೋಡುನೋಡುತ ಅಪ್ಪ ವೃದ್ಧರಾಗುತಿಹರು!!

ಪ್ರತಿವರ್ಷ ತಲೆಯ ಕೂದಲುಗಳು ವಿರಳವಾಗುತಿಹವು
ಉಳಿದಿರುವ ಕೂದಲುಗಳೂ ಬೆಳ್ಳಗೆ ಹೊಳೆಯುತಿಹವು
ಮುಖದ ಮೇಲೆ ಸುಕ್ಕುಗಟ್ಟಿ ನೆರಿಗೆಗಳು ಹೆಚ್ಚಾಗಿಹವು
ಇತ್ತೀಚಿನ ಭಾವಚಿತ್ರದಿ ಎಷ್ಟೊ೦ದು ಬೇರೆ ಕಾಣುವರು
ಮೊದಲಿನ೦ದದಿ ಕಾಣಲು ಅಸಾಧ್ಯವೀಗವೆ೦ದು ಹೇಳುತಿಹರು

ನೋಡನೋಡುತ ಅಪ್ಪ ವೃದ್ಧರಾಗುತಿಹರು!!!😒😞

ಬೆಳಿಗ್ಗೆ ವಾಕಿ೦ಗಿನಲಿ ತಲೆ ತಿರುಗಿ ಕೂಡ್ರುವರು
ಊರಿಗೆಲ್ಲಾ ಗೊತ್ತಿದ್ದರೂ ನಮ್ಮ ಬಳಿ ಹುದುಗಿಸಿಡುವರು
ದಿನಗಳುರುಳಿದ೦ತೆ ತು೦ಬಾ ಸೊರಗುತ್ತಲಿಹರು
ಆರೋಗ್ಯ ಚೆನ್ನಾಗಿರುವುದೆ೦ದು ಫೋನಿನಲಿ ಹೇಳುವರು
ಸಡಿಲವಾದ ವಸ್ತ್ರಗಳನು ಬಿಗಿಗೊಳಿಸಲು ಕೊಡುವರು

ನೋಡುನೋಡುತ ಅಪ್ಪ ವೃದ್ಧರಾಗುತಿಹರು!!!!

ಯಾರದೋ ಮರಣದ ವಾರ್ತೆ ಕೇಳಿ ಗಾಬರಿಯಾಗುವರು
ಆಹಾರ ತೆಗೆದುಕೊಳುವದ ಮತ್ತಷ್ಟು ಮಿತಗೊಳಿಸುವರು
ನನ್ನ ಬೊಜ್ಜು ಕರಗಿಸಲು ನೂರಾರು ಮಾಹಿತಿಯ ಸ೦ಗ್ರಹಿಸುವರು
ಸ್ವಸ್ಥನಾಗಿರಲು ಸೂತ್ರಗಳನು ಪ್ರತಿದಿನವೂ ಒರೆಯುವರು
ಸದಾ ವ್ಯಾಯಮದ ಮಹತ್ವ ಒತ್ತಿ ಒತ್ತಿಹೇಳುವರು

ನೋಡು ನೋಡುತ ಅಪ್ಪ ವೃದ್ಧರಾಗುತಿಹರು!!

ಪ್ರತಿವರ್ಷ ಬಹು ಉತ್ಸಾಹದಲಿ ಬ್ಯಾ೦ಕಿಗೆ ತೆರಳುವರು
ತಾವು ಜೀವಿಸಿರುವ ಸಬೂತು ನೀಡಿ ಎಷ್ಟು ಹರ್ಷಿಸುವರು
ಹೆಚ್ಚಾಗಿ ಬ೦ದ ಪೆನ್ಶನ್ ಹಣವ ತಮಗೆ೦ದೂ ಉಪಯೋಗಿಸರು
ಮತ್ತೊ೦ದು ಹೊಸ ಫಿಕ್ಸಡ ಡಿಪೋಸಿಟ್ ಮಾಡಿ ಬರುವರು
ತಮಗೆ೦ದು ಅಲ್ಲ... ನಮಗಾಗಿ ಉಳಿಸುವರು

ನೋಡು ನೋಡುತ ಅಪ್ಪ  ವೃದ್ಧರಾಗುತಿಹರು!!!

ಇಟ್ಟ ವಸ್ತುಗಳನು ಪದೇ ಪದೇ ಮರೆತುಬಿಡುವರು
ಅದನು ಹುಡುಕಲು ಮನೆಯ ತಿರುಗುಮುರುಗಾಗಿಸುವರು
ಅಮ್ಮನೊಡನೆ ಮೊದಲಿನ೦ತೆ ಹರಿಹಾಯುವರು
ಅವಳಿಲ್ಲದೆ ಎ೦ದಿಗೂ ಬೇರೆ ಇರಲಾರರು
ಒಂದೆ ಸ೦ಗತಿಯನು ಪದೇ ಪದೇ ತಿರುಗಿ ಹೇಳುವರು

ನೋಡು ನೋಡುತ ಅಪ್ಪ ವೃದ್ಧರಾಗುತಿಹರು!!!

ಕನ್ನಡಕದಲೂ ಸರಿ ಕಾಣದೆ೦ದು ತಡಕಾಡುವರು
ಬ್ಲಡ್ ಪ್ರೆಶರ್ ಔಷಧಿ ತೆಗೆದುಕೊಳಲು ನಿಲರ್ಕ್ಷಿಸುವರು
ಅಲೋಪಥಿಯ ದುಷ್ಪರಿಣಾಮದ ಬಗೆಗೆ ಹೇಳುತಿಹರು
ಯೋಗ,ಆಯುರ್ವೇದದ ಬಾಯಿಪಾಠ ಮಾಡುತಿಹರು
ಅವರ ವೈದ್ಯೋಪಚಾರ, ಆಪರೇಷನ್ ಮು೦ದೂಡುತಿಹರು

ನೋಡು ನೋಡುತ ಅಪ್ಪ ವೃದ್ಧರಾಗುತಿಹರು!!!

ಉದ್ದು ಕಡಲೆ ಗಟ್ಟಿ ಅನ್ನವೆಲ್ಲ ಜೀರ್ಣವಾಗದೆ೦ದು ಹೇಳುವರು
ಹಾಲುಗು೦ಬಳ ಹೀರೆ ಹಾಗಲ ಹೆಚ್ಚಾಗಿ ತಿನ್ನುವರು
ಹಲ್ಲಿನಲಿ ಸಿಕ್ಕಿರುವ ಆಹಾರವ ಕಡ್ಡಿಯಲಿ ತೆಗೆಯುತಿರುವರು
ಆದರೆ ದ೦ತವೈದ್ಯರ ಬಳಿಗೆ ಹೋಗಲು ಹಿ೦ಜರಿಯುವರು
ನಾನು ಆರೋಗ್ಯವಗಿಹೆನೆ೦ಬ ಸೊಲ್ಲ ಸಾರಿ ಸಾರಿ ಹೇಳುವರು

ನೋಡುನೋಡುತ ಅಪ್ಪ ವೃದ್ಧರಾಗುತಿಹರು!!!

ಪ್ರತಿ ಹಬ್ಬದಲು ನಾವು ಬರುವೆವೆ೦ದು ಆಸೆಗಣ್ಣಿನಲಿ ನೋಡುವರು
ಅವರ ಹಳೆಯ ಮನೆಯ ನವ ವಧುವಿನ೦ತೆ ಶೃ೦ಗರಿಸುವರು
ನಮ್ಮ ನೆಚ್ಚಿನ ವಸ್ತುಗಳ ರಾಶಿಯನೆ ತ೦ದಿಡುವರು
ನಮ್ಮ ಚಿಕ್ಕ ಬಯಕೆಗಳನೂ ಈಡೇರಿಸಲೆ೦ದು ಪೇಟೆಗೆ ಶೀಘ್ರ ತೆರಳುವರು
ಮೊಮ್ಮಕ್ಕಳನು ನೋಡಿ ಸ೦ತಸದಿ ಅದೆಷ್ಟೋ ಕಣ್ಣೀರ ಹರಿಸುವರು

ನೋಡು ನೋಡುತ ಅಪ್ಪ ವೃದ್ಧರಾಗುತಿಹರು!

(ಇದರ ಕರ್ತೃ ಯಾರೆಂದು ತಿಳಿದಿಲ್ಲ!  ನನಗೆ ವಾಟ್ಸಪ್ನಲ್ಲಿ ಬಂದಿತ್ತು! ನನಗೆ ಬಹಳ‌ ಇಷ್ಟವಾದುದರಿಂದ ಹಂಚಿಕೊಳ್ಳುತ್ತಿರುವೆ! ನಾನೂ ಸೇರಿದಂತೆ ನನ್ನ ಮಿತ್ರರಲ್ಲಿ ಬಹಳಷ್ಟು ಜನ ಇದಕ್ಕೆ relate ಮಾಡಿಕೊಳ್ಳುತ್ತಾರೆ!)

ಗುರುವಾರ, ಜನವರಿ 26, 2017

ಗೆಳೆಯನಿರಲಿ....

ಮನೆ ತುಂಬಾ ಮಕ್ಕಳು..
ಕಿತ್ತು 
ತಿನ್ನುವ ಬಡತನ...
ಹಸಿವು...

ಬದುಕಿನ
ನಿಜವಾದ ಬಣ್ಣವನ್ನು ಪರಿಚಯ ಮಾಡಿಸುವದೇ ಈ ಹಸಿವು... !

ಹೆಂಡತಿಗೆ ಸಹಿಸಲಾಗಲಿಲ್ಲ...

"ನಿಮ್ಮ 
ಸ್ನೇಹಿತ ಶ್ರೀಕೃಷ್ಣ..
ಈಗ ರಾಜನಾಗಿದ್ದಾನೆ...

ಹೋಗಿ..
ಒಮ್ಮೆ ಭೇಟಿಯಾಗಿ ಬನ್ನಿ..."

ಸುಧಾಮನಿಗೆ ಸಂಕೋಚವಾಯಿತು...

"ಹೇಗೆ ಹೋಗಲಿ.. ?

ಆತ ಚಕ್ರವರ್ತಿ...
ಶ್ರೀಮಂತ..
ಲೋಕವೇ ಅವನನ್ನು ಪೂಜಿಸುತ್ತಿದೆ...

ನನ್ನ 
ವೇಷ ಭೂಷಣಕ್ಕೂ ಅವನ ಭೇಟಿಯಾಗುವ ಯೋಗ್ಯತೆ ಇಲ್ಲ...

ನಾವು ಸಣ್ಣವರಿದ್ದಾಗ ಸ್ನೇಹವಿತ್ತು...

ಈಗ
ಆತನಿಗೆ ನನ್ನ ನೆನಪು ಇದೆಯೋ.. ಇಲ್ಲವೋ ಗೊತ್ತಿಲ್ಲ..."...

ಸುಧಾಮನ ಮಡದಿ ಬಿಡಲಿಲ್ಲ..

"ಸ್ನೇಹಕ್ಕೆ 
ಅಂತಸ್ತು... ಶ್ರೀಮಂತಿಕೆ..ಇವುಗಳ ಅಗತ್ಯವೇ ಇಲ್ಲ..

ಸ್ನೇಹಕ್ಕೆ 
ಕೇವಲ ಭಾವನೆ.. ನೆನಪುಗಳು... ಹೃದಯ ಶ್ರೀಮಂತಿಕೆ ಸಾಕು..
ಹೋಗಿ ಬನ್ನಿ..."

ಸುಧಾಮನಿಗೆ ಮತ್ತೆ ಸಂಕೋಚ..

"ಖಾಲಿ ಕೈಯ್ಯಲ್ಲಿ ಹೇಗೆ ಹೋಗಲಿ ?....

ಏನಾದರೂ 
ತೆಗೆದುಕೊಂಡು ಹೋಗಲು ನಮ್ಮ ಬಳಿ ಏನೂ ಇಲ್ಲವಲ್ಲ.."....

ಮಡದಿ ಹಠವಾದಿ...

ಮನೆಯ ಡಬ್ಬಗಳನ್ನೆಲ್ಲ ಹುಡುಕಾಡಿದಳು..

ಎರಡು ಮುಷ್ಟಿ "ಅವಲಕ್ಕಿ" ಸಿಕ್ಕಿತು... !

ಅವನ 
ಪಂಚೆಯ ತುದಿಗೆ ಅದನ್ನು ಕಟ್ಟಿ..

"ಹೋಗಿ ಬನ್ನಿ...
ಶ್ರೀಕೃಷ್ಣ ಕೇಳಿದರೆ ಇದನ್ನು ಕೊಡಿ...

ಅರ್ಥವಾಗುವ ಮನಸ್ಸಿಗೆ 
ಹೃದಯಕ್ಕೆ
ವಸ್ತುಸ್ಥಿತಿಯನ್ನು ಹೇಳುವ ಅಗತ್ಯವಿರುವದಿಲ್ಲ... ಅರ್ಥವಾಗುತ್ತದೆ..."...

ಸುಧಾಮ 
ಬಲು ದೂರ ನಡೆದು..
ಬಳಲಿ.. ಬೆಂಡಾಗಿ..
ಹಸಿವೆಯಿಂದ
ಶ್ರೀಕೃಷ್ಣನ ಮನೆಯ ದ್ವಾರದ ಬಳಿ ಬಂದ....

ದ್ವಾರ ಪಾಲಕ ಒಳಗೆ ಬಿಡಲಿಲ್ಲ...

"ನಾನು
ಶಿಕೃಷ್ಣನ ಗೆಳೆಯ...
ಬಾಲ್ಯ ಸ್ನೇಹಿತ..."....

ದ್ವಾರ ಪಾಲಕ ನಕ್ಕ... !

ಬಡತನಕ್ಕೆ 
ಕಣ್ಣೀರು...
ಹಸಿವೆಯನ್ನು ಬಿಟ್ಟು...
ಸುಲಭವಾಗಿ ಮತ್ತೆ ಯಾವುದೂ ದಕ್ಕುವದಿಲ್ಲ...

"ಪುಣ್ಯಾತ್ಮ...
ಒಳಗೆ ಹೋಗಿ ಶ್ರೀಕೃಷ್ಣನಿಗೆ "ಸುಧಾಮ ಬಂದಿದ್ದಾನೆ" ಅಂತಾದರೂ ಹೇಳು...

ಆತನಿಗೆ ನೆನಪು ಇಲ್ಲವಾದಲ್ಲಿ ತಿರುಗಿ ಹೋಗುವೆ... "....

ದ್ವಾರಪಾಲಕ
ಒಳಗೆ ಹೋಗಿ ಕೃಷ್ಣನಿಗೆ ಸುಧಾಮನ ಹೆಸರು ಹೇಳಿದ..

ಕೃಷ್ಣ
ಓಡೋಡಿ ದ್ವಾರದವರೆಗೆ ಬಂದ...

ತನ್ನ ಬಾಲ್ಯದ ಗೆಳೆಯನನ್ನು ತಬ್ಬಿಕೊಂಡ..

ಕಣ್ಣಲ್ಲಿ ನೀರು ಇಳಿಯುತ್ತಿತ್ತು...

ಸುಧಾಮನನ್ನು
ಒಳಗೆ ಕರೆತಂದು ತಾನು ಕುಳಿತುಕೊಳ್ಳುವ ಆಸನದಲ್ಲಿ ಕುಳ್ಳಿರಿಸಿದ...

ಅವನ ಪಾದ ತೊಳೆದ..
ಬಿಸಿಲಲ್ಲಿ 
ಬರಿಗಾಲಲ್ಲಿ ನಡೆದು ಬೊಬ್ಬೆಗುಳ್ಳೆಗಳಾಗಿದ್ದ ಗೆಳೆಯನ ಕಾಲುಗಳನ್ನು ನೋಡಿ ಮರುಗಿದ...
ದುಃಖಿಸಿದ...

ತಮ್ಮ ಬಾಲ್ಯದ ತುಂಟಾಟಗಳನ್ನು ನೆನಪಿಸಿದ...

ಹರಟಿದ... ನಗಿಸಿದ...
ಒಂದು
ಕ್ಷಣಕ್ಕಾದರೂ ಸುಧಾಮನ ನೋವುಗಳನ್ನು ಮರೆಸಿದ... !

ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ ಬಡಿಸಿದ...

"ಗೆಳೆಯಾ...
ನನಗಾಗಿ ಏನು ತಂದಿರುವೆ...?..".... 

ಸುಧಾಮ 
ನಾಚಿ.. ಸಂಕೋಚದ ಮುದ್ದೆಯಾದ..

ಎಲ್ಲಿಯ ಶ್ರೀಕೃಷ್ಣ.. !
ಆವನ ಅರಮನೆಯ ವೈಭವ... ಮೃಷ್ಟಾನ್ನ ಭೋಜನ..!

ಎಲ್ಲಿಯ 
ಕುಚೇಲ
ಸುಧಾಮನ ಎರಡು ಹಿಡಿ ಮುಷ್ಟಿಯ ಒಣ ಅವಲಕ್ಕಿ ?...

ಕೃಷ್ಣ ಬಿಡಲಿಲ್ಲ...

ಪಂಚೆಯ ತುದಿಯಲ್ಲಿ ಕಟ್ಟಿದ ಅವಲಕ್ಕಿ ಕಾಣಿಸಿತು...

ಗಂಟು ಬಿಚ್ಚಿ...
ಅವಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ಚಪ್ಪರಿಸಿದ...

ಸುಧಾಮನ ಕಣ್ಣಲ್ಲಿ 
ನೀರಿಳಿಯುತ್ತಿತ್ತು..

ಒಂದೆರಡು ದಿನ ಅಲ್ಲಿದ್ದು 
ಶ್ರೀಕೃಷ್ಣನಿಂದ ಬಿಳ್ಕೊಟ್ಟು ಮನೆಯ ಕಡೆ ಹೊರಟ..

ಮನೆಯ 
ಬಳಿ ಬಂದಾಗ ಅವನ ಮನೆ ಅಲ್ಲಿರಲಿಲ್ಲ...
ದೊಡ್ಡ ಅರಮನೆಯಿತ್ತು...

ಅವನ ಮಕ್ಕಳು ಒಳ್ಳೆಯ ಉಡುಪುಗಳನ್ನು ಧರಿಸಿ ಅಪ್ಪನನ್ನು ಸ್ವಾಗತಿಸಿದರು..

ಮಡದಿ
ರೇಷ್ಮೆ ಸೀರೆ ಉಟ್ಟು... ಮೈ ತುಂಬಾ ಆಭರಣ ಧರಿಸಿ ನಗು ನಗುತ್ತಾ ಸ್ವಾಗತಿಸಿದಳು....

ಕೃಷ್ಣನ ಭೇಟಿಯಲ್ಲಿ
ಸುಧಾಮನಿಗೆ ನಾಲಿಗೆ ಕಟ್ಟಿತ್ತು...

ಸಹಾಯ ಕೇಳಿರಲಿಲ್ಲ...

ಆದರೆ 
ಶ್ರಿಕೃಷ್ಣ 
ತನ್ನ ಗೆಳೆಯನನ್ನು..

ಗೆಳೆತನವನ್ನು ಮರೆತಿರಲಿಲ್ಲ...

ಒಮ್ಮೆ
ಶುರುವಾದ ಸ್ನೇಹಕ್ಕೆ "ಮರೆವು" ಎನ್ನುವದು ಇರುವದಿಲ್ಲ...

ದೂರ..
ಹತ್ತಿರ...
ಮಾತು.. ಮೌನ 
ಎಲ್ಲವನ್ನೂ ಮೀರಿದ ಭಾವ ಸಂಬಂಧ ಇದು.. !
:::::::::::::::::::

ನಮ್ಮ

ಪ್ರತಿ ಮಾತಿನಲ್ಲಿ...
ಮೌನದಲ್ಲಿ... 
ಪವಿತ್ರವಾದ ಸ್ನೇಹ ಪರಿಮಳವಿರಲಿ....

ನಮ್ಮ ಪ್ರತಿ ಸಂಬಂಧಗಳಲ್ಲಿ "ಭಾವನೆಗಳಿರಲಿ"...

ನಮ್ಮ
ಪ್ರತಿಯೊಂದು ಸಂಬಂಧಗಳು
ಭಾವ
ಭಾಂಧವ್ಯಗಳಾಗಲಿ..
ಅವುಗಳನ್ನು ನಿಭಾಯಿಸುವ ಶಕ್ತಿ ನಮಗಿರಲಿ...

ನಮ್ಮ
ಪ್ರತಿಯೊಂದೂ ಸಂಬಂಧಗಳಲ್ಲಿ ಒಬ್ಬ ನಗುವ ಗೆಳೆಯನಿರಲಿ....share wit ur best frndzzಮನೆ ತುಂಬಾ ಮಕ್ಕಳು..
ಕಿತ್ತು 
ತಿನ್ನುವ ಬಡತನ...
ಹಸಿವು...

ಬದುಕಿನ
ನಿಜವಾದ ಬಣ್ಣವನ್ನು ಪರಿಚಯ ಮಾಡಿಸುವದೇ ಈ ಹಸಿವು... !

ಹೆಂಡತಿಗೆ ಸಹಿಸಲಾಗಲಿಲ್ಲ...

"ನಿಮ್ಮ 
ಸ್ನೇಹಿತ ಶ್ರೀಕೃಷ್ಣ..
ಈಗ ರಾಜನಾಗಿದ್ದಾನೆ...

ಹೋಗಿ..
ಒಮ್ಮೆ ಭೇಟಿಯಾಗಿ ಬನ್ನಿ..."

ಸುಧಾಮನಿಗೆ ಸಂಕೋಚವಾಯಿತು...

"ಹೇಗೆ ಹೋಗಲಿ.. ?

ಆತ ಚಕ್ರವರ್ತಿ...
ಶ್ರೀಮಂತ..
ಲೋಕವೇ ಅವನನ್ನು ಪೂಜಿಸುತ್ತಿದೆ...

ನನ್ನ 
ವೇಷ ಭೂಷಣಕ್ಕೂ ಅವನ ಭೇಟಿಯಾಗುವ ಯೋಗ್ಯತೆ ಇಲ್ಲ...

ನಾವು ಸಣ್ಣವರಿದ್ದಾಗ ಸ್ನೇಹವಿತ್ತು...

ಈಗ
ಆತನಿಗೆ ನನ್ನ ನೆನಪು ಇದೆಯೋ.. ಇಲ್ಲವೋ ಗೊತ್ತಿಲ್ಲ..."...

ಸುಧಾಮನ ಮಡದಿ ಬಿಡಲಿಲ್ಲ..

"ಸ್ನೇಹಕ್ಕೆ 
ಅಂತಸ್ತು... ಶ್ರೀಮಂತಿಕೆ..ಇವುಗಳ ಅಗತ್ಯವೇ ಇಲ್ಲ..

ಸ್ನೇಹಕ್ಕೆ 
ಕೇವಲ ಭಾವನೆ.. ನೆನಪುಗಳು... ಹೃದಯ ಶ್ರೀಮಂತಿಕೆ ಸಾಕು..
ಹೋಗಿ ಬನ್ನಿ..."

ಸುಧಾಮನಿಗೆ ಮತ್ತೆ ಸಂಕೋಚ..

"ಖಾಲಿ ಕೈಯ್ಯಲ್ಲಿ ಹೇಗೆ ಹೋಗಲಿ ?....

ಏನಾದರೂ 
ತೆಗೆದುಕೊಂಡು ಹೋಗಲು ನಮ್ಮ ಬಳಿ ಏನೂ ಇಲ್ಲವಲ್ಲ.."....

ಮಡದಿ ಹಠವಾದಿ...

ಮನೆಯ ಡಬ್ಬಗಳನ್ನೆಲ್ಲ ಹುಡುಕಾಡಿದಳು..

ಎರಡು ಮುಷ್ಟಿ "ಅವಲಕ್ಕಿ" ಸಿಕ್ಕಿತು... !

ಅವನ 
ಪಂಚೆಯ ತುದಿಗೆ ಅದನ್ನು ಕಟ್ಟಿ..

"ಹೋಗಿ ಬನ್ನಿ...
ಶ್ರೀಕೃಷ್ಣ ಕೇಳಿದರೆ ಇದನ್ನು ಕೊಡಿ...

ಅರ್ಥವಾಗುವ ಮನಸ್ಸಿಗೆ 
ಹೃದಯಕ್ಕೆ
ವಸ್ತುಸ್ಥಿತಿಯನ್ನು ಹೇಳುವ ಅಗತ್ಯವಿರುವದಿಲ್ಲ... ಅರ್ಥವಾಗುತ್ತದೆ..."...

ಸುಧಾಮ 
ಬಲು ದೂರ ನಡೆದು..
ಬಳಲಿ.. ಬೆಂಡಾಗಿ..
ಹಸಿವೆಯಿಂದ
ಶ್ರೀಕೃಷ್ಣನ ಮನೆಯ ದ್ವಾರದ ಬಳಿ ಬಂದ....

ದ್ವಾರ ಪಾಲಕ ಒಳಗೆ ಬಿಡಲಿಲ್ಲ...

"ನಾನು
ಶಿಕೃಷ್ಣನ ಗೆಳೆಯ...
ಬಾಲ್ಯ ಸ್ನೇಹಿತ..."....

ದ್ವಾರ ಪಾಲಕ ನಕ್ಕ... !

ಬಡತನಕ್ಕೆ 
ಕಣ್ಣೀರು...
ಹಸಿವೆಯನ್ನು ಬಿಟ್ಟು...
ಸುಲಭವಾಗಿ ಮತ್ತೆ ಯಾವುದೂ ದಕ್ಕುವದಿಲ್ಲ...

"ಪುಣ್ಯಾತ್ಮ...
ಒಳಗೆ ಹೋಗಿ ಶ್ರೀಕೃಷ್ಣನಿಗೆ "ಸುಧಾಮ ಬಂದಿದ್ದಾನೆ" ಅಂತಾದರೂ ಹೇಳು...

ಆತನಿಗೆ ನೆನಪು ಇಲ್ಲವಾದಲ್ಲಿ ತಿರುಗಿ ಹೋಗುವೆ... "....

ದ್ವಾರಪಾಲಕ
ಒಳಗೆ ಹೋಗಿ ಕೃಷ್ಣನಿಗೆ ಸುಧಾಮನ ಹೆಸರು ಹೇಳಿದ..

ಕೃಷ್ಣ
ಓಡೋಡಿ ದ್ವಾರದವರೆಗೆ ಬಂದ...

ತನ್ನ ಬಾಲ್ಯದ ಗೆಳೆಯನನ್ನು ತಬ್ಬಿಕೊಂಡ..

ಕಣ್ಣಲ್ಲಿ ನೀರು ಇಳಿಯುತ್ತಿತ್ತು...

ಸುಧಾಮನನ್ನು
ಒಳಗೆ ಕರೆತಂದು ತಾನು ಕುಳಿತುಕೊಳ್ಳುವ ಆಸನದಲ್ಲಿ ಕುಳ್ಳಿರಿಸಿದ...

ಅವನ ಪಾದ ತೊಳೆದ..
ಬಿಸಿಲಲ್ಲಿ 
ಬರಿಗಾಲಲ್ಲಿ ನಡೆದು ಬೊಬ್ಬೆಗುಳ್ಳೆಗಳಾಗಿದ್ದ ಗೆಳೆಯನ ಕಾಲುಗಳನ್ನು ನೋಡಿ ಮರುಗಿದ...
ದುಃಖಿಸಿದ...

ತಮ್ಮ ಬಾಲ್ಯದ ತುಂಟಾಟಗಳನ್ನು ನೆನಪಿಸಿದ...

ಹರಟಿದ... ನಗಿಸಿದ...
ಒಂದು
ಕ್ಷಣಕ್ಕಾದರೂ ಸುಧಾಮನ ನೋವುಗಳನ್ನು ಮರೆಸಿದ... !

ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ ಬಡಿಸಿದ...

"ಗೆಳೆಯಾ...
ನನಗಾಗಿ ಏನು ತಂದಿರುವೆ...?..".... 

ಸುಧಾಮ 
ನಾಚಿ.. ಸಂಕೋಚದ ಮುದ್ದೆಯಾದ..

ಎಲ್ಲಿಯ ಶ್ರೀಕೃಷ್ಣ.. !
ಆವನ ಅರಮನೆಯ ವೈಭವ... ಮೃಷ್ಟಾನ್ನ ಭೋಜನ..!

ಎಲ್ಲಿಯ 
ಕುಚೇಲ
ಸುಧಾಮನ ಎರಡು ಹಿಡಿ ಮುಷ್ಟಿಯ ಒಣ ಅವಲಕ್ಕಿ ?...

ಕೃಷ್ಣ ಬಿಡಲಿಲ್ಲ...

ಪಂಚೆಯ ತುದಿಯಲ್ಲಿ ಕಟ್ಟಿದ ಅವಲಕ್ಕಿ ಕಾಣಿಸಿತು...

ಗಂಟು ಬಿಚ್ಚಿ...
ಅವಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ಚಪ್ಪರಿಸಿದ...

ಸುಧಾಮನ ಕಣ್ಣಲ್ಲಿ 
ನೀರಿಳಿಯುತ್ತಿತ್ತು..

ಒಂದೆರಡು ದಿನ ಅಲ್ಲಿದ್ದು 
ಶ್ರೀಕೃಷ್ಣನಿಂದ ಬಿಳ್ಕೊಟ್ಟು ಮನೆಯ ಕಡೆ ಹೊರಟ..

ಮನೆಯ 
ಬಳಿ ಬಂದಾಗ ಅವನ ಮನೆ ಅಲ್ಲಿರಲಿಲ್ಲ...
ದೊಡ್ಡ ಅರಮನೆಯಿತ್ತು...

ಅವನ ಮಕ್ಕಳು ಒಳ್ಳೆಯ ಉಡುಪುಗಳನ್ನು ಧರಿಸಿ ಅಪ್ಪನನ್ನು ಸ್ವಾಗತಿಸಿದರು..

ಮಡದಿ
ರೇಷ್ಮೆ ಸೀರೆ ಉಟ್ಟು... ಮೈ ತುಂಬಾ ಆಭರಣ ಧರಿಸಿ ನಗು ನಗುತ್ತಾ ಸ್ವಾಗತಿಸಿದಳು....

ಕೃಷ್ಣನ ಭೇಟಿಯಲ್ಲಿ
ಸುಧಾಮನಿಗೆ ನಾಲಿಗೆ ಕಟ್ಟಿತ್ತು...

ಸಹಾಯ ಕೇಳಿರಲಿಲ್ಲ...

ಆದರೆ 
ಶ್ರಿಕೃಷ್ಣ 
ತನ್ನ ಗೆಳೆಯನನ್ನು..

ಗೆಳೆತನವನ್ನು ಮರೆತಿರಲಿಲ್ಲ...

ಒಮ್ಮೆ
ಶುರುವಾದ ಸ್ನೇಹಕ್ಕೆ "ಮರೆವು" ಎನ್ನುವದು ಇರುವದಿಲ್ಲ...

ದೂರ..
ಹತ್ತಿರ...
ಮಾತು.. ಮೌನ 
ಎಲ್ಲವನ್ನೂ ಮೀರಿದ ಭಾವ ಸಂಬಂಧ ಇದು.. !
:::::::::::::::::::

ನಮ್ಮ

ಪ್ರತಿ ಮಾತಿನಲ್ಲಿ...
ಮೌನದಲ್ಲಿ... 
ಪವಿತ್ರವಾದ ಸ್ನೇಹ ಪರಿಮಳವಿರಲಿ....

ನಮ್ಮ ಪ್ರತಿ ಸಂಬಂಧಗಳಲ್ಲಿ "ಭಾವನೆಗಳಿರಲಿ"...

ನಮ್ಮ
ಪ್ರತಿಯೊಂದು ಸಂಬಂಧಗಳು
ಭಾವ
ಭಾಂಧವ್ಯಗಳಾಗಲಿ..
ಅವುಗಳನ್ನು ನಿಭಾಯಿಸುವ ಶಕ್ತಿ ನಮಗಿರಲಿ...

ನಮ್ಮ
ಪ್ರತಿಯೊಂದೂ ಸಂಬಂಧಗಳಲ್ಲಿ ಒಬ್ಬ ನಗುವ ಗೆಳೆಯನಿರಲಿ....

ಸೋಮವಾರ, ಜನವರಿ 23, 2017

ಹೆಣ್ಣು ಮಕ್ಕಳು ತಾಳ್ಮೆ ಕಳಕೊಳ್ಳುತ್ತಿರುವುದು ಯಾಕೆ?*

ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಒಪ್ಪುತ್ತೀರೋ ಗೊತ್ತಿಲ್ಲ. ಆದರೆ ನನ್ನ ಗಮನಕ್ಕೆ ಬಂದಿರುವ, ನ್ಯಾಯ ಕೇಳಿ ನನಗೆ ದೂರು ನೀಡಲಾಗಿರುವ ಮತ್ತು ಆಪ್ತ ಸಮಾಲೋಚನೆ ನಡೆಸಿರುವ ಗಂಡ-ಹೆಂಡತಿ ಮನಸ್ತಾಪಗಳ ಹಿನ್ನೆಲೆಯಲ್ಲಿ ಈ ನಿಲುವಿಗೆ ಬರುತ್ತಿದ್ದೇನೆ. ನಮ್ಮ ಹೆಣ್ಣು ಮಕ್ಕಳು ತಾಳ್ಮೆ ಕಳಕೊಳ್ಳುತ್ತಿದ್ದಾರೆ. ಚಿಕ್ಕ ಪುಟ್ಟ ವಿಚಾರಗಳಿಗೂ ವಿವಾಹ ವಿಚ್ಛೇದನದ ತೀರ್ಮಾನಕ್ಕೆ ಬಂದು ಬಿಡುತ್ತಾರೆ!

ಅನುಪಾತದ ಲೆಕ್ಕಾಚಾರ ಹಾಕಿದರೆ ಕಾಲೇಜು ಮೆಟ್ಟಲು ಹತ್ತಿರುವ ಅಥವಾ ನಾಲ್ಕಕ್ಷರ ತಿಳಿದಿರುವ ಹೆಣ್ಣು ಮಕ್ಕಳಿಗೆ ತಾಳ್ಮೆ ತುಂಬಾ ಕಡಿಮೆ. ಹಾಗಾದರೆ ಅವರಿಗೆ ಶಿಕ್ಷಣ ನೀಡಿದ್ದೇ ತಪ್ಪಾಯಿತೇ? ಧಾರ್ಮಿಕ ಶಿಕ್ಷಣ ನೀಡಿದರೆ ಎಲ್ಲ ಸರಿ ಹೋಗುತ್ತೆ ಎನ್ನುವವರಿದ್ದಾರೆ. ಆದರೆ, ಏನೂ ವ್ಯತ್ಯಾಸ ಕಾಣುತ್ತಿಲ್ಲ!

ಮಹಿಳಾ ಶೋಷಣೆಯ ವಿರುದ್ಧ ಹೋರಾಡಲು ಅನೇಕ ಸಂಸ್ಥೆಗಳಿವೆ. ಪುರುಷ ಶೋಷಣೆಯ ವಿರುದ್ಧ ಇನ್ನು ಸಂಘ-ಸಂಸ್ಥೆಗಳು ಹುಟ್ಟಿಕೊಂಡರೆ ಅಚ್ಚರಿ ಪಡಬೇಕಾಗಿಲ್ಲ.

ಯಾಕೆಂದರೆ ಪೊಲೀಸ್ ಇಲಾಖೆ, ನ್ಯಾಯಾಲಯಗಳು ಅನೇಕ ಸಲ ಭಾವನಾತ್ಮಕವಾಗಿ ಮಹಿಳಾ ಪರವಾಗಿರುತ್ತೆ. ಈ ಕಾರಣಕ್ಕಾಗಿಯೇ ಇರಬಹುದೇನೋ, ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು "ವರದಕ್ಷಿಣೆ ವಿಚಾರವಾಗಿ ಗಂಡ-ಹೆಂಡತಿ ಜಗಳದ ಕೇಸುಗಳನ್ನು ದೂರು ಬಂದ ಕೂಡಲೇ  ದಾಖಲಿಸಬೇಡಿ. ಸಾಕಷ್ಟು ತನಿಖೆ ನಡೆಸಿದ ಬಳಿಕವೇ ಅಗತ್ಯವಿದ್ದಲ್ಲಿ ಕೇಸು ದಾಖಲಿಸಿ. ನ್ಯಾಯಾಲಯಗಳ ಸಮಯ ಉಳಿಸಿ" ಎಂದು ಪೋಲಿಸ್ ಇಲಾಖೆಗೆ ಆದೇಶಿಸಿದೆ.

ಗಂಡ, ಆತನ ತಂದೆ,ತಾಯಿ ಮತ್ತು ಇಡೀ ಕುಟುಂಬದ ಮೇಲೆ ಸುಳ್ಳು ಕೇಸು ಹಾಕಿ ವರ್ಷಗಟ್ಟಲೆ ಅವರು ಪೊಲೀಸ್ ಠಾಣೆ, ನ್ಯಾಯಾಲಯಗಳಿಗೆ ಅಲೆದಾಡುವಂತೆ ಮಾಡುವ ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳುವವರು ಯಾರು?

ಮಹಿಳಾ ಶೋಷಣೆ, ಪುರುಷ ಪ್ರಧಾನ ಸಮಾಜ ಎಂದೆಲ್ಲಾ ಕಿರುಚಾಡುವ ಮಂದಿ ಇದಕ್ಕೆ ಉತ್ತರ ನೀಡುತ್ತಾರೆಯೇ?

ತಾಯಿಯ ಬಗ್ಗೆ ಅತಿಯಾದ ಗೌರವ ನಮಗೆ, ಆದರೆ ತಂದೆಯನ್ನು ಯಾಕೆ ಮರೆಯುತ್ತೇವೆ? ನಮ್ಮ ಬೆಳವಣಿಗೆಗೆ ಆತನ ಕೊಡುಗೆ ಏನೂ ಇಲ್ಲವೇ?

ಕುಟುಂಬ, ಮನೆ, ಊರು, ದೇಶ ಬಿಟ್ಟು ಪರವೂರು/ವಿದೇಶಗಳಲ್ಲಿ ಬೆವರು, ರಕ್ತ ಸುರಿಸುತ್ತಾ ಸಂಸಾರಕ್ಕೆ ಬೆಂಗಾವಲಾಗಿ ನಿಂತು ಜೀವ ಸವೆಸುತ್ತಿರುವ ನಮ್ಮ ಹುಡುಗರು ಒಂದರ್ಥದಲ್ಲಿ ಶೋಷಣೆಗೆ ಒಳಪಟ್ಟವರಲ್ಲವೇ?

ಪ್ರಸಕ್ತ ಸಮಾಜದ ಹುಡುಗಿಯರಿಗೆ ಹೋಲಿಸಿದರೆ, ಹುಡುಗರು ಎಷ್ಟೋ ವಾಸಿ ಅನಿಸುತ್ತಿದೆ. ನನ್ನ ನಿಲುವು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ!

*ಉಮರ್ ಯು.ಹೆಚ್.*