ಸುನ್ನಿಗಳು ಓದಲೇಬೇಕಾದ ಲೇಖನ*
ಹೌದು ನಾವು ಸುನ್ನಿಗಳು ನಾವು ಹೆಮ್ಮೆಯಿಂದ ಹೇಳುತ್ತಿದ್ದೇವೆ. ನಾವು ಅಲ್ಲಾಹನನ್ನು ಮಾತ್ರವೇ ಆರಾಧನೆ ಮಾಡೋದು. ಸಲಫಿಗರು ಜಮಾತ್ ಇಸ್ಲಾಮಿಗರು ಹೇಳುವುದು ನಾವು ದರ್ಗಾ ಆರಾಧನೆಯನ್ನ ಮಾದುವುವರು. ಯಾಕೆ ಹೀಗೆ ಹೇಳುತ್ತಾರೆ? ನಾವು ದರ್ಗಾವನ್ನು ಆರಾಧನೆಯನ್ನು ಮಾಡುತ್ತಿಲ್ಲ ಬದಲಾಗಿ ನಾವು ಅಲ್ಲಿರುವ ಅವುಲಿಯಗಳ ಬರಕತಿನೊಂದಿಗೆ ಅಲ್ಲಾಹನಲ್ಲಿ ಮಾತ್ರ ಬೇಡೋದು. ಅದಿರಲಿ ವಿಷಯ ಅದಲ್ಲ ಅದಕಿಂತಲೂ ಗಂಭೀರವಾದ ಆರೋಪ ನಮ್ಮ ಮೇಲಿದೆ ಅದೇನಂದರೆ ದಕ್ಷಿಣ ಭಾರತದ ಸುನ್ನಿಗಳು ಕೇವಲ ಪಾರ್ಟಿ ವಿಷಯದಲ್ಲಿ ಕಿತ್ತಾಟ ನಡೆಸುವವರು ಎಂದು. ಈ ಮಾತನ್ನು ನಾವು ತಳ್ಳಿ ಹಾಕುವಂತಿಲ್ಲ ಯಾಕಂದರೆ ಇತ್ತೀಚಿನ ದಿನಗಳಲ್ಲಿ ಸುನ್ನಿ ಸುನ್ನಿಗಳ ನಡುವೆಯೇ ಜಿದ್ದಾ ಜಿದ್ದಿನ ಹೋರಾಟ ನಡೆಯುತ್ತಿದೆ.
ಅದಕ್ಕೆ ಸ್ಪಷ್ಟವಾದ ಉದಾಹರಣೆಯಾಗಿದೆ ಉಳ್ಳಾಲದ ದರ್ಗಾ.
ಉಲ್ಲಾಳದ ದರ್ಗಕ್ಕೆ ಸಂಬಂಧಿಸಿದ ವಿಷಯವನ್ನು ವಿಸ್ತಾರವಾಗಿ ಹೇಳುವ ಅಗತ್ಯವಿಲ್ಲ. ಈಗ ತಾನೆ ಹುಟ್ಟಿದ ಮಗುವಿಗೂ ತಿಳಿದೇ ಇದೆ. ಕೇರಳದಿಂದ ಬರೀ ಕೇವಲ ಕೈಯಲ್ಲಿ ಬಂದ ಕೆಲವು ಉಸ್ತಾದರು ಇವತ್ತು ಉಲ್ಲಾಳದಲ್ಲಿ ಅಧಿಕಾರ ಚಲಾಯಿಸಲು ಮುಂದಾಗುತ್ತಿದ್ದಾರೆ. ಅವರಿಗೆ ಅಧಿಕಾರವನ್ನು ನೀಡಬೇಕೆಂದು ಕೆಲವರು ಪಟ್ಟು ಹಿಡಿದು ಕೂತಿದ್ದಾರೆ. ಈ ವಿಷಯದ ಕುರಿತು ನಾವು ನಾವೇ ಇಲ್ಲಿ ಹಾವು ಮುಂಗುಸಿ ಮಾದರಿಯಲ್ಲಿ ಶತ್ರುಗಳಾಗಿ ಇಬ್ಭಾಗವಾಗಿ ಬಿಟ್ಟೆವು. ಇದೆ ವಿಷಯವನ್ನು ಮುಂದೆ ಇಟ್ಟು ಇವತ್ತು ಸಲಫಿಗಳು ಮತ್ತು ಜಮಾತ್ ಇಸ್ಲಾಮಿಗರು ನಮ್ಮನ್ನ ಲಘುವಾಗಿ ಕಾಣುತ್ತಿದ್ದಾರೆ.
ನಾವು ಎಸ್ ಎಸ್ ಎಫ್ ಮತ್ತು ಎಸ್ ಏಕೆ ಇಲ್ಲಿ ಹೊಡೆದಾಡುತ್ತಾ ಕೂತಿದ್ದೇವೆ ಆದರೆ ಸಲಫಿ ಮತ್ತು ಜಮಾತ್ ಇಸ್ಲಾಮಿ ಸಂಘಟನೆಯು ಇವತ್ತು ಶರವೇಗದಲ್ಲಿ ಇಸ್ಲಾಮಿಕ್ ದಾವ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ನಾವು ಸುನ್ನಿಗಳು ಕೇವಲ ಅವರನ್ನು ವಾಹಬ್ಹಿಗಲೆಂದು ದೂರುತ್ತಾ ಕೂತಿದ್ದೇವೆ ಆದರೆ ಅವರು ಅವುಗಳಿಗೆ ಸೊಪ್ಪೇ ಹಾಕದೆ ಅವರ ಕಾರ್ಯದಲ್ಲಿ ಅವರು ಸಾಗಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಸಲಫಿ ಜಮಾತ್ ಇಸ್ಲಾಂ ಎಂದರೆ ಏನು ಅಂತ ಜನಗಳಿಗೆ ಗೊತ್ತೇ ಇರಲಿಲ್ಲ ಆದರೆ ಇವತ್ತು ಜಮಾತ್ ಇಸ್ಲಾಂ ಮತ್ತು ಸಲಫಿಗಳ ಬಗ್ಗೆ ತಿಳಿಯದ ಮನೆ ಯಾವುದಿದೆ ಹೇಳಿ ನೋಡೋಣ?
ನಾವು ಸುನ್ನಿಗಳು ನಮ್ಮ ಉಸ್ತಾದರು ಏನು ಹೇಳಿದರು ಅದೇ ಸರಿ ಎಂದು ತಲೆ ಆಡಿಸುತ್ತಾ ಹೋಗುತ್ತಿದ್ದೇವೆ. ಅದರಲ್ಲಿ ತಪ್ಪು ಇದ್ದರು ಮರುಪ್ರಶ್ನಿಸಲು ಮುಂದೆ ಹೋಗದೆ ಅದನ್ನೇ ಸರಿಯೆಂದು ತಿಳಿದು ಕೊಳ್ಳುತ್ತೇವೆ.
ನಾವು ಸಲಫಿಗಳಿಂದ ಮತ್ತು ಜಮಾತ್ ಗರಿಂದ ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ. ಕೇವಲ ಅವರಲ್ಲಿ ಪುರುಷರು ಧರಿಸುವ ಬಟ್ಟೆಗಳನ್ನು ನೋಡಿ. ಅವರು ಧರಿಸುವ ಪ್ಯಾಂಟ್ ಮಣಿಕಟ್ಟಿನಿಂದ ಮೇಲೆ ಇರುತ್ತದೆ ನಮ್ಮಲ್ಲಾದರೆ? ಬಿಡಿಸಿ ಹೇಳಬೇಕೇ? ಶೇಕಡಾ ೯೦ ಜನರದ್ದು ಮಸೀದಿ ಒಳಗೆ ಮಾತ್ರ ಮಣಿಕಟ್ಟಿನ ಮೇಲೆ ಇರುತ್ತದೆ. ಅವರ ಸ್ತ್ರೀಯರ ಬುರ್ಖಾನ್ ನೋಡಿದ್ದೀರಾ? ಇಸ್ಲಾಮಿಕ್ ಶೈಲಿಯಲ್ಲಿದೆನಮ್ಮಲ್ಲಿ ಶೇಕಡಾ ೯೦ರಷ್ಟು ಮಹಿಳೆಯರದು ಟೈಟ್ ಫಿಟ್, ಅಂಬ್ರೆಲಾ, ಬಟರ್ ಫ್ಲೈ ಏನೆಲ್ಲಾ ಬೇಕು ನಿಮಗೆ?
ಅವರ ಮದುವೆ ಮನೆಗೆ ಹೋಗಿದ್ದೀರಾ ಶೇಕಡಾ 95ರಷ್ಟು ಜನರ ಮದುವೆ ಎಷ್ಟು ಸರಳವಾಗಿರುತ್ತದೆ. ತಾಳ ಮೇಳ ಇದೆಯಾ? ಮೆಹಂದಿ ಇದೆಯಾ? ಅರ್ಕೆಸ್ತ್ರ ಇದೆಯಾ? ಡಾನ್ಸ್ ಇದೆಯಾ? ನಮ್ಮಲ್ಲಾದರೆ ಎಷ್ಟು ಮದುವೆಯಲ್ಲಿ ಇವೆಲ್ಲ ನಡೆಯಲ್ಲ ಹೇಳಿ ನೋಡೋಣ? ಅವರಲ್ಲಿ ವರದಕ್ಷಿಣೆ ಇಲ್ಲ ನಮ್ಮಲ್ಲಿ ಯಾಕೆ ಇದೆ? ಇದರ ಬಗ್ಗೆ ಧ್ವನಿ ಎತ್ತಿದರೆ ಸಲಾಫಿಗಳು ಹಾಗೆ ಎಂದು ಸಾವಿರಾರರು ಕಟ್ಟುಕತೆಗಳನ್ನು ಹೇಳುತ್ತಾರೆ.
ನಾವು ಯಾಕೆ ಹೀಗೆ? ನಾವು ಯಾವಾಗ ಬದಲಾಗೋದು? ನಾವು ಈಗಲೂ ಗ್ರೂಪಿಸಂ ಮಾಡುತ್ತಲೇ ಇದ್ದೇವೆ ಅದು ವಿಚಾರದಲ್ಲಿ? ನಾಯಿಗೂ ಬೇಡದ ರಾಜಕೀಯ ವಿಷಯದಲ್ಲಿ ಅದು ಬಿಟ್ಟರೆ ನೆರ್ಚೆ, ದರ್ಗಾ, ಉರೋಸು, ಆದರೆ ಅವರು ನಮ್ಮನ್ನು ಧಾಟಿ ಮುಂದೆ ಹೋಗಿ ಆಗಿದೆ. ಒಂದು ಕಾಲದಲ್ಲಿ ನಮ್ಮ ದಕ್ಷಿಣ ಕನ್ನಡ ಎಂದರೆ ಸುನ್ನಿಗಳದ್ದೆ ಕಾರುಭಾರು. ನಮ್ಮಲ್ಲಿನ ಸ್ನೇಹಬಂಧ ರಕ್ತ ಸಂಬಂಧಗಳನ್ನು ನಾಚಿಸುವಂತಿತ್ತು ಆದರೆ ಈಗ ಎಲ್ಲವು ಒಡೆದು ಸರ್ವನಾಶವಾಗಿದೆ.
ನಾವು ಯೋಚಿಸಬೇಕು.
ಸಹೋದರ ಸಹೋದರಿಯರೇ. ಎಲ್ಲವು ಕೇರಳದ ಪಂಡಿತರು ಹೇಳಿದ್ದೆ ಸರಿ ಎಂದು ತಲೆ ಆಡಿಸುತ್ತಾ ಹೋದರೆ ನಾಳೆ ಸೃಷ್ಟಿಕರ್ತನ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಾದ ಪರಿಸ್ತಿತಿ ಬರಬಹುದು. ಇವತ್ತು ಸುನ್ನಿಗಳ ಹೊರತು ಬೇರೆಲ್ಲ ಸಂಘಟನೆಗಳು ಇಸ್ಲಾಮಿಕ್ ದಾವ ಕಾರ್ಯದಲ್ಲಿ ಮುಂದೆ ಇದ್ದಾರೆ. ಅದೆಷ್ಟೋ ಮುಸ್ಲಿಮೇತರರು ಇವತ್ತು ಇಸ್ಲಾಂ ಕಡೆ ಬರಲು ಸುನ್ನಿಗಳ ಹೊರತು ಬೇರಲ್ಲ ಸಂಘಟನೆಗಳು ಕಾರಣವಾಗಿದೆ. ನಾವು ಇನ್ನಾದರೂ ಎಸ್ಕೆ ಎಸೆಸ್ಸೇಫ್ ಅನ್ನೋದು ನಿಲ್ಲಿಸೋಣ ಸಮುದಾಯಾದ ಒಳಿತಿಗಾಗಿ ಮುನ್ನುಗೋಣ.
ಅಲ್ಲಾಹು ಅನುಗ್ರಹಿಸಲಿ.