ರಕ್ತ ಚೆಲ್ಲಿ ರಸ್ತೆ ಮೇಲೆ ಅಂಗಾತ ಮಲಗಿದ ಮಗು.. 😪😪
ಇನ್ನೆಂದೂ ಬಾರದ ಲೋಕಕ್ಕೆ ತೆರಳಿರೋ ಕಂದಮ್ಮಗಳು... 😪😪
ಧರ್ಮವರಿಯದೆ ಸ್ವರ್ಗದ ಕುಸುಮಗಳಾದ ಪುಟಾಣಿಗಳು... 😪😪
ಧರ್ಮ ಹುಡುಕಿ ಸಾವಲ್ಲೂ ಸಂಭ್ರಮಿಸೋ ವಿಕೃತ ಮನಸ್ಸುಗಳು.. 😪😪#
ರಹಿಮಾನ್, ☪
ಮೇರಿ, ✝
ರಾಮ್.. 🕉
ಈ ಹೆಸರಲ್ಲೇ ನಿಮಗೆ ಸುಲಭವಾಗಿ ಗುರುತಿಸಿಕೊಳ್ಬಹುದು ಇವರು ಪ್ರತಿನಿಧಿಸೋ ಧರ್ಮ ಯಾವುದಾಗಿರಬಹುದೆಂದು.. ಖಂಡಿತಾ, ರಹಿಮಾನ್ ಇಸ್ಲಾಮ್, ಮೇರಿ ಕ್ರೈಸ್ತೆ ಹಾಗೂ ರಾಮ್ ಹಿಂದು..
ಏನೇ ಇರಲಿ , ಓಮ್ನಿ ಯೊಂದರಲ್ಲಿ ಕೆ.ಜಿ. ತರಗತಿಗೆ ತೆರಳೋ ನೆರೆಮನೆಯ ಮಗುವನ್ನು ಜಾತಿ ಬಿಡಿ ಹೆಸರು ಹಿಡಿಯದೆ ಕರೆಯೋರೆ ಜಾಸ್ತಿ.. ಬದಲಾಗಿ ಅದು "ಮಗೂ ಇರಬಹುದು, ಪುಟ್ಟ ಇರಬಹುದು, ಇಲ್ಲವೇ ಮುನ್ನಾ , ಬೇಬಿ, ಬಾಬೂ, ಚಿನ್ನ, ಬಾಲೆ..." ಎಂದೆಲ್ಲಾ ಇರಬಹುದು...
ಯೆಸ್.. ಮಗು ಬಳಿ ನಿನ್ನ ಜಾತಿ ಯಾವುದು ಅಂತ ಕೇಳಿದರೆ ಆ ಮಗು ಕಣ್ಣು ಮಿಟುಕಿಸೋದೇ ಜಾಸ್ತಿ.. ಗ್ರೌಂಡ್ ನಲ್ಲಿ ಜೊತೆಯಾಗಿ ಕಣ್ಣಾ ಮುಚ್ಚಾಲೆ ಆಟ ಆಡೋವಾಗ ಇರಬಹುದು ಇಲ್ಲವೇ ಕುಣಿದು ಕುಪ್ಪಳಿಸುವಾಗ ಮುಂದಿರುವ ಮಗುವಿನ ಜಾತಿ ಯಾರಿಗೂ ಮುಖ್ಯವಾಗದು.. ಬದಲಾಗಿ ಅದರ ತುಂಟಾಟವೇ ಪ್ರತಿಯೊಬ್ಬನಿಗೂ ಮುದ ನೀಡುತ್ತದೆ..
ಭೂಮಿ ಮೇಲೆ ಇರುವ ಅತೀ ಶ್ರೇಷ್ಠ ಜೀವಿ ಎನಿಸಿಕೊಂಡಿರೋ ಮನುಷ್ಯನಿಗೆ ಮಾತ್ರ ಮಾನವೀಯತೆ ಇರಬಹುದು ಎಂದೆಲ್ಲಾ ನಾವು ಅಂದುಕೊಂಡಿದ್ದೇವೆ..
ರಸ್ತೆಯಲ್ಲಿ ಕಾಗೆಯೊಂದು ಸತ್ತು ಬಿದ್ದಾಗ ಉಳಿದ ಕಾಗೆಗಳೆಲ್ಲಾ ಒಂದಾಗಿ ರೋಧಿಸೋದನ್ನು ನಾವೆಲ್ಲಾ ನೋಡಿ ಬೆಳೆದಿರೋರು ತಾನೇ..??
ಹೌದು, ಕಾಗೆ ರೋಧಿಸಿರುವುದನ್ನು ನಾವು ನೋಡದೇ ಇರಲು ಅಸಾಧ್ಯ.. ಆದರೂ ಕಾಗೆಯಷ್ಟು ಮಾನವೀಯತೆ ನಮ್ಮಲ್ಲಿ ಬಾರದೆ ಇರಲು ಕಾರಣವೇನು..? ಇದು ಸದ್ಯದ ತಲ್ಲಣ..
ಕುಂದಾಪುರದ ತ್ರಾಸಿಯಲ್ಲಿ ಮೊನ್ನೆ 21 ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಕ್ಕಳು ಇಹಲೋಕ ತ್ಯಜಿಸಿ, ಈ ಮನುಷ್ಯತ್ವ ಮರೆತ ಭೂಲೋಕಕ್ಕೆ ಗುಡ್ ಬೈ ಹೇಳಿ ಸ್ವರ್ಗದ ಕುಸುಮಗಳಾದವು..
ವಿಕೃತ ಧರ್ಮಾಂಧ ಮನುಷ್ಯನ ಮನುಷ್ಯತ್ವ ಮತ್ತೊಮ್ಮೆ ಅನಾವರಣವಾಯಿತು ನೋಡಿ.. ಅದು ಶಂಕರ್ ಪ್ರಸಾದ್ ಇರಬಹುದು , ಅಬ್ದುಲ್ ರಹಿಮಾನ್ ಇರಬಹುದು ಇಲ್ಲವೇ ಜೋಸೆಫ್ ಇರಬಹುದು ಪರಸ್ಪರ ವಿರುದ್ಧ ಧರ್ಮೀಯರ ವ್ಯಕ್ತಿಗಳು ಮೃತಪಟ್ಟಾಗ ಸಂಭ್ರಮಿಸೋದೆಂದರೆ ಅದರ ಅರ್ಥವೇನು..??
ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ನಿಧನರಾದಾಗ ಪಟಾಕಿ ಹಚ್ಚಿ ಸಂಭ್ರಮಿಸೋರು, ಮಕ್ಕಾದ ಮಸ್ಜಿದ್ ನ ಕಟ್ಟಡ ಕುಸಿದಾಗ ಫೇಸ್ ಬುಕ್ ನಲ್ಲಿ ಖುಷಿ ಹಂಚಿಕೊಳ್ಳೋರು, ದೇವಸ್ಥಾನಕ್ಕೆ ಕಲ್ಲು ಹೊಡೆದು ತೃಪ್ತಿ ಪಟ್ಟುಕೊಳ್ಳೋರಿಗೆಲ್ಲಾ ಧರ್ಮದ ಅಗತ್ಯತೆ ಆದರೂ ಏನು.. ?? ಅನ್ನೋ ಪ್ರಶ್ನೆ ಮತ್ತೆ ಮತ್ತೆ ನಾವು ನಮ್ಮನ್ನೇ ಕೇಳಬೇಕಿದೆ..
ಅಂತೆಯೇ ಮಗುವಿನಲ್ಲಿ ಧರ್ಮ ಹುಡುಕಿ ಅದರ ಸಾವಲ್ಲೂ " ಕ್ರೈಸ್ತರ ಜನ ಸಂಖ್ಯೆ" ಕಡಿಮೆಯಾಯಿತು ಅಂದುಕೊಳ್ಳೋ ವಿಕೃತಿ ಮನಸ್ಸು ಮತ್ತು ಆತನಿಗೆ ಬೆಂಬಲ ನೀಡೋ ಧರ್ಮಾಂಧರ ಮನಸ್ಸಿಗೆ ಚಿಕಿತ್ಸೆ ಕೊಡಬೇಕಾದ ಅಗತ್ಯತೆ ಈ ಕಾಲದ ಬೇಡಿಕೆಯಾಗಿರುವುದು..
ಕೇರಳದ ಕೊಲ್ಲಂ ನಲ್ಲಿ ಬೆಂಕಿ ಅವಘಡವಾದಾಗ ಅದೆಷ್ಟೋ ಹೃದಯಗಳು ಮೃತ ವ್ಯಕ್ತಿಗಳಿಗಾಗಿ ಮಿಡಿದಿತ್ತು..
ಕೆಂಜಾರಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ನಡೆದಾಗ ಹೆಗಲಿಗೆ ಹೆಗಲು ಕೊಟ್ಟ ಮಂದಿನೂ ಕರಾವಳಿಯಲ್ಲಿ ಇದ್ದಾರೆ..
ಭೀಕರ ರಸ್ತೆ ಅಪಫಾತಗಳಾದಾಗ ಉಪವಾಸಿ ಮುಸ್ಲಿಮನು ವೃತ ತೊರೆಯೋ ಸಮಯ ಮೀರಿಯೂ ಯಾವುದೋ ಜಾತಿಯವನ ಪ್ರಾಣ ಉಳಿಸಲು ಪಣ ತೊಟ್ಟ ಪ್ರಸಂಗಗಳೂ ಇವೆ..
ಶಬರಿಮಲೆ ತೆರಳೋ ಮುನ್ನಾ ಊರಿನ ಮದ್ರಸ ಮಕ್ಕಳಿಗೆ ಸಿಹಿಯುಣಿಸಿ ಹೊರಡೋ ಯಾತ್ರಿಕರಿದ್ದಾರೆ.. ರಾತ್ರಿ ವೇಳೆ ಮಲೆಯಿಂದ ಹಿಂದಿರುಗೋ ಮಂದಿಗೆ ಮಸೀದಿಯಲ್ಲಿ ತಂಗಲು ಅವಕಾಶ ನೀಡೋ ಕರಾವಳಿಯ ಸೌಹಾರ್ದ ಮನಸ್ಸುಗಳಿವೆ..
ಅಷ್ಟೇ ಏಕೆ ಪಾಕಿಸ್ತಾನದ ಶಾಲೆಯ ಮಕ್ಕಳು ಭಯೋತಾದಕರ ಗುಂಡಿಗೆ ಬಲಿಯಾದಾಗ ದೇಶಾದ್ಯಂತ ಮೌನ ಪ್ರಾರ್ಥನೆಗೆ ಕರೆ ಕೊಡೋವಂತಹ ನರೇಂದ್ರ ಮೋದಿಯವರಂತಹ ಪ್ರಧಾನಿಯವರಿದ್ದಾರೆ..
ಇಷ್ಟೆಲ್ಲಾ ಇದ್ದರೂ ಕೂಡಾ ಅಲ್ಲೊಂದು ಇಲ್ಲೊಂದು ವಿಕೃತಿ ಬಯಸೋ ಮನಸ್ಸುಗಳನ್ನು ಕಂಡಾಗ ನಿಜಕ್ಕೂ ಮನುಷ್ಯರೆನಿಸಿಕೊಂಡಿರೋ ನಾವು ಮರುಕಪಡುವುದು ಸಾಮಾನ್ಯ. ಮಗುವಿನ ಧರ್ಮ ನೋಡಿ ಸಾವಲ್ಲೂ ಸಂಭ್ರಮಿಸೋ ವಿಚಿತ್ರ ಜೀವಿಗಳಿಗೆ, ಈ ಭೂಮಿಯಲ್ಲಿ ವಿಕೃತ ಮನಸ್ಸುಗಳನ್ನು ಸೃಷ್ಟಿಸೋ ಆ ವಿಚ್ಛಿದ್ರಕಾರಿ ಶಕ್ತಿಗಳ ಮೆದುಳಿಗೆ ಶಾಕ್ ಟ್ರೀಟ್ಮೆಂಟ್ ನಡೆಯಲೇಬೇಕಿದೆ..
ಪ್ರವಾದಿ ಮುಹಮ್ಮದ್ (ಸ.ಅ.) ರ ಕಾಲದಲ್ಲಿ ತನ್ನ ಪಾಲಿಗೆ ಅತೀ ವಿರೋಧಿ ಸಮುದಾಯವಾಗಿದ್ದ ಯಹೂದಿ ಸಮುದಾಯದ ವ್ಯಕ್ತಿಯ ಮೃತದೇಹ ಕೊಂಡೊಯ್ಯುವ ವೇಳೆ ಎದ್ದು ನಿಂತು ಗೌರವ ಸೂಚಿಸೋ ಪ್ರವಾದಿಗೆ ಅನುಯಾಯಿಗಳು 'ವಿರೋಧಿ ಸಮುದಾಯದ ವ್ಯಕ್ತಿಗೆ ನೀಡಿರೋ ಗೌರವದ' ಬಗ್ಗೆ ಕೇಳುತ್ತಾರೆ. ಅದಕ್ಕೆ ಪ್ರವಾದಿಯವರು, ವ್ಯಕ್ತಿಯ ಮೃತದೇಹದೊಂದಿಗೆ ಅಗೌರವದಿಂದ ನಡೆದುಕೊಳ್ಳದಂತೆ ಹೇಳಿರುವುದು ಕೂಡಾ ಮಾನವತೆಯ ಪಾಠ..
ಭಾರತದಲ್ಲೂ ಬುದ್ಧ, ನಾರಾಯಣ ಗುರು, ಸ್ವಾಮಿ ವಿವೇಕಾನಂದರು, ಬಸವಣ್ಣ, ಛತ್ರಪತಿ ಶಿವಾಜಿ ಇತಿಹಾಸದಲ್ಲೂ ಕೂಡಾ ಮಾನವತೆ ಸೆಲೆ ಇರುವುದನ್ನು ನಾವು ಕಾಣಬಹುದು..
ಇಂತಹ ವೈವಿಧ್ಯ ತುಂಬಿದ ನಾಡಿನಲ್ಲಿ ಜನ್ಮ ತಾಳಿ ಅದ್ಯಾವುದೋ ಸಿರಿಯಾದ ಐಸಿಸ್ ಉಗ್ರರ ನಡುವೆ ಇದ್ದಹಾಗೆ ಮಾನವೀಯತೆ ಇಲ್ಲದಂತೆ ವರ್ತಿಸೋರ ಬಗ್ಗೆ ನಿಜಕ್ಕೂ ಆಘಾತವಾಗುತ್ತಿದೆ.. ಇಂದು ಕುಂದಾಪುರದಲ್ಲಿ ಬಲಿಯಾದ ಮುದ್ದು ಕಂದಮ್ಮಗಳು ನಮ್ಮ ಮನೆ ಮಗು ಅಂದುಕೊಳ್ಳೋ ಸೌಜನ್ಯವೂ ನಮ್ಮ ನಡುವೆ ಮನುಷ್ಯ ಮುಖವಾಡ ಹೊತ್ತುಕೊಂಡ ಸಹೋದರ ಶಂಕರ್ ಪ್ರಸಾದ್ ನಂತಹವರಿಗೆ ಬರದೇ ಇರೋದು ಬೇಸರದ ಸಂಗತಿ..
ಯೂನಿಫಾರಂ ನಲ್ಲಿ ರಕ್ತದ ಕಲೆ ಅಂಟಿಸಿಕೊಂಡಿರೋ ಮಗುವಿನ ಚಿತ್ರಗಳು ನೋಡಿಯೂ ಸಂಭ್ರಮಿಸೋನು ನನ್ನ ಪ್ರಕಾರ ಭಯೋತ್ಪಾದಕನಿಗಿಂತಲು ಯಾವುದೇ ರೀತಿಯಲ್ಲೂ ಕಡಿಮೆಯಲ್ಲದ ವ್ಯಕ್ತಿ..
ಇಂತಹ ಮನಸ್ಸುಗಳು ನಮ್ಮ ಮನೆಯ ಸುತ್ತಮುತ್ತಲೂ ಇರಬಹುದು.. ಇಂತಹ ಮನಸ್ಸುಗಳಿಗೆ ಚಿಕಿತ್ಸೆ ಮಾಡಬೇಕಿರೋ ಅಗತ್ಯ ಖಂಡಿತಾ ಇದೆ.. ಯಾವುದೇ ಧರ್ಮ ಗ್ರಂಥ ಕಲಿಸದ ಧರ್ಮಾಂಧತೆಯನ್ನು ಕಲಿಸೋ 'ಗುರು'ಗಳೇ ಇಂದು ಶಂಕರ್ ಪ್ರಸಾದ್ ನಂತಹ ಮನಸ್ಸುಗಳ ಹುಟ್ಟಿಗೆ ಕಾರಣೀಕರ್ತರು.. ಈ ರೀತಿ ದ್ವೇಷ ಪಾಠ ಹೇಳಿಕೊಡೋರು ಕೂಡಾ ಉಗ್ರವಾದಿಗಳು ಅನ್ನೋದರಲ್ಲಿ ಸಂಶಯವಿಲ್ಲ ಎನ್ನುವುದು ಸ್ಪಷ್ಟ..
ಕಸಬ್, ಶಂಕರ್ ಪ್ರಸಾದ್ ನಂತಹ ಮನಸ್ಸುಗಳು ಯಾವುದೇ ಧರ್ಮಕ್ಕೂ ಬೇಡದವುಗಳು.. ಹಾಗಂತ ಇವರು ಮಾಡಿದ ತಪ್ಪಿಗೆ ಧರ್ಮ ದೂಷಣೆಯೂ ತಪ್ಪು.. ಬದಲಾಗಿ ಅದು ಶಂಕರ್ ಪ್ರಸಾದ್ ಆಗಲೀ ಯಾರೇ ಆಗಲಿ ಅವರ 'ಮನೆ-ಮನ'ದ ಸಂಸ್ಕೃತಿಯಾಗಿ ಕಾಣುವುದು ಅಷ್ಟೇ..
#SAVE HUMANITY#
📝 ಇರ್ಷಾದ್ ಕಿನ್ನಿಗೋಳಿ