ಬುಧವಾರ, ಜೂನ್ 29, 2016

ವಿನಯತೆಯ ಪ್ರತ್ಯುತ್ತರ

*ಹಿಂದೂ ಸಹೋದರನ ಅಜ್ಞಾನದ ಪರಮಾವಧಿಗೆ ವಿನಯತೆಯ ಪ್ರತ್ಯುತ್ತರ..*

♦ಕನಿಷ್ಟ 3 ಲಕ್ಷ ಮಸೀದಿಗಳು🕌 ನಮ್ಮ ದೇಶದಲ್ಲಿವೆ...!🙊

👉🏾 *ಇರಬಹುದು, ವಿಶ್ವದಲ್ಲೇ ಅತ್ಯಂತ ಹೆಚ್ಚು  ಮುಸ್ಲಿಮರಿರುವ ಎರಡನೇ ಅತೀ ದೊಡ್ಡ ದೇಶ ಭಾರತ. ಭಾರತ ದೇಶದಲ್ಲಿ ತಮಗೆ ಬೇಕಾದಂತೆ ಮಸೀದಿ-ಮಂದಿರಗಳನ್ನು  ನಿರ್ಮಿಸಲು ಇತರರಂತೆ ಮುಸ್ಲಿಮರೂ ಸ್ವತಂತ್ರರು. ಭಾರತ ದೇಶದಲ್ಲಿ  ಬಹುಸಂಖ್ಯಾತ ಹಿಂದುಗಳಿಗೆ ಎಷ್ಟು  ಅಧಿಕಾರವಿದೆಯೋ, ಅಷ್ಟೇ  ಅಧಿಕಾರ ಇಲ್ಲಿನ ಮುಸ್ಲಿಮರಿಗೂ ಇದೆ. ಭಾರತ ನಮ್ಮೆಲ್ಲರ ದೇಶ.*
*ಇದು ಧರ್ಪವಲ್ಲ, ಅಭಿಮಾನ.*

♦ಭಾರತದ ಯಾವೊಬ್ಬ ಮುಸ್ಲಿಮನೂ ಐಸಿಸ್ ನ್ನು ವಿರೋದ್ದ ಪ್ರತಿಭಟಿಸಿಲ್ಲ...!
ಆದರೆ ಕೋಟ್ಯಾಂತರ ಹಿಂದುಗಳೇ RSSನ್ನು ವಿರೋಧಿಸುತ್ತಾರೆ...!

👉🏾 *ಇದು ನಿಮ್ಮ ತಪ್ಪು  ಕಲ್ಪನೆ. ಇಸಿಸ್ ವಿರುದ್ಧ ಜಾಗತಿಕ ಮಟದ್ಟಲ್ಲಿ ಪ್ರಪ್ರಥಮವಾಗಿ ಶಬ್ದವೆತ್ತಿದ್ದೇ ಭಾರತೀಯ ವಿದ್ವಾಂಸರು. ಅದೂ ಅಲ್ಲದೆ ಇಸ್ಲಾಂ ಎಂದೂ ಭಯೋತ‍್ಪಾದನೆಯನ್ನು  ಪ್ರೋತ್ಸಾಹಿಸುವುದಿಲ್ಲ. ಒಂದು ದೇಶದಲ್ಲಿದ್ದು  ಆ ದೇಶದ ಕಾನೂನಿಗೆ ವಿರುದ್ಧವಾಗಿ ನಡೆಯುವುದನ್ನೂ  ಇಸ್ಲಾಂ ವಿರೋಧಿಸುತ್ತದೆ. ಕೇರಳದಲ್ಲಿ ಪ್ರವಾದಿ (ಸ.ಅ) ರನ್ನು ಟೀಕಿಸಿ ಲೇಖನ ಬರೆದ ಶಿಕ್ಷಕನೋರ್ವನ ಕೈ ಕಡಿದ ಪ್ರಕರಣವನ್ನು  ಕಟುವಾಗಿ ವಿರೋಧಿಸಿದ್ದೇ ಮುಸ್ಲಿಮರು. ಅಂತಹುದರಲ್ಲಿ,  ಭಯೋತ್ಪಾದನೆಯಂತಹ ಧರ್ಮದ್ರೋಹದ, ದೇಶ ದ್ರೋಹದ ಕೆಲಸವನ್ನು  ಸಮರ್ಥನೆ ಮಾಡುವ ಮಾತೆಲ್ಲಿ ಬಂತು.*

♦ ಯಾವೊಬ್ಬ ಮುಸ್ಲಿಮನೂ ಹಿಂದುಗಳಿಗೋಸ್ಕರ ದೀಪಾವಳಿ ಅಥವಾ ಹೋಳಿ ಆಯೋಜಿಸುವುದಿಲ್ಲ....!
ಅದರೆ ಮುಸ್ಲಿಮರಿಗಾಗಿ ಹಿಂದುಗಳು ಇಫ್ತಾರ್ ಕೂಟವನ್ನು ಏರ್ಪಡಿಸುತ್ತಾರೆ...!

*ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಕಾನೂನೆಂಬುದಿದೆ. ಅದರಂತೆ ಅವರವರು ನಡೆಯುವುದು ಧರ್ಮ. ಮತ ಸೌಹಾರ್ದತೆ ಅಂದರೆ, ಹಿಂದೂ ಧರ್ಮದ ಕಾನೂನನ್ನು  ಮುಸ್ಲಿಮರೂ, ಇಸ್ಲಾಂ ಧರ್ಮದ ಕಾನೂನನ್ನು ಹಿಂದುಗಳೂ ಅನುಸರಿಸುವುದೆಂದರ್ಥವಲ್ಲ. ಹಾಗೆ ಬಯಸುವುದೂ ತಪ್ಪು. ಮತ ಸೌಹಾರ್ದತೆ ಅಂದರೆ, ಹಿಂದೂ-ಮುಸ್ಲಿಮರು ಅವರವರ ಕಾನೂನನ್ನು  ಅವರವರು ಅನುಸರಿಸುವುದರೊಂದಿಗೆ ಇತರ ಧರ್ಮದ ಕಾನೂನನ್ನು  ಗೌರವಿಸಿ ನಡೆಯುವುದಾಗಿದೆ. ಅನ್ಯಧರ್ಮದ ಆಚರಣೆಯನ್ನು, ಪದ್ಧತಿಯನ್ನು ಮುಸ್ಲಿಮರು ಅನುಸರಿಸುವುದು ಇಸ್ಲಾಂ ಧರ್ಮದ ಕಾನೂನು ಪ್ರಕಾರ ನಿಷಿದ್ಧವಾಗಿದೆ. ಅಷ್ಟೇ ನಯವಾಗಿ, ಅನ್ಯ ಧರ್ಮದ ಕಾನೂನನ್ನು ಗೌರವಿಸಬೇಕೆಂದು ಕೂಡಾ ಇಸ್ಲಾಂ ಆಜ್ಞಾಪಿಸಿದೆ.*

♦ಕಾಶ್ಮೀರದಲ್ಲಿ ಭಾರತದ🇮🇳 ಭಾವುಟವನ್ನು ಮುಸ್ಲಿಮರು ಸುಡುತ್ತಾರೆ ಆದರೆ ಪಾಕಿಸ್ತಾನದ ಭಾವುಟ🇵🇰 ಸುಡುವ ಯಾವೊಬ್ಬ ಮುಸ್ಲಿಮನು ಭಾರತದಲ್ಲಿ ಕಾಣಸಿಗುವುದಿಲ್ಲ.

👉🏾 *ಕಾಶ್ಮೀರದಲ್ಲಿ ಭಾರತದ ಧ್ವಜವನ್ನು ಅಲ್ಲಿನ ಮುಸ್ಲಿಮರು ಸುಟ್ಟರೆ ಅದು ಅವರ ತಪ್ಪು,  ಅದು ದೇಶ ದ್ರೋಹದೊಂದಿಗೆ ಧರ್ಮ ದ್ರೋಹದ ಕೆಲಸವೂ ಹೌದು. ಆದರೆ, ಅದಕ್ಕೆ  ಬದಲಾಗಿ ಪಾಕಿಸ್ತಾನದ ಧ್ವಜವನ್ನು  ಸುಡುವುದು ಸಮರ್ಥನೀಯವಲ್ಲ, ಪರಿಹಾರವೂ ಅಲ್ಲ. ಯಾಕೆಂದರೆ, ಆಕ್ರಮಣಕ್ಕೆ  ಬದಲಾಗಿ ಆಕ್ರಮಣವನ್ನು  ಇಸ್ಲಾಂ ಎಂದೂ ಪ್ರೋತ್ಸಾಹಿಸುವುದಿಲ್ಲ. ಒಬ್ಬ ಮುಸ್ಲಿಮನನ್ನು  ಅನ್ಯ ಧರ್ಮೀಯ ಕೊಂದರೆ ಅಥವಾ ಅಕ್ರಮಿಸಿದರೆ, ತಿರುಗಿ ಆಕ್ರಮಿಸಿದವನನ್ನು  ಅಕ್ರಮಿಸಲು, ಅಥವಾ ಕೊಂದವನನ್ನು  ಕೊಲ್ಲಲೂ ಇಸ್ಲಾಂ ಅನುಮತಿಸುವುದಿಲ್ಲ. ಇನ್ನು  ಪಾಕಿಸ್ತಾನದ ಧ್ವಜವನ್ನು  ಭಾರತದ ಮುಸ್ಲಿಮರು ಸುಟ್ಟರೆ ಭಾರತಕ್ಕೇನೂ ಲಾಭವಾಗಲು ಹೋಗುವುದೂ ಇಲ್ಲ.*

♦ ಹಿಂದುಗಳು ಮಸೀದಿ,ದರ್ಗಾಗಳಿಗೆ ಹೋದರೆ ಮುಸ್ಲಿಮರ ಟೋಪಿ ಧರಿಸುತ್ತಾರೆ...!
ಆದರೆ ಯಾವ ಮುಸ್ಲಿಮನೂ ಹಿಂದೂ ದೇವಾಲಯಗಳಿಗೆ ಹೋದರೆ ತಿಲಕಇಡುವುದಿಲ್ಲ...!

👉🏾 *ಅನ್ಯ ಧರ್ಮೀಯನೊಬ್ಬ ಟೋಪಿ ಧರಿಸಬೇಕೆಂದು ಮುಸ್ಲಿಮರು, ಮುಸ್ಲಿಮರು ತಿಲಕ ಇಡಬೇಕೆಂದು ಹಿಂದುಗಳು ಬಯಸುವುದು ತಪ್ಪು.  ಅವರವರು ಅವರವರ ಧರ್ಮವನ್ನು ಅನುಸರಿಸುವುದರೊಂದಿಗೆ ಇತರ ಧರ್ಮದ ಕಾನೂನನ್ನು ಗೌರವಿಸಿ ನಡೆಯುವುದೇ ಸೌಹಾರ್ದತೆ. ಹಿಂದುವೊಬ್ಬ ಟೋಪಿ ಧರಿಸುವುದು ಅಥವಾ ಮುಸ್ಲಿಮನೊಬ್ಬ ತಿಲಕ ವಿಡುವುದು ಸೌಹಾರ್ದತೆಯ ಪ್ರತೀಕವಲ್ಲ. ಹೃದಯದಲ್ಲಿ ಪರಸ್ಪರರ ಬಗ್ಗೆ   ಪ್ರೀತಿ-ಸ್ನೇಹ, ಗೌರವ ಭಾವನೆ ಬೆಳೆಯಬೇಕು, ಅವಾಗ ಮಾತ್ರ ಸೌಹಾರ್ದತೆಯನ್ನು ನಿರೀಕ್ಷಿಸಬಹುದು.*

*ಮುಸ್ಲಿಮನೊಬ್ಬ ಹಿಂದು  ಧರ್ಮೀಯನ ಮನೆಗೆ ಹೋದಲ್ಲಿ ಅವರೇನು ಕೊಟ್ಟರೂ ತಿನ್ನಬಲ್ಲ, ಕುಡಿಯಬಲ್ಲ. ಅದೇ ಮುಸ್ಲಿಮರ ಮನೆಗೆ ಬೇಟಿಕೊಡುವ ಹಿಂದೂ ಧರ್ಮಕ್ಕೆ  ಸಂಬಂದಪಟ್ಟ ಕೆಲವೊಂದು ಜಾತಿಯವರು ಏನೂ ತಿನ್ನುವುದಿಲ್ಲ. ಹಾಗಂತ ನಾವದನ್ನು  ವಿರೋಧಿಸುವುದಿಲ್ಲ. ಅದು ಅವರ ಧರ್ಮ. ಅವರ ಕಾನೂನನ್ನು  ನಾವು ಗೌರವಿಸುತ್ತೇವೆ. ಹಾಗೆ, ಪರಸ್ಪರರು ಪರಸ್ಪರರ ಕಾನೂನನ್ನು ಗೌರವಿಸಿ ನಡೆದಾಗ ಮಾತ್ರ ಸೌಹಾರ್ದತೆಯನ್ನು ನಿರೀಕ್ಷಿಸಬಹುದು.*

♦ ಆದರೂ ಬೊಬ್ಬೆ ಹೊಡೆಯುತ್ತಾರೆ ಹಿಂದೂಸ್ತಾನದಲ್ಲಿ ಧರ್ಮ ಅಸಹಿಷ್ಣುತೆ ಹೆಚ್ಚಾಗಿದೆ.!!!😭 ಹಿಂದುಗಳು ಕೋಮುವಾದಿಗಳು ಎಂದು....!👊😡

👉🏾 *ಎಲ್ಲಾ ಹಿಂದುಗಳೂ ಕೋಮುವಾದಿಗಳೆಂದು ಯಾರೂ ಹೇಳುವುದಿಲ್ಲ. ಪ್ರತಿಯೊಂದಕ್ಕೂ ಅನ್ಯ ಧರ್ಮೀಯರನ್ನು  ದ್ವೇಷಿಸುವ ಕೆಲವೊಂದು ಬೆರಳೆಣಿಕೆಯ ಮಂದಿಯನ್ನು ಮಾತ್ರ ಕೋಮುವಾದಿಗಳೆನ್ನುವುದು.*

*ಮಾಂಸ ಸೇವನೆ ಮಾಡಿದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಹೊಡೆದು ಸಾಯಿಸುವಾಗ,  ಕೊಂದು ನೇತುಹಾಕುವಾಗ, ಕೆಳಜಾತಿಯವನು ಮೇಲ್ಜಾತಿಯ ಹೆಣ್ಣನ್ನು  ಪ್ರೀತಿಸಿದ ಕಾರಣಕ್ಕೆ  ಕೆಳಜಾತಿಯವನನ್ನು  ಬಹಿರಂಗವಾಗಿ ನಗ್ನ ಮೆರವಣಿಗೆ ಮಾಡಿಸುವಾಗ, ನಿರ್ದಾಕ್ಷಿಣ್ಯವಾಗಿ ಕೊಂದು ಹಾಕುವಾಗ, ಮಹಿಳೆಯರ ಮೇಲೆ ಅತ್ಯಾಚಾರ ನಂತರ ಕೊಲೆ ಮುಂತಾದವು ಗಳು ಎಗ್ಗಿಲ್ಲದೆ ನಡೆಯುತ್ತಿರುವಾಗ ಅಸಹಿಷ್ಣತೆ ಇದೆ ಎಂದು ಹೇಳದೆ ಇನ್ನೇನು ಹೇಳಬೇಕು.*

♦ಮೊಹಮ್ಮದ್ ಬರುವ ಮುಂಚೆ ಮುಸ್ಲಿಮರೇನಾಗಿದ್ದರೋ ತಿಳಿದಿಲ್ಲ.

👉🏾 *ಪ‍್ರಪ್ರಥಮ ಮನುಷ್ಯ ಪ್ರವಾದಿ ಆದಂ (ಅ) ಆಗಿದ್ದಾರೆ ಎಂದು ಇಸ್ಲಾಂ ಧರ್ಮ ಕಲಿಸುತ್ತದೆ. ಅಂದರೆ, ಭೂಮಿಯಲ್ಲಿ ಹುಟ್ಟಿದ ಪ್ರಥಮ ಧರ್ಮ ಕೂಡಾ ಇಸ್ಲಾಂ ಆಗಿದೆ.ಇದು ನಮ್ಮ ವಿಶ್ವಾಸ. ಇದನ್ನು  ನೀವು ಸ್ವೀಕರಿಸಬೇಕೆಂಬ ಒತ್ತಡವೇನೂ ನಮ್ಮಲ್ಲಿಲ್ಲ. ಎಲ್ಲಾ ಸಮುದಾಯಕ್ಕೂ ಪ್ರವಾದಿಗಳನ್ನು ಕಳುಹಿಸಲ್ಪಟ್ಟ ಹಾಗೆ ಕೊನೆಯ ಪ್ರವಾದಿ ಯಾಗಿ  ಪ್ರವಾದಿ ಮುಹಮ್ಮದ್ (ಸ.ಅ) ರನ್ನು ಅಲ್ಲಾಹು ನಿಯೋಜಿಸಿದ್ದಾನೆ ಅಷ್ಟೇ. ಪ್ರವಾದಿ ಮುಹಮ್ಮದ್ (ಸ.ಅ) ರು ಓರ್ವ ಧರ್ಮ ಪ್ರಚಾರಕರೇ ಹೊರತು ಧರ್ಮ ಸಂಸ್ಥಾಪಕರಲ್ಲ.*

♦ 🙊 30(A) ಗೆ ಸಂಬಂದಿಸಿದಂತೆ ವಿದ್ಯಾಲಯಗಳಲ್ಲಿ ಭಗವದ್ಗೀತೆ,ರಾಮಾಯಣದ ಬಗ್ಗೆ ಹೇಳುವದನ್ನ,ಕಲಿಸುವದನ್ನ ನಿರ್ಬಂದಿಸಲಾಗಿದೆ..
.ಮುಸ್ಲಿಂ ಮದರಸಾಗಳಲ್ಲಿ, ಕ್ರಿಶ್ಚಿಯನ್ ಕಾನ್ವೆಂಟುಗಳಲ್ಲಿ ಕುರಾನ್ ಮತ್ತು ಬಾಯಿಬಲ್ ಗಳನ್ನು ಬೋದಿಸಬಹುದಾಗಿದೆ..!!

👉🏾 *ಮದರಸ ಎಂಬುವುದು ಇಸ್ಲಾಂ ಧರ್ಮದ ಧಾರ್ಮಿಕ ಪಾಠ ಶಾಲೆ. ಅಲ್ಲಿ ಅವರಿಗೆ ಬೇಕಾದಂತಹ ಪಾಠವನ್ನು ಬೋಧಿಸಬಹುದು, ಅದು ಅವರ ಹಕ್ಕು . ಆದರೆ, ಶಾಲೆ, ವಿದ್ಯಾಲಯಗಳು ಸಾರ್ವಜನಿಕ ಬೋಧನಾ ಕೇಂದ್ರ. ಅಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಪಾಠವನ್ನು  ಅಳವಡಿಸುವುದು ನ್ಯಾಯವಲ್ಲ. ಭಾರತವೆಂಬುದು ಜಾತ್ಯಾತೀತ ದೇಶ.ಇಲ್ಲಿ ಎಲ್ಲಾ ಧರ್ಮದವರಿಗೂ ಸಮಾನವಾದ ಹಕ್ಕು ಇದೆ.ಅಂತಹುದರಲ್ಲಿ, ಸರ್ವ ಭಾರತೀಯರಿಗೂ ಸಂಬಂಧಪಟ್ಟ ವಿದ್ಯಾಲಯಗಳಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಪಠ್ಯಪುಸ್ತಕವನ್ನು  ಅಳವಡಿಸುವುದು ಉಚಿತವಲ್ಲ. ಆದರೆ, ಹಿಂದೂ ಧರ್ಮೀಯರಿಗೆ ಸಂಬಂಧಪಟ್ಟ ದೇವಸ್ಥಾನದಲ್ಲಿ ಹಿಂದೂ ಧರ್ಮಕ್ಕೆ  ಸಂಬಂದಪಟ್ಟ ಪಠ್ಯಕ್ರಮವನ್ನು  ಅಳವಡಿಸಿಕೊಳ್ಳುವುದಕ್ಕೆ  ಯಾರ ವಿರೋಧವೂ ಇಲ್ಲ. ಅದು ಹಿಂದುಗಳಿಗೆ ಸಂಬಂಧಪಟ್ಟ ಸ್ಥಳವಾಗಿದೆ.*

♦ಹಿಂದೂ ಮಂದಿರ ಮತ್ತು ತೀರ್ಥಸ್ಥಾನಗಳಿಗೆ ಬಂದಂತಹ ದೇಣಿಗೆಯ ಮೇಲೆ ಸರಕಾರಕ್ಕೆ ೭೦ ಪ್ರತಿಶತ ಅಧಿಕಾರ..ಮಸೀದಿ ಮತ್ತು ಚರ್ಚುಗಳಿಗೆ ಬಂದ ದೇಣಿಗೆ ಅವರವರಿಗೆ ಪೂರ್ಣ ಅಧಿಕಾರ! ! ಅದರ ಜೊತೆ ಮತ್ತಷ್ಟು ಸರಕಾರದ ಅನುದಾನ ಬೇರೆ ..!!

👉🏾 *ಹಿಂದೂ ಧಾರ್ಮಿಕ ಕ್ಷೇತ್ರಗಳ ಖರ್ಚುವೆಚ್ಚಗಳನ್ನೆಲ್ಲಾ ಸರಕಾರ ನೋಡಿಕೊಳ್ಳುತ್ತವೆ. ಮುಸ್ಲಿಮರ ಧಾರ್ಮಿಕ ಕ್ಷೇತ್ರಗಳ ಖರ್ಚುವೆಚ್ಚಗಳನ್ನು  ಮುಸ್ಲಿಮರೇ ನೋಡಿಕೊಳ್ಳಬೇಕು. ಹಿಂದುಗಳಿಗಿರುವ ಈ ಕಾನೂನು ಅನ್ಯಾಯವೆಂದಾದರೆ ಅದರ ವಿರುದ್ಧ ಶಬ್ದವೆತ್ತಲು ಹಿಂದುಗಳು ಸ್ವತಂತ್ರರು. ಅದಕ್ಕೆ  ಯಾರ ಅಡ್ಡಿಯೂ ಇಲ್ಲ.*

♦ಬಾಬಾ ಅಮರನಾಥ ಯಾತ್ರಿಕರ ಮೇಲೆ ಸರಕಾರಕ್ಕೆ ಟೆಕ್ಸ್ ತುಂಬಬೇಕು..  ಅದೇ ಹಜ್ ಯಾತ್ರಿಕರಿಗೆ  ಸರಕಾರಿ ಸಬ್ಸಿಡಿ.. ವ್ಹಾ ..ಹೇಗಿದೆ ನೋಡಿ ಹಿಂದುಸ್ಥಾನದ ಹಿಂದುಗಳ ಪರಿಸ್ಥಿತಿ.
ಇದು ದರ್ಮಸಹಿಷ್ಣುತೆಯಂತೆ...!!!

👉🏾 *ಹಜ್ ಯಾತ್ರಿಕರಿಗೆ ಸರಕಾರ ಕೊಡುವ ಸಬ್ಸಿಡಿ, ಅದು ಹಜ್ ಗೆ ಹೋಗುವವರ ಹಣದಿಂದಲೇ ಹೊರತು ಸರಕಾರದ ಬೊಕ್ಕಸದಿಂದ ಅಲ್ಲ. ಹಜ್ ಯಾತ್ರಿಕರಿಗೆ ಸಬ್ಸಿಡಿ ಎಂಬುದು ಮುಸ್ಲಿಮರ ಕಣ್ಣಿಗೆ ಮಣ್ಣೆರಚುವ ತಂತ್ರವಲ್ಲದೆ ಇನ್ನೇನೂ ಅಲ್ಲ ಎಂದು ಅರಿಯದಷ್ಟು  ಮೂರ್ಖರಲ್ಲ ಇಲ್ಲಿನ ಮುಸ್ಲಿಮರು.*

*ಮುಹ್ಮದ್ ಇಕ್ಬಾಲ್ ಮಂಗಳಪೇಟೆ*