ಸೋಮವಾರ, ಜೂನ್ 13, 2016

ಗೌರವ

ಮತ್ತೋಬ್ಬರು ನಿ೦ತುಕೊ೦ಡು ನಮ್ಮನ್ನು ಗೌರವಿಸಬೇಕು ಎ೦ದು ಇಷ್ಟಪಡುವವರ ಗಮನಕ್ಕೆ.
___________________________

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಜನರು ತನ್ನನ್ನು ನಿ೦ತುಕೊ೦ಡು ಆದರಿಸುವುದನ್ನು ಯಾರಾದರೂ ಇಷ್ಟಪಡುವುದಾದರೆ ಅವನು ನರಕದಲ್ಲಿ ತನ್ನ ಸೀಟನ್ನು ಕಾದಿರಿಸಿಕೊಳ್ಳಲಿ. (ಅಬೂ ದಾವೂದ್)

(ಕೆಲ ಮತ ಸ೦ಘಟನೆ, ರಾಜಕೀಯ, ನೇತಾರರುಗಳ ಮು೦ದೆ ತಲೆತಗ್ಗಿಸಿಕೊ೦ಡು ನಿಲ್ಲುವ ಅನುಯಾಯಿಗಳ ಕಾಣುವಾಗ ಈ ಹದೀಸ್ ಅವರನ್ನು ನೆನಪಿಸಿರಿ) ತಲೆ ತಗ್ಗಿಸುವುದು,ಚು೦ಬಿಸುವುದು ಅನುವದನಿಯವಲ್ಲ. ಅನಸ್ ರಳಿಯಲ್ಲಾಹು ಅನ್'ಹು ರವರಿ೦ದ ನಿವೇದನೆ: ಅವರು ರಸೂಲ್ ಸಲ್ಲಲ್ಲಾಹು ಅಲೈವಸಲ್ಲಮರಲ್ಲಿ ಕೇಳಿದರು: ಅಲ್ಲಾಹನ ದೂತರೇ.. ನಮ್ಮಲ್ಲಿ ಒಬ್ಬರು ತನ್ನ ಸಹೋದರನನ್ನು ಅದಲ್ಲದಿದ್ದರೆ ಗೆಳೆಯನನ್ನು ಕಾಣುವಾಗ ಅವನಿಗಾಗಿ ತಲೆತಗ್ಗಿಸಬಹುದೇ.? ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು ಬೇಡ. ಆಲಿ೦ಗನವನ್ನು ಮಾಡುವುದಾಗಲಿ, ಚು೦ಬಿಸುವುದಾಗಲಿ ಮಾಡಬಹುದಾ? ನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು ಬೇಡ. ಅವರ ಕೈ ಹಿಡಿದು ಹಸ್ತವಲಾಘನ ಮಾಡಬಹುದಾ? ಕಣ್ಮಣಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು: ಮಾಡಬಹುದು. (ತಿರ್ಮುದಿ,ಇಬ್ನುಮಾಜ)

ಆಲಿ೦ಗನ ಮಾಡಬಹುದು ಯಾವಾಗ.? ಅನಸ್ (ರ.ಅ) ರವರಿ೦ದ ನಿವೇದನೆ... ಅವರು ಹೇಳಿದರು: ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರ ಸ್ವಹಾಬಿಗಳು ಪರಸ್ಪರ ಕ೦ಡು ಮುಟ್ಟುವಾಗ ಹಸ್ತಲಾಘನವ ಮಾಡುತ್ತಿದ್ದರು. ಯಾತ್ರೆಯಿ೦ದ ಅವರು ಮರಳಿ ಬರುವಾಗ ಪರಸ್ಪರ ಆಲಿ೦ಗನವ ಮಾಡುತ್ತಿದ್ದರು. (ತ್ವಬ್ರಾನಿ) (ಪ್ರವಾಸ ಕಳೆದು ಬರುವವರನ್ನು ಆಲಿ೦ಗನ ಮಾಡಲು ಈ ಹದೀಸ್ ಆಧಾರವಾಗಿದೆ.)

"ತಾನು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿ೦ದ ಕೇಳದ ಒ೦ದು ಹದೀಸ್ ಅಬ್ದುಲ್ಲಾ ಇಬ್ನು ಉನೈಸ್ (ರ.ಅ)ರವರು ರಿಪೋರ್ಟ್ ಮಾಡಿದರು ಎ೦ಬುವುದನ್ನು ತಿಳಿದ ಜಾಬೀರ್ (ರ.ಅ)ರವರ ಗಮನಕ್ಕೆ ಬ೦ದಾಗ ಅವರು ಮದೀನಾದಿ೦ದ ಒ೦ದು ತಿ೦ಗಳ ಪ್ರಯಾಣವನ್ನು ಕೈಗೊ೦ಡು ದೂರದ ಶಾಮ್ (ಸಿರಿಯಾ)ದತ್ತ ಯಾತ್ರೆಯನ್ನು ಕೈಗೊ೦ಡು ಅಬ್ದುಲ್ಲಾ ಇಬ್ನು ಉನೈಸ್ (ರ.ಅ)ರವರ ಮನೆಯನ್ನು ತಲುಪಿದ ಸ೦ಭವ ಹದೀಸ್ ಗ್ರ೦ಥಗಳಲ್ಲಿ ಬ೦ದಿರುತ್ತದೆ. ಅಬ್ದುಲ್ಲಾ ಇಬ್ನು ಉನೈಸ್ (ರ.ಅ) ರವರು ಮನೆಯಿ೦ದ ಹೊರಬ೦ದು ಜಾಬೀರ್(ರ.ಅ)ರವರನ್ನು ಬರಮಾಡಿಕೊ೦ಡಿರುವುದರ ಕುರಿತು ಅವರು ಹೇಳುತ್ತಾರೆ. ಅವರು ನನ್ನನ್ನು ಆಲಿ೦ಗನವ ಮಾಡಿಕೊ೦ಡು ಸ್ವಾಗತಿಸಿದರು. (ಮುಸ್ನದ್ ಆಹ್ಮದ್)

ಮಕ್ಕಳನ್ನು ಆಲಿ೦ಗನವ ಮಾಡಬಹುದು. ಅಬೂಹುರೈರ (ರ.ಅ)ರವರಿ೦ದ ನಿವೇದನೆ. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹಸನ್ (ರ.ಅ)ರವರನ್ನು ಆಲಿ೦ಗನ ಮಾಡಿದರು. (ಬುಖಾರಿ)
ಅಬೂಹುರೈರ (ರ.ಅ)ರವರಿ೦ದ ನಿವೇದನೆ: ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಮತ್ತು ನಾನು ಹಗಲಿನ ಹೊತ್ತಿನಲ್ಲಿ ಹೊರಟೆವು. ನಾನಗಲಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಾಗಲಿ ಪರಸ್ಪರ ಮಾತನಾಡದೆ ನಡೆಯುತ್ತಿದ್ದೆವು. ಹೀಗೆ ನಾವು ನಡೆಯುತ್ತಾ ಬನೂ ಕುರೈನ್ಕ ಮಾರ್ಕೆಟಿನತ್ತ ತಲುಪಿದೆವು. ಅಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಪಾತಿಮಾ (ರ.ಅ)ರವರ ಮನೆಯ ಮು೦ದೆ ಕುಳಿತುಕೊ೦ಡರು. ಸಲ್ಲಲ್ಲಾಹು ಅಲೈವಸಲ್ಲಮರು ಕೇಳಿದರು. ಮಗು ಅಲ್ಲಿ ಇದ್ದಾನ.? ಮಗು ಅಲ್ಲಿದ್ದಾನ? ಅವಾಗ ಪಾತಿಮಾ(ರ.ಅ)ಮಗನನ್ನು ಸ್ವಲ್ಪ ಹೊತ್ತು ತಡೆದು ನಿಲ್ಲಿಸಿದರು. ಪಾತಿಮಾ (ರ.ಅ)ಮಗನಿಗೆ ಸುಗ೦ಧವನ್ನು ಹರಡುತ್ತಿರಬಹುದು ಅಥವಾ ಸ್ನಾನ ಮಾಡಿಸುತ್ತಿರಬಹುದೆ೦ದು ಎ೦ದು ನಾನು ಭಾವಿಸಿದೆ. ಮಗು ಓಡುತ್ತಾ ಬ೦ದ. ಆವಾಗ ನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಮಗುವನ್ನು ಬಿಗಿದಪ್ಪಿಕೊಳ್ಳುತ್ತಾ ಚು೦ಬಿಸಿದರು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ದುವಾಃ ಮಾಡಿದರು. ಆಲ್ಲಾಹನೇ ಈ ಮಗುವನ್ನು ನೀ ಇಷ್ಟಪಡುವ೦ತವನಾಗು. ಈ ಮಗುವನ್ನು ಇಷ್ಟಪಡುವವರನ್ನೂ ನೀನು ಇಷ್ಟಪಡುವ೦ತವನಾಗು...(ಬುಖಾರಿ)