ಶನಿವಾರ, ಜೂನ್ 18, 2016

ಅನಾಥ ಬಾಲಕನೊಬ್ಬನ ಈದ್ ನಮಾಜ್


'ಇಲ್ಲಮ್ಮ!ನೀನು ಏನೇ ಹೇಳಿದರೂ ಇವತ್ತಿನ ಈದ್
ನಮಾಜಿ ಗೆ ನಾನು ಮಸೀದಿಗೆ ಹೋಗಲ್ಲ!'
ಸಿಯಾದ್ ಹಟಹಿಡಿದು ನಿಂತ!!

"ನೀನೀಗ ನನ್ನ ಕೈಯಿಂದ ತಿನ್ತೀಯ ನೋಡು!"
ಸಿಯಾದ್ನ  ಅಮ್ಮ ಗಧರಿಸಿದಳು.

"ಎಲ್ಲಾ ಮಕ್ಕಳು ನವನವೀಣ ಮೋಡಲ್ಗಳ ಚಪ್ಪಲಿ ಮತ್ತು ಬಣ್ಣ ಬಣ್ಣದ ಉಡುಪನ್ನು ಧರಿಸಿಕೊಂಡಿರುವಾಗ,
ನಾನೇಗೆ ಹರಿದ ಹವಾಯಿ ಚಪ್ಪಲಿಯನ್ನು ಧರಿಸಿಕೊಂಡು ಮಸೀದಿಗೋಗಲಿ.?
ಗೆಳೆಯರು ನನ್ನನ್ನು ಗೇಲಿಮಾಡಿಯಾರು"
ಸಿಯಾದ್ ಅಮ್ಮಳಿಗೆ ಪ್ರತಿಕ್ರಿಯಿಸಿದ!

"ಅಲ್ಲಾಹನನ್ನು ಎಣಿಸಿ ನನ್ನ ಕಂಧ ನೀನೀಗೆಲ್ಲಾ ಹೇಳ ಬೇಡ,
ಈ ವರುಷದಲ್ಲಿ ದೊರೆತ ರಮಜಾನ್ ಸದ್ಕಾದಲ್ಲಿ
ಉಮರಾಕನ ರೇಷಣ್ ‌ಅಂಗಡಿಯ ಸಾಲ ತೀರಿಸಲಸ್ಟೇ ನನ್ನಿಂದ ಸಾದ್ಯವಾಯಿತೆಂದು ತಾಯಿ ಗೊಣಗುತ್ತಲೇ ಇದ್ದಲು.

ಅಲ್ಲಾವು ಅಕ್ಬರ್! ಅಲ್ಲಾವು ಅಕ್ಬರ್!
ಈದ್ ತಕ್ಬೀರ್ ನೀನಾದಗಳು ಮಸೀದಿಯ ಮಿನಾರಗಳಿಂದ ಕೇಳಿಬರುತ್ತಲೇ ಇತ್ತು.

ಒಲ್ಲದ ಮನಸ್ಸಿನಿಂದ ಸಿಯಾದ್ ಬಾರವಾದ ಹ್ರದಯದೊಂದಿಗೆ ಈದ್ ನಮಾಜಿಗಾಗಿ ಮಸೀದಿಗೊರಟ.

ಮಸೀದಿಯ ಅಂಗಳದಲ್ಲಿ ಹಲವು ತರಹದ
ಕಣ್ಮನ ಸೆಳೆಯುವ ಚಪ್ಪಲಿಗಳು ಮತ್ತು ಶೂಗಳು ಅದರ ಜೊತೆಗೆ ತನ್ನ ಹರಿದ ಹವಾಯಿ ಚಪ್ಪಲಿಯನ್ನು ಇಡಲು ಸಿಯಾದ್ ನಿಗೆ ಮನಸ್ಸಾಗಲಿಲ್ಲ

ಈದ್ ನಮಾಜ್, ಕುತ್ಬಾಗಳೆಲ್ಲ ಕಳೆದ ಬಳಿಕ ಜನರು
ತಮ್ ತಮ್ಮ ಚಪ್ಪಲಿಯನ್ನು ಹಾಕಿಕೊಳ್ಳುವಾಗ ನನ್ನ ಹವಾಯಿ ಚಪ್ಪಲಿಯನ್ನು ಎಲ್ಲಿಯಾದರೂ ನೋಡಿದರೆ?

ಸಿಯಾದ್ ತನ್ನ ಚಪ್ಪಲಿಯನ್ನು ಯಾರೂ ಗಮನಿಸದಂತೆ ಸ್ವಲ್ಪ ದೂರದಲ್ಲಿದ್ದ ಮೂತ್ರದೊಡ್ಡಿಯ ಹಿಂದಿನ ಗೋಡೆಗೆ ಒರಗಿಸಿಟ್ಟ

ಕಾಲು ತೊಳೆದು,
ಉಝೂ ಮಾಡಿ,ಮಸೀದಿಯೊಳಗೆ ಪ್ರವೇಶಿಸಿ. ಆವೇಶ ಭರಿತರಾಗಿ ತಕ್ಬೀರ್ ಮೊಳಗಿಸುತ್ತಿದ್ದ
ಗೆಳೆಯರ ಸಾಲಿನ್ನು ನುಸುಳಿಕೊಂಡ

ಅಲ್ಲಾಹು ಅಕ್ಬರ್!
ಅಲ್ಲಾವು ಅಕ್ಬರ್! ಅಲ್ಲಾವು ಅಕ್ಬರ್!
ಲಾಹಿಲಾಹ ಇಲ್ಲಲ್ಲಾಹು ಅಲ್ಲಾವು ಅಕ್ಬರ್!
ಅಲ್ಲಾವು ಅಕ್ಬರ್ ವಲಿಲ್ಲಾಹಿಲ್ ಹಂದ್..!

ಪ್ರತೀಯೊಬ್ಬರದ್ದೂ ಒಂದೊಂದು ತರಹದ ಬಣ್ಣ ಬಣ್ಣದ ಬೆಲೆಬಾಳುವ ಉಡುಪುಗಳು,
ಪ್ರತೀಯೊಂದು ಉಡುಪಿನಿಂದಲೂ ಪರಿಮಳ ಬೀರುವ ಹೊಸತನದ ಸ್ಮೆಲ್ಲ್!!

ಆ ಸ್ಮೆಲ್ಲ್ ಸಿಯಾದ್ ನಿಗೂ ತುಂಬಾನೇ ಇಷ್ಡವಾಗಿತ್ತು.
ತನಗಾಗಿ ಅಮ್ಮ ಖರೀದಿಸಿದ್ದ ಬಟ್ಟೆಯಲ್ಲೂ ಆ ಸ್ಮೆಲ್ಲನ್ನು ಸಿಯಾದ್ ಆಶ್ವಾದಿಸಿದ್ದ

ಆದರೆ ಸಂತೆಯ ಬೀದಿಬದಿಯಲ್ಲಿ ಮಾರುವ ಬಟ್ಟೆಯನ್ನು ಖರೀದಿಸಿದರೆ ಅದರಲ್ಲೇಗೆ ಹೊಸತನದ ಪರಿಮಳ ವಿರಲು ಸಾದ್ಯ?

ಈದ್ ನಮಾಜ್ ಮತ್ತು ಕುತ್ಬಾ ಮುಗಿದ ಒಡನೆಯೇ ಸಿಯಾದ್ ಮಸೀದಿಯಿಂದ ಹೊರಗಿಳಿದಿ ಗೆಳೆಯರೊಂದಿಗೆ ಕುಶಲೋಪರಿಯನ್ನು ವಿಚಾರಿಸಲೂ ನಿಲ್ಲದೆ ಮನೆಗೋಡಿದ

ಓಡುವಾಗ ಅವನ ಹವಾಯಿ ಚಪ್ಪಲಿಯೊಂದರ ಬಾರ್ ಕಡಿದುಕೊಂಡಿತು

ತುಂಡಾದ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡೋಡುವಾಗ
ಸಿಯಾದ್ ಅಳುತ್ತಲಿದ್ದ

ತಂದೆ ಮರಣ ಹೊಂದುವ ತನಕ ಬಣ್ಣ ಬಣ್ಣದ ಚಪ್ಪಲಿ ಮತ್ತು ಉಡುಪುಗಳನ್ನು ಧರಿಸಿದ್ದ ಕಳೆದ ಧಿನಗಳ ನೆನಪೊಂದೊಂದಾಗಿ
ಸಿಯಾದ್ ನನ್ನು ಕಾಡತೊಡಗಿತು

ತಂದೆಯ ಮರಣಾನಂತರ ಇಬ್ಬರು ಅಕ್ಕಂದಿರ ಮುದ್ದಿನ ತಮ್ಮನಾಗಿದ್ದ ಸಿಯಾದ್ ನಿಗೆ ಅಮ್ಮ ಕೇಳಿದೆಲ್ಲವನ್ನೂ ನೀಡುವ ಬರವಸೆಯನ್ನು ನೀಡುತ್ತಿದ್ದರೂ ಕೊನೇಯ ಗಳಿಗೆಯಲ್ಲಿ
ಆರ್ಥಿಕ ಅಡಚಣೆಯ ಕಾರಣದಿಂದಾಗಿ ಕೈಕೊಡುತ್ತಿದ್ದಳು.

ಮನೆಯೊಳಗೆ ಒಕ್ಕಂತೇ ಅಡುಗೆಯ ಕೋಣೆಯಿಂದ ಅನ್ನ ಬಡಿಸಿಟ್ಟು ಅಮ್ಮ ಸಿಯಾದ್ ನನ್ನು ಕರೆದಳು

ಕೋಪದಲ್ಲೇ
"ನನಗೆ ಬ್ಯಾಡ ನಿಮ್ಮ ಅನ್ನ"
ಎನ್ನುತ್ತಿದ್ದಂತೆಹೇ., ಸಿಯಾದ್ನ ಸಹೋದರಿ ಸಮೀನಾ ಸಿಯಾದ್ ನ ಬಳಿ ಬಂದು ಅವನ ತಲೆಯನ್ನು ನಯವಾಗಿ ಸವರುತ್ತಾ ಕೇಳಿದಳು
"ಏನ್ ಸಿಯಾದ್, ಯಾಕೆ ಅಳುತ್ತಿದ್ದೀಯಾ..?"

ಸಿಯಾದ್: ಎಲ್ಲರೂ ಒಳ್ಳೊಳ್ಳೆಯ ಬಟ್ಟೆಯನ್ನು ಹಾಕಿ ಈದ್ ಆಚರಿಸುತ್ತಿರುವಾಗ ನನಗೆ ಮಾತ್ರ ಕಳಪೆ ಗುಣಮಟ್ಟದ ಬಟ್ಟೆ
ಹರಿದ ಚಪ್ಪಲಿ.
ಎಂದು ಸಿಡುಕಿದ.

"ಓಹೋ ಅದಾ ವಿಷಯ ನೀನು ಅಳ್ಬೇಡ, ಬಾ! ನಾನು ನಿನಗೊಂದು ಕಥೆ ಹೇಳಿಕೊಡುತ್ತೇನೆ"
ಎಂದವಳೇ ಸಿಯಾದ್ನ ಕಿವಿಯನ್ನು ನಯವಾಗಿ ಹಿಂಡಿದಳು.

ಸಿಯಾದ್ ನಾಚಿಕೆಯಿಂದ ತಲೆ ಕುಣಿಸಿದ!

ಸಮೀನಾಳ ಕಥೆ ಎಂದರೆ ಸಿಯಾದ್ಗೆ ತುಂಭಾನೇ ಇಷ್ಟವಾಗಿತ್ತು,
ಆದರೆ ಇವತ್ತು ಸಮೀನಾ ಹೇಳಿದ್ದು ಕೇವಳ ಕಥೆಯಾಗಿರಲಿಲ್ಲ
ಅದು ಪ್ರವಾದಿ ಮುಹಮ್ಮದ್ ನಬಿ (ಸ‌.ಅ )ರವರ
ಚರಿತ್ರೆಯಾಗಿತ್ತು.

ಸಮೀನ ಕಥೆ ಮುಂದುವರಿಸಿದಳು
ಸಿಯಾದ್ ಕಿವಿಯಾಲಿಸಿ ತಲ್ಲೀಣನಾದ.

ಅದೊಂದು ಈದ್ ಧಿನ ಪ್ರವಾದಿ (ಸ.ಅ) ತನ್ನ ಸಹಾಬಾಗಳೊಂದಿಗೆ ಈದ್ ನಮಾಜಿಗಾಗಿ ಕಾಲ್ನಡಿಗೆಯಲ್ಲಿ ಮಸ್ಜಿದುನ್ನಬವಿಗೆ ತೆರಳುತ್ತಿದ್ದರು

ಅಷ್ಟ ದಿಕ್ಕಿನಿಂದಲೂ ಪ್ರತಿದ್ವನಿಸುತ್ತಲಿದ್ದ
ತಕ್ಬೀರ್ ನೀನಾದದಿಂದ ಮಸ್ಜಿದುನ್ನಬವಿಯ ಪರಿಸರ
ಜಗಮಗಿಸುತ್ತಲಿತ್ತು

ಅದೇ ಸಮಯದಲ್ಲಿ ಹತ್ತಿರದ ಕಲ್ಲೊಂದರ ಮೇಲೆ ಕುಳಿತುಕೊಂಡ ಪುಟ್ಟ ಬಾಲಕನೊಬ್ಬ ತನ್ನ ಎರಡೂ ಕೈಗಳನ್ನು ಮುಖಕ್ಕೆ ಒತ್ತಿ ಹಿಡಿದುಕೊಂಡು ಅಳುತ್ತಿರುವುದನ್ನು ಪ್ರವಾದಿ (ಸ.ಅ) ಗಮನಿಸಿದರು

ಸಹಾಬಾಗಳೊಂದಿಗೆ "ನೀವು ಮಸೀದಿಗೆ ತೆರಳಿ,ನಾನು ಆಮೇಲೆ ಬರುತ್ತೇನೆಂದು" ತಿಳಿಸಿದ ಪ್ರವಾದಿ (ಸ.ಅ) ಅಳುತ್ತಿದ್ದ ಬಾಲಕನ ಬಳಿಬಂದು
"ಇಂದು ಈದ್ ಧಿನವಲ್ಲವೇ, ಮತ್ಯಾಕೆ ನೀನು ಅಳುತ್ತಿರುವುದು?"

ಬಾಲಕ: "ಎಲ್ಲರೂ ಈದ್ ನಮಾಜಿಗಾಗಿ
ತಮ್ಮ ತಂದೆಯ ಕೈ ಹಿಡಿದು ಮಸೀದಿಗೆ ತೆರಳಿ ಈದ್ ಆಚರಿಸುವಾಗ
ನಾನು ಮಾತ್ರ ಇಲ್ಲಿ ಕುಳಿತು ಅಳುತ್ತಾ ಈ ದಿನವನ್ನು ಕಳೆಯುವೆನು"

ಪ್ರವಾದಿ: "ಯಾಕೆ, ನಿನಗೇನಾಯಿತು, ನಿನ್ನ ತಂದೆ ಎಲ್ಲಿ?"

ಬಾಲಕ:"ನನ್ನ ತಂದೆ ಉಹ್ದ್ ಯುದ್ದದಲ್ಲಿ ಮರಣಹೊಂದಿರುವರು, ನನಗೆ ಕೈ ಹಿಡಿದು ಮಸೀದಿಗೋಗಳು ಯಾರೂ ಇಲ್ಲ",ಎಂದೆನ್ನುತ್ತಾ ಗಳಗಳನೆ ಅಳುತ್ತಿದ್ದಂತೇ,
ಪ್ರವಾದಿ(ಸ.ಅ):"ಹೇ! ನೀನೀಗೇ ಅಳುತ್ತಿದ್ದರೆ ನಾನೂ ಇವತ್ತಿನ ಈದ್ ಆಚರಿಸಲಾರೆನು,
ನೀನು ನನ್ನೊಂದಿಗೆ ಬಾ"
ಬಾಲಕನನ್ನು ತನ್ನ ಮನೆಗೆ ಕರೆದೊಯ್ದು ಸ್ನಾನ ಮಾಡಿಸಿ, ಬಟ್ಟೆ ಯೊಂದನ್ನು ತೊಡಿಸಿ ಪ್ರವಾದಿ ನುಡಿದರು:
"ಇನ್ನು ಮುಂದೆ ನೀನು ತಂದೆ ಇಲ್ಲ ಎಂದು ಅಳಬಾರದು, ಇವತ್ತಿನಿಂದ ನಿನ್ನ ತಂದೆ ನಾನಾಗಿರುವೆನು,ಮತ್ತು ನಿನ್ನ ಅಮ್ಮ ಆಯಿಶಾ(ರ‌.ಅ)ರವರಾಗಿರುವರು".

ಅನಾಥ ಬಾಲಕ ಸಂತುಷ್ಠನಾದ
ಪ್ರವಾದಿ (ಸ‌.ಅ) ರವರ ಕೈಯ್ಯನ್ನು ಹಿಡಿದು ಅಯಿಶಾ ಬೀವಿ (ರ‌.ಅ) ರವರಿಗೆ ಸಲಾಂ ಹೇಳಿ ಮಸೀದಿಗೆ ಹೊರಟ.

ಅಂದಿನ ಈದ್ ಕುತ್ಬಾ ಪಾರಾಯಣ ಮಾಡುವಾಗ ಪ್ರವಾದಿ(ಸ.ಅ)ರವರ ಮಡಿಲಲ್ಲಿ ಆ ಅನಾಥ ಬಾಲಕನೂ ಇದ್ದ,
ನನ್ನ ಮಡಿಳಲ್ಲಿ ಸಿಯಾದ್ ಕುಳಿತುಕೊಂಡಿರುಂತೇ...!

ಎಂದೇಳಿ ಸಮೀನ ಕಥೆ ಮುಗಿಸುತ್ತಾ ನುಡಿದಳು
"ಅನಾಥರು ಅಳುವುದು ಪ್ರವಾದಿ (ಸ‌.ಅ)ರವರಿಗೆ ಇಷ್ಟವಿಲ್ಲ, ಆದ್ದರಿಂದ ಸಿಯಾದ್ ನಗು"
ಎಂದವಳೇ
ಸಿಯಾದ್ ನನ್ನು ಗಲ್ಲವನ್ನು ಚಿವುಟಿದಳು.

ಸಿಯಾದ್ ಮುಗುಳ್ನಗೆ ಬೀರಿದ!!

ಸಮೀನ ಸಿಯಾದ್ನ ಕೊರಳು ಮತ್ತು ಕಕ್ಷಗಳನ್ನು
ಚಿವುಟುತ್ತಾ.ನಗು!!
ನಗು!!
ಇನ್ನೂ ಸ್ವಲ್ಪ ನಗು!!
ಎನ್ನುತ್ತಿದ್ದಂತೇ ಸಿಯಾದ್:
ಅಹ್ಹಹ್ಹಾ...!ಅಹ್ಹಹ್ಹಾ!
ಹ್ಹಹ್ಹ..!ಅಹ್ಹಹ್ಹಾ !
ಎಂದೆನ್ನುತ್ತ ನಕ್ಕ.

ಸಿಯಾದ್ನ ನಗುವನ್ನು ನೋಡಿ ಸಮೀನಾ ಕಣ್ಣೀರಿಟ್ಟಳು

ಈ ವರುಷದ ನಮ್ಮಈದ್ ಆಚರಣೆಯೂ
ಅನಾಥರೊಂದಿಗಾಗಿರಲಿ.
ಇನ್ಸಾಅಲ್ಲಾ!