ಶನಿವಾರ, ಜೂನ್ 11, 2016

ಮಸ್ ಅಲಗಳು

📚ತಿಳಿಯಲೇಬೇಕಾದ ಮಸ್ ಅಲಗಳು📚

  ಚಿತ್ರವಿರುವ ಮುಸಲ್ಲಾದಲ್ಲಿ ನಮಾಝನ್ನು ನಿರ್ವಹಿಸುವುದು
ಕರಾಹತ್ತೆಂದು ಕೆಲವರು ಹೇಳುತ್ತಾರೆ. ಅದು ಸರಿಯೇ???

👉� ಹೌದು ಕರಾಹತಾಗಿದೆ. ಅದು ಭಕ್ತಿಗೆ ಭಂಗ ಉಂಟು ಮಾಡುವುದು ಎಂಬುವುದಾಗಿದೆ ಕಾರಣ ( تحفة 2/161)

🔘🔘🔘🔘🔘🔘🔘🔘
❓ನಮಾಝನ್ನು ನಿರ್ವಹಿಸದಿದ್ದರೆ ಪತಿಗೆ ಪತ್ನಿಯನ್ನು ಹೊಡೆಯ ಬಹುದೇ?

👉�ಪತ್ನಿ ನಮಾಝನ್ನು ನಿರ್ವಹಿಸದಿದಲ್ಲಿ ಅವಳನ್ನು ಹೊಡೆಯುವ ಅಧಿಕಾರ ಅವಳ ಮಾತಾಪಿತರಿಗೆ ... ಅವರಿಬ್ಬರೂ ಇಲ್ಲದಿದ್ದರೆ ಅಥವಾ ಅವರು ಆ ವಿಷಯದಲ್ಲಿ ಬೇಕಾದ ರೀತಿಯಲ್ಲಿ ಕಾರ್ಯ ನಿರ್ವಹಿಸದಿದ್ದರೆ ಪತಿಗೆ ಪತ್ನಿಯನ್ನು ಸಣ್ಣ ರೀತಿಯಲ್ಲಿ ಹೊಡೆಯುವುದು ಕಡ್ಡಾಯವಾಗಿದೆ.. ( تحفة 1/452)

🔘🔘🔘🔘🔘🔘🔘🔘
❓ಸೋಕ್ಸ್ ಹಾಕಿ ನಮಾಝ್ ನಿರ್ವಹಿಸಬಹುದೇ?
👉�ನಿರ್ವಹಿಸಬಹುದು
( فتح المعين)

🔘🔘🔘🔘🔘🔘🔘

❓ ಔರತ್ ಮುಚ್ಚದ ಮಕ್ಕಳಿಗೆ    ನಮಾಝಿ ಪರಿಶೀಲನೆ ನೀಡಬಹುದೇ?
👉�ನೀಡಬಾರದು 
   (‍ فتح المعين213)

🔘🔘🔘🔘🔘🔘🔘🔘
❓ ಪುರುಷರು ಜುಮುಅದಿಂದ ನಿರ್ಗವಿಸುವುದಕ್ಕಿಂತ ಮೊದಲು ಸ್ತ್ರೀಗಳಿಗೆ  ಳುಹರ್ ನಮಾಝನ್ನು ನಿರ್ವಹಿಸಬಹುದೇ??

👉�ನಿರ್ವಹಿಸಬಹುದು.. ಮಾತ್ರವಲ್ಲ ಜುಮುಅ  ನಮಾಝಿನ ಮುಕ್ತಾಯಕ್ಕೆ ಕಾಯದೆ ಬೇಗನೇ  ನಿರ್ವಹಿಸುವುದೇ ಸ್ತ್ರೀಗಳಿಗೆ ಸುನ್ನತ್ ( تحفة 2/418)

🔘🔘🔘🔘🔘🔘🔘🔘
❓ಸುಜೂದಿನಲ್ಲಿ ಕಣ್ಣು ಮುಚ್ಚಬಹುದೇ?

👉�ಕಣ್ಣು ಮುಚ್ಚದೇ ಇರುವುದು ಸುನ್ನತ್ತಾಗಿದೆ ( فتح المعين69)

🔘🔘🔘🔘🔘🔘🔘🔘
❓ಫರ್ಲ್ ನಮಾಝಿನ ಖಳಾ ಇರುವವನು ಸುನ್ನತ್ ನಮಾಝನ್ನು ಮಾಡುವುದರ ವಿಧಿ ಏನು??

👉�ಫರ್ಲ್ ನಮಾಝನ್ನು ಖಳಾ ನಿರ್ವಹಿಸಲು ಬಾಕಿ ಇರುವವನು ಮಾಡಿದ ಎಲ್ಲಾ ಸುನ್ನತ್ ನಮಾಝುಗಳು ಅವನಿಗೆ ಹರಾಮಾಗಿದೆ.. ಆದರೆ ಮಾಡಿದ ನಮಾಜ್ ಸಿಂಧುವಾಗುವುದು ( کردي1/144)

🔘🔘🔘🔘🔘🔘🔘🔘
❓ವಸ್ವಾಸ್ ಇರುವ ವ್ಯಕ್ತಿಯ ಹಿಂದೆ ನಮಾಜ್ ನಿರ್ವಹಿಸಬಹುದೇ?

👉� ವಸ್ವಾಸ್ ಇರುವವರ ಹಿಂದೆ ನಮಾಝನ್ನು ನಿರ್ವಹಿಸುವುದು ಕರಾಹತ್ತಾಗಿದೆ
(فتح المعين 132)

🔘🔘🔘🔘🔘🔘🔘🔘
❓ ಶುಕ್ಲ , ಉಗುಳು ಎಂಬಿವುಗಳು ನಜಸೇ? ಇವುಗಳು ವಸ್ತ್ರದಲ್ಲಾದರೆ ನಮಾಜ್ ಸಿಂಧುವಾಗಬಹುದೇ?

👉�ಇವುಗಳು ನಜಸಲ್ಲ... ಇವುಗಳು ವಸ್ತ್ರದಲ್ಲಿ ಬಿದ್ದರೆ ತೊಳೆಯವುದು ಕಡ್ಡಾಯವಿಲ್ಲ.. ನಮಾಜ್ ಸಿಂಧುವಾಗಬಹುದು..
(شرح با فضل 1/168)

🔘🔘🔘🔘🔘🔘🔘🔘
❓ನಿಲ್ಲಲು ಸಾಮರ್ಥ್ಯವುಳ್ಳವರಿಗೆ ಸುನ್ನತ್
ನಮಾಜನ್ನು ಕೂತು ನಿರ್ವಹಿಸಬಹುದೇ?

👉�ನಿರ್ವಹಿಸಬಹುದು...ಫರ್ಲ್ ನಮಾಝಿನಲ್ಲಿ ಮಾತ್ರವೇ ಅದು ಕಡ್ಡಾಯ (تحفة  2/29)

🔘🔘🔘🔘🔘🔘🔘🔘
❓ಸುನ್ನತ್ ನಮಾಝಿನಲ್ಲಿ ಸೂರತ್ ಓದಲು ಸುನ್ನತ್ತಿದೆಯೇ?

👉�ಸುನ್ನತ್ತಿದೆ.. ಮಯ್ಯತ್ ನಮಾಝಿನಲ್ಲಿ ಮಾತ್ರ ಸುನ್ನತ್ತಿಲ್ಲ.(تحفة   2/51)

🔘🔘🔘🔘🔘🔘🔘🔘
❓ನಿಂತು ನಮಾಝನ್ನು ನಿರ್ವಹಿಸಲು ಸಾಮರ್ಥ್ಯವುಳ್ಳವನು ಕುರ್ಚಿಯಲ್ಲಿ ಕೂತು ನಮಾಜ್ ನಿರ್ವಹಿಸಿದರೆ ಸಿಂಧುವಾಗಬಹುದೇ? (ಸಾಮಾನ್ಯವಾಗಿ ಇಂದು ಮಸೀದಿಗಳಲ್ಲಿ ಕಾಣ್ತಾ ಇದೆ)

👉�ಸಿಂಧುವಾಗದು.. ಸ್ವಂತವಾಗಿ ಸಾಧ್ಯವಿಲ್ಲದಿದ್ದರೆ ಬೇರೆಯವರ ಸಹಾಯದಿಂದ ನಿಲ್ಲಬೇಕು
( شرواني 2/20)

🔘🔘🔘🔘🔘🔘🔘🔘
❓ನಮಾಝಿನಲ್ಲಿರುವಾಗ ಯಾರಾದರೂ ಸಲಾಂ ಹೇಳಿದರೆ ನಮಾಝಿನಲ್ಲಿರುಮವನು ಏನು ಮಾಡಬೇಕು?

👉� ಕೈ ಎತ್ತಿ ತೋರಿಸಿ ಇಶಾರ ಮಾಡಬೇಕು... ನಮಾಝಿನಿಂದ ನಿರ್ಗಮಿಸಿದ ನಂತರ ಸಲಾಂಗೆ ಉತ್ತರ ನೀಡುವುದು ಕೂಡ ಸುನ್ನತ್ತಿದೆ (فتح المعين)

🔘🔘🔘🔘🔘🔘🔘🔘
❓ನಾಲ್ಕು ರಕ್ಅತಿನ ನಮಾಝಿನ ಲ್ಲಿ ಇಮಾಂ ಐದನೇ ರಕ್ಅತಿಗೆ ಎದ್ದು ನಿಂತರೆ ಹಿಂದೆ ಇರುವವರು ಏನು ಮಾಡಬೇಕು????

👉�ಅವರು ಇಮಾಮನ್ನು ನಿರೀಕ್ಷಿಸಿ ಅಲ್ಲೇ ಕೂರುವುದೋ  ಇಮಾಮಿನಿಂದ ಬಿಟ್ಟು ಹೋಗುವುದೋ ಮಾಡಬಹುದು. ಇಮಾಮಿನ ಜೊತೆಯಲ್ಲೇ ಎದ್ದು ನಿಲ್ಲಬಾರದು ( فتح المعين)

🔘🔘🔘🔘🔘🔘🔘🔘
❓ಒಂದು ಜಾಗದಲ್ಲಿ ನಮಾಜ್ ನಿರ್ವಹಿಸಿದರೆ ಇನ್ನೂOದು ನಮಾಜ್ ಮಾಡಬೇಕಾದರೆ ಸ್ಥಳ ಬದಲಾಯಿಸುವುದು ಸುನ್ನತ್ತಿದೆಯೇ?

👉�ಹೌದು ..ಸುನ್ನತ್ತಿದೆ (  تحفة 2/106)

🔘🔘🔘🔘🔘🔘🔘🔘

✍🏻 ಆರ್ ಕೆ ಎಂ ಕುಂಬ್ರ