ಶುಕ್ರವಾರ, ಜೂನ್ 24, 2016

ಇಸ್ಲಾಮಿನ ಆದರ್ಶದ ನಾಶಕ್ಕೆ ನಮ್ಮ ಉಡುಪುಗಳು ಸಹಾಯ ಆಗದಿರಲಿ

ಕೂರ್ನಡ್ಕ ಖತೀಬ್

📝ಸುನ್ನೀಟುಡೇ

ವಸ್ತ್ರ ಖರೀದಿಯ ಸಡಗರದಲ್ಲಿ ಮೈ ಮರೆತು ಹೋಗಬೇಡಿ. ಮರಣವು ಅವಕಾಶವನ್ನು ಕೇಳಿ ಬರುವುದಿಲ್ಲ. ಪರಲೋಕಕ್ಕೆ ಇರುವ ಸತ್ಕರ್ಮಗಳನ್ನು ಖರೀದಿಸಿ. ಈ ತಿಂಗಳು ಅಲ್ಲಾಹನು ಮಹಾ ಉದಾರಿಯಾಗಿದ್ದಾನೆ. ಪರಲೋಕಕ್ಕೆ ಪುಣ್ಯಗಳನ್ನು ಸಂಗ್ರಹಿಸೋಣ ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಜುಮ್ಮಾ ಭಾಷಣದಲ್ಲಿ  ಸಮುದಾಯಕ್ಕೆ ಕರೆನೀಡಿದರು. ಮದು ಮಗನ  ವಸ್ತ್ರ ನೋಡಬೇಕು, ಶೃಂಗಾರ ನೋಡಬೇಕು ಎಂದು ಒಂದು ವರ್ಷದ ಮೊದಲು ರೂಮಿನ ಹೊರಗೆ  ಕಾದವರು ಮೊನ್ನೆ ಅದೇ ಮದು ಮಗನ ಮಯ್ಯತ್ತ್ ಬೇಗ ಕಬರಿಗಿಳಿಸಲು ಮನೆಯ ಮುಂದೆ ಕಾಯುತ್ತಿದ್ದರು.ಇದಾಗಿದೆ ಜೀವನ. ಅಲ್ಲಾಹನ ಸ್ಮರಣೆ ಮತ್ತು ಅನುಸರಣೆ ಮಾತ್ರವೇ ರಕ್ಷಣೆ ಎಂದವರು ಹೇಳಿದರು.

ತಮ್ಮ ಲಜ್ಜಾಂಗಗಳನ್ನು  ಪ್ರದರ್ಶಿಸಿದ ಕಾರಣಕ್ಕಾಗಿ ಅಲ್ಲಾಹನು ಆದಮ್ ಮತ್ತು ಹವ್ವಾರನ್ನು ಸ್ವರ್ಗದಿಂದ ಹೊರಕ್ಕೆ ಹಾಕಿದನು.ನಗ್ನತೆಯನ್ನು ಅಲ್ಲಾಹನು ಇಷ್ಟಪಡುವುದಿಲ್ಲ. ಶೈತಾನನು ಅದಕ್ಕಾಗಿ ಪ್ರೇರೇಪಿಸುತ್ತಾನೆ ಮತ್ತು ವ್ಯಾಮೋಹಗಳನ್ನು ಕೊಡುತ್ತಾನೆ. ನಾವು ಕೂಡ ಶೈತಾನನ ವಂಚನೆಗೆ ಒಳಗಾಗಿ ಮೈ ಪ್ರದರ್ಶನ ಮತ್ತು ಸೌಂದರ್ಯ ಪ್ರದರ್ಶನದ ಉಡುಪು ಖರೀದಿಸಿ ಅಲ್ಲಾಹನನ್ನು ದಿಕ್ಕರಿಸಿದರೆ ನಮಗೂ ಸ್ವರ್ಗವು ನಿಷಿದ್ದವಾಗಲಿದೆ ಎಂದ ಖತೀಬರು ಅಲ್ಲಾಹನ ಭಯ-ಭಕ್ತಿ ಇರುವ ವಸ್ತ್ರಗಳನ್ನು ಖರೀದಿಸಿ.ಎಚ್ಚರ ವಹಿಸಿ ನಮ್ಮ ಮಕ್ಕಳನ್ನು ನಾವು ನರಕದ ಉಡುಪಿನಿಂದ ಶೃಂಗರಿಸದೆ ಸ್ವರ್ಗದ ಉಡುಪಿನಿಂದ ಅಲಂಕರಿಸೋಣ ಎಂದರು.

ಪ್ರತೀಯೊಂದು ಸಂಸ್ಥೆಗೂ ಒಂದು ಡ್ರೆಸ್ ಕೋಡ್ ಇದೆ. ಶಾಲೆಗೊಂದು ಡ್ರೆಸ್ಸ್ ಕೋಡ್ ಇದೆ.ಆದೆ ರೀತಿ ಇಸ್ಲಾಮಿಗೂ ಒಂದು ವಸ್ತ್ರ ವಿಧಾನವಿದೆ.ಅದನ್ನು ಅನುಸರಿಸಿದರೆ ಮಾತ್ರ ಮುಹ್ ಮಿನ್ ಆಗಬಹುದು.ಈಗ ಬಂದಿರುವ ಪ್ಯಾಶನ್ ವಸ್ತ್ರ ಗಳು,ಅದರ ವಿಚಿತ್ರವಾದ ಹೆಸರುಗಳು, ಉಡುಪುಗಳ ಸ್ಲೋಗೋನ್ ಗಳು.ಹರಿದು ಚಿಂದಿಯಾದಂತೆ ಕಾಣುವ ಪ್ಯಾಂಟ್ ಟೀಷರ್ಟ್ ಗಳು ಸುಬ್ ಹಾನಲ್ಲಾ ಹಾಗೇ ಕುರ್ ಆನ್ ಆಯತ್ತ್ ಗಳು ಮತ್ತು ಇಸ್ಲಾಮಿನ ಸಾಹಿತ್ಯ ಅಚ್ಚು ಒತ್ತಿರುವ ವಸ್ತ್ರಗಳು ಇಂದು ಪ್ಯಾಶನ್ ಗಳಾಗಿ ಮಾರಾಟವಾಗುತ್ತಿದೆ. ಮುಸ್ಲಿಮರೇ ಅದನ್ನು ಖರೀದಿಸಿ ಪ್ರದರ್ಶಿಸುತ್ತಿದ್ದಾರೆ ಈ ಪ್ರತಿಷ್ಟೆ ಮತ್ತು ಅಹಂಕಾರವು ವಿನಾಶವಾಗಿದೆ. ಇಂತಹ ವಸ್ತ್ರಗಳನ್ನು ಪುರಸ್ಕರಿಸುವವರೆಗೆ ಇದು ಬಹು ಬೇಡಿಕೆಯ ವಸ್ತುಗಳಾಗಬಹುದು.ಆಗ ಇಸ್ಲಾಮಿನ ಅವನತಿಗೆ ನಾವೇ ಸಹಾಯ ಮಾಡಿದಂತಾಗುತ್ತದೆ. ಇದನ್ನು ತಿರಸ್ಕರಿಸಿ. ಇಂತಹ ವಸ್ತ್ರಗಳ ವಿರುದ್ದ ಪ್ರತಿಭಟಿಸಿ ಆಗಲೇ ಇಸ್ಲಾಮಿನ ಆದರ್ಶ ಕಾಯುವ  ಯೋಧರಾಗಲು ಸಾಧ್ಯ ಎಂದ ಖತೀಬರು ಸಹೋದರಿಯರೇ ಖರೀದಿಯು ಪರಲೋಕದಲ್ಲಿ ಕಣ್ಣೀರಾಗದಿರಲಿ. ನಿಮ್ಮ ದೇಹವನ್ನು ಸಂರಕ್ಷಿಸಿ ಇಹದಲ್ಲೂ ಪರದಲ್ಲೂ ಅದುವೇ ನಿಮಗೆ ಹಿತಕರ ಎಂದರು.

ನಾವು ಅಲ್ಲಾಹನ ವಾಗ್ದಾನಗಳನ್ನು ಸಂಭವಿಸಿಯೇ ತೀರುವುದೆಂದು ನಂಬಿದವರು.ಅಲ್ಲಾಹನು ಪವಿತ್ರ ಕುರ್ ಆನಿನಲ್ಲಿ ನಮಗೆ ಹೀಗೆ ಆದೇಶವನ್ನು ನೀಡುತ್ತಾನೆ ' ಓ ಆದಮನ ಸಂತತಿಯೇ ನಾವು ನಿಮ್ಮ ದೇಹದ ಲಜ್ಜಾಂಗಗಳನ್ನು ಮರೆಸಲಿಕ್ಕಾಗಿಯೂ,ನಿಮ್ಮ ದೇಹದ ರಕ್ಷಣೆ ಮತ್ತು ಅಲಂಕಾರದ ಸಾದನವಾಗಿಯೂ ನಿಮಗೆ ಉಡುಪನ್ನು ಇಳಿಸಿರುತ್ತೇವೆ.ಧರ್ಮನಿಷ್ಟೆಯು ಅತ್ಯುತ್ತಮ ಉಡುಪಾಗಿರುತ್ತದೆ.ಇದು ಅಲ್ಲಾಹನ ದೃಷ್ಟಾಂತವಾಗಿದೆ. ಜನರು ಇದರಿಂದ ಪಾಠಕಲಿಯಲೂ ಬಹುದು.ಓ ಆದಮರ ಸಂತತಿಯೇ ಶೈತಾನನು ನಿಮ್ಮ ಮಾತಪಿತರನ್ನು ಸ್ವರ್ಗದಿಂದ ತೊಲಗಿಸಿದ್ದ ಹಾಗೂ  ಲಜ್ಜಾಂಗಗಳು ಗೋಚರಿಸುವಂತೆ ಅವರ ಮೈಯಿಂದ ಉಡುಪನ್ನು ಕಳಚಿದ್ದ.ಹಾಗೇ ನಿಮ್ಮನ್ನೂ ಕೂಡ ಅವನು ಪರೀಕ್ಷೆಗೆ ಒಳಪಡಿಸದಿರಲಿ (ಅಧ್ಯಾಯ-:7 ಆಯತ್-:26-27).ಓ ಸತ್ಯವಿಶ್ವಾಸಿಗಳೇ ಅಲ್ಲಾಹನ ಈ ಎಚ್ಚರಿಕೆಯನ್ನು ಕಡೆಗಣಿಸದಿರಿ. ಶೈತಾನನು ನಮ್ಮಲ್ಲಿ ವಸ್ವಾಸುಗಳನ್ನು ಸೃಷ್ಟಿಸಿ ಹಂತ-ಹಂತವಾಗಿ ನಗ್ನರನ್ನಾಗಿ ಕಾಣಲು ಬಯಸುತ್ತಾನೆ.ಈ ಮೂಲಕ ಅವನು ನಮ್ಮನ್ನು ನರಕದಲ್ಲಿ ಕಾಣಲು ಬಯಸುತ್ತಾನೆ ಎಂದು ಖತೀಬರು ಹೇಳಿದರು.

📝SunniToday