ಪ್ರಭಾತದಲ್ಲಿ(ಅತ್ತಾಳ) ಎದ್ದೇಳಲು ಅಲ್ಪ ಸಮಯ ಮೀರಿದಾಗ ನಾನು ತಾಯಿಯೊಂದಿಗೆ ಕೋಪಿಸಿಕೊಂಡೆ.
'ನಿಮಗೆ ಮೊದಲೇ ಎಬ್ಬಿಸಲು ಆಗಲಿಲ್ಲವಾ?'
ತಾಯಿ ಏನೂ ಉತ್ತರಿಸಲಿಲ್ಲ...
ಮುಖ ಕಪ್ಪಡರಿಸಿಕೊಂಡು ಟೇಬಲನ್ನು ನೋಡಿದಾಗ ಆಹಾರವೆಲ್ಲಾ ಬಿಸಿಯಾಗಿತ್ತು.. ಯಾಕಾಗಿ ಎಬ್ಬಿಸಲು ತಡವಾಯಿತೆಂದು ತಾಯಿ ಹೇಳದೇ ಹೇಳಿದರು.. ಅರಿಯದೇ ಕಣ್ಣು ತುಂಬಿ ಬಂತು. ಇದೆಲ್ಲವನ್ನು ತಯಾರಿಸಲು ಆ ತಾಯಿ ಎಷ್ಟು ಮೊದಲೇ ಎದ್ದೇಳಿರಬೇಕು...
ಅದೇ ತಾಯಿ ನಿನ್ನೆ ನಿದ್ರಿಸಲಿಲ್ಲ.??
ತಾಯಿಯ ಮುಖವನ್ನೊಮ್ಮೆ ನೋಡಿದೆ.. ತಾಯಿ ಮುಗುಳ್ನಕ್ಕರು.. ನನ್ನೊಂದಿಗಿನ ಎಲ್ಲಾ ದ್ವೇಷವೂ ಕರಗುವುದನ್ನು ನಾನು ತಿಳಿದೆ...
ಶಾಂತ ಮತ್ತು ಸ್ನೇಹ ತುಂಬಿದ ತಾಯಿಯ ಮಾತುಗಳಾಗಿದೆ ಮನಸ್ಸನ್ನು ತಟ್ಟುವುದು.
'ಸರಿಯಾಗಿ ತಿನ್ನು ಮಗನೇ. ಇಲ್ಲದಿದ್ದರೆ ಕ್ಷೀಣಿಸಿ ಆಯಾಸವಾಗಬಹುದು'
'ನೀನು ಕುಳಿತುಕೊಳ್ಳಲ್ವಾ?' ತಂದೆಯ ಎಂದಿನಂತಿರುವ ಪ್ರಶ್ನೆ.
'ಅಝಾನ್ ಕೊಡಲು ಇನ್ನೂ ಸಮಯವಿದೆಯಲ್ಲಾ.'
ನಮಗಾಗಿ ಬೆವರು ಹರಿಸಿದ ತಂದೆಯ ಪ್ರೀತಿಯನ್ನು ವರ್ಣಿಸಲು ಪದಗಳೇ ಇಲ್ಲ.!!
ನನ್ನ ಮುಖದಲ್ಲಿ ಕ್ಷೀಣ ಬರದೇ ಇರಲು ನನಗೆ ಕೈತುತ್ತು ನೀಡುವಾಗ ಸ್ವಂತ ಹೊಟ್ಟೆಯನ್ನು ತುಂಬಿಸಲು ಮರೆಯುತ್ತಾರೆ ನನ್ನ ತಾಯಿ.
ಯಾರೊಡನೆಯೂ ದೂರುವುದಿಲ್ಲ,
......ಬೇಸರವೂ ಇಲ್ಲ..
ಯಾವಾಗಲೂ ಮುಗುಳ್ನಗೆ ಮಾತ್ರ.
ವೃತ ತೊರೆಯಲು ಬೇಕಾದ ಆಹಾರವನ್ನು ತಯಾರಿಸಬೇಕು, ತಾಯಿಗೆ ಕುಳಿತುಕೊಳ್ಳಲೂ ಸಮಯವಿಲ್ಲ.. ಯಾವುದೇ ಆಯಾಸವಿಲ್ಲದೇ ಓಡಿ ನಡೆಯುವಾಗ ತಾಯಿ ನನ್ನನ್ನು ನೋಡುವರು;
'ನನ್ನ ಕಂದಾ, ಬಹಳ ಕ್ಷೀಣಿಸಿದ್ದೀಯಲ್ಲಾ.?'
ವೃತ ತೊರೆಯುವಾಗ ಸಾರಿನಲ್ಲಿ ಸ್ವಲ್ಪ ಉಪ್ಪು ಜಾಸ್ತಿಯಾದಾಗ ನನಗೆ ಕೋಪ,
'ಇದೆಲ್ಲಾ ರುಚಿಗೆ ತಕ್ಕಂತೆ ನೋಡಿ ಹಾಕಬಾರದಾ'
ಉಪ್ಪಿನ ಅಂಶ ಅಧಿಕವಾಗಿದೆಯೋ ಎಂದು ವೃತವಿರುವ ತಾಯಿಗೆ ಹೇಗೆ ತಿಳಿಯುವುದು ಎಂದು ನಾನು ಚಿಂತಿಸಿಲ್ಲ...
ಆದರೂ.. ಬೈದದಕ್ಕಿಂತ ಅಧಿಕ, ಸಾರಿನಲ್ಲಿ ಉಪ್ಪು ಜಾಸ್ತಿಯಾದ ನೋವು ತಾಯಿಯ ಮುಖದಲ್ಲಿ...
'ಇಂದು ಯಾವುದರ ಜ್ಯೂಸ್ ಉಮ್ಮಾ.??'
ಜ್ಯೂಸನ್ನು ಆಸೆಯಿಂದ ನೋಡುವಾಗಲೇ ತಾಯಿ ಹೇಳುವರು 'ನನಗೆ ಜ್ಯೂಸ್ ಇಷ್ಟವಿಲ್ಲ.. ನನಗಿರುವುದನ್ನೂ ನೀನು ಕುಡಿ ಕಂದಾ...'
ನನ್ನ ಮುಗುಳ್ನಗೆ ಕಂಡಾಕ್ಷಣ ತಾಯಿಯ ಕಣ್ಣುಗಳಲ್ಲಿ ಎಷ್ಟೊಂದು ಹೊಳಪು...
ನನ್ನ ಸಂತೋಷದೊಂದಿಗೆ ಅದರಲ್ಲೆಲ್ಲಾ ರುಚಿ ನೋಡುತ್ತಿದ್ದರು ನನ್ನ ತಾಯಿ...
ತಾಯಿಯ ಸ್ನೇಹಕ್ಕೆ ಬದಲಾಗಿ ನೀಡುವುದಾದರೂ ಏನು...!?
ಸ್ನೇಹಕ್ಕೆ ಜೀವ ಇದ್ದರೆ ಅದು ನನ್ನ ತಾಯಿ...
ತಾಯಿಯ ಕಣ್ಣು ಕೈಗಳನ್ನೂ ನಾನು ಮುಟ್ಟಿ ನೋಡಿದೆ...
ತಾಯಿಗೆ ಅನಾರೋಗ್ಯ ಕಾಡಿದರೆ ನನಗೆ ತಿಳಿಯಲ್ಲ,, ತಾಯಿ ಹೇಳುವುದೂ ಇಲ್ಲ...
ಆದರೂ ನನಗೆ ಒಂದು ಜ್ವರ ಬಂದರೆ ನನಗಿಂತಾ ನೋವು ತಾಯಿಗೆ. ನಾನು ಆಹಾರ ಸೇವಿಸದಿದ್ದರೆ ಹಸಿವು ತಾಯಿಗೆ...ನಾನು ಅತ್ತರೆ ಕಣ್ಣೀರು ತಾಯಿಯ ಕಣ್ಣಲ್ಲಿ...
ತಾಯಿ ನನಗೆ ಅರ್ಧ ಜೀವ ಕೊಟ್ಟ ತರಹ.