*ಮೊದಲು ಪಿತ್ನ ಮಾಡಳು ಜನರ ಬಳಿಗೆ ಹೋಗಬೇಕಿತ್ತು. ವ್ಯಭಿಚಾರ ಮತ್ತು ಸುಳ್ಳು ಹೇಳಲು ಮುಖತಹ ಬೇಟಿಯಾಗಬೇಕಿತ್ತು. ಅವಮಾನಿಸಲು ಮತ್ತು ಅಶಾಂತಿ ಹರಡಳು ವೇದಿಕೆ ಕಟ್ಟ ಬೇಕಾಗಿತ್ತು ಈಗ ಅದೆಲ್ಲವೂ ಇಂಟರ್ ನೆಟ್ಟ್ ಮೂಲಕ ಕುಳಿತಲ್ಲಿಯೇ ಮಾಡಬಹುದಾಗಿದೆ. ಸೋಸಿಯಲ್ ಮೀಡಿಯಾ. ವಿಡಿಯೊ ಕಾಲ್. ವಾಟ್ಸಾಪ್ ಮತ್ತು ಗ್ರೂಪ್ ಗಳ ಮೂಲಕ ಮನುಷ್ಯನ ಪಾಪದ ಮೂಟೆಗಳು ಸುಲಭವಾಗಿಯೇ ಭರ್ತಿಯಾಗುತ್ತಿದೆ *ಶೈತಾನನು ವಿಜ್ರಂಭಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪವಿತ್ರ ಕುರಾನ್ ನಲ್ಲಿ ಅಲ್ಲಾಹು ಹೇಳಿದಂತೆ ಜಾಗೃತೆ* *ಪಾಲಿಸದೇ ಇದ್ದರೆ ನಮ್ಮ ಸ್ಥಿತಿಗೆ ನಾವೇ ಜವಾಬ್ದಾರರು*
*ಫ್ಯಾಮಿಲೀ ಗ್ರೂಪ್ ಎಂಬ ಹೆಸರಿನಲ್ಲಿ ಪ್ಯಾಮಿಲಿ ಪ್ಯಾಕೇಜ್ ಪಾಪಗಳು ನಡೆಯುತ್ತಿದೆ. ಯಾರದೋ ಮದುಮಗಳ ಚಿತ್ರವು ಯಾವನದೋ ಯುವಕನ ಮೊಬೈಲ್ ಮೇಮೋರಿಯಲ್ಲಿರುತ್ತದೆ* *ಪರಲೋಕದಲ್ಲಿ ನಮ್ಮ ಪಾಪದ ಮೂಟೆಯನ್ನು ಲೆಕ್ಕ ಮಾಡಳು ಪ್ರತೀಯೋಬ್ಬರ ಮೊಬೈಲ್* ಮೇಮೋರಿ ನೋಡಿದರೆ ಸಾಕು . ಮೊಬೈಲ್ ತುಂಬಾ ಹಾಡುಗಳು.ಡ್ಯಾನ್ಸ್ ಗಳು. ಹಾಸ್ಯಗಳು. ಯಾರ್ಯಾರದೋ ಹೆಣ್ಣು ಮಗಳ ಮತ್ತು ಪತ್ನಿಯ ಸೆಲ್ಪೀ ಚಿತ್ರಗಳು ಛೀ ಬಹಿರಂಗವಾಗಿ ಅಲ್ಲಾಹನಿಗೆ ನಾವು ತೋರುವ ದಿಕ್ಕಾರದ ಅಂತ್ಯ ನರಕವಾಗಿದೆ *ಇದೇ ರೀತಿಯಲ್ಲಿ ನಾಳೆ ಅಲ್ಲಾಹನ ಸನ್ನಿದಾನದಲ್ಲಿ*
ನಮ್ಮ ಕರ್ಮ ಗ್ರಂಥದ ಮೆಮೊರಿ ಚಿಪ್ ಅಕ್ರಮದಿಂದಲೇ ತುಂಬಿದ್ದರೆ ನಮ್ಮ ಪರಿಸ್ಥಿತಿ ಹೇಗಾದಿತು ಚಿಂತಿಸಿ
ಕೆಲವರು ದೀನುಲ್ ಇಸ್ಲಾಮ್ ಎಂದು ಹೇಳುತ್ತಾರೆ ಅವರ ಮೊಬೈನಲ್ಲಿರುವುದು ಪರಸ್ಪರ ನಿಂದನೆಗಳ ವೀಡಿಯೋಗಳು. ಆಲಿಮ್ ಳನ್ನು ಅವಮಾನಿಸುವ ಚಿತ್ರಗಳು. ತರ್ಕಿಸುವ ಮತ್ತು ಪಿತ್ನ ಹರಡುವ ಬರಹಗಳು ಇದೆಲ್ಲವೂ ಸ್ವರ್ಗಕ್ಕೆ ಸ್ವಾಗತಿಸುವ ಸಾದನಗಳಾಗಿದೆಯೇ *ಪಿತ್ನ ಹರಡುವುದು ಈಗ ಬಲು ದೊಡ್ಡ ಗೌರವದ ವಿಷಯವಾಗಿದೆ*
ಅಲ್ಲಾಹನಂದರೆ ಯಾರು ? ಇಸ್ಲಾಮ್ ಎಂದರೆ ಏನು ? ಪ್ರವಾದಿ(ಸ.ಅ) ಯಾಕೆ ಬಂದರು ? ಹೃದಯವಿಟ್ಟು ಚಿಂತಿಸಿ 13 ವರ್ಷ ಮಕ್ಕಾದಲ್ಲಿ ಅವರು ಅನುಭವಿಸಿದ ಯಾತನೆಯ ಒಂದು ದಿನದ ಬಗ್ಗೆಯಾದರೂ ನಮಗೆ ಖೇದವಿದೆಯಾ? ಸರ್ವ ಅನುಗ್ರಹಗಳನ್ನು ಕೊಟ್ಟು ಅನುಗ್ರಹಿಸಿದ ಅಲ್ಲಾಹನ ಬಗ್ಗೆ ಒಂದು ಕ್ಷಣಕ್ಕಾದರು ಭಯ ಇದೆಯಾ? ನಾವು ಪವಿತ್ರ ಕುರಾನ್ ಹೇಳಿದಂತೆ ಪ್ರಾಣಿಗಳಂತಿದ್ದೇವೆ ಅಥವಾ ಅವುಗಳಿಗಿಂತ ನಿಕೃಷ್ಟವಾಗಿದ್ದೇವೆ. ಒಂದು *ಜಮಾತ್ ನ ಜನರ ಅಲ್ಲಾಹನ ಮೇಲಿನ ವಿಶ್ವಾಸ ಮತ್ತು ಪ್ರವಾದಿ ಪ್ರೇಮವನ್ನು ಅರಿಯಲು ಸುಬಹ್ ನಮಾಝ್ ನ ಸಾಲು ಮತ್ತು ಶ್ರೀಮಂತನ ಝಕಾತ್ ನ ಮೊತ್ತವನ್ನು ನೋಡಿದರೆ ತಿಳಿಯುತ್ತದೆ*
ಪ್ರತಿಷ್ಟೆ, ವಸ್ತ್ರದಾರಣೆ, ಮನೋರಂಜನೆ, ಹಾಸ್ಯ,ಪ್ರವಾಸ ಹೀಗೆ ಪ್ರತೀಯೊಂದು ಕೂಡ ಕುಟುಂಬದ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ತನ್ನ ಮಗಳು ಬುರ್ಕಾ ಹಾಕಿ ಮನೆಯಿಂದ ಹೊರಗೆ ಹೋಗುತ್ತಾಳೆ ಎಂದು ತಂದೆ ಬಾವಿಸುತ್ತಾನೆ ಆದರೆ ಅವಳ ಅರೆ ನಗ್ನ ಚಿತ್ರವು ಕೆಲವು ಯುವಕರ ಮೊಬೈಲ್ ನಲ್ಲಿರುವುದು ಅಸಾಹಯಕ ತಂದೆಗೆ ಗೊತ್ತಾಗೋದೆ ಇಲ್ಲ *ವಿಪರ್ಯಾಸ ಎಂದರೆ ವಾಟ್ಸಾಪ್ ಪ್ರೋಪೈಲ್ ಚಿತ್ರ ಮತ್ತು ಸ್ಟೇಟಸ್ ಗಳು ಅಲ್ಲಾಹನ ಹೆಸರಿನಲ್ಲಿದ್ದರೆ ಅದರಲ್ಲಿ ರವಾನೆಯಾಗುವುದು ಎಲ್ಲವೂ ಶೈತಾನನ ಸಂದೇಶಗಳು* *ಇದು ಅಲ್ಲಾಹನನ್ನು ನಾವು ತಮಾಷೆ ಮಾಡುವುದಾಗಿದೆ. ಪವಿತ್ರ ಕುರಾನ್ ನಲ್ಲಿ ಅಲ್ಲಾಹನು ಕೇಳುತ್ತಾನೆ ನೀವು "ಅಳುವುದಿಲ್ಲವೇ ನಗುತ್ತೀರಾ ಎಂದು"
ಪ್ರವಾದಿ (ಸ.ಅ) ಹೇಳಿದ್ದಾರೆ ಅಂತ್ಯದಿನದ ಕಾಲಘಟ್ಟದಲ್ಲಿ ಒಂದು ಪಿತ್ನವು ಬರಳಿದೆ ಅದು ಬಡವ ಶ್ರೀಮಂತ ಎಂಬ ಬೇದವಿಲ್ಲದೆ ಎಲ್ಲರ ಮನೆಯನ್ನು ಪ್ರವೇಶಿಸಲಿದೆ ಮೊಬೈಲ್ ಮತ್ತು ಇಂಟರ್ ನೆಟ್ಟ್ ಎಂಬ ಪಿತ್ನ ಪ್ರತೀ ಮನೆ ಮತ್ತು ವ್ಯಕ್ತಿಯನ್ನು ಬಾದಿಸಿದೆ * ಪವಿತ್ರ ಕುರಾನ್ ಹೇಳುತ್ತದೆ ಪಿತ್ನವು ಕೊಲೆಗಿಂತ ಹೇಯ ಕೃತ್ಯವಾಗಿದೆ ಎಂದು.
ಇಮಾನ್ ಇರುವ ಹೃದಯಕ್ಕೆ ಮಾತ್ರವೇ ಉಪದೇಶದಿಂದ ಫಲವಿದೆ ಹೊರತು
*ಒಂದು ವ್ಯಕ್ತಿ ಮತ್ತು ಸಮುದಾಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಯಾರಿಗೆ ಅಲ್ಲಾಹನ ಪ್ರೀತಿ ಇದೆಯೋ ಮತ್ತು ಪರಲೋಕದ ಭಯವಿದೆಯೋ ಅವರು ಮಾತ್ರ ಇದರಿಂದ ಸುದಾರಿಸಿಕೊಳ್ಳುತ್ತಾರೆ.