ಶನಿವಾರ, ಜೂನ್ 11, 2016

ರಮಝಾನ್

ಪರಿವರ್ತನೆಯ ರಮಝಾನ್!

ಗೌರವನ್ವಿತ ಸಹೋದರ ಸಹೋದರಿಯರೇ ಈ ಒಂದು ಪವಿತ್ರ ರಮಝಾನ್ ತಿಂಗಳಿನಲ್ಲಿ ನಮ್ಮನ್ನು ನಾವು ಸಂಸ್ಕರಿಸಿ ತೆಗೆಯುವಂತೆ ಒಂದು ಸುವರ್ಣ ಅವಕಾಶ ನಮ್ಮ ಬಳಿ ಇದೆ. ಈ ಒಂದು ತಿಂಗಳಿನ ವಿಶೇಷತೆಯಂದರೆ ಅಲ್ಲಾಹನು ನಮ್ಮಲ್ಲಿ ಉಪವಾಸವನ್ನು ಈ ತಿಂಗಳಿನಲ್ಲಿ ನಿರ್ಬಂಧಗೊಳಿಸಿದ್ದಾನೆ. ಈ ಉಪವಾಸದಿಂದ ಅಲ್ಲಾಹನು ನಮ್ಮಿಂದ ಉದ್ದೇಶಿಸುವುದು ಕೇವಲ ಭಾಯಾರಿಕೆ ನೀಗಿಸುವುದು, ಅಥವಾ ನಮ್ಮ ಹಸಿವನ್ನು ತಡೆಗಟ್ಟುವುದು ಮಾತ್ರ ಅಲ್ಲ ಈ ಉಪವಾಸದಿಂದ ನಾವು ಅಲ್ಲಾಹನಿಗೆ ಧರ್ಮ ನಿಷ್ಠ ಉಳ್ಳವರಾಗಬೇಕು. ಅಲ್ಲಾಹನು ಅವನ ಪ್ರವಾದಿ (ಸ.ಅ)ರೊಂದಿಗೆ ಕಲಿಸುವ ಸಂದೇಶವೆನಂದರೆ ಒಬ್ಬ ವ್ಯಕ್ತಿ ಸುಳ್ಳು ಹೇಳುವುದನ್ನು ಅಥವಾ ಅದರೊಂದಿಗೆ ಇತರ ವರ್ತನೆಗಳನ್ನು ಬಿಟ್ಟು ಬಿಡದೆ ಬರೀ ಉಪವಾಸವಿದ್ದು ಏನು ಪ್ರಯೋಜನವಿಲ್ಲ. ಅಲ್ಲಾಹನು ನಮ್ಮ ಉಪವಾಸದಿಂದ ಮುಖ್ಯವಾಗಿ ಉದ್ದೇಶಿಸುವುದು ನಮ್ಮ ನಡವಳಿಕೆಗಳಲ್ಲಿ ಬದಲಾವಣೆಗಳನ್ನು. ಕೆಟ್ಟದನ್ನು ಆಲಿಸುವುದರಿಂದ, ಕೆಟ್ಟದನ್ನು ನೋಡುವುದರಿಂದ, ಕೆಟ್ಟದ್ದನ್ನು ಮಾಡುವುದ್ದರಿಂದ ಅಥವಾ ಇನ್ನಿತರ ಅಶ್ಲೀಲ ವರ್ತನೆಯನ್ನು ನಾವು ತಡೆಯಬೇಕು. ಮತ್ತು ನಾವು ಅಲ್ಲಾಹನಿಗೆ ಭಯಪಟ್ಟು ಜೀವಿಸಬೇಕು ಎಂಬುದಾಗಿದೆ ಈ ಪವಿತ್ರ ರಂಜಾನ್ ತಿಂಗಳಿನ ವಿಶೇಷತೆ.

       ಈ ಭೂಲೊಕದಲ್ಲಿ ನಾವು ಮಾಡಿದ ಪಾಪ ಕರ್ಮಗಳ ಬಗ್ಗೆ ನಾಳೆ ಪರಲೋಕದಲ್ಲಿ ಒಂದು ವಿಚಾರಣೆ ಇದೆ. ಅಲ್ಲಿ ನಮ್ಮ ಜೀವನದ ಪ್ರತಿಯೊಂದು ಘಳಿಗೆಯಲ್ಲಿ ನಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನ ಅಲ್ಲಾಹನ ಮುಂದೆ ಇಡಬೇಕು ಅದಕ್ಕಾಗಿ ನಮ್ಮ ಪ್ರವಾದಿಯವರ ಅನುಯಾಯಿಗಳು ಈ ಭೂಲೋಕದಲ್ಲಿ ಜೇವಿಸುವಾಗ ಪರಲೋಕದ ವಿಚಾರದಲ್ಲಿ ಬಹಳಷ್ಟು ಭಯಪಟ್ಟು ಅಲ್ಲಾಹನ ಪ್ರವಾದಿ ನೆಬಿ ಸ್ವಲ್ಲಹು ಅಲೈ ವಾ ಸಲ್ಲಮರನ್ನು ಅನುಸರಿಸಿ ಜೀವಿಸುತ್ತಿದ್ದರು. ಇನ್ನು ನಮಗೆಲ್ಲರಿಗೂ ಗೊತ್ತಿರುವ ಹಾಗೆ ಇಸ್ಲಾಮೀನ ಧ್ವೀತಿಯ ಖಲೀಫಾ ಉಮರ್ (ರ.ಅ) ಅವರು ಹೇಳುವಂತ "ನೀವು ನಿಮ್ಮನ್ನು ವಿಚಾರಣೆಯನ್ನು ನಡೆಸಿರಿ, ನೀವು ಈ ಹಿಂದೆ ಮಾಡಿದ ಪಾಪಗಳನ್ನ ತೂಕ ಮಾಡಿ ನೋಡಿರಿ ಅದು ಎಷ್ಟು ಭಾರ ಇದೆ. ನಾವು ಯಾರಿಗಾಗಿ ಆರಾಧನೆಯನ್ನು ನಿರ್ವಹಿಸಿದ್ದೀರಿ? ಆರಾಧನೆ ಅಲ್ಲಾಹನಿಗೆ ಮಾತ್ರವೇ? ಅಥವಾ ನಮ್ಮ ಅಕ್ಕ-ಪಕ್ಕದ ಜನರು ನಮ್ಮನ್ನು ನೋಡಲೆಂದೆ?" ಇವುಗಳನೆಲ್ಲ ನಾವು ಪರಿಶೀಲನೆ ಮಾಡಬೇಕು. ನಾವು ಮಾಡಿದ ಆರಾಧನೆ ಅಲ್ಲಾಹನಿಗೆ ಮಾತ್ರ ಸೀಮಿತವಾಗಬೇಕು. ಆರಾಧನೆ ಮಾಡಬೇಕಾದ ಕ್ರಮವನ್ನು ನಾವು ನಮ್ಮ ಪ್ರವಾದಿಯವರ ಜೀವನದಿಂದ ಆರಿಸಿ ತೆಗೆಯಬೇಕು. ಹಾಗಾದರೆ ಮಾತ್ರ ನಮ್ಮ ಕರ್ಮಗಳು ನಾಳೆ ಅಲ್ಲಾಹನ ಬಳಿ ಸ್ವೀಕರಿಸಲ್ಪಡುವುದು ಎಂದು ಉಮರ್ (ರ.ಅ) ಹೇಳುತ್ತಾರೆ. ಆದುದರಿಂದ ಇದನ್ನು ನಾವು ಗಂಭಿರವಾಗಿ ಪರಿಗಣಿಸಲೇಬೇಕು.

         ಈ ಭೂಮಿಯಲ್ಲಿ ನಾವು ಜೀವಿಸುವಾಗ ನಾವು ನಮ್ಮ ತಂದೆ ತಾಯಿಯನ್ನು ಪ್ರೀತಿಸುತ್ತೇವೆ, ಹೆಂಡತಿ ಮಕ್ಕಳನ್ನು ಪ್ರೀತಿಸುತ್ತೇವೆ. ಅದೇ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ನಡೆಸುತ್ತೇವೆ. ಅವರು ಯಾವ ರೀತಿ ಬದುಕಬೇಕು ಹಾಗೆ ಯಾವ ರೀತಿ ಕಲಿಯಬೇಕು ಅನ್ನೋದರ ಬಗ್ಗೆ ನಾವು ಚಿಂತನೆಯನ್ನು ನಡೆಸುತ್ತಿರುತ್ತೇವೆ ಅದೇ ರೀತಿ ನಮ್ಮ ವ್ಯಾಪಾರ. ಈ ವ್ಯಾಪಾರದಿಂದ ನಾವು ಎಷ್ಟು ಲಾಭ ಗಳಿಸುತ್ತೇವೆ, ಈ ಲಾಭಗಳನ್ನೂ ಯಾವ ರೀತಿ ಗಳಿಸಬೇಕು ಅನ್ನೋದರ ಬಗ್ಗೆ ಸಿದ್ದತೆ ಹಾಗು ಚಿಂತನೆಯನ್ನು ನಡೆಸುತ್ತ ಈ ಭೂಲೋಕದಲ್ಲಿ ಜೀವಿಸುತ್ತೇವೆ.  ಅದು ಒಳ್ಳೆಯದೇ ಆದರ ಈ ವಿಷಯಗಳಲ್ಲವು ಈ ಭೂಲೋಕದಲ್ಲಿ ಈಡೇರಬೇಕೆಂದಿಲ್ಲ. ಇಹಲೋಕದ ಜೀವನ ಕೇವಲ ತಾತ್ಕಾಲಿಕವಾದಂತಹ ಜೀವನವಾಗಿದೆ. ಒಂದು ಬಾರಿ ನಮ್ಮ ಉಸಿರು ನಿಂತುಹೋದರೆ ನಮ್ಮನ್ನು ಯಾರು ಇಲ್ಲಿ ಪರಿಗಣಿಸುವವರೇ ಇರುವುದಿಲ್ಲ. ಆ ಬಳಿಕ ನಮ್ಮನ್ನು ಸ್ಮಶಾನಕ್ಕೆ ಕೊಂಡುಹೋಗಿ ನಮ್ಮ ಮೇಲೆ ಮಣ್ಣು ಹಾಕಿ ಎಲ್ಲರು ಹಿಂತಿರುಗಿ ಬರುವರು. ಅದರಿಂದ ನಾವು ಐಹಿಕ ಜೀಬನದ ವಿಷಯದಲ್ಲಿ ಎಷ್ಟು ಚಿಂತನೆಯನ್ನು ನಡೆಸುತ್ತಿವೋ ಅದಕ್ಕಿಂತ ಮಿಗಿಲಾಗಿ ಪರಲೋಕದ ವಿಷಯದಲ್ಲಿ ನಾವು ಚಿಂತನೆಯನ್ನು ನಡೆಸಬೇಕಾಗಿದೆ. ನಾವು ಸಿಕ್ಕಿದ ಸಮಯದಲ್ಲಿ ಪರಲೋಕದ ಚಿಂತನೆಯನ್ನು ಮಾಡುತ್ತಾ ಜೀವಿಸಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನೀಡಿದ ಮಾರ್ಗದಲ್ಲಿ ಪ್ರವಾದಿ (ಸ.ಅ)ರ ಜೀವನವನ್ನು ಪರಿಪಾಲಿಸುತ್ತ ಜೀವಿಸಬೇಕಾಗಿದೆ.

     ಪವಿತ್ರ ಕುರ್ ಆನ್ನಲ್ಲಿ ಅಲ್ಲಾಹು ಹೇಳುತ್ತಾನೆ ಆ ದಿನ ಎಲ್ಲ ಜನರನ್ನು ಎಬ್ಬಿಸಿ ಹೇಳಲಿಕ್ಕಿದೆ ನಂತರ ಈ ಭೂಮಿಯಲ್ಲಿ ಏನನ್ನು ಪ್ರವರ್ತಿಸಿದ್ದರೋ ಆ ಪ್ರವರ್ತನೆಯ ವಿಷಯದಲ್ಲಿ ಅಲ್ಲಾಹನು ಅವರಲ್ಲಿ ವಿವರವಾಗಿ ಹೇಳುತ್ತಾನೆ ಯಾರಾದರು ಒಬ್ಬ ವ್ಯಕ್ತಿ ಒಂದು ಅಣುಗಾತ್ರದಷ್ಟು ಒಳಿತನ್ನು ಮಾಡಿದ್ದನೋ ಆ ಒಳಿತನ್ನು ನಾಳೆ ಪರಲೋಕದಲ್ಲಿ ಕಂಡೆ ತೀರುವುವನು. ಅದೇ ರೀತಿ ಒಬ್ಬ ವ್ಯಕ್ತಿ ಒಂದು ಅಣು ಗಾತ್ರದಷ್ಟು ಕೆಟ್ಟದನ್ನು ಮಾಡಿದರೂ ನಾಳೆ ಪರಲೋಕದಲ್ಲಿ ಅದಕ್ಕೆ ಶಿಕ್ಷೆಗೊಳಗಾಗಿ ತೀರುವನು. ಮನುಷ್ಯನು ಮಾಡಿದ ಪಾಪಗಳ ಪಟ್ಟಿಯನ್ನ ಆ ಅಲ್ಲಾಹನು ಅವನ ಮುಂದೆ ಇಡುತ್ತಾನೆ. ನಾವು ಪ್ರತಿ ಸೆಕೆಂಡುಗಳಲ್ಲಿ ಮಾಡಿದ ಪಾಪ, ಪುಣ್ಯಗಳ ಪಟ್ಟಿಯನ್ನು ಅಲ್ಲಾಹನು ನಾಳೆ ಪರಲೋಕದಲ್ಲಿ ನಮ್ಮ ಮುಂದೆ ಇಡುತ್ತಾನೆ. ನಾಳೆ ಪಾಪದ ಪಟ್ಟಿ ನಮ್ಮ ಮುಂದೆ ಇಟ್ಟಾಗ ನಾವು ಭಯಬೀತರಾಗಿ ಅಲ್ಲಾಹನ ಮುಂದೆ ಹೇಳಲಿಕ್ಕಿದೆ "ಯಾ ಅಲ್ಲಾಹ ಇದು ಯಾವ ಪಟ್ಟಿಯನ್ನು ನನ್ನ ಮುಂದೆ ಇಟ್ಟಿದ್ದೀರಿ? ಇದರಿಂದ ನಮ್ಮ ನಾಶವೇ? ಯಾ ಅಲ್ಲಾ ಈ ಪಟ್ಟಿಯಲ್ಲಿ ನಾನು ಮಾಡಿದ ಸಾಸಿವೆಯಷ್ಟು ತಪ್ಪನ್ನು ಕೂಡ ನೀನು ಬರೆದಿಟ್ಟಿರುವೆಯಲ್ಲ" ಎನ್ನುತ್ತಾ ಕಣ್ಣೀರು ಹಾಕಲಿದ್ದೇವೆ.

       ನಾವು ಈ ಪ್ರಪಂಚದಲ್ಲಿ ಎಷ್ಟೇ ಬುದ್ಧಿವಂತ, ಹಣವಂತ, ಅಥವಾ ಇನ್ನೇನೋ ಆಗಿ ಪ್ರಯೋಜನವಿಲ್ಲ. ನಾಳೆಯ ದಿನ ನಮ್ಮ ಹೆಸರು ಕೂಡ ನಮ್ಮ ಸ್ವಂತವಲ್ಲ. ಬಿಳಿ ಬಟ್ಟೆಯಲ್ಲಿ ನಮ್ಮನ್ನು ಸುತ್ತಿ "ಮಯ್ಯತ್" ಎಂದು ಕರೆಯುವರು. ಈ ನಿಟ್ಟಿನಲ್ಲಿ ನಾವು ಒಳಿತಿನ ಕಡೆ ಬರಬೇಕಾಗಿದೆ. ಆ ಅಲ್ಲಾಹು ನಮ್ಮನ್ನು ಅನುಗ್ರಹಿಸಲಿ ಅದೇ ರೀತಿ  ಈ ರಮಝಾನ್ ಮಾಸದಲ್ಲಿ ನಾವು ಮಾಡಿದ ಪುಣ್ಯ ಕಾರ್ಯಗಳನ್ನು ಸರ್ವಶಕ್ತನಾದ ಅಲ್ಲಾಹು ಸ್ವೀಕಾರ ಮಾಡಲಿ..

ಸಲಾಂ ಸಮ್ಮಿ