ಬದರೀಂಗಳು ಪಡೆದ ಸ್ವರ್ಗ ಮತ್ತು 500 ರುಪಾಯಿಗೆ ಸಿಗುವ ಸ್ವರ್ಗ
ಸುನ್ನೀಟುಡೇ
ರಂಜಾನ್ ವಿಶೇಷ ಭಾಗ-9
ಜಗತ್ತಿನ ಅತೀ ದೊಡ್ಡ ಆಶ್ಚರ್ಯ ಏನೆಂದರೆ ನಮ್ಮ ಜೊತೆಗಿದ್ದವರು ನಮ್ಮ ಮುಂದೆಯೇ ಮರಣಿಸಿ ಮಣ್ಣಾಗುತ್ತಾರೆ ಆದರೆ ನಾವು ಬದುಕುತ್ತಿದ್ದೇವೆ ಎಂದು ಭಾವಿಸುತ್ತಾ ಭೂಮಿಯಲ್ಲಿ ವ್ಯವರಿಸುತ್ತಿದ್ದೇವೆ. ಮರಣ ವಾರ್ತೆಯು ನಮಗೆ ಒಂದು ಕ್ಷಣದ ಅನುಕಂಪ ಅಥವ ಸಾಂತ್ವನಕ್ಕೆ ಮಾತ್ರವೇ ಕಾರಣವಾಗುತ್ತಿದೆ. ಮರಣ ಎಂಬುವುದು ಎಲ್ಲರಿಗೂ ಖಡ್ಡಾಯ ಎಂಬ ಸ್ವಾಭಾವಿಕ ದೂರಣೆ ಮತ್ತು ಮರಣದ ನಂತರ ಜೀವನದ ಭಯ ಇಲ್ಲದಿರುವುದೇ ಇದಕ್ಕೆ ಕಾರಣ.
ಮರಣಾನಂತರ ಜೀವನಕ್ಕೆ ಇಸ್ಲಾಮ್ ಮಹತ್ವ ಕಲ್ಪಿಸಿದ್ದು ಹಾಗೇ ನಮ್ಮನ್ನು ಮರಣಾನಂತರ ಜೀವನಕ್ಕಾಗಿಯೇ ಇಲ್ಲಿ ಬೆಳೆಸುತ್ತಿರುವುದು. ಅಲ್ಲಾಹನು ಹೀಗೇ ಹೇಳುತ್ತಾನೆ.'ಬೌತಿಕ ಜಗತ್ತು ವಂಚನೆಯ ಸರಕಲ್ಲದೇ ಇನ್ನೇನು ಅಲ್ಲ. ಉತ್ತಮವೂ ಶಾಶ್ವತವೂ ಪರಲೋಕವಾಗಿದೆ. ಪರಿಶ್ರಮಿಸುವವರು ಪರಲೋಕದ ಗೆಲುವಿಗಾಗಿ ಪರಿಶ್ರಮಿಸಲಿ. ಅಂದು ಭೂಮಿಯಲ್ಲಿನ ನಿಮ್ಮ ಪರಿಶ್ರಮವನ್ನು ತೆರೆದ ಗ್ರಂಥದಲ್ಲಿ ನೀವು ಕಾಣುವಿರಿ.ಮರಣಾ ನಂತರ ಜೀವನವು ಸ್ವರ್ಗ ನರಕಕ್ಕೆ ಮತ್ತು ಹೂರ್ ಗಳಿಗೆ ಸೀಮಿತವಲ್ಲ.ಅದರ ಮಧ್ಯೆ ಮತ್ತು ಅನಂತರ ಸವೆಸಬೇಕಾದ ದುರ್ಗಮ ಹಾಗೂ ಭಯಾನಕ ದಾರಿಗಳಿವೆ.
ನಮ್ಮ ಪ್ರಾರ್ಥನೆ ಮತ್ತು ಆಮೀನ್ ಗಳು ಹೇಗಿದೆ ಎಂದರೆ ಊಟ ಮಾಡದವನಲ್ಲಿ ಆಮೀನ್ ಹೇಳು ಹಸಿವು ನಿಲ್ಲುತ್ತದೆ ಎಂಬಂತೆ.ತರಗತಿಯಲ್ಲಿ ಸಬ್ಜೆಕ್ಟ್ ಕಲಿಯದೇ, ಪರೀಕ್ಷೆ ಬರೆಯದೆ ಅಲ್ಲಾಹನೇ ನನ್ನನ್ನು ಈ ಪರೀಕ್ಷೆಯಲ್ಲಿ ಪಾಸು ಮಾಡಿ ಎನ್ನುವಂತಿದೆ.
ಅಲ್ಲಾಹನೇ ನಮ್ಮ ಝಕಾತನ್ನು ಸ್ವೀಕರಿಸು ಎನ್ನುವಾಗ ಆಮೀನ್ ಎಂದು ಹೇಳುವವನು ಝಕಾತ್ ಕೊಟ್ಟ ಮಾಹಿತಿ ಇಲ್ಲ. ಅಲ್ಲಾಹನೇ ನಮಗೆ ಬರುವ ಬಲಾಲ್ ಮುಸೀಬತ್ತನ್ನು ನಿವಾರಿಸು ಎಂಬ ಪ್ರಾರ್ಥನೆಗೆ ಆಮೀನ್ ಎನ್ನುವ ಕೂಟದಲ್ಲೇ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಬಲಾಲ್ ಆಗುವ ವ್ಯಕ್ತಿತ್ವ ಇರುತ್ತದೆ. ಅಲ್ಲಾಹನೇ ನಮ್ಮ ಹೆಣ್ಣು ಮಕ್ಕಳನ್ನು ಸಂರಕ್ಷಿಸು ಎನ್ನುವ ಪ್ರಾರ್ಥನೆಗೆ ಆಮೀನ್ ಎಂದು ಹೇಳುವ ವ್ಯಕ್ತಿಯ ಮಗಳು ಸಿಟಿ ಸೆಂಟರ್ನಲ್ಲಿ ಪ್ರೇಮೋತ್ಸಾಹದಲ್ಲಿರುತ್ತಾಳೆ.ಇದಕ್ಕೆ ಕಾರಣ ನಾವು ಪ್ರಾಕ್ಟಿಕಲ್ ಕಡಿಮೆ ಥಿಯರಿಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತೇವೆ. ನಾವು ಹೇಳುತ್ತೇವೆ ಮಾಡುವುದಿಲ್ಲ. ನಾವು ಪ್ರಾರ್ಥಿಸುತ್ತೇವೆ ಪ್ರವೃತ್ತಿಸುವುದಿಲ್ಲ.
ಪ್ರತೀಯೊಬ್ಬರು ಕೈ ಎತ್ತಿ ಅಲ್ಲಾಹನೇ ಕಬರಿನ ಅದಾಬ್ ನಿಂದ ರಕ್ಷಿಸು, ಮಹಶಹರದಲ್ಲಿ ತನಲ್ ನೀಡು ಮತ್ತು ಸ್ವರ್ಗದಲ್ಲಿ ಒರಿಮಿಚ್ಚಿ (ಒಂದುಗೂಡಿಸಿ)ಕೂಟು.ನಬಿಯ ತಿರುಕಲ್ಯಾಣ ಕಾಣಲು ಭಾಗ್ಯ ನೀಡು. ನಮ್ಮ ಪ್ರಾರ್ಥನೆ ಎಷ್ಟು ಸುಲಭವಾಗಿದೆ ಎಂದರೆ ಮರಣ ಅಯ್ತು-ಮಹ್ ಷರ ಆಯ್ತು-ಸ್ವರ್ಗ ಸಿಕ್ಕಿತು-ತಿರುಕಣ್ಯಾಣ ನೋಡಿ ಆಯ್ತು ಎಂಬ ರೀತಿಯಲ್ಲಿದೆ.
ನಾವು ಪ್ರಾರ್ಥಿಸುತ್ತಲೇ ಇರಬೇಕು.ಅಲ್ಲಾಹನಿಗೆ ಅವನಲ್ಲಿ ಪ್ರಾರ್ಥಿಸುವುದು ಬಹಳ ಇಷ್ಟದ ಕಾರ್ಯ.ಆದರೆ ಬೇಡಿಕೆ ಇಡುವಾಗ ಮತ್ತು ಒಳಿತು ಕೇಳುವಾಗ ನಾವು ಅಲ್ಲಾಹನಿಗೆ ಯಾವ ರೀತಿ ಅನುಸರಣೆಯುಳ್ಳವರಾಗಿದ್ದೇವೆ ಎಂದು ಚಿಂತಿಸಬೇಕು. ನಮ್ಮ ಅಂತರಾತ್ಮದಲ್ಲಿ ಈ ಪ್ರಾರ್ಥನೆಯನ್ನು ಕೇಳಲು ನಾನು ಅರ್ಹನೇ ಎಂಬ ಕೊರತೆ ಇರಬೇಕು. ನನ್ನ ಪ್ರಾರ್ಥನೆಗೆ ಉತ್ತರ ಸಿಗಬಹದೇ ಎಂಬ ಭಯ ಇರಬೇಕು. ಅಲ್ಲಾಹು ಹಸಿವು ನೀಗಿಸಲು ಅಕ್ಕಿ ನೀಡುತ್ತಾನೆ ಆದರೆ ಅದನ್ನು ಕೃಷಿಮಾಡಿ ಬೇಯಿಸಿ ನಾವು ತಿನ್ನಬೇಕು. ಅಲ್ಲಾಹನು ಪಿಷ್ ನೀಡುತ್ತಾನೆ ಡಿಷ್ ನಾವು ಮಾಡಬೇಕು.ಅಲ್ಲಾಹನು ಆರೋಗ್ಯ ನೀಡಿದ್ದಾನೆ ಅವನಿಗೆ ನಾವು ಸುಜೂದ್ ಮಾಡಬೇಕು. ಅಲ್ಲಾಹು ನಮಗೆ ಹೃದಯ ನೀಡಿದ್ದಾನೆ ಅವನನ್ನು ನಾವು ಸ್ಮರಿಸಬೇಕು.
ನಮ್ಮ ಪ್ರಾರ್ಥನೆಯನ್ನು ಬೌತಿಕ ಜೀವನದ ಉದಾಹರಣೆ ಸಹಿತ ಹೇಳಬೇಂಕದರೆ . ಮಕ್ಕಳಾಯ್ತು-ದೊಡ್ದಾವರಾದರು-ಶಿಕ್ಷಣ ಸಿಕ್ಕಿತು-ಉದ್ಯೋಗ ಆಯ್ತು-ಮದುವೆ ಆಯ್ತು-ಪುಲ್ಲಿಯಂದಿರಾದರು ಎಂಬಂತೆ. ಇದರ ಮಧ್ಯೆ ಇದೆಲ್ಲವನ್ನು ಸಾದಿಸಲು ಬೇಕಾದ ಸಮಯ-ಪರಿಶ್ರಮ-ತ್ಯಾಗ-ಅನುಕೂಲತೆ -ಉದ್ದೇಶ ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಭೂಮಿಯಲ್ಲಿ ಒಂದು ಮನೆ ಮಾಡಬೇಕಾದರೆ ಎಷ್ಟು ಕಷ್ಟವಿದೆ ಆದರೆ ಸ್ವರ್ಗದಲ್ಲಿ ಮನೆ ಬೇಕಾದರೆ ಮಸೀದಿಗೆ 500 ರುಪಾಯಿ ನೀಡಿದರೆ ಸಾಕು . ಎಷ್ಟು ಸರಲ ಮತ್ತು ಸುಲಭ ವಿದಾನ.ಬದರೀಂಗಳು ಹಸಿವು-ನೋವು ಸಹಿಸಿ. ಅಲ್ಲಾಹನಲ್ಲಿ ಭಾರ ಅರ್ಪಿಸಿ ತನು-ಮನ-ಧನದಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಟಮಾಡಿ.ಕೊನೆಗೆ ಆತ್ಮವನ್ನೇ ಅಲ್ಲಾಹನಿಗೆ ಸಮರ್ಪಿಸಲು ಯುದ್ದಮಾಡಿ ಪಡೆದ ಸ್ವರ್ಗ ನಮಗೆ ಕೇವಲ 500 ರುಪಾಯಿಗೆ ಸಿಗುವಾಗ ಯಾರಿಗೆ ಬೇಡವಾಗಿತ್ತದೆ. ಪುಣ್ಯ ಮತ್ತು ಸ್ವರ್ಗದ ಮಾರಟಗಾರರು ಹೆಚ್ಚಿದಾಗ ಮನುಷ್ಯರ ಹುಚ್ಚು ಮನಸ್ಸುಗಳು ಮೋಸ ಹೋಗುತ್ತಲೇ ಇರುತ್ತದೆ.
ಕೆಲವರು ಐದು ವರ್ಷದಲ್ಲಿ ನಾಲ್ಕು ಉಮ್ರಾ ಮಾಡುತ್ತಾರೆ ಇದಕ್ಕೆ ಕಾರಣ ಪರಲೋಕದ ವಿಜಯ. ಅದೇ ಪರಲೋಕದಲ್ಲಿ ವಿಜಯಿಯಾಗಲು ಮೂರನೇ ಬಾರಿ ಹೋಗುವ ಉಮ್ರಾದ ಹಣವನ್ನು ಅನಾಥರಿಗೆ ನೀಡು ಎಂದರೆ ಅವನು ನೀಡಳಾರ.ಕಾರಣ ಅವನು ಸ್ವರ್ಗಕ್ಕಾಗಿ ಭೂಮಿಯಲ್ಲಿ ಕಷ್ಟ ಸಹಿಸಲಾರ.ಹಾಗೇ ಯಾವುದೇ ತ್ಯಾಗ ಮಾಡಲಾರ.ಸುಲಭವಾಗಿ ಸಿಗಬೇಕು. ಉಮ್ರಾಕ್ಕೆ ಹೋಗುವಾಗ ಖುಷಿಯೂ ಸಿಗುತ್ತದೆ ಹಾಗೇ ಸ್ವರ್ಗವೂ ಸಿಗುತ್ತೆ ಡಬ್ಬಲ್ ಆಫರ್ ಯಾರು ಬಿಡುತ್ತಾರೆ ಹೇಳಿ...
ಪರಲೋಕ ತಯಾರಿ-ಜೀವನ ಮಾದರಿ-ಆರಾಧನೆ-ಪ್ರಾರ್ಥನೆ ಎಲ್ಲವೂ ಪ್ರವಾದಿ ಮುಹಮ್ಮದ್ (ಸ)ರನ್ನು ಆದರ್ಶವಾಗಿಸಿ ಮಾಡಬೇಕು ಆಗಲೇ ನಾವು ಪರಿಪೂರ್ಣತೆಯನ್ನು ತಲುಪುವುದು.ಅದಕ್ಕಾಗಿ ಪ್ರತೀಯೊಬ್ಬರು ಕುರ್ ಅನ್ ಅರ್ಥ ತಿಳಿಯುವ ಭಾಷೆಯಲ್ಲಿ ಓದಬೇಕು. ಮರಣ ನಮ್ಮ ಮುಂದೇ ಇದೆ. ಯುವಕರು-ಮಕ್ಕಳು ಎನ್ನದೇ ಬಲಿ ಪಡೆಯುತ್ತಿದೆ. ಎಚ್ಚರಿಕೆ ವಹಿಸದೇ ಆಮೀನ್ ಎಂದ ಕಾರಣಕ್ಕಾಗಿ ಸ್ವರ್ಗ ಸಿಗುತ್ತದೆ ಎಂದು ಬಾವಿಸಿ ಸುಮ್ಮನಿದ್ದರೆ ಖಂಡಿತಾ ಸೋಲುತ್ತೇವೆ. ರಾತ್ರಿ ಹಗಲು ಸಿಗುವ ಎಲ್ಲಾ ಅವಕಾಶವನ್ನು ಬಳಸಿ ಅಲ್ಲಾಹನು ತೃಪ್ತಿ ಹೊಂದುವ ಕಾರ್ಯ ಮಾಡೋಣ.ಪರಿಶ್ರಮಿಸೋಣ.ಪರಲೋಕದ ವಿಜಯಕ್ಕೆ ಪ್ರಾಮಾಣಿಕವಾಗಿ ಶ್ರಮಿಸೋಣ..
📝ಸುನ್ನೀಟುಡೇ