ಶನಿವಾರ, ಜೂನ್ 18, 2016

ಪಿಂಚಣಿ

ವೇದಿಕೆಯ ಗೌರವಾನ್ವಿತ ಸಹೋದರರಲ್ಲಿ ವಿನಂತಿ, ಸರಕಾರದ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಿಸಲು ಸರಳವಾಗಿ ತಿಳುವಳಿಕೆ ನೀಡುವ ಕಾರ್ಯ ನಮ್ಮೆಲ್ಲರಿಂದ ಆಗಬೇಕಾಗಿದೆ. ಅದು ಕೇಂದ್ರ ಸರಕಾರದ ಯೋಜನೆಗಳಾಗಿರಬಹುದು ಅಥವಾ ರಾಜ್ಯ ಸರಕಾರದ ಯೋಜನೆಗಳಾಗಿರಬಹುದು.

ಒಂದು ಉದಾಹರಣೆಃ-

ವೃದ್ಧಪ್ಪ ಯೋಜನೆಯ ಪಿಂಚಣಿ ಪಡೆಯಬೇಕಾರೆ ಮಾಡಬೇಕಾದ ಕಾರ್ಯ.
೧) ನಿಗದಿತ ಅರ್ಜಿ ನಮೂನೆ ಎಲ್ಲಾ ಮಾರಾಟ ಅಥವಾ ಝರಾಕ್ಸ್ (ಜಾಬ್ ವರ್ಕ್) ಕೇಂದ್ರಗಳಲ್ಲಿ ದೊರಕುತ್ತದೆ , ಅದನ್ನು ಪಡೆಯಬೇಕು.

೨) ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಬೇಕು. (ಇತ್ತೀಚಿನ ಭಾವ ಚಿತ್ರದೊಂದಿಗೆ)

೩)ಸರಕಾರಿ ವೈದ್ಯರಿಂದ ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ (Age certificate) ಪಡೆಯಬೇಕು.

೪) ಗ್ರಾಮ ಲೇಖಪಾಲಕರಿಂದ ದೃಡೀಕರಿಸಿಕೊಳ್ಳಬೇಕು.

೫) ಕಂದಾಯ ನಿರೀಕ್ಷಕರಿಂದ ವರದಿ ಸಲ್ಲಿಸಿಕೊಳ್ಳಬೇಕು.

೬) ಪೋಸ್ಟ್/ಬ್ಯಾಂಕ್ ಖಾತೆ ಹೊಂದಬೇಕು.

೭) ಕಂದಾಯ ನಿರೀಕ್ಷಕರ ವರದಿಯೊಂದಿಗೆ ತಹಸೀಲ್ದಾರರ ಸಂಬಂಧಪಟ್ಟ ವಿಭಾಗ ,ನೆಮ್ಮದಿ ಕೇಂದ್ರ ಅಥವಾ ನೇರವಾಗಿ ಸಲ್ಲಿಸಬೇಕು.

೮) ತಹಸೀಲ್ದಾರರು ತಮ್ಮ ಅರ್ಜಿ ಹಾಗೂ ದಾಖಲೆಗಳನ್ನು ಪರಿಶಿಪರಿಶೀಲಿಸಿ ಮಂಜೂರಾತಿ ಆದೇಶವನ್ನು, ಜಿಲ್ಲಾ/ತಾಲೂಕು ಖಜಾನೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಫಲಾನುಭವಿಗೆ ನೀಡುವರು.