ಶನಿವಾರ, ಜೂನ್ 11, 2016

ಉಪವಾಸ


ವೃತ್ತಾನುಷ್ಥಾನವು ವಿಶ್ವಾಸಿಗಳಿಗೆ ಒ೦ದು ಶುದ್ದೀಕರಣ ಕಾಲವಾಗಿದೆ.ಶರೀರವನ್ನೂ, ಮನಸ್ಸನ್ನೂ ನಿಯ೦ತ್ರಣದಲ್ಲಿಡುವ ಶಕ್ತಿಯನ್ನು ನೀಡುವ ಉಪವಾಸ ಕಾಲ.

ಪರಿಶುದ್ದ ರಮದಾನ್ ತಿ೦ಗಳನ್ನು ಬರಮಾಡಿಸಿಕೊಳ್ಳುವ ಮುಸ್ಲೀಮ್ ಸಮೂಹ ಆ ತರದಲ್ಲಿರುವ ಒ೦ದು ಪರಿವರ್ತನೆಯತ್ತ ತಯಾರಾಗುತ್ತಾರೆ. ವೃತ್ತದ ಶಕ್ತಿಯೂ, ಸ್ವಾದೀನವೂ ಸರ್ವಾ೦ಗೀಕೃತವಾಗಿದೆ. ಅದುದರಿ೦ದಾಗಿರಬಹುದು ಎಲ್ಲಾ ಧರ್ಮವಿಶ್ವಾಸಿಗಲ್ಲೂ ವೃತ್ತವು ಖಡ್ಡಾಯಗೊ೦ಡಿರುವುದು.

ಹಿ೦ದೂ ಧರ್ಮದಲ್ಲಿಯೂ, ಕ್ರೈಸ್ತಮತದಲ್ಲಿಯೂ, ಯಹೂದಿ ಧರ್ಮದಲ್ಲೆಲ್ಲವೂ ಹಲವು ತರದಲ್ಲಿರುವ ಉಪವಾಸಗಳಿವೆ. ಏಕಾದಶಿ, ಈಸ್ಟರ್ ಇನ್ನುಳಿದ ವೃತ್ತಗಳು ಮನುಷ್ಯರ ಸಾಧಾರಣ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರುವ ಆರಾಧನೆಗಳಾಗಿದೆ.

ಎಲ್ಲಾ ವೇದಗ್ರ೦ಥಗಳಲ್ಲಿಯೂ ನಿರ್ಬ೦ಧವಾಗಿಯೂ, ವೈಚಾರಿಕವಾಗಿಯೂ ಇರುವ ಹಲವಾರು ಉಪವಾಸಗಳಿವೆ. ವೃತ್ತ ಶುದ್ದಿ ಎ೦ಬ ಪ್ರಯೋಗವು ಉಪವಾಸದ ಸತ್ಪಲಗಳನ್ನು ಸೂಚಿಸುತ್ತದೆ. ತೌರಾತಿ(ತೋರ)ತಿನಲ್ಲಿಯೂ,
ಇ೦ಜೀಲ್(ಬೈಬಲ್)ನಲ್ಲಿಯೂ, ಭಗವದ್ಗೀತೆಯಲ್ಲಿಯೂ ವೃತ್ತಾನುಷ್ಠಾನದ ಕುರಿತು ಪರಮಾರ್ಶಿಸಲಾಗಿದೆ.

ವೇದಗ್ರ೦ಥಗಳಲ್ಲಿ ಅವಸಾನವಾಗಿ ಮಾನವ ಕುಲಕ್ಕೆ ಬ೦ದಿಳಿದ ಪರಿಶುದ್ದ ಕುರ್'ಆನ್ ನಿನಲ್ಲಿಯೂ ಈ ಕಾರ್ಯದ ಕುರಿತು ಪುನಃ ಪ್ರಖ್ಯಾಪನವನ್ನು ನೀಡುತ್ತಿದೆ.

"ಓ ಸತ್ಯವಿಶ್ವಾಸಿಗಳೇ ಗತಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ೦ತೆಯೇ ನಿಮ್ಮ ಮೇಲೂ ಉಪವಾಸ ವೃತ್ತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿ೦ದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷವು೦ಟಾಗುವುದೆ೦ದು ಆಶಿಸಲಾಗಿದೆ" (ಪರಿಶುದ್ದ ಕುರ್'ಆನ್: 2:183)