ಬ್ಯಾರಿ ಗೈಯ್ಸ್ ಕೆ.ಎಸ್.ಎ ಎರಡನೇ ವರ್ಷಾಚರಣೆಯ ಪ್ರಯುಕ್ತ ನಾಲ್ಕು ಬಡ ಕುಟುಂಬಗಳಿಗೆ ಮನೆಯ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ಮನೆಯನ್ನು ನಿರ್ಮಿಸಿಕೊಡಲಿರುವ ಕುಟುಂಬದ ಪರಿಚಯಗಳು.
*ಮೊದಲನೇ* *ಕುಟುಂಬದ* *ಪರಿಚಯ*
*ಅಬ್ದುಲ್* *ಹಮೀದ್*
ಮೂಡಬಿದ್ರೆ ಸಮೀಪದ ಪುಚ್ಚಮೊಗರು ಮಸೀದಿ ಬಳಿ ಗುಜರಿ ವ್ಯಾಪಾರ ಮಾಡಿ ವಾಸಿಸುತ್ತಿರುವ ಬಡ ವ್ಯಕ್ತಿ.ಐದು ಮಕ್ಕಳ ಪೈಕಿ ಮೂವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳೊಂದಿಗೆ ಮನೆಗೆ ಆಸರೆಯಾಗಿ ಪದೇ ಪದೇ ಕೈ ಕೊಡುತ್ತಿರುವ ಅನಾರೋಗ್ಯದ ನಡುವೆಯೂ ಜೀವಿಸುತ್ತಿರುವ ಹಮೀದ್ ರವರ ಮದುವೆ ಮಾಡಿಸಿಕೊಟ್ಟ ಮೊದಲ ಮಗಳ ಗಂಡನು ನಿಧನ ಹೊಂದಿದ್ದಾರೆ, ಆ ಮಗಳಿಗೂ,ಅವಳ ಮಗುವಿಗೂ ಆಸರೆ ಈಗ ಹಮೀದ್ ರವರಾಗಿದ್ದಾರೆ.ದ್ವಿತೀಯ ಮಗಳನ್ನು ಊರವರ ಸಹಕಾರದಿಂದ ಮದುವೆ ಮಾಡಿಸಿದ್ದು,ಇನ್ನೊಂದು ಮಗಳು ಮದುವೆಯ ಹೊಸ್ತಿಲಲ್ಲಿ ಬಂದು ನಿಂತಿದ್ದಾಳೆ.ಗಂಡು ಮಕ್ಕಳು ಸಣ್ಣವರಾದ ಕಾರಣದಿಂದ ಹಮೀದ್ ರವರಿಗೆ ತನ್ನ ಗುಜರಿ ವ್ಯಾಪಾರದಲ್ಲಿ ಸಿಗುವ ಸಣ್ಣ ಮೊತ್ತ ವರಮಾನವೇ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲಿರುವ ದಾರಿ.
ಅದಲ್ಲದೆ,
ಗಂಡನನ್ನು ಕಳೆದುಕೊಂಡ ಸಹೋದರಿ ಹಾಗೂ ಮೂವರು ಮಕ್ಕಳ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿಯು ಹಮೀದ್ ರವರ ಮೇಲಿರುವುದರಿಂದ ಅಸಹಾತಕತೆಯ ಜೀವನವನ್ನು ನಡೆಸುತ್ತಿದ್ದಾರೆ.
ಒಂದು ಕಡೆಯಿಂದ ಬಡತನದ ನೋವು,ಮತ್ತೊಂದು ಕಡೆಯಿಂದ ಪದೇ ಪದೇ ಕಾಡುವ ಅನಾರೋಗ್ಯ,ಇನ್ನೊಂದು ಕಡೆಯಿಂದ ವಯಸ್ಸಿಗೆ ಬಂದ ಮಗಳ ಮದುವೆಯ ಚಿಂತೆ..!!
ಒಬ್ಬ ಮನುಷ್ಯ ಹೈರಾಣಾಗಲು ಇನ್ನೇನು ಬೇಕು..? ನೆಮ್ಮದಿಯಿಂದ ಇರಲು ಸೂರಿಲ್ಲದೆ ಪರದಾಡುವ ಈ ಕುಟುಂಬದ ದಯನೀಯ ಅವಸ್ಥೆಗೆ ಸದಾ ಸಾಮುದಾಯಿಕ ಚಿಂತನೆಯನ್ನು ವ್ಯಕ್ತಪಡಿಸಿ, ಸಾವಿರಾರು ಅಸಹಾಯಕರ ಕಣ್ಣೀರುಗಳಿಗೆ ಸಾಂತ್ವನಿಯಾದ ಬ್ಯಾರಿ ಗೈಯ್ಸ್ ಕೆ.ಎಸ್.ಎ ತಂಡದ ಯಶಸ್ವೀ ಎರಡನೇ ವರ್ಷಾಚರಣೆಯ ಶುಭ ನಿಮಿಷದಲ್ಲಿ ಈ ಕುಟುಂಬದ ಕೈಗೆ ಮನೆಯೊಂದನ್ನು ಕಟ್ಟಿಸಿ, ಕೀಲಿ ಕೈ ಯನ್ನು ಹಸ್ತಾಂತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಇನ್ಶಾ ಅಲ್ಲಾ..
*ಎರಡನೇ* *ಕುಟುಂಬದ* *ಪರಿಚಯ*
*ಉಮೈಬಾ*
ಪುತ್ತೂರು ತಾಲ್ಲೂಕಿನ ಕಡಬ ಸಮೀಪದ ನೆಕ್ಕಿಲಾಡಿ ಗ್ರಾಮದ ಮರ್ದಾಳದಲ್ಲಿ ಕಡುಬಡತನದಲ್ಲಿ ವಾಸಿಸುವ ವಿಧವೆ.
ಪ್ರಸಕ್ತವಾಗಿ ವಾಸವಾಗಿರುವ ಜೋಪಡಿಯು ಸ್ಮಶಾನಕ್ಕೆ ಮೀಸಲಿರಿಸಿದ ಜಮೀನಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳ ನಿರಂತರವಾದ ಒತ್ತಡದ ಮುಂದೆ ಉಮೈದಾ ರವರು ಆಸರೆಯಿಲ್ಲದೆ ಕಣ್ಣೀರನ್ನು ಸುರಿಸುತ್ತಿದ್ದಾರೆ.
ವಯಸ್ಸಿಗೆ ಬಂದ ಇಬ್ಬರು ಅವಳಿ ಹೆಣ್ಣುಮಕ್ಕಳು ಹಾಗೂ ಹತ್ತರ ಹರೆಯದ ಮಗನೊಂದಿಗೆ ಜೀವಿಸುತ್ತಿರುವ ಉಮೈದಾರವರ ಪತಿ ಅನಾರೋಗ್ಯಕ್ಕೊಳಗಾಗಿ ಮರಣಹೊಂದಿ ವರ್ಷಗಳು ಏಳು ಕಳೆದವು.ಪತಿಯ ಅಗಲುವಿಕೆಯಿಂದ ಮನೆಯ ಜವಾಬ್ದಾರಿ, ಅನಾರೋಗ್ಯ ಪೀಡಿತ ಪತಿಯ ಅಜ್ಜಿಯ ಆರೈಕೆಯ ಜವಾಬ್ದಾರಿಯು ಉಮೈದಾರವರ ಮೇಲೆ ಬಿದ್ದವು.
ತನ್ನ ಮಗಳ ಹಾಗೂ ಮೊಮ್ಮಕ್ಕಳ ಕಷ್ಟದಾಯಕ ಪರಿಸ್ಥಿತಿಯನ್ನು ನೋಡಿ, ಉಮೈದಾರವರ ತಾಯಿ ನೆರೆಯ ಸಹೋದರ ಧರ್ಮದವರ ತೋಟ ಕೆಲಸಗಳಿಗೆ ಹೋಗಿ ಸಿಗುವ ಸಣ್ಣ ಮೊತ್ತದ ಸಂಬಳಗಳು ಮನೆಯ ದಿನನಿತ್ಯದ ಖರ್ಚಿಗೆ ಸಾಲದೇ ಹೋಗುವಾಗ, ಮಸೀದಿಯ ಲೆಟರ್ ಹಿಡಿದು ಉಮೈದಾರವರು ಉಳ್ಳವರ ಮುಂದೆ ಕೈ ಚಾಚಿದರೂ ಪರಿಣಾಮ ಮಾತ್ರ ಶೂನ್ಯ.
ಈ ಕುಟುಂಬದ ಕಷ್ಟದಾಯಕ ಪರಿಸ್ಥಿತಿಗಳನ್ನು ಅರ್ಥೈಸಿದ ಬ್ಯಾರಿ ಗೈಯ್ಸ್ ಕೆ.ಎಸ್.ಎ ತಂಡವು ತನ್ನ ಎರಡನೇ ವರ್ಷಾಚರಣೆಯ ಪ್ರಯುಕ್ತ ,ನಾಲ್ಕು ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಿ ಕೊಡುವ ಯೋಜನೆಯಲ್ಲಿ ಎರಡನೇ ಮನೆಯನ್ನಾಗಿ ಈ ಕುಟುಂಬವನ್ನು ಆಯ್ದುಕೊಳ್ಳಲಾಗಿದೆ.
ಸರ್ವಶಕ್ತನು ನಮ್ಮ ಉದ್ದೇಶಗಳನ್ನು ಯಶಸ್ವಿಯಾಗಿ ಪೂರ್ತಿಯಾಗಿಸಿಕೊಡಲಿ ಅನ್ನುವ ಪ್ರಾರ್ಥನೆಯೊಂದಿಗೆ..
*ಮೂರನೇ* *ಕುಟುಂಬದ* *ಪರಿಚಯ*
*ಉಸ್ಮಾನ್*
ತೋಡಾರ್ ಜಮಾಅತಿಗೊಳಪಟ್ಟ ಮಿಜಾರ್ ಪರಿಸರದಲ್ಲಿ ವಯಸ್ಸಿಗೆ ಬಂದ ಹೆಣ್ಣು ಹಾಗೂ ಮೂರು ಸಣ್ಣ, ಸಣ್ಣ ಗಂಡುಮಕ್ಕಳೊಂದಿಗೆ ವಾಸಿಸುತ್ತಿರುವ ಬಡ ಕುಟುಂಬ.
ಬಡತನ ತನ್ನನ್ನು ಪರೀಕ್ಷಿಸುತ್ತಿರುವಾಗಲೂ ಸ್ವಾಭಿಮಾನ ಬಿಟ್ಟು ಜೀವಿಸದೆ ಕೂಲಿ ಕೆಲಸಕ್ಕೆ ಹೋಗಿ ಜೀವನವನ್ನು ನಡೆಸುತ್ತಿದ್ದರು.ವಿಧಿಯ ಲೀಲೆಯೋ..? ಏನೋ ? ಎಂದರಿಯದೆ ಅದೊಂದು ದಿನ ಮಾರ್ಬಲನ್ನು ತುಂಬಿಸುತ್ತಿರುವಾಗ ಕೈ ಜಾರಿ ಬಿದ್ದ ಮಾರ್ಬಲೊಂದು ಅವರ ಬದುಕಿನೊಂದಿಗೆ, ಕುಟುಂಬದ ಆಧಾರವನ್ನೇ ದುಸ್ತರಗೊಳಿಸಿತು.ಕಾಲಿಗೆ ರಾಡ್ ಹಾಕಿದ ಉಸ್ಮಾನ್ ರವರಿಗೆ ನಡೆದಾಡಲು ಅಸಾಧ್ಯವಾಗುವುದರ ಜತೆಗೆ ಒಂದು ವರ್ಷಗಳ ಕಾಲ ಕಾಲನ್ನು ನೆಲಕ್ಕೆ ಊರಬಾರದು ಅನ್ನುವ ವೈದ್ಯರ ಎಚ್ಚರಿಕೆಯು ಅವರ ಕುಟುಂಬವನ್ನು ಕಂಗಾಳಾಗಿಸಿತು.
ಒಂದು ಕಡೆಯಲ್ಲಿ ಒಪ್ಪೊತ್ತಿನ ಊಟಕ್ಕೆ ಪರದಾಡುತ್ತಿರುವಾಗ, ಮತ್ತೊಂದು ಕಡೆ ಮೂರು ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಅಸಾಧ್ಯವಾದಂತಹ ಪರಿಸ್ಥಿತಿ.ಅವರ ಪತ್ನಿ ಮನೆ ಮನೆಗೆ ಹೋಗಿ ಮಾಡುವ ಕೆಲಸಕ್ಕೆ ಸಿಗುವ ಸಣ್ಣ ಮೊತ್ತವು ಯಾವುದಕ್ಕೂ ಸಾಲದಂತಿದೆ.ಕಳೆದ ನಾಲ್ಕು ವರ್ಷಗಳಿಂದ ಊರಿನವರ ಸಹಕಾರದಿಂದ ನೀಡಿದ ಮನೆಯಲ್ಲಿ ಇಷ್ಟು ದಿನಗಳ ಕಾಲ ಚಿಮಣಿಯ ಬೆಳಕಿನಿಂದ ಬೀಳುವ ಪರಿಸ್ಥಿತಿಯಲ್ಲಿದ್ದ ಮನೆಯಲ್ಲಿ ದಿನಕಳೆದ ಇವರು ಪ್ರಸಕ್ತವಾಗಿ ಬೇರೇಯೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಇದ್ದುದರಲ್ಲಿ ತೃಪ್ತಿ ಪಟ್ಟು ಜೀವಿಸುತ್ತಿರುವಾಗ ತನ್ನ ಜೀವನವನ್ನೇ ಬದಲಾಯಿಸಿದ ಆ ಘಟನೆಯ ನಂತರ ಮನೆಯ ಬಾಡಿಗೆಯನ್ನು ಸಹ ನೀಡಲು ಸಾಧ್ಯವಾಗದಂತಹ ಯಾತನಾಜನಕವಾದ ಪರಿಸ್ಥಿತಿಯಲ್ಲಿ ಆ ಕುಟುಂಬ ನರಳಾಡುತ್ತಿದೆ.ಒಂದು ಕಡೆ ಮನೆಯನ್ನು ಖಾಲಿ ಮಾಡಬೇಕೆಂದು ಒತ್ತಡ ಹಾಕುವಾಗ ದಿಕ್ಕು ಕಾಣದಂತೆ, ಅಸಹಾಯಕ ನೋಟ ಬೀರುತ್ತಿರುವಾಗ ಕುಟುಂಬದ ಅಸಹಾಯಕತೆಗೆ, ಆಸರೆಯಾಗಿ ಬ್ಯಾರಿ ಗೈಯ್ಸ್ ಕೆ.ಎಸ್.ಎ ತಂಡವು ನಿಂತಿದೆ.ತನ್ನ ಎರಡನೇ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಹಮ್ಮಿಕೊಂಡ ಜೀವ ಕಾರುಣ್ಯ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡುವ ಮೂರನೇ ಕುಟುಂಬವನ್ನಾಗಿ ಇವರನ್ನು ಆಯ್ದುಕೊಂಡಿರುತ್ತೇವೆ.
ನಮ್ಮ ಉದ್ದೇಶಗಳು ಯಶಸ್ವಿಯಾಗಿ ಮುನ್ನೇರಲಿ ಅನ್ನುವ ಪ್ರಾರ್ಥನೆಯೊಂದಿಗೆ..
*ನಾಲ್ಕನೆಯ* *ಕುಟುಂಬದ* *ಪರಿಚಯ*
*ದುಲೈಖ*
ಬಂಟ್ವಾಳ ತಾಲ್ಲೂಕಿನ ಮೂಲರಪಟ್ನ ನಿವಾಸಿ.
ಹದಿನೆಂಟು ವರ್ಷಗಳ ಹಿಂದೆ ಐದು ಮಂದಿ ಹೆಣ್ಣು ಮಕ್ಕಳು ಒಬ್ಬ ಗಂಡು ಮಗುವನ್ನು ಬಿಟ್ಟು ಪತಿ ಕಣ್ಮರೆಯಾದಾಗ ದುಲೈಖರ ಕನಸುಗಳೆಲ್ಲಾ ಮರೀಚಿಕೆಯಾಗತೊಡಗಿದವು.
ಬದುಕಿನ ಹಾದಿಯಲ್ಲಿ ಬಂದೊದಗುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದ ದುಲೈಖಾರವರ ಹಿರಿಯ ಮಗಳನ್ನು ದಾನಿಗಳ ನೆರವಿನಿಂದ ಮದುವೆ ಮಾಡಿಸಿ ಕೊಡುವಾಗ, ಉಳಿದ ವಯಸ್ಸಿಗೆ ಬಂದ ನಾಲ್ಕು ಹೆಣ್ಣು ಮಕ್ಕಳ ಸ್ಥಿತಿಯನ್ನು ಚಿಂತಿಸಿ ಅಸಹಾಯಕತೆಯ ನೋಟ ಬೀರುತ್ತಿದ್ದಾರೆ.
ಇರುವ ಸೂರೊಂದು ಎರಡು ವರ್ಷಗಳ ಹಿಂದೆ ಧರೆಗೆ ಅಪ್ಪಳಿಸಿದಾಗ, ಇರುವ ಮಗನೊಬ್ಬನ ದುಡಿಮೆಯಿಂದ ಜೀವನ ಸಾಗಿಸುವ ಇವರಿಗೆ ಮುಂದಿನ ದಾರಿ ಕಾಣಲೇ ಇಲ್ಲ.
ಸಂಬಂಧಿಕರ ಜೋಪಡಿಯೊಂದರಲ್ಲಿ ದಿನದೂಡುತ್ತಿರುವ ಈ ಕುಟುಂಬದ ಯಾತನಾಜನಕ ಬದುಕಿಗೆ ಬೆಳಕಾಗಿ ಬ್ಯಾರಿ ಗೈಯ್ಸ್ ಕೆ.ಎಸ್.ಎ ತಂಡವು ಮುಂದೆ ಬಂದಿದೆ.
ತನ್ನ ಯಶಸ್ವೀ ಎರಡನೇ ವರ್ಷಾಚರಣೆಯ ಶುಭ ನಿಮಿಷದಲ್ಲಿ ಮನೆ ಹಸ್ತಾಂತರಿಸುವ ನಾಲ್ಕನೇ ಕುಟುಂಬವನ್ನಾಗಿ ಈ ಕುಟುಂಬವನ್ನು ಆಯ್ದುಕೊಂಡು ಅಸಹಾಯಕತೆಯ ನೋಟ ಬೀರುವ ಕಣ್ಣುಗಳಲ್ಲಿ, ಸಾಂತ್ವನದ ನೋಟವನ್ನು ಹರಿಸಲು ಬ್ಯಾರಿ ಗೈಯ್ಸ್ ಕೆ.ಎಸ್.ಎ ತಂಡವು ಮುಂದಡಿಯಿಟ್ಟಿದೆ ಇನ್ಶಾ ಅಲ್ಲಾ...
ನವ ನವೀನ ತಂತ್ರಜ್ಞಾನಗಳು ಆಧುನಿಕ ಜೀವನವನ್ನು ಅಡಿಮೇಲುಗೊಳಿಸುವ ವಿಷಾಧಕರವಾದ ಸನ್ನಿವೇಶದಲ್ಲಿ,
ಇಪ್ಪತ್ತೊಂದನೆಯ ಶತಮಾನದ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಮನುಷ್ಯರನ್ನು ಕೆಡುಕಿನತ್ತ ಆಕರ್ಷಣೆಗೊಳಿಸುತ್ತಾ,ಸಾಮಾಜಿಕ ತಾಣಗಳನ್ನು ಪರನಿಂದನೆ,ವ್ಯಕ್ತಿ ತೇಜೋವಧೆಗಳಿಗೆ ಮೀಸಲಿರಿಸಿ, ಸಮಾಜದ ಅನೈಕ್ಯತೆಗೆ ಕಾರಣರಾಗುತ್ತಿರುವ ಯುವ ಸಮೂಹದ ನಡುವೆಯೂ ಬೆರಳಣಿಕೆಯ ಯುವಕರ ಸಮಾಜಮುಖಿ,ಮಾನವೀಯ ಕಳಕಳಿಯ ಚಿಂತನೆಯೊಂದು ಸದ್ದಿಲ್ಲದೆ ಜನ್ಮತಾಳಿ,ಸಮುದಾಯದ ನಡುವೆ ಹೆಮ್ಮರವಾಗಿ ಬೆಳೆದು ತನ್ನ ಪ್ರಥಮ ವರ್ಷಾಚರಣೆಯ ಸುದಿನದಲ್ಲಿ ಅಸಹಾಯಕ ಕುಟುಂಬವೊಂದಕ್ಕೆ ಆಸರೆಯಾಗಿ,ಸುಸಜ್ಜಿತವಾದ ಸೂರೊಂದನ್ನು ನಿರ್ಮಿಸಿಕೊಟ್ಟು, ಅದಲ್ಲದೆ ಹಲವಾರು ಜೀವಕಾರುಣ್ಯ ಸೇವೆಯೊಂದಿಗೆ ಸಮಾಜದ ನಡುವೆ ಗುರುತಿಸುವ *ಬ್ಯಾರಿ* *ಗೈಯ್ಸ್* *ಕೆ.ಎಸ್.ಎ* ತಂಡವು ಯಶಸ್ವೀ ಎರಡನೇ ವರ್ಷಾಚರಣೆಯ ಸುದಿನದಲ್ಲಿರುವಾಗ ಮೇಲೆ ತಿಳಿಸಿದ ನಾಲ್ಕು ಅಸಹಾಯಕ ಕುಟುಂಬಗಳಿಗೆ ವಾಸಿಸಲು ಯೋಗ್ಯವಾದ ಸೂರನ್ನು ನಿರ್ಮಿಸಿ, ದ್ವಿತೀಯ ವರ್ಷಾಚರಣೆಯ ಸುದಿನದಲ್ಲಿ ಮನೆ ಕೀ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಇನ್ಶಾ ಅಲ್ಲಾ..
ನಮ್ಮ ಉದ್ದೇಶಗಳು ಯಾವುದೇ ತೊಡಕಿಲ್ಲದೆ ನೆರವೇರುವಂತಾಗಲಿ ಅನ್ನುವ ಪ್ರಾರ್ಥನೆಯೊಂದಿಗೆ,
ನಮ್ಮ ಪ್ರಯತ್ನ ದ ಹಿಂದಿನ ಯಶಸ್ವಿಯ ರೂವಾರಿಗಳು ನಮ್ಮ ಸದಸ್ಯರಾಗಿದ್ದಾರೆ.ಇನ್ನು ಮುಂದೆಯೂ ನಿಮ್ಮ ಸಹಕಾರ,ಸಹಾಯದ ನಿರೀಕ್ಷೆಯೊಂದಿಗೆ...
ಬ್ಯಾರಿ ಗೈಯ್ಸ್ ಕೆ.ಎಸ್.ಎ