ಶನಿವಾರ, ಜೂನ್ 11, 2016

ನಿಮ್ಮ ಪತ್ನಿ

ಕ್ಷಮಿಸಿ ಸಂದೇಶ ಅಲ್ಪ ಧೀರ್ಘವಾಗಿದೆ. ಆದರೆ ಖಂಡಿತಾ ನಿಮ್ಮ ಸಮಯ ವ್ಯರ್ಥವಾಗದು.

ನೀವು ನಿಮ್ಮ ಪತ್ನಿಯನ್ನು ಹೇಗೆ ಕರೆಯುತ್ತೀರಿ!?

ಅವಳನ್ನು ನೀವು ಒಂದುದಿವಸ ಎಷ್ಟು ಬಾರಿ ಚುಂಬಿಸುತ್ತೀರಿ!?

ಎಷ್ಟು ಸಲ ಅವಳ ತಲೆಗೂದಲಿನಿಂದ ಕೈಯ್ಯಾಡಿಸಿ ತಲೆಸವರಿ ಆಶ್ವಾಸನೆ ನೀಡುತ್ತೀರಿ!?

ಎಷ್ಟುಸಲ ಸ್ವಶರೀರದೊಂದಿಗೆ ಜೋಡಿಸಿ ಆಲಿಂಗನ ಮಾಡುತ್ತೀರಿ!?

ಅವಳ ಅಂಗೈಗಳನ್ನು ಮೆತ್ತಗೆ ಹಿಡಿದು ಪ್ರೀತಿಕಾಮನೆಯಿಂದ ಅಂತರಾಳದ ಅಪ್ಪಟ ಸ್ನೇಹವನ್ನು ಹಂಚಿಕೊಳ್ತೀರಾ!!?

ಅವಳ ಕಣ್ಣಿಗೆ ಕಣ್ಣಿಟ್ಟು ಮುಗುಳ್ನಕ್ಕು ಮಾತನಾಡುವ ಸಂಪ್ರದಾಯ ಇದೆಯೇ?

ಸವಾಲುಗಳನ್ನು ಓದಿ ಸಂಕೋಚ ಪಡಬೇಡಿ..!!  ಇದು ನಿಮ್ಮಲ್ಲಿ ನಾನು ಕೇಳುವ ಪ್ರಶ್ನೆಗಳಲ್ಲ. ರಿಯಾದಿನ ಮಸೀದಿಯೊಂದರಲ್ಲಿ ಕಳೆದ ಒಂದು ಶುಕ್ರವಾರದ ಖುತುಬಾದ ಮಧ್ಯೆ ಖತೀಬ್ ಜನರೊಂದಿಗೆ ಕೇಳಿದ ಪ್ರಶ್ನೆ.

ಇದು ನನ್ನ ಗೆಳೆಯನೊಬ್ಬ ಕಳುಹಿಸಿದ ಸಂದೇಶ, ಮೂಲ ಮಲಯಾಳದಲ್ಲಿತ್ತು, ಸಂದೇಶದಲ್ಲಿ ಸಮುದಾಯದ ಹಿತಭಾವನೆ ಅಡಗಿರುವುದರಿಂದ ಅದನ್ನು ನಿಮಗೂ ತಲುಪಿಸಬೇಕೆಂಬ ಉದ್ದೇಶದೊಂದಿಗೆ ಕನ್ನಡಕ್ಕೆ ಭಾಷಾಂತರ ಮಾಡುತ್ತಿದ್ದೇನೆ ಅಷ್ಟೇ.

📝ಯಂ. ಬಾಳಾಯ.

ದಿವಸಕ್ಕೆ ಹಲವು ಬಾರಿ ಹಲವು ಆವಶ್ಯಗಳಿಗಾಗಿ ನೀವು ಅವಳನ್ನು ವಿಚಾರಿಸುತ್ತೀರಿ!

ಅದೆಲ್ಲಿ, ಇದೆಲ್ಲಿ, ಅದನ್ನು ಇಲ್ಲಿಗೆ ತಾ, ಅದು ಕೊಡು, ಇದು ಕೊಡು, ನೀನೆಲ್ಲಿ ಹೋಗಿ ಕೂತಿದ್ದಿಯಾ ಒಮ್ಮೆ ಬೇಗ ಬಾ...

ಹೀಗೆ ಅದೆಷ್ಟೆಷ್ಟು ಆಜ್ಞೆಗಳನ್ನು ಒಂದು ದಿವಸಕ್ಕೆ ನೀನು ಅವಳಿಗೆ ಆಜ್ಞಾಪಿಸುವುದಿಲ್ಲವೇ?

ಏನೆಲ್ಲಾ ಹೇಳಿ-ಕೇಳಿ ನೀನವಳನ್ನು ಗದರಿಸುವುದಿಲ್ಲವೇ?

ಅದ್ಯಾವ ವಿಷಯಕ್ಕೆಲ್ಲಾ ನೀನವಳಲ್ಲಿ ಕೋಪಿಸುತ್ತಿಯಾ?

ಬದಲು ನೀನು ಅವಳಿಗೆ ಏನಾದರೂ ಕೊಟ್ಟಿದ್ದಿಯಾ..!!?

ಅವಳಿಗೆ ಮನೆಯ ಕೆಲಸಕಾರ್ಯದಲ್ಲಿ ನೀನು ಸಹಾಯ ಮಾಡಿದ್ದಿಯಾ..!!?

ಯಾವುದಾದರೂ ವಿಷಯದಲ್ಲಿ ಅವಳನ್ನು ಯಾವಾಗಲಾದರೂ ಅಭಿನಂದಿಸಿದ್ದಿಯಾ..!!?

ಓ ಫಾತಿಮಾ, ಓ ಹುರುಮಾ,
ಓ ಝೈನಬಾ ಎಂದಲ್ಲವೇ ನೀನು ಅವಳನ್ನು ಕರೆಯುವುದು..!!?

ಇದನ್ನೆಲ್ಲಾ ಕೇಳಿದಾಗ ನಾನೂ ಯೋಚಿಸಿ ನೋಡಿದೆ, ನಾವೆಲ್ಲಾ ನಮ್ಮ ಪತ್ನಿಯರನ್ನು ಯಾವ ಹೆಸರಿನಿಂದ ಕರೆಯುತ್ತೇವೆ!

ಎಡೀ ಪಾತೋ, ಕುಲ್ಸೋ, ಅನ್ನಮ್ಮೇ, ಪೋನ್ನಮ್ಮೆ, ಪೋತ್ತೇ, ಕಝುದೇ, ಪಂಡಾರಮೇ...
ಏನೆಲ್ಲಾ ಕರೆಗಳು..!!

ಖತೀಬ್ ಮುಂದುವರಿಸಿಸುತ್ತಾ...

ಯಾ ಹಬೀಬತೀ, ಯಾ ಖಮರೀ, ಯಾ ಖಬ್ದೀ, ಯಾ ಖಲ್ಬೀ.. ಹೀಗೆ ಅವಳನ್ನು ಕರೆಯಬೇಕಾದುದು ಅತ್ಯಂತ ಸ್ನೇಹಪೂರ್ಣವಾದ ಹೆಸರಿನಿಂದಾಗಿದೆ.

ಓ ನನ್ನ ಪ್ರಿಯೇ, ಓ ನನ್ನ ಚಂದ್ರಾವತಿಯೇ, ಓ ನನ್ನ ಕರುಳ ಗುಡಿಯೇ, ಓ ನನ್ನ ಹೃದಯವೇ, ಇಮಾಮಿನ ಪದಗಳಿಗೆ ಅನುಸಾರವಾಗಿ ನಾನೂ ಮನಸ್ಸಿನಲ್ಲಿ ಆ ಹೆಸರುಗಳನ್ನು ನಮ್ಮ ಭಾಷೆಯಲ್ಲಿ ಹೇಳುತ್ತಿದ್ದೆ.

ಕೊನೆಗೆ ಅವರು ಹೇಳಿದರು,

ಪತ್ನಿಯರನ್ನು ಎಲ್ಲರು ಕೂಗುವ ಹೆಸರಿನಲ್ಲಲ್ಲ ಪತಿಯಾದವನು ಕೂಗ ಬೇಕಾಗಿರೋದು, ನಮಗೆ ಮಾತ್ರ ಕರೆಯಬಹುದಾದ ಕೇಳುವಾಗಲೇ ಅವಳ ಮನತುಂಬಬಹುದಾದ ಒಂದು ಸ್ಪೆಶ್ಯಲ್ ಹೆಸರು ಕಂಡುಹಿಡಿಯಬೇಕು.

ನಿಮಗೆ ಅವಳನ್ನು ಮಾತ್ರ ಕರೆಯಬಹುದಾದ, ಬೇರ್ಯಾರೂ ಕರೆಯದ ಹೆಸರು, ನೀನು ಅವಳಲ್ಲಿ ಅವಳಿಗಷ್ಟವಾದ ಹೆಸರು ಕೇಳಿಪಡ್ಕೊಬಹುದು, ಅಥವಾ ಸ್ವತಃ ಕಂಡುಹಿಡಿಯಬೇಕು.

ನಾನು ಆ ಕ್ಷಣದಿಂದ ಚಿಂತಿಸಲು ಪ್ರಾರಂಭಿಸಿದೆ ನನ್ನವಳನ್ನು ನಾನು ಹೇಗೆ ಕೆರೆಯಬೇಕು. ತರುವಾಯ ಸುಬೀ ಎಂದು ಕರೆಯುತ್ತಿರುವೆ ಆದರೆ! ಎಲ್ಲರೂ ಅವಳನ್ನು ಅದೇ ಹೆಸರಿನಿಂದ ಕರೆಯುತ್ತಿದ್ದಾರಲ್ಲಾ, ಮುಂದೆ ಸುಬೂ ಎಂದು ಕರೆದರೆ ಹೇಗೆ?

ನೀವೂ ಶ್ರಮಿಸಿ ನೋಡಿ ಒಂದು ನೂತನ ಹೆಸರು ಕಂಡುಹಿಡಿಯಿರಿ, ಎಂದು ಪ್ರೇಕ್ಷಕನಾದ ಆ ಮಲಯಾಳಿ ಸಹೋದರನು ಅವರ ಬರಹದಲ್ಲಿ ಅಪೇಕ್ಷಿಸುತ್ತಾರೆ.

ಇದನ್ನು ಓದುತ್ತಾ ಬಂದಾಗ ನನ್ನ ಮನದಲ್ಲಿ ಏನೋ ತಂಗಾಳಿಯ ಅನುಭವ, ಯಾಕೆ ಗೊತ್ತಾ!.. ನಾನು ನನ್ನವಳನ್ನು ಕರೆಯುತ್ತಾ ಬಂದಿರೋದು ಪೊಮ್ಮೀ.. ಎಂದು, ಹಾಗೆ ಅವಳನ್ನು ಯಾರೂ ಕರೆಯುತ್ತಲೂ ಇಲ್ಲ, ಏನೋ ಪ್ರಾರಂಭದಿಂದಲೇ ಹಾಗೆ ಅಭ್ಯಾಸವಾಗಿತ್ತು. ಮದುವೆಯಾದಂದಿನಿಂದ ಅವಳ ಹೆಸರು ಹೇಳಿಯೋ, ಎಣೆ, ಎಡೀ ಎಂಬುದಾಗಿ ಕರೆದ ನೆನಪು ಕೂಡಾ ಇಲ್ಲ. ಈ ಅನುಭವ ಒಂದ್ವೇಳೆ ನಿಮಗೂ ಆಗಿರಬಹುದು. ಆದರೆ ನಮ್ಮ ಮನೆಯವರ ಸಮ್ಮುಖದಲ್ಲಿ ಪೊಮ್ಮಿ ಎಂದು ಕರೆಯಲು ನನಗೆ ಮತ್ತು ಕರೆಸಿಕೊಳ್ಳಲು ಅವಳಿಗೂ ಒಂತರಾ ನಾಚಿಕೆ, ಆದ್ದರಿಂದಲೇ ಅವರ್ಯಾರ ಗಮನಕ್ಕೂ ಆ ಕರೆ ತಲುಪಿರಲಿಕ್ಕಿಲ್ಲ.

ನಾವು ಅತ್ಯಂತ ಬರಿದಾಗಿ ಕಾಣುವ ಸಾಮಾನ್ಯ ವಿಷಯಗಳಲ್ಲಿಯೂ ಎಷ್ಟೆಷ್ಟು ವಿಶಾಲವಾದ ಸಂತೋಷಗಳು ಅಡಗಿದೆ ಆಲ್ವಾ!? ಯೋಚಿಸಿ ನೋಡಿ...

ಖತೀಬರು ಕೊನೆಯದಾಗಿ ಹೇಳಿದ ವಾಕ್ಯ ಇದಾಗಿತ್ತು...

ಸೊರಗಿದ ಕುಟುಂಬ ನಾವಿಕನಿಂದ, ಸೊರಗಿದ ಕುಟುಂಬವಲ್ಲದೇ ಸೃಷ್ಟಿಯಾಗದು. ಸ್ಮರಣೆ, ಸಹನೆ, ಮನನಶೀಲ ಒಡೆಯನಿಂದ ಅದೇ ತೆರನಾದ ಗುಣನದತೆಗಳನ್ನು ಮೈಗೂಡಿಸಿಕೊಂಡ ತಲೆಮಾರುಗಳು ಸೃಷ್ಟಿಸಲ್ಪಡುತ್ತದೆ.

'ಮನಿಹ್ತರಮ ಝೌಜತಹು ಹುವ ಕರೀಂ, ಮನ್ ಹಖ್ಖರ ಹುರುಮತಹು ಹುವ ಲಯೀಮ್'

ಅರ್ಥ: ಯಾರಾದರೂ ತನ್ನ ಪತ್ನಿಯನ್ನು ಗೌರವಿಸಿದರೆ, ಅವನೇ ನಿಜವಾದ ಮರ್ಯಾದಸ್ಥ.
ಪತ್ನಿಯರನ್ನು ನಿಂಧಿಸುವವರೇ ನಿಜವಾದ ನಿಂಧಕರು.

ಎಷ್ಟು ಮನೋಹರವೂ ಉದಾತ್ತವೂ ಚಿಂತನಾರ್ಹವೂ ಆದ ವಚನಗಳು ನೋಡಿ.

ಸರ್ವಶಕ್ತನಾದ ಅಲ್ಲಾಹ್, ಈ ಶುಭ ಸಂದೇಶವನ್ನು ನಮ್ಮರಿವಿಗೆ  ತಲುಪಿಸಿದ ವ್ಯಕ್ತಿಗೂ ನಾವು-ನಮ್ಮವರಿಗೂ ಸುಖ, ಸಂತೋಷ ಹಾಗೂ ಇಹಪರ ಸಮೃದ್ಧಿಯನ್ನು ಕರುಣಿಸು.... ಆಮೀನ್.