ಹಸಿದವನಿಗೆ ಮಾತ್ರ ಗೊತ್ತು ತುತ್ತು ಅನ್ನದ ಮೌಲ್ಯ !
ತಮಿಳುನಾಡಿನ ಸಮುದ್ರ ಕಿನಾರೆಯ ಹತ್ತಿರ ಒಂದು ಸಣ್ಣ ಮನೆಯಲ್ಲಿ ಪರಮೇಶ್ವರ್ ಆತನ ಪತ್ನಿ ಚೂಡಾಮಣಿ ಮತ್ತು ಮೂರು ಮಕ್ಕಳ ಸಣ್ಣ ಕುಟುಂಬ ವಾಸವಾಗಿತ್ತು, ಅಂದು 2004 ಡಿಸೆಂಬರ್ 26 , ಪರಮೇಶ್ವರ್ ಅವರ ಹುಟ್ಟಿದ ದಿನ, ಹಾಗಾಗಿ ತನ್ನ ಮೂವರು ಮಕ್ಕಳೊಂದಿಗೆ ಸಮುದ್ರ ಕಿನಾರೆಗೆ ಆಟವಾಡಲು ಹೊರಟರು . ಹೀಗೆ ಆಟವಾಡುತ್ತಿದ್ದಾಗ ಕಿರಿಯ ಮಗ. ದೂರದಲ್ಲಿ ಇವರ ಹತ್ತಿರ ದಾವಿಸಿ ಬರುತ್ತಿದ್ದ ಬೃಹತ್ ಪರ್ವತಕಾರದ ಸಮುದ್ರ ಅಲೆಯನ್ನು ಕಂಡು ಬೊಬ್ಬಿಟ್ಟ. ಅಷ್ಟರಲ್ಲಿ ಅಪಾಯದ ಮುಸ್ಸೊಚನೆ ಅರಿತ ಪರಮೇಶ್ವರ್ ತನ್ನ ಮೂವರು ಸುರಕ್ಷಿತ ಸ್ಥಳಕ್ಕೆ ಮಕ್ಕಳನ್ನು ಹಿಡಿದು ಜೋರಾಗಿ ಓಡಲಾರಂಬಿಸಿದ. ಅದರೆ ಅಷ್ಟರಲ್ಲಿಯೇ ಸಮುದ್ರದ ಅಲೆ ಇವರನ್ನು ನುಂಗಿಯೇ ಬಿಟ್ಟಿತ್ತು, ಮೂವರು ಮಕ್ಕಳು ಪರಮೇಶ್ವರ್ ಅವರ ಕೈ ತಪ್ಪಿ ಹೂಗಿಯಾಗಿತ್ತು ಪರ್ವತಕಾರದ ಅಲೆಯ ಹೊಡೆತಕ್ಕೆ ಸಿಲುಕ್ಕಿದ್ದ ಸಾವಿರಾರು ಜನರ ಚೀತ್ಕಾರಗಳು ಮುಗಿಲು ಮುಟ್ಟಿತು, ಅದು ಇಡಿ ಸಾವಿರಾರು ಜನರ ಬಳಿತೆಗೆದುಕೊಂಡ ಸುನಾಮಿ ಅಲೆಯಗಿತ್ತು. ಪರಮೇಶ್ವರ್ ಎದುರಿಗೆ ಸಾವಿರಾರು ಜನರ ಶವದ ರಾಶಿ . ತನ್ನ ಮಕ್ಕಳು ಬದಿಕಿದ್ದಾರೆ ಅವರನ್ನು ಹುಡುಕುವಾಗ ಅವರಿಗೆ ದುಃಖದ ಸರಮಾಲೆ ಎದುರಿಗೆ ರೈಲ್ವೆ ಹಲಿಯಲ್ಲಿ ಕಿರಿಯ ಮಗನ ಶವ, ಮುಂದೆ ಹೂಗುವಾಗ ಇನ್ನೂಬ್ಬ ಮಗಳ ಶವ ಕಬ್ಬಿಣದ ಬೇಲಿಯಲ್ಲಿ ನೇತಾಡುತ್ತಿತ್ತು ಇಬ್ಬರ ಶವವನ್ನು ನೋಡಿದಾಗ ,ಮತ್ತಾರು ಇವರಲ್ಲಿಗೆ ಬಂದು ಡಿಸ್ಟ್ರಿಕ್ಟ್ ಕಲೆಕ್ಟರ್ ಆಪೀಸ್ ಹತ್ತಿರ ನಿಮ್ಮ ಮಗಳಹಾಗೆ ಜೀವ ನೋಡಿದ ಹಾಗೆ ಇದೆ ಎಂದಾಗ ಅವಳು ಬದುಕಿರುವ ಆಶೆಯೆಂದ ಒಡೂಡಿ ಹೊಗುವಾಗ ಅಲ್ಲಿ ತನ್ನ ಕಿರಿಮಗಳು ಸತ್ತು ಎಷ್ಟು ಸಮಯವಾಗಿತ್ತು ಮಕ್ಕಳನ್ನು ಕಳೆದುಕೊಂಡು ದುಃಖದಿಂದ ಮನೆಗೆ ಪತ್ನಿ ಚೂಡಾಮಣಿ ಇವರಲ್ಲಿಗೆ ಬಂದು ಮಕ್ಕಳು ಏಲ್ಲಿ ಎಂದು ಪ್ರಶ್ನಾತೀತವಾಗಿ ? ಕೇಳಿದಳು ಪರಮೇಶ್ವರ್ ಅವರು ಸಿಕ್ಕಿದ್ದಾರೆ ಅದರೆ ಅವರು ಯಾರು ಮತಾನಾಡುದಿಲ್ಲ ಎಂದಾಗ ಹೆತ್ತವರ ಕರುಳಿನ ಕೂಗು ಮುಗಿಲು ಮುಟ್ಟಿತ್ತು .. ನಾವು ಕೈಯಾರೆ ಅಡಿ ಮುದ್ದಿಸಿದ ಮಕ್ಕಳು ನಮ್ಮಿಂದ ದೊರವಾದವು ನೋವಿನಿಂದಲೇ ಬೊಬ್ಬಿಡಲಾರಂಬಿಸಿದರು ಅವರ ಅಂತ್ಯ ಕ್ರಿಯೆಗಳನ್ನು ಪೆÇರೈಯಿಸಿ ಕೊನೆಗೆ ಅಗಲಿದ ಮಕ್ಕಳನ್ನು ಕೈ ಮುಗಿದು ನಿಮ್ಮ ಕೊನೆಯಗಳಿಗೆಯಲ್ಲಿ ನಿಮ್ಮ ದೇಹಕ್ಕೆ ಸಣ್ಣ ಹೊವು ಹಾಕದೆ ಪಾಪಿ ಹೆತ್ತವರು ನಾವು ನಮ್ಮನ್ನು ಕ್ಷಮೀಸಿಬಿಡಿ ಎಂದು ಮನೆಗೆ ಬಂದವರೇ ಒಂದು ರಾತ್ರಿ ಪರಮೇಶ್ವರ್ ತೀರ್ಮಾಸಿಯೇ ಬಿಟ್ಟರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ಆಗಲಿಲ್ಲ ಇನ್ನು ನಾವು ಯಾಕೆ ಬದುಕಬೇಕೆಂದು ತನ್ನ ಪತ್ನಿಯನ್ನು ಕರೆದು ಒಂದು ಬಾಟಲ್ ವಿಷ ತೆಗೂಂಡು ಬಾ ನಾವು ಕುಡಿದು ಸಾಯುವ ದುಃಖದಿಂದ ಹೇಳಿದ . ಅದಕ್ಕೆ ಚೊಡಾಮಣಿ "ಎಲ್ಲರೂ ಒಂದಾಲ್ಲ ಒಂದು ದಿನ ಸಾಯುವವರೆ, ಸಾವಿರಾರು ಜನ ಅ ಸುನಾಮಿ ಅಲೆಗೆ ತಮ್ಮ ಜೀವ ಕಳೆದುಕೊಂಡಿದ್ದಾರೆ ಅ ಸಾವಿರ ಮಂದಿಯಲ್ಲಿ ನೀವು ಒಬ್ಬರಾಗಿದ್ದರು ನಿಮ್ಮನ್ನು ದೇವರು ಉಳಿಸಿದ್ದಾರೆ ದೇವರಿಗೆ ನಿಮ್ಮನ್ನು ತನ್ನ ಬಳಿ ಕರೆದುಕೊಳ್ಳಲು ಹೆಚ್ಚು ಸಮಯ ಬೇಕಾಗಿರಲ್ಲಿಲ, ನೀವು ಬದುಕಿದ್ದರ ನಿಮ್ಮನ್ನು ಒಂದು ಉದ್ದೇಶಕ್ಕಾಗಿ ಬದುಕಿಸಿದ್ದಾರೆ ಹಾಗಾಗಿ ನೀವು ಅ ಉದ್ದೇಶಕ್ಕಾಗಿಯಾದರು ಬದುಕಬೇಕು ಅರ್ಧದಿಂದ ನಾವು ಯಾವತ್ತು ನಮ್ಮ ಬದುಕನ್ನು ಕೊನೆಗೊಳಿಸಬಾರದೆಂದರು " ಸುನಾಮಿ ಲಕ್ಷಾಂತರ ಮಂದಿರ ಜೀವನವನ್ನು ಕಸಿದುಕೊಂಡಿತು ಮತ್ತು ಇನ್ನು ಅನೇಕರು ತಮ್ಮ ಮನೆ ಮಠ ಕಳೆದುಕೊಂಡು ತಮ್ಮ ಊರಲ್ಲಿಯೇ ತಾವು ನಿರಾಶ್ರಿತರಾಗಿದ್ದರು , ಪರಮೇಶ್ವರ್ ಮತ್ತು ಚೊಡಾಮಣಿ ತಮ್ಮ ಪಕ್ಕದ ಊರನ ಪರಿಸ್ಥಿತಿ ಹೇಗೆದೆಯೆಂದು ನೋಡಲು ಬಂದರು ಅದು ಸಮುದ್ರ ಕಿನಾರೆಗೆ ಅಂಟಿಕೊಂಡು ಹಚ್ಚಾಗಿ ಮೀನುಗಾರರು ವಾಸಿಸುವ ಊರಗಿತ್ತು ಸುನಾಮಿ ಅಲೆಗೆ ನಲುಗಿದ್ದ ಊರು ಸ್ಮಾಶನದಂತಿತ್ತು ಅಲ್ಲಿ ಸಾವಿರಾರು ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡು ರೋದಿಸುತ್ತಿದ್ದರು ಅವರೆಲ್ಲರು ಅನಾಥರಾಗಿದ್ದರು . ಇವರ ಪರಿಸ್ಥಿತಿಯನ್ನು ನೋಡಿದ ದಂಪತಿಗಳಿಗೆ ಕಣ್ಣೀರು ಉಕ್ಕಿಬಂತು ಅ ಮಕ್ಕಳನ್ನು ಕಾಣುವಾಗ ನಮ್ಮ ಮಕ್ಕಳು ಅವರ ನಡುವೆ ಎಲ್ಲೂ ಇವರ ನಡುವೆ ಇದ್ದಾರೆ ಎಂದು ಭಾಸವಾಗುತ್ತಿತ್ತು, ಚೂಡಮಣಿ ಪರಮೇಶ್ವರ್‍ರವರ ಹತ್ತಿರ ಬಂದು ಕೇಳಿಯೇ ಬಿಟ್ಟಳು ನಾವು ಒಂದೆರಡು ಮಕ್ಕಳನ್ನು ದತ್ತು ಪಡೆದು ಸಾಕುವ ಎಂದು. ಇವಳ ಕೋರಿಕೆಗೆ ಪರಮೇಶ್ವರ್ ಸರಿ ಎಂದು ತಲೆಯಾಡಿಸಿದ ತದನಂತರ ಊರಿನ ಮುಖಂಡನಲ್ಲಿ ಮಾತನಾಡಿ ಒಂದೆರಡು ಮಕ್ಕಳನ್ನು ನಾವು ಸಾಕುತ್ತೇವೆ ಎಂದಾಗ ಅವನು ಖುಷಿಯಿಂದ ಒಪ್ಪಿಕೊಂಡ . ಅ ಮಕ್ಕಳನ್ನು ಸಾಕುತ್ತ ಅವರಲ್ಲಿ ತಾವು ಹೆತ್ತು ಹೊತ್ತ ಮಕ್ಕಳನ್ನು ಕಾಣುತ್ತಿದ್ದರು. ಇನ್ನು ಉಳಿದ ಮಕ್ಕಳಿಗಾಗಿ ಏನಾದರು ಮಾಡಬೇಕೆಂದು ಯೋಚಿಸಿ " ನಂಬಿಕೈ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು ನಂಬಿಕೈ ಎಂದರೆ ಭರವಸೆಯ ಕೈ ಈ ಸಂಸ್ಥೆಯಲ್ಲಿ ದತ್ತು ತೆಗೆದುಕೊಂಡ ಮಕ್ಕಳು ಸೇರಿದಂತೆ ಇನ್ನೂ 36 ಮಕ್ಕಳು ಸೇರಿಸಿ 40 ಜನ.ಮಕ್ಕಳಿಗೆ ಪ್ರೀತಿಯ ತಂದೆ ತಾಯಿಯಾದರು.ಅವರಿಗೆ ವಿದ್ಯಾಭ್ಯಾಸ ಜೊತೆಗೆ ವಸತಿಯನ್ನು ಈ ದಂಪತಿಗಳು ಒದಗಿಸಿದರು ಇಂದು ಈ ಸಂಸ್ಥೆಗೆ ಹತ್ತು ವರುಷಗಳು ಸಂದಿವೆ ಎಲ್ಲಾ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದರೆ ಕೆಲವರು ಇಂಜಿನಿಯರ್ ಆಗಿದ್ದರೆ ಇವರಲ್ಲರು ಈ ದಂಪತಿಗಳಿಗೆ ತಮ್ಮನ್ನು ಹೆತ್ತ ತಾಯಿಗಿಂತ ಹೆಚ್ಚಿನ ಪ್ರೀತಿಯನ್ನು ಕೊಡುತ್ತಿದ್ದರೆ ಇವರ ಈ ಪ್ರೀತಿಯಿಂದ ಕಳೆದಕೊಂಡ ಮಕ್ಕಳ ನೋವು ಮರೆಯುತ್ತಿದ್ದಾರೆ. ರಿಯಾಲಿ ಗ್ರೇಟ್ ಕಳೆದು ಕೊಂಡುದರ ಬಗ್ಗೆ ಚಿಂತಿಸಿಕೊರುವುದರಿಂದ ಪ್ರಯೋಜನವಿಲ್ಲ ಮನಸ್ಸಲ್ಲಿ ನೋವು ಈ ನೋವು ಯಾವತ್ತು ನಮಗೆ ಕೆಲವೂಂದು ಕಾರ್ಯಗಳಿಗೆ ಅಡ್ಡಿಯಾಗುತ್ತವೆ
. ಇವರಿಗೆ ತಾವು ಹೆತ್ತು ಹೊತ್ತು ಸಾಕಿದ ಮಕ್ಕಳು ಕಣ್ಣೆದುರು ಸತ್ತಾಗ ಹತಾಶರಾದರು ಅದರೆ ಅಲ್ಲಿ ಋಣತ್ಮಕ ಚಿಂತನೆಗೆ ಅವಕಾಶ ಕೊಡದೆ ನಾವು ಬದುಕಿ ಬಂದುದರ ಉದ್ದೇಶದ ಬಗ್ಗೆ ಯೋಚಿಸಿದರು ತಮಗೆ ಅಪ್ಪಲಿಸಿದ ನೋವು ಬೇರೆ ಯಾರಿಗೋ ಬರಲು ಅವಕಾಶ ಕೊಡುವುದಿಲ್ಲ ತಿರ್ಮಾಣಿಸಿ ಅನಾಥಮಕ್ಕಳಿಗೆ ಪಾಲಕರದರು ಅವರನ್ನು ಸಮಾಜಕ್ಕೆ ಉತ್ತಮ ನಾಗರಿಕರಾಗಿ ಬೆಳೆಸಿದರು ಈ ಮೂಲಕ ಅವರ ಬದುಕಿನ ಉದ್ದೇಶವನ್ನು ನೆರವೇರಿಸಿದರು
ರವಿ ಪೂಜಾರಿ