ಮಳೆಗಾಲದ ಆರಂಭದಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಲ್ಲಿ ಸರಣಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತಗಳು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿವೆ. ಅನೇಕ ಜೀವಹಾನಿಗಳು ನಡೆದುಹೋಗಿವೆ. ನೂರಾರು ಕನಸುಗಳನ್ನ ಹೊತ್ತಿದ್ದ ಅನೇಕ ಕುಟುಂಬಗಳ ಭವಿಷ್ಯವಾಗಬೇಕಿದ್ದ ಯುವಕ ಯುವತಿಯರು ರಸ್ತೆಯಲ್ಲೇ ಭೀಕರವಾಗಿ ಮರಣವಪ್ಪಿದ್ದಾರೆ. ಸುಧಾರಿತ ರಸ್ತೆಗಳು , ಅತಿಯಾದ ವಾಹನ ದಟ್ಟಣೆ, ಅತಿಯಾದ ವೇಗದ ಚಾಲನೆ ಜೊತೆಗೆ ಮಳೆಯೂ ಸೇರಿ ಅಂತೂ ಅನೇಕ ಜೀವಗಳು ಬಲಿಯಾದವು. ಕ್ಷಣವೊಂದರಲ್ಲಿ ನಡೆದು ಹೋಗುವ ಅಪಘಾತಗಳಲ್ಲಿ ಹೆಚ್ಚಿನ ಕಾರಣ ಅಜಾಗರೂಕತೆಯ ಚಾಲನೆ. ಕೆಲವೊಂದು ಸರ್ವೇಸಾಮಾನ್ಯ ರಸ್ತೆ ನಿಯಮಗಳನ್ನು ಅನುಸರಿಸಿ ಮುಂದಿನ ದಿನಗಳಲ್ಲಾದರೂ ಅಪಘಾತಗಳು ಸಂಭವಿಸದಿರಲೆಂದು ಕೆಲವಾದರೂ ನಿಯಮಗಳನ್ನು ಪಾಲಿಸೋಣ.
೧)ದ್ವಿಚಕ್ರ ವಾಹನ ಸವಾರರು ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಹತ್ತಿರವಾಗಲಿ ದೂರ ಪ್ರಯಾಣವಾಗಲಿ.
೨) ಹೊರಡುವ ಮುನ್ನ ಒಮ್ಮೆ ವಾಹನವನ್ನು ಪರೀಕ್ಷಿಸಿ, ಬ್ರೇಕ್, ಕ್ಲಚ್, ಮಿರರ್, ಲೈಟ್ಸ್ , ಟಯರ್ , ಇತ್ಯಾದಿ ಏನಾದರೂ ಸಣ್ಣ ದೋಷ ಇದ್ದರೆ ಸ್ವತಃ ಸರಿಮಾಡಿಕೊಳ್ಳಿ, ವಾಹನದ ಯೂಸರ್ ಮ್ಯಾನುವಲ್ ನಲ್ಲಿ ಇದರ ಬಗ್ಗೆ ಮಾಹಿತಿ ಇರುತ್ತದೆ. ಗಂಭೀರ ದೋಷವಿದ್ದರೆ ವಾಹನ ಚಲಾಯಿಸಬೇಡಿ, ಮ್ಯೆಕಾನಿಕ್ ನ ಬರಹೇಳಿ.
೩) ಕಾರು, ಲಾರಿ , ಬಸ್ ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ. ಲಭ್ಯವಿದ್ದರೆ ವಾಹನದ ಎಲ್ಲಾ ಪ್ರಯಾಣಿಕರೂ ಸೀಟ್ ಬೆಲ್ಟ್ ಧರಿಸುವುದು ಒಳ್ಳೆಯದು.
೪) ಮದ್ಯಪಾನ ಮಾಡಿದಾಗ ವಾಹನ ಚಾಲನೆ ಬೇಡವೇ ಬೇಡ.
೫) ಅತೀ ಮುಖ್ಯವಾಗಿ ವೇಗದ ಮಿತಿ ಇರಲಿ. ಸಾಮಾನ್ಯವಾಗಿ ಘಂಟೆಗೆ ೬೦ -೮೦ ಕಿ.ಮಿರವರೆಗೆ ವಾಹನ ನಿಮ್ಮ ನಿಯಂತ್ರಣದಲ್ಲಿ ಇರುತ್ತದೆ ಅದರ ನಂತರ ವಾಹನ ನಿಮ್ಮನ್ನ ನಿಯಂತ್ರಿಸುತ್ತದೆ. ಹಾಗಾಗದಿರಲಿ.
೬) ಹೇರ್ ಪಿನ್ ತಿರುವುಗಳಲ್ಲಿ ಬ್ರೇಕ್ ಮೇಲೆ ನಿಮ್ಮ ಕಾಲುಗಳಿರಲಿ , ನಯವಾಗಿ ಹಾರ್ನ್ ಬಳಸಿ.
೭) ತಿರುವುಗಳಲ್ಲಿ, ಸೇತುವೆಗಳಲ್ಲಿ, ಕಿರಿದಾದ ರಸ್ತೆಗಳಲ್ಲಿ ಓವರ್ಟೇಕ್ ಬೇಡವೇ ಬೇಡ.
೮)ವಿಶೇಷವಾಗಿ ಮಳೆಗಾಲದ ಚಾಲನೆಯಲ್ಲಿ ಪ್ರತಿ ಘಂಟೆಗೆ ೪೦ ಕಿ.ಮೀ ಗಿಂತ ಕಡಿಮೆ ವೇಗವಿರಲಿ. ಫಾಗ್ ಲೈಟ್ ಬಳಸಿ.. ಇದರಿಂದ ಹಿಮದಲ್ಲೂ ವಿಸಿಬಿಲಿಟಿ ತುಸು ಚೆನ್ನಾಗಿರುತ್ತದೆ.
೯) ವಿಪರೀತ ಮಳೆಯ ಸಂದರ್ಭದಲ್ಲಿ ಹೆಡ್ ಲೈಟ್ ಉಪಯೋಗಿಸಿ.
೮) ವಿಂಡ್ ಶೀಲ್ಡ್ ಮೇಲೆ ಮಂಜಿನ ಹನಿಯಿದ್ದರೆ ಎ.ಸಿ ಅಡ್ಜಸ್ಟ್ ಮಾಡಿ.
೯) ಮಳೆಗಾಲದಲ್ಲಿ ರಸ್ತೆ ಮತ್ತು ಟಯರ್ ನ ಮಧ್ಯ ನೀರಿನ ಪದರ ಇರುವುದರಿಂದ ಬ್ರೇಕ್ ಹಿಡಿಯುವುದಿಲ್ಲ, ಅದರಲ್ಲೂ ರಸ್ತೆಯಲ್ಲಿ ಆಯಿಲ್ ಇದ್ದರಂತೂ ಇನ್ನೂ ಕಷ್ಟ. ಹಾಗಾಗಿ ಅದರ ಬಗ್ಗೆ ವಿಶೇಷವಾಗಿ ಗಮನವಿರಲಿ.
ವಾಹನದಲ್ಲಿ ನೀವೊಬ್ಬರೇ ಇದ್ದರೂ ಮನೆಯಲ್ಲಿ ನಿಮಗಾಗಿ ಕಾದಿರುವ ಅನೇಕರು ಇರುತ್ತಾರೆ. ಸದಾ ನೆನಪಿರಲಿ.
ಇದೆಲ್ಲಾ ಎಲ್ಲರಿಗೂ ಗೊತ್ತಿರುವಂತಹುದೆ ಆದರೆ ಅನುಸರಿಸುವವರಿಲ್ಲ ಅನ್ನೋದೆ ದುರಂತ.😣🌝😊