*ಸನ್ಮಾರ್ಗ ರಮಝಾನ್ ವಿಶೇಷಾಂಕ-2016*
ಈ ಬಾರಿಯ ಸನ್ಮಾರ್ಗ ರಮಝಾನ್ ವಿಶೇಷಾಂಕದ ಮುಖಪುಟ ಇದು. ವಿನ್ಯಾಸ ಮಾಡಿದ್ದು ಸಲ್ಮಾನ್ ವಾಮಂಜೂರ್. ಈ ವಿಶೇಷಾಂಕದಲ್ಲಿ,
ಮುಹಮ್ಮದ್ ಅತ್ ಅರುಲ್ಲಾ ಶರೀಫ್ , ಬಿ. ಎಸ್. ಶರ್ಫುದ್ದೀನ್, ಖುರ್ರಮ್ ಮುರಾದ್, ಯೂಸುಫ್ ಇಸ್ಲಾಹಿ, ಸಬೀಹ ಫಾತಿಮ, ಶಹನಾಜ್ ಎಂ, ಸಮೀನ ಆಫ್ಶಾನ್, ಶಮೀರ ಜಹಾನ್, ಜಲೀಲ್ ಮುಕ್ರಿ, ಅಹ್ಮದ್ ಅನ್ವರ್, ಸಲಾಂ ಸಮ್ಮಿ, ಮುಬೀನ್ ಅಬ್ದುಲ್ ಗಫ್ಫಾರ್ ಸುಳ್ಯ, ಸಿದ್ದಿಖ್ ಕಲ್ಲಡ್ಕ, ರಝಾ ಮಾನ್ವಿ, ವಿ. ಕೆ. ಹಮೀದ್ ಕೇಪು, ಅಬ್ದುಸ್ಸಲಾಮ್ ದೇರಳಕಟ್ಟೆ, ಮುಖ್ತಾರ್ ಅಹ್ಮದ್ ಪಾಣೆಮಂಗಳೂರು, ನಿಯಾಝುರ್ರಹ್ಮಾನ್ ಪೆರ್ಲ, ಮಿಸ್ಬಾ ತರೀಕೆರೆ, ಶಬೀನ ಬಾನು, ಸಾದುಲ್ಲ... ಸಹಿತ ಅನೇಕ ಬರಹಗಾರರು ವಿವಿಧ ವಿಷಯಗಳ ಮೇಲೆ ತಮ್ಮ ವಿಚಾರವನ್ನು ಮಂಡಿಸಿದ್ದಾರೆ. ಅಲ್ಲದೇ
ಈ ವಿಶೇಷಾಂಕದಲ್ಲಿ ವಿಶೇಷ ಆಕರ್ಷಣೆಯಾಗಿ ಕುರ್ ಆನ್ ಸ್ಪರ್ಧೆಯೂ ಇದೆ. ವಿಶೇಷಾಂಕವನ್ನು ಖರೀದಿಸಿ, ಕುರ್ ಆನ್ ಸ್ಪರ್ಧೆಯಲ್ಲಿ ಭಾಗವಹಿಸಿ. ವಿಶೇಷಾಂಕದ ಮಧ್ಯ ಭಾಗದಲ್ಲಿ ಸ್ಪರ್ಧೆಯ ಪ್ರಶ್ನೆ ಪತ್ರಿಕೆಯಿದ್ದು ಅದರಲ್ಲಿ ಉತ್ತರಗಳನ್ನು ತುಂಬಿಸಿ ಅದನ್ನು
ಸಂಚಾಲಕರು
ಸನ್ಮಾರ್ಗ ಕುರ್ ಆನ್ ಸ್ಪರ್ಧೆ ವಿಭಾಗ
ಸನ್ಮಾರ್ಗ ವಾರಪತ್ರಿಕೆ
ಹಿದಾಯತ್ ಸೆಂಟರ್
ಬೇಬಿ ಅಲಾಬಿ ರಸ್ತೆ
ಮಂಗಳೂರು -1
ಈ ವಿಳಾಸಕ್ಕೆ ಜೂನ್ 30 ರ ಒಳಗೆ ಕಳುಹಿಸಿಕೊಡಿ. ಝೆರಾಕ್ಸ್ ಪ್ರತಿಯನ್ನು ಸ್ವೀಕರಿಸಲಾಗುವುದಿಲ್ಲ. ಇನ್ನು, ಅನಿವಾಸಿ ಭಾರತೀಯರಿಗೆ (ವಿದೇಶಿ) ಮಾತ್ರ www.sanmarga.com ವೆಬ್ ಸೈಟ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಅವರು ತಮ್ಮ ಹೆಸರು, ವಿದೇಶಿ ಮೊಬೈಲ್ ಸಂಖ್ಯೆ , ಹಾಲಿ ವಿದೇಶಿ ವಿಳಾಸ ಮತ್ತು ಈ ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಈ ಅವಕಾಶ ಕೇವಲ ಅನಿವಾಸಿ ಭಾರತೀಯರಿಗೆ ಮಾತ್ರವೇ ಇದ್ದು ದೇಶೀಯರು ವೆಬ್ ಸೈಟ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.
ಕಚೇರಿ ದೂರವಾಣಿ ಸಂಖ್ಯೆ 08242422786
ನನ್ನ ಮೊಬೈಲ್ ಸಂಖ್ಯೆ 09880096128
✒ *ಏ.ಕೆ. ಕುಕ್ಕಿಲ*
*ಸಂಪಾದಕ*