ಶನಿವಾರ, ಜೂನ್ 11, 2016

ಖುರಾನ್

ಅಲ್ಲಾಹನು ಯಾವ ಜೀವಿಯ ಮೇಲೂ ಅವನ ಶಕ್ತಿಗೆ ಮೀರಿದ ಹೊಣೆ ಹೊರಿಸುವುದಿಲ್ಲ. ಪ್ರತಿಯೊಬ್ಬನು ಗಳಿಸಿದ ಪುಣ್ಯದ ಫಲ ಅವನಿಗೆ ಸಿಗುವುದು ಮತ್ತು ಅವನು ಶೇಖರಿಸಿದ ಪಾಪದ ದಂಡವೂ ಅವನ ಮೇಲೆಯೇ ಇರುವುದು. (ಓ ಸತ್ಯ ವಿಶ್ವಾಸಿಗಳೇ! ನೀವು ಹೀಗೆ ಯಾಚಿಸಿರಿ:) ಓ ನಮ್ಮ ಪ್ರಭೂ, ಪ್ರಮಾದವಶಾತ್ ಅಪರಾಧಗಳಾಗಿ ಬಿಟ್ಟರೆ ಅವುಗಳಿಗಾಗಿ ನಮ್ಮನ್ನು ಹಿಡಿಯಬೇಡ. ಪ್ರಭೂ ನಮ್ಮ ಪೂರ್ವಿಕರ ಮೇಲೆ ಹೊರಿಸಿದಂತಹ ಹೊರೆಯನ್ನು ನಮ್ಮ ಮೇಲೆ ಹೊರಿಸಬೇಡ. ಓ ನಮ್ಮ ಪ್ರಭೂ, ನಮ್ಮಿಂದ ಹೊರಲು ಸಾಧ್ಯವಾಗದ ಹೊರೆಯನ್ನು ನಮ್ಮ ಮೇಲೆ ಹೊರಿಸಬೇಡ. ನಮ್ಮ ಪಾಪಗಳನ್ನು ಪರಿಹರಿಸು, ನಮ್ಮನ್ನು ಕ್ಷಮಿಸು, ನಮ್ಮ ಮೇಲೆ ಕ್ರಪೆ ತೋರು. ನೀನೇ ನಮ್ಮ ಒಡೆಯ. ಸತ್ಯ ನಿಷೇಧಿಗಳ ಎದುರು ನಮಗೆ ಸಹಾಯ ಮಾಡು.

ಖುರಾನ್ - 2:286