ಭಾನುವಾರ, ಜೂನ್ 19, 2016

ಬರಹಗಾರ

ಬರಹಗಾರನ ಪ್ರಯತ್ನಗಳಿಗೆ ಗೌರವ ನೀಡುವಂತವರಾಗೋಣ.

ಸಾಮಾಜಿಕ ತಾಣಗಳು ಮಿಂಚಿನ ಸಂಚಾರವನ್ನು ಸೃಷ್ಟಿಸುತ್ತಿರುವ ಪ್ರಚಲಿತವಾದ ಸನ್ನಿವೇಶದಲ್ಲಿ, ಸಮಾಜದ ಒಳಿತಿಗೋಸ್ಕರ, ಯುವ ಜನತೆಯ ಜಾಗೃತಿಗೋಸ್ಕರ ಲೇಖನಿಯನ್ನೇ ಆಯುಧವನ್ನಾಗಿಸಿದ ಯುವ ಬರಹಗಾರರ ಸಂಖ್ಯೆಯು ದಿನದಿಂದ ದಿನಕ್ಕೆ ವೃದ್ಧಿಸುತ್ತಿರುವುದು ಅಭಿನಂದನಾರ್ಹವಾದ ವಿಷಯ.

ಆದರೆ ,
ಕೆಲವು ಸಣ್ಣ ಪುಟ್ಟ ಬರಹಗಳೊಂದಿಗೆ ಗುರುತಿಸುವ ಮೂಲಕ, ಆ ಬರಹವೇ ಜೀವನವಂತೆ ಪ್ರೀತಿಸುವ ಅದೆಷ್ಟೋ ಯುವ ಪ್ರತಿಭೆಗಳಿಗೆ ಸಾಮಾಜಿಕ ತಾಣವೇ ಸೂಕ್ತ ವೇದಿಕೆ ಮತ್ತು ಅವರಿಗೆ ನೆಲೆಯನ್ನು ಕಂಡುಕೊಳ್ಳಲು ಪ್ರೇರಣೆ ನೀಡಿದೆ.

ಒಬ್ಬ ಬರಹಗಾರನ ಪ್ರತಿಯೊಂದು ಅಕ್ಷರಗಳಲ್ಲೂ ಅದೆಷ್ಟೋ ನೋವು,ಕಷ್ಟಗಳು ಅಡಕವಾಗಿರುತ್ತೆ.ಕೆಲವೊಮ್ಮೆ ಆತನು ಅದನ್ನು ಬರೆದು ಪೂರ್ತಿಗೊಳಿಸಲು ಪಟ್ಟ ಕಷ್ಟಗಳಿಗೆ ಕಸದ ಬುಟ್ಟಿಯಲ್ಲಿ ರಾಶಿಯಾಗಿ ಬಿದ್ದ ಕಾಗದಗಳೇ ಸಾಕ್ಷಿಯಾಗಿರುತ್ತೆ.

ಹೌದು,
ಯಾವುದೇ ಒಂದು ಬರಹಗಳು ಪೂರ್ತಿಯಾಗಿ ಬರೆದು ಮುಗಿಸುವುದೆಂದರೆ ಅದೊಂದು ಸಾಹಸನೇ ಅನ್ನಬೇಕು.ಕೆಲವೊಂದು ಸಲ ದುರ್ಬಲ ಮೊಬೈಲ್ ಗಳು ಬರೆದ ಬರವಣಿಗೆಯ ಕೊನೆಯ ಸಾಲಿಗಾಗುವಾಗ ಕೈಕೊಟ್ಟು ಬರೆದ ಸಾಲುಗಳೆಲ್ಲಾ ಅಳಿದು ಹೋಗುವಾಗ ಇನ್ನು  ಬರೆಯುವುದೇ ಬೇಡವೆಂದು ಕೆಲವೊಮ್ಮೆ ಮೌನರಾಗುತ್ತೇವೆ.ಆದರೂ ಪ್ರಯತ್ನ ಪಟ್ಟು ಬರಹವನ್ನು ಮುಂದುವರಿಸುತ್ತಾರೆ.
ಇನ್ನು ಕೆಲವು ಬರಹಗಳನ್ನು ಯಾವುದೋ ಭಾಷೆಗಳಿಂದ ಭಾಷಾಂತರಿಸುತ್ತೇವೆ,ಅದು ಸಹ ಹೇಳಿದಷ್ಟು ಸುಲಭದ ಕೆಲಸವಲ್ಲ.

ಯಾವುದೋ ಒಂದು ಬರಹವನ್ನು ಕಷ್ಟಪಟ್ಟು ಬರೆದು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟರೆ ಕ್ಷಣಾರ್ಧದಲ್ಲಿ ಅದರ ಮೂಲ ಬರಹಗಾರರ ಹೆಸರನ್ನು ಅಳಿಸಿ ಹಾಕಿಯೋ,ಅಥವಾ ಇನ್ಯಾರದೋ ಹೆಸರಿನ ಮೂಲಕ ಲಗತ್ತೀಕರಿಸಿ ಇತರ ಗ್ರೂಪುಗಳಿಗೋ,ಇನ್ಯಾರದೋ ಫೇಸ್ ಬುಕ್ ಖಾತೆಯ ಮುಖಾಂತರ ರಾರಾಜಿಸುತ್ತದೆ.ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಬರಹ ಯಾವ ರೂಪದಲ್ಲಿ ರವಾನೆಯಾದರೂ ಒಳ್ಳೆಯದೇ,ಆದರೆ ಅದನ್ನು ಬರೆದವನ ಪರಿಶ್ರಮ,ಪ್ರಯತ್ನಗಳಿಗೆ ಗೌರವ ನೀಡುವಂತಹ ಮನಸ್ಸು ತೋರ್ಪಡಿಸದೇ ಇರುವುದು ವಿಪರ್ಯಾಸ.

ಯಾರೋ ಬರೆದ ಬರಹಗಳನ್ನು ಇನ್ಯಾರದೋ ಹೆಸರನ್ನು ಲಗತ್ತೀಕರಿಸಿ ರವಾನಿಸುವಾಗ ಮೂಲ ಬರಹಗಾರನ ಪ್ರಯತ್ನಗಳಿಗೆ ಗೌರವ ನೀಡುವ ಪ್ರಯತ್ನ ಮಾಡುವಂತವರಾಗೋಣ .

📝ಸ್ನೇಹಜೀವಿ ಅಡ್ಕ