ನಮ್ಮ ಧಾರ್ಮಿಕ ಮುಖಂಡರು ಮಸಿದಿ
ಗಳಲ್ಲಿ ಜನರಿಗೆ ನಿಜ ಜೀವನವನ್ನು ಶಿಕ್ಷಣ
ದಿಂದ ಹೇಗೆ ಸುಂದರ ಗೊಳಿಸಿಕೊಳ್ಲಬೇಕು
ಎಂದು ಯಾರೂ ಹೇಳಲ್ಲ.ಕೇವಲ ಅವರಿಗೆ
ಸ್ವರ್ಗ,ನರಕಗಳ ಭಯ ಹುಟ್ಟಿಸಿ ಮನಸು
ಕೆಡಿಸಿ ಕಳಿಸುತ್ತಾರೆ.
ನಮ್ಮ ಜನ ಮೀಸಲಾತಿಗೆ ಅಂಗಲಾಚುವು
ದಕ್ಕಿಂತ ಮೆರಿಟ್ಗೆ ಮುಗಿಬೀಳುವ ಶಿಕ್ಷಣ
ಪಡೆಯುವಂತೆ ತಯಾರಾಗಬೇಕು.ಜೊತೆಗೆ
ಮೀಸಲಾತಿಯ ನಮ್ಮ ಹಕ್ಕನ್ನು ಬಿಡ
ಬಾರದು.ಅದಕ್ಕೆಂದೆ ನಾನು,ನಮ್ಮ ಜನ
ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು.
ಧಾರ್ಮಿಕ ವಿಚಾರ ನಮಗೆ ಬೇಡ.ಆದ್ಯತೆ ಶಿಕ್ಷಣ ಸಾಮಾಜಿಕ ಉದ್ಯೋಗ ವಿಶೇಷವಾಗಿ ಸರ್ಕಾರಿ ಉದ್ಯೋಗ ಮತ್ತು ಆರ್ಥಿಕವಾಗಿರವಲಿ.ದೀನಿನ ಬಗ್ಗೆ ಚರ್ಚೆಗೆ ಬೇರೆ ಗ್ರೂಪ್ ಮಾಡಿ. ಕಾರಣ ಅನೇಕ ವೈರುಧ್ಯ ವಿಚಾರಗಳಿಂದ ಅನೇಕ ಗುಂಪುಗಳಿವೆ.ಈ ಕಾರಣದಿಂದ ನಮ್ಮಲ್ಲಿ ಒಡಕು ಬರಬಾರದು.ಇಸ್ಲಾಂ ಶಾಂತಿ ಸೌಹಾರ್ದತೆಯ ಸಂಕೇತ.
🏻ಮುಸ್ಲಿಮರ ಅಭಿವೃದ್ಧಿ ಕುರಿತು ಚರ್ಚಿಸಲಾಗುತ್ತಿರುವ ಅಭಿಪ್ರಾಯಗಳು.
ನಮ್ಮ ಧಾರ್ಮಿಕ ಮುಖಂಡರು ಮಸಿದಿ
ಗಳಲ್ಲಿ ಜನರಿಗೆ ನಿಜ ಜೀವನವನ್ನು ಶಿಕ್ಷಣ
ದಿಂದ ಹೇಗೆ ಸುಂದರ ಗೊಳಿಸಿಕೊಳ್ಲಬೇಕು
ಎಂದು ಯಾರೂ ಹೇಳಲ್ಲ.ಕೇವಲ ಅವರಿಗೆ
ಸ್ವರ್ಗ,ನರಕಗಳ ಭಯ ಹುಟ್ಟಿಸಿ ಮನಸು
ಕೆಡಿಸಿ ಕಳಿಸುತ್ತಾರೆ.
ಪ್ರಜ್ಞಾವಂತ ಮುಸ್ಲಿಮ ನಾಯಕರುಗಳು ಮತ್ತು ಯುವಕರು ಮೊದಲು ಧಾರ್ಮಿಕತೆ ಇಂದಾ ಈಚೆಗೆ ಬರಬೇಕು,ಏನು ಚೆರ್ಚೆಯನ್ನು ಮಾಡಿದರು ಧರ್ಮದಲ್ಲೇ ಹುಡಕುತ್ತಾಹೋಗುವದು ಮತ್ತು ನಮ್ಮ ಧರ್ಮದ ಬಗ್ಗೆ ನಾವೇ ಚೆರ್ಚೆಯನ್ನು ಮಾಡುವದು ಬಿಟ್ಟು ಸಾಮಜಿಕ ಚಿಂತನೆ ಮಾಡಿ
ನಾವಿರುವ ನಗರ, ಪಟ್ಟಣ ಊರುಗಳಲ್ಲಿ
ಕನಿಷ್ಟ ಹತ್ತಾರು ಯುವಕರು,ಸಾಮಾಜಿಕ
ಕಾಳಜಿಉಳ್ಲ ನಿವ್ರುತ್ತ ಹಿರಿಯರ ತಂಡ
ರಚಿಸಿ ಎಲ್ಲರೂ ಒಟ್ಟಾಗಿ ಸ್ತಳಿಯ ಸಮಸ್ಯೆ
ಗಳಬಗ್ಗೆ ಚರ್ಚಿಸಿ ಮುಂದುವರಿಯಬೇಕು.
ಸ್ತಳೀಯ ಬಡವರು,ಬಿ.ಪಿ.ಏಲ್ ಕಾರ್ಡು
ದಾರರ ಸಮಸ್ಯೆ ಗಳಿಗೆ ಉತ್ತರ ಹುಡುಕಲು
ಶ್ರಮಿಸಬೇಕು.ಅವರಿಗೆ ಶೈಕ್ಷಣಿಕ ಮಾರ್ಗ
ದರ್ಶನ ಸಿಗಬೇಕು.ಹೀಗೆ ಆರಂಭಿಸಿದರೆ
ಎಲ್ಲವು ಅರ್ಥವಾಗುತ್ತಾ ಹೋಗಿತ್ತೆ.
ಐಷಾರಾಮಿ ಮಸೀದಿಗಳ ನೆರಳಲ್ಲೇ ಎಷ್ಟೋ ಬಡ ಕುಟುಂಬಗಳು ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲದೇ ಇರುತ್ತಿವೆ.
ರಂಜಾನ್ ತಿಂಗಳಲ್ಲಿ ಮಸೀದಿಗಳ ನವೀಕರಣ, ಸಿಂಗಾರ, ಖಚು೯ ವೆಚ್ಚಗಳಿಗೆ ಸಂಗ್ರಹವಾಗುವ ಹಣದಲ್ಲಿ ನೂರಾರು ಕುಟುಂಬಗಳ ಬದುಕು ಸಿಂಗರಿಸಬಹುದು.....ಅದೇ ರೀತಿ ಮದರಸಾಗಳಿಗೆ ಹೋಗುವ ಹಣದಿಂದಲೂ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಬಹುದು
ಇಸ್ಲಾಂ ಧರ್ಮ ಈ ಭಾರತಕ್ಕೆ ಯಾವತ್ತೂ ಅಪಥ್ಯ ವಾಗಲಿಲ್ಲ, ಆಕಾರಣ ದಿಂದಲೇ ಇಂದು ಬಡ- ದಲಿತರು ಇಸ್ಲಾಂ ಧರ್ಮಕ್ಕೆ ಮತಾಂತರ ವಾಗಿದ್ದಾರೆ, ಸಮಸ್ಯೆ ಇರುವುದು, ಭಾರತದ ಸಂಧರ್ಭದಲ್ಲಿ ಇಸ್ಲಾಂ ಧಾರ್ಮಿಕ ಮುಖಂಡರು ಯಾಕೆ ಮುಸ್ಲಿಮರ ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತೀ ಕ ನಾಯಕತ್ವ ವನ್ನು ಹತೋಟಿ ಯಲ್ಲಿ ಇಟ್ಟದ್ದಾರೆ, ಧಾರ್ಮಿಕ-ರಾಜಕೀಯ-ಆರ್ಥಿಕ ನಾಯಕತ್ವ ಗಳು ಸಾಮಾಜಿಕ ನಾಯಕ ತ್ವ ದ ಗುಣಗಳನ್ನು ಅಳ್ಳವಡಿ ಸಿಕೊಳ್ಳಬೆಕು ಹಾಗು ಅನುರಿಸಬೆಕು, ಯಾಕೆಂದರೆ ಇದು ಜಾತಿ/ಸಮುದಾಯ ಆಧಾರಿತ ರಾಜಕಾರಣದ ಮೇಲೆ ಅವಲಂಬಿತ ಸಾಂ ಸ್ಕೃತಿ ಕ ರಾಜಕಾರಣ ಅವಲಂಬಿತ ದೇಶದ ಸಮಾಜ ವಾಗಿದೆ.
1. ಸ್ವಾರ್ಥವಿಲ್ಲದ ಪರೋಪಕಾರಿ ಸೇವಾ ಮನೋಭಾವ
2. ಇಸ್ಲಾಮ್ ನಲ್ಲಿ ತಿಳಿಸಿರುವಂತೆ ನೀತಿ ಧರ್ಮ ನಡೆನುಡಿ
3. ಬೇಧಭಾವ ಗಳನ್ನು ತೊರೆದು
ಸಮಾಜದಲ್ಲಿ ರುವ ಎಲ್ಲಾ ಧರ್ಮ ದವರೊಂದಿಗೆ , ಎಲ್ಲಾ ಭಾಷೆ ಯವರೊದಿಗೆ ಸ್ಪಂದಸಬೇಕು
4.ಧರ್ಮ ಮತ್ತು
ರಾಜಕೀಯ ,ಸಾಮಾಜಿಕ ವಿಷಯಗಳನ್ನು ಬೆರಸಬಾರದು
5. ರಾಷ್ಟ್ರ ಮತ್ತು ರಾಜ್ಯ ಗಳ ಸಮಸ್ಯೆ ಗಳಿಗೆ ಒಮ್ಮತ ದಿಂದ
ಧ್ವನಿ ಎತ್ತಬೇಕು.
6. ಅಪರಾಧಿ ಗಳು ಯಾರೆ ಇರಲಿ
ಅವರಿಗೆ ಶಿಕ್ಷೆ ಯಾಗುವಂತೆ
ನಿರಫರಾಧಿ ಗೆ ಶಿಕ್ಷೆ ಯಾಗದಂತೆ
ಹೋರಾಟ ಹಮ್ಮಿಕೊಳ್ಳಬೇಕು
ನನಗೆ ತೋಚಿದ್ದನ್ನು ತಮ್ಮೆಲ್ಲರ ಮುಂದೆ ಇಟ್ಟಿದ್ದೇನೆ. ತಪ್ಪಿದ್ದರೆ ದಯವಿಟ್ಟು ಮನ್ನಿಸಿ.
ಒಟ್ಟಿನಲ್ಲಿ ನಮ್ಮ ಮುಸ್ಲಿಂ ಸಮುದಾಯ ದವರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.
ಸಕೀನಾ ಬೇಗಂ