ಶನಿವಾರ, ಜೂನ್ 11, 2016

ಅಮ್ಮಿಚ್ಚರ_ನೆನಪು

ಇಡಿ ದೇಶವನ್ನು ಬೆಚ್ಚಿ ಬೀಳಿಸಿದ್ದ " ಮಂಗಳೂರು ವಿಮಾನ ದುರಂತ" ಕ್ಕೆ ಇಂದಿಗೆ ಆರು ವರುಷ ಅಂದು ಪರಿಹಾರ ಕಾರ್ಯಚರಣೆಯಲ್ಲಿ ಎಲ್ಲರನ್ನು ಬೆರಗಾಗಿಸಿದ್ದ" ಅಮ್ಮಿಚ್ಚ " ಕುಂಜತ್ತೂರು ಇಂದು ನಮ್ಮೊಂದಿಗಿಲ್ಲ ಆದರೆ ವಿಮಾನ ದುರಂತದಲ್ಲಿ ಕರಕಲಾಗಿದ್ದ ಮೃತದೇಹಗಳನ್ನು ವಿಲೇವಾರಿ ಮಾಡುವಲ್ಲಿ ಅಮ್ಮಿಚ್ಚ ನಿರ್ವಹಿಸಿದ್ದ ಕಾರ್ಯ ಎಲ್ಲರಿಂದಲೂ ಪ್ರಶಂಶೆಗೆ ಪಾತ್ರವಾಗಿತ್ತು

ಅಮ್ಮಿಚ್ಚ ಎಂದರೆ ಮಂಜೇಶ್ವರ ಕುಂಜತ್ತೂರು , ಕುಂಬಳೆ ಯಲ್ಲಿ ಚಿರಪರಿಚಿತ  ಎಲ್ಲರಿಗೂ ಪ್ರೀತಿಪಾತ್ರರಾದ " ಅಮ್ಮಿಚ್ಚ" ತುರ್ತು ಸಂಧರ್ಭದಲ್ಲಿ ಯವೂದೆ ಕೆಲಸವಿದ್ದರೂ ಸಹಾಯಕ್ಕ್ಕೆ ಧಾವಿಸುತ್ತಿದ್ದ ಪರೋಪಕಾರಿ ಜೀವಿಯಗಿದ್ದರು, ಹಲಾವಾರು ಅಪಘಾತಗಳಲ್ಲಿ ಧಾವಿಸಿ  ಬಂಧು ನೆರವಿನ ಹಸ್ತ ನೀಡಿ ಹಲಾವರು ಜೀವಗಳ ರಕ್ಷಣೆಗೆ ಕಾರಣವಾಗಿದ್ದರು. ಹೀಗೆ ಮಂಗಳೂರು ಗಡಿಬಾಗದಲ್ಲಿ ಅಮ್ಮಿಚ್ಚ " ಆಪತ್ಭಾಂಧವರಾಗಿದ್ದವರು

ಅಮ್ಮಿಚ್ಚ ತನ್ನ ಜೀವನವನ್ನೇ ಸಮಾಜಸೇವೆಗೆ ಮುಡಿಪಾಗಿಟ್ಟವರು. ಮಂಜೇಶ್ವರ, ಕುಂಬಳೆ, ಉಳ್ಳಾಲ ಆಸುಪಾಸಿನಲ್ಲಿ, ಕಡಲ ಕಿನಾರೆಯಲ್ಲಿ ಅಪರಿಚಿತ ಶವಗಳು ದೊರೆತರೆ ಪೊಲೀಸರು ಕೂಡಲೇ ಅಮ್ಮಿಚ್ಚರನ್ನೇ ಕರೆಯುತ್ತಿದ್ದರು. ವಾಹನ ಅಪಘಾತದ ಗಾಯಾಳುಗಳನ್ನು, ಹೃದಯಾಘಾತಕ್ಕೊಳಗಾದ ರೋಗಿಗಳನ್ನು, ಗರ್ಭಿಣಿಯರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿ ಅದೆಷ್ಟೋ ಜೀವಗಳನ್ನು ಉಳಿಸಿದ ಕೀರ್ತಿ ಇವರಿಗಿದೆ. ಅದೆಷ್ಟೋ ಅಪರಿಚಿತ ಮಾನಸಿಕ ರೋಗಿಗಳನ್ನು, ಭಿಕ್ಷುÒಕರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಗುಣಪಡಿಸಿದ ಕರುಣಾಮಯಿ ಇವರು. ಅಮ್ಮಿಚ್ಚ ಅವರ ಸೇವೆಯನ್ನು ಪ್ರೋತ್ಸಾಹಿಸಿ ಖೀದ್ಮತುಲ್ ಇಸ್ಲಾಂ ಕುಂಜತ್ತೂರು ಯೂನಿಟ್ ಇವರಿಗೆ ನೂತನ ಆ್ಯಂಬುಲೆನ್ಸ್ ಅನ್ನೂ ಕೊಟ್ಟಿತ್ತು. ಈ ಪ್ರದೇಶದಲ್ಲಿ ಕೋಮು ಸೌಹಾರ್ದಕ್ಕೂ ಅಮ್ಮಿಚ್ಚರವರ ಶ್ರಮ ಅಪಾರ. ಸಮಾಜಸೇವೆಗಾಗಿ ಈ ಪ್ರದೇಶದಲ್ಲಿ ಇವರ ಒಂದು ತಂಡವೇ ಇದೆ. ಮಂಗಳೂರಿನ ವಿಮಾನ ಅಪಘಾತ ಸಂದರ್ಭಅಮ್ಮಿಚ್ಚ ಅವರ ಸೇವೆ ಅವಿಸ್ಮರಣೀಯ. ಬೆಂದು ಕರಟಿ ಹೋದ ಮೃತದೇಹಗಳನ್ನು ಹೊತ್ತು ತರುತ್ತಿದ್ದ ಆ ದೃಶ್ಯ ಇಂದಿಗೂ ಜನಮಾನಸದಲ್ಲಿ ಮಾಸಿ ಹೋಗಿಲ್ಲ.

ವಿಮಾನ ಅಪಘಾತದಲ್ಲಿ ಮಡಿದ ಮೃತ ದೇಹಗಳನ್ನು ಹುಡುಕುತ್ತಾ ಅದನ್ನು ಸಂಬಂಧ ಪಟ್ಟವರಿಗೆ ವಿಲೇವಾರಿ ಮಾಡುವಲ್ಲಿ ಜಾತಿ ಮತ ಧರ್ಮದ ಎಲ್ಲೆಗಳನ್ನು ಮೀರಿ ಶ್ರಮಿಸಿದ ಸಮಾಜ ಸೇವಕ ಅಬ್ದುಲ್ ಹಮೀದ್ ಅಲಿ (ಅಮ್ಮಿಚ್ಚ) ಮಾನವ ಸಮಾಜಕ್ಕೆ ಒಬ್ಬ ಮಾದರಿ ಮನುಷ್ಯರಾಗಿದ್ದಾರೆ. ವಿಮಾನ ಅಪಘಾತದ ಸುದ್ಧಿ ತಿಳಿಯುತ್ತಿದ್ದಂತೆ ಮಂಜೇಶ್ವರದ ತನ್ನ ಮನೆಯಿಂದ ಮಂಗಳೂರು ತಲುಪಿದ ಅಮ್ಮಿಚ್ಚ ವೆನ್ಲಾಕ್ ಆಸ್ಪತ್ರೆಗೆ ಮೊದಲ ಶವ ಬಂದಾಗ ಅದನ್ನು ಇಳಿಸಿ ಶವಾಗಾರಕ್ಕೆ ಕೊಂಡೊಯ್ಯುದರಿಂದ ತಮ್ಮನ್ನು ಈ ದುರಂತ ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡರು.

ಆನಂತರ ಅಂಬುಲೆನ್ಸ್ ನಲ್ಲಿ ಬರುತಿದ್ದ ಸುಟ್ಟು ಕರಕಲಾದ ಶವಗಳನ್ನು ಆಸ್ಪತ್ರೆಗೆ ಸಾಗಿಸುತ್ತಾ ಆನಂತರ ಆ ಶವಗಳನ್ನು ಹುಡುಕಲು ವಾರಿಸುದಾರರಿಗೆ ನೆರವಾಗುತ್ತಾ ಪತ್ತೆ ಹಚ್ಚಲ್ಪಟ್ಟ ಶವಗಳನ್ನು ಆನಂತರ ಮೃತ ಸಂಬಂಧಿಕರ ವಾಹನಗಳಿಗೆ ಸಾಗಿಸುತಿದ್ದ ಅಮ್ಮಿಚ್ಚ ದಣಿದ ಮೃತರ ಬಂಧುಗಳಿಗೆ ಕುಡಿಯಲು ನೀರು ಕೊಡುತ್ತಾ ಅವರನ್ನು ಸಂತೈಸುತಿದ್ದ ದೃಶ್ಯಗಳೂ ಅಮ್ಮಿಚ್ಚ ರವರ ಸೇವಾ ಮನೋಭಾವವನ್ನು
ತೋರಿಸುತ್ತಿತ್ತು

ಆದರೆ ಈಗ ಅಮ್ಮಿಚ್ಚ ನಮ್ಮೊಂದಿಗಿಲ್ಲ, ಅಮ್ಮಿಚ್ಚ ರಂತಹ ಸೇವಾ ಮನೋಭಾವದ ವ್ಯಕ್ತಿ  ಇಂದಿನ ನಮ್ಮ ಸಮುದಾಯಕ್ಕೆ ಮಾದರಿಯಾಗಿದ್ದರು
ಅಲ್ಲಾಹು ಅಮ್ಮಿಚ್ಚರವರ ಪಾರತ್ರಿಕ ಜೀವನವನ್ನು ಸಂತೋಷಗೊಲಿಸಲಿ ಅವರ ದರಜ ಉನ್ನತಿಗೆ   ಏರಿಸಲಿ ( ಆಮೀನ್ )

: 💎ಡೈಮಂಡ್ ವೆಲ್ಫೇರ್ ಅಸೋಸಿಯೆಶನ್ (ರಿ)ಕಾಟುಂಗರೆ ಗುಡ್ಡೆ ಕೆ.ಸಿ ರೋಡ್ ☀

ಮುಸ್ತಫಾ ಕೆ.ಸಿ ರೋಡ್