ಪವಿತ್ರವಾದ ರಮಝಾನ್ ತಿಂಗಳು ಹತ್ತಿರ ಬರುತ್ತಿದ್ದ ಹಾಗೆ ಸೋಷಿಯಲ್ ಮೀಡಿಯಾಗಳಲ್ಲಿ ಹೊಸ ಟ್ರಂಡ್:
👉🏼ಪಾಪಗಳಿಗೆ ಅಪರಿಚಿತರಿಂದ ಕ್ಷಮೆ ಕೇಳುವುದು.
👉🏼ಪ್ರೋಪೈಲ್ ಪಿಕ್ಚರ್ ಬದಲಾವಣೆ ಮಾಡುವುದು.
👉🏼ರಮಝಾನ್ ಪ್ರಾರಂಭದಲ್ಲಿ ಒಂದೆರಡು ಹದೀಸ್ ಹಾಕುವುದು.
👉🏼ತಾನು ರಮಝಾನ್ ಮಾಸದಲ್ಲಿ ಗಡ್ಡ ಬಿಟ್ಟು ತಲೆಗೊಂದು ಟೋಪಿಯಿಟ್ಟು ಸೆಲ್ಫಿ ತೆಗೆದು ಅಪ್ಲೋಡ್ ಮಾಡೋದು.
👉🏼ಐಮ್ ಅ ಮುಸ್ಲಿಂ ಐಮ್ ಫಾಸ್ಟೀಂಗ್ ಅಂತ ಇಮೇಜ್ ಹಾಕೋದು.
👉🏼ಸ್ಟೇಟಸ್ ಅಪ್ಟೇಟ್ "ಗರ್ಲ್ಸ್ ನನ್ಗೆ ಇನ್ ಬಾಕ್ಸ್ ಮಾಡಬೇಡಿ ನಾನು ರಮಝಾನ್ ವೃತದಲ್ಲಿದ್ದೇನೆ ಎಂದು ಹೇಳೋದು.
👉🏼ಫೀಲಿಂಗ್ ಹ್ಯಾಪಿ @ xxx ಮಸೀದಿಯಲ್ಲಿ ಎಂದು ಬರೆಯೋದು.
ಇವುಗಳನ್ನೆಲ್ಲ ಇಂದಿನ ಕಾಲಘಟ್ಟದಲ್ಲಿ ಕಾಣಲು ಸಾಧ್ಯವಿದೆ. ದಿನಾಲೂ ಐದು ವಕ್ತ್ ಕಡ್ಡಾಯ ಕಾರ್ಯದಲ್ಲಿ ಒಂದಾದ ನಮಾಝ್ ನಿರ್ವಹಣೆ ಮಾಡುವವರು ಮತ್ತು ಇಸ್ಲಾಂ ಹೇಳಿದ ಉಳಿದ ಕಡ್ಡಾಯ ಕಾರ್ಯವನ್ನು ಮಾಡುವವರು ಹೀಗೆಲ್ಲ ಮಾಡುವುದಿಲ್ಲ ಯಾಕೆಂದರೆ ಅವರಿಗದು ಹೊಸತೆನಿಸುವುದಿಲ್ಲ. ಆದರೆ ಯಾರು ವರ್ಷಕ್ಕೊಮ್ಮೆ ಇಂತಹ ಕಾರ್ಯವನ್ನು ಮಾಡುತ್ತಾರೋ ಅವರಿಗೆ ಅವೆಲ್ಲ ಹೊಸದಾಗಿ ಕಾಣುತ್ತದೆ. ಭವಿಷ್ಯದಲ್ಲಿ ಇನ್ನು ಏನೇಲ್ಲ ಕಾಣಲಿಕ್ಕೆ ಬಾಕಿ ಇದೇಯೋ....