ಸೋಮವಾರ, ಜುಲೈ 11, 2016

ಝಾಕಿರ್ ನಾಯ್ಕ್

ಕೆಲವರು ಅದರಲ್ಲೂ ಜಾತ್ಯತೀತ ಪ್ರಗತಿಪರರು ಝಾಕಿರ್ ನಾಯ್ಕ್ ರನ್ನು ವಿರೋಧಿಸುತ್ತಾರೆ. ಮುಸ್ಲಿಮರಲ್ಲ್ಲೂ ಹಲವರಿಗೆ ಝಾಕಿರ್ ನಾಯ್ಕ್ ರವರ ಬಗ್ಗೆ ಭಿನ್ನಾಭಿಪ್ರಾಯ ಇದೆ.
ಝಾಕಿರ್ ನಾಯ್ಕ್ ಒಬ್ಬ ಮುಸ್ಲಿಮ್ ಎಂಬ ಕಾರಣಕ್ಕಾಗಿ ಬೆಂಬಲ ವ್ಯಕ್ತ ಪಡಿಸಲಾಗುತ್ತಿದೆ ಎನ್ನುವುದು ದೊಡ್ಡ ತಪ್ಪು ಗ್ರಹಿಕೆ ಆಗಿದೆ.
ಬಿನಾಯಕ್ ಸೇನ್ ರವರ ಮೇಲೆ ಆರೋಪ ಬಂದಾಗ ಅಲ್ಲಿ ಅವರ ಧರ್ಮ ನೋಡಲಿಲ್ಲ,  ಸಿದ್ದಾಂತ ವೈಚಾರಿಕತೆ ನೋಡಲಿಲ್ಲ ಅವರೊಂದಿಗೆ ಭಿನ್ನಾಭಿಪ್ರಾಯ ಇದ್ದವರೂ ಧ್ವನಿ ಎತ್ತಿದರು ಯಾಕೆಂದರೆ ಅದೊಂದು ನ್ಯಾಯಪರ ಧ್ವನಿಯಾಗಿತ್ತು.
ಜೆಎನ್ಯೂ ವಿದ್ಯಾರ್ಥಿಗಳನ್ನು ಮಟ್ಟ ಹಾಕಲು ಪ್ರಯತ್ನ ಪಡಲಾಯಿತು, ಆರೋಪಗಳು ಕೇಳಿ ಬಂದವು ಆಗಲೂ ಅವರ ಪರವಾಗಿ ಮೂಲಭೂತವಾದಿಗಳೆಂದು ಕರೆಯಲ್ಪಡುವವರೂ ಧ್ವನಿ ಎತ್ತಿದರು. ಯಾಕೆಂದರೆ ಭಿನ್ನಾಭಿಪ್ರಾಯ ಬೇರೆ. ಸಂವಿಧಾನ ನೀಡಿದ ಹಕ್ಕು,,  ಅಭಿವ್ಯಕ್ತಿ  ಸ್ವಾತಂತ್ರ್ಯ ಬೇರೆ. ಇಲ್ಲಿ ಹೋರಾಟ ಇರುವುದು ಅದಕ್ಕೇ ಆಗಿದೆ.
೧. ಝಾಕಿರ್ ನಾಯಕ್ ಒಬ್ಬ ಭಾಷಣಕಾರ ಮಾತ್ರ.. ಅವರು ಹೇಳಿದ್ದು ವೇದ ವಾಕ್ಯ ಅಲ್ಲ. ಬಹಳಷ್ಟು ತಪ್ಪುಗಳೂ ತೋರಿಸಬಹುದು. ಬಹಳಷ್ಟು ಜನರು ಅವರ ಮಾತಿಗೆ ಕನ್ವಿಂಸ್ ಆಗಿದ್ದಾರೆ. ಕನ್ವಿಂಸ್ ಆಗದವರೂ ಇದ್ದಾರೆ.  ಪ್ರಜಾಸತ್ತಾತ್ಮಕ ನೆಲೆಯಲ್ಲಿ ತೆರೆದ ಮೈದಾನದಲ್ಲಿ ಅವರು ಮಾತಾಡುತ್ತಾರೆ.
ಅದೇ ರೀತಿ
ಅವರ ಮಾತನ್ನು ತಪ್ಪು ಎಂದು ತೋರಿಸಲು, ತನ್ನ   ಧರ್ಮದ ವಿಚಾರಗಳನ್ನು ಜನರ ಮುಂದೆ ತೆರೆದಿಡಲು ಸಂವಿಧಾನ ನಿಮಗೂ ಅನುಮತಿ ನೀಡುತ್ತದೆ. ಒಂದು ಚಾನೆಲ್ ಪ್ರಾರಂಭಿಸಿ ಜನರನ್ನು  ಸೇರಿಸಿ ದಾರಿ ತಪ್ಪುತ್ತಿರುವ ಜನರನ್ನು ಸರಿದಾರಿಗೆ ತರಬಹುದು. ಅಥವಾ ಅವರನ್ನು ವಿಮರ್ಶೆ ನಡೆಸಬಹುದು.
ಯೋಗವನ್ನು ಒಂದೆಡೆ ವಿರೋಧಿಸುವಾಗ ಇನ್ನೊಂದು ಕಡೆ ಯೋಗಕ್ಕೆ ಕನ್ವಿಂಸ್ ಆದ ಮುಸ್ಲಿಮರಿಲ್ಲವೇ?. ವಿಚಾರ ವೈಚಾರಿಕತೆಯನ್ನು ತಡೆಹಿಡಿಯಲು ಯಾರಿಗೂ ಸಾಧ್ಯವಿಲ್ಲ. ನಾಸ್ತಿಕ ಕಮ್ಯೂನಿಸ್ಟ್ ಚಿಂತನೆಗೆ ಕನ್ವಿಂಸ್ ಆದ ಮುಸ್ಲಿಮರಿಲ್ಲವೇ? ಅದರ ಬಗ್ಗೆ ಯಾರಾದರೂ ತಗಾದೆ ಎತ್ತುತ್ತಾರೆಯೇ? ಆದ್ದರಿಂದ ಝಾಕಿರ್ ನಾಯಕ್ ಭಿನಾಬಿಪ್ರಾಯ ಮತ್ತು  ಅಭಿವ್ಯಕ್ತಿ ಸ್ವಾತಂತ್ರ್ಯ , ಮತ್ತು ಆರೋಪಗಳನ್ನು ಭಿನ್ನಭಿನ್ನವಾಗಿ ನೋಡಬೇಕು.
೨. ಝಾಕಿರ್ ನಾಯಕ್ ಭಾಷಣದಿಂದ ಕೋಮು ಗಲಭೆ ನಡೆದ ಒಂದೇ ಒಂದು ಉದಾಹರಣೆ ಇಲ್ಲ.  ದ್ವೇಷ ಕಾರುವ ಭಾಷಣವನ್ನು ಅವರು ಮಾಡಿಲ್ಲ.
ಇನ್ನು ಇತರ ಧರ್ಮವನ್ನು ಕೀಳಾಗಿ ಕಾಣುತ್ತಾರೆ ತನ್ನ ಧರ್ಮವೇ ಸರಿ ಎನ್ನುತ್ತಾರೆ ಅದು ಒಬ್ಬ ವ್ಯಕ್ತಿಯ ಅಭಿಪ್ರಾಯವೇ ಹೊರತು ಈ ದೇಶದ ಕಾನೂನು ಅಲ್ಲ. ಪ್ರತಿಯೊಬ್ಬರಿಗೆ ತನ್ನ ಧರ್ಮ ಶೇಷ್ಟ ಅನ್ನಬಹುದು. ಪ್ರತಿಯೊಬ್ಬ ವಿಚಾರವಂತನಿಗೆ ತನ್ನ ವಿಚಾರ ಸರಿ ಎನ್ನುವುದು ಇರುತ್ತದೆ. ಕೋಮುವಾದಿ ಪ್ರಗತಿಪರರನ್ನು ದೂರುತ್ತಾರೆ  ಮತ್ತು ಪ್ರಗತಿಪರರು ಕೋಮುವಾದಿಗಳನ್ನು ದೂರುವುದಿಲ್ಲವೇ? ನಾಸ್ತಿಕರು ದೇವವಿಶ್ವಾಸಿಗಳನ್ನು ಗೇಲಿ ಮಾಡುವುದಿಲ್ಲವೇ?
ಝಾಕಿರ್ ನಾಯಕ್ ಎಪ್ರೋಚ್ ಸರಿ ಎನ್ನುವವರೂ ಮತ್ತು ಅವರ ಎಪ್ರೋಚ್  ಸರಿಯಲ್ಲ ಎನ್ನುವವರೂ ಮುಸ್ಲಿಮರಲ್ಲಿ ಇದ್ದಾರೆ. ಬಹುಸಂಸ್ಕೃತಿ ಸಮಾಜದಲ್ಲಿ ವಾದ ಪ್ರತಿವಾದಗಳಲ್ಲಿ ಸೌಮ್ಯತೆ ಯುಕ್ತಿ ಎಲ್ಲವೂ ಬೇಕು. ಝಾಕಿರ್  ನಾಯಕ್ ಎಪ್ರೋಚ್ ಬಗ್ಗೆ ತಮಗೆ ವಿಮರ್ಶೆ ನಡೆಸಬಹುದು. ತಮ್ಮದೇ ಸ್ವಂತ ವೇದಿಕೆಗಳನ್ನು ಕಟ್ಟಿ ಜನರ ಪ್ರಶ್ನೆಗಳಿಗೆ ಉತ್ತರ ಕೊಡಬಹುದು. ಝಾಕಿರ್ ನಾಯಕ್ ರನ್ನು ವಿರೋಧಿಸಿ ಎಷ್ಟೋ ವೀಡಿಯೋ ಗಳು ಯೂಟೂಬ್ ನಲ್ಲಿ ಇದೆ. ಅದಕ್ಕೆ ಮುಕ್ತ ಅವಕಾಶ ವಿದೆ. ಅದು ಬಿಟ್ಟು ಕೈಲಾಗದವನು ಮೈ ಪರಚಿಕೊಳ್ಳುವುದು ಸರಿಯಲ್ಲ.

೩. ಝಾಕಿರ್ ನಾಯಕ್ ಯಾರಿಗೂ ಬಲವಂತದ ಆಮಿಷ ಒಡ್ಡಿದ ಇತಿಹಾಸ ಇಲ್ಲ. ಜನರು ಸ್ವ ಇಚ್ಛೆಯಿಂದ ಪ್ರಶ್ನೆ ಕೇಳುತ್ತಾರೆ. ಅವರು ತಮ್ಮ ವೈಚಾರಿಕತೆಗೆ ಅನುಗುಣವಾಗಿ ಉತ್ತರಿಸುತ್ತಾರೆ. ಕೆವರಿಗೆ ತೃಪ್ತಿ ಇನ್ನು ಕೆಲವರಿಗೆ ಅತೃಪ್ತಿ ಆಗುತ್ತದೆ. ಅಂತೂ ಓರ್ವ ವ್ಯಕ್ತಿಯ ಅಭಿಪ್ರಾಯ ತಾನೇ. ಅವರನ್ನು ಯಾವ ಲೇಬಲ್ ನಿಂದ ಕರೆಯಬಹುದು. ಅವರು ತನ್ನನ್ನು ಮುಸ್ಲಿಮ್ ಎನ್ನುತ್ತಾರೆ.
ಅವರಿಗೆ  ಪರಿಚಯವಿಲ್ಲದ ಅದೆಷ್ಟೋ ಜನರು ಜಾತಿ ಧರ್ಮ ಬೇದ ಮರೆತು ಅವರಿಗೆ ಪ್ರಭಾವಿತರಾದರೆ ಅವರ ತಪ್ಪೇನು?
ಫ್ಯಾನ್ ಮಾಡಿದ ತಪ್ಪಿಗೆ ಸೆಲೆಬ್ರಿಟಿ ಗಳನ್ನು ಯಾರಾದರೂ ಅಪರಾಧಿಯನ್ನಾಗಿ ಮಾಡಲಾಗುತ್ತದೆಯೇ?

೪. ಝಾಕಿರ್ ನಾಯಕ್ ಭಯೋತ್ಪಾದನೆಯನ್ನು  ಉಗ್ರವಾಗಿ ಖಂಡಿಸಿದ್ದಾರೆ.ಆ ಬಗ್ಗೆ ಅವರ ಭಾಷಣ ಕೇಳಬಹುದು.  ಅವರ ವೀಡಿಯೋ ವನ್ನು ಖಂಡತುಂಡವಾಗಿ ತೋರಿಸಿ ಜನರಲ್ಲಿ ತಪ್ಪುಕಲ್ಪನೆ ಬಿತ್ತಲಾಗುತ್ತದೆ. ವಿಶೇಷವಾಗಿ ಮಾಧ್ಯಮಗಳು.
ಅವರು ಎನ್ಡಿಟಿವಿಯಲ್ಲಿ ಚರ್ಚೆಯಲ್ಲಿ ವೇದಿಕೆ ಹಂಚಿದ್ದಾರೆ. ರವಿಶಂಕರ್ ರವರ ಜೊತೆ ಇನ್ನಿತರರ ಜೊತೆ ವೇದಿಕೆ ಹಂಚಿದ್ದಾರೆ. ಎಲ್ಲೂ ಶಾಂತಿಗೆ ವಿರುದ್ಧವಾಗಿ ಮಾತಾಡಿಲ್ಲ. ಅವರು ಮಾತಾಡಿದ ಸರಿ ತಪ್ಪುಗಳು ಏನೇ ಇದ್ದರೂ. ದ್ವೇಷ ಅಸಹಿಷ್ಣುತೆಯ ಮಾತಾಡಿಲ್ಲ.
ಒಟ್ಟಿನಲ್ಲಿ ಸ್ವಯಂ ನನಗೆ ಅವರ ಎಪ್ರೋಚ್ ಇಷ್ಟವಿಲ್ಲ. ಹಲವಾರು ಭಿನ್ನಾಭಿಪ್ರಾಯಗಳು ಇವೆ. ಆದರೆ ಅವರ ಪರ ಯಾಕೆಂದರೆ ಅವರೊಬ್ಬ ಮುಸ್ಲಿಮ್ ಎನ್ನುವ ಕಾರಣಕ್ಕಾಗಿ ಅಲ್ಲ.
ಪ್ರಜಾಸತ್ತಾತ್ಮಕ ವ್ಯವಸ್ಥೆಯ ಉಳಿವಿಗಾಗಿ, ಸಂವಿಧಾನ, ಮಾನವಹಕ್ಕು , ಭದ್ರತೆಯ ಉಳಿವಿಗಾಗಿ. ನ್ಯಾಯದ ಉಳಿವಿಗಾಗಿ.
ನಮ್ಮ ದೇಶದಲ್ಲಿ ಚರ್ಚಿಸಲು ಬೆಲೆಯೇರಿಕೆ,ಹಗರಣಗಳು, ರೈತರ ಸಮಸ್ಯೆಗಳು ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳಿವೆ. ಭಾವನಾತ್ಮಕ ವಿಷಯಗಳನ್ನು ಎತ್ತಿದರೆ ಜ್ವಲಂತ ಸಮಸ್ಯೆಗಳು ಮೂಲೆ ಗುಂಪಾಗುತ್ತದೆ. ಅಥವಾ ಮೂಲೆಗುಂಪು ಮಾಡುವ ಷಢ್ಯಂತ್ರವಾಗಿರಬಹುದು.

http://indianexpress.com/article/india/india-news-india/modi-govt-buried-massive-telecom-scam-of-rs-45000-crore-under-carpet-congress/

ಅಬೂಕುತುಬ್