ಶನಿವಾರ, ಜೂನ್ 11, 2016

ರಂಝಾನ್ ಕಿಟ್

ಕಿಟ್ ಸಂಗ್ರಹಕ್ಕೆ ಇಂದು ಕೊನೆಯ  ದಿನ !!

ಅದು ಶಅಬಾನ್ ಕೊನೆ ದಿನ ತಲುಪಲೇಬೇಕು.

" ನಾನು ಹಸಿದಿದ್ದೆ ನೀನು ನನಗ್ಯಾಕೆ ಉಣಿಸಲಿಲ್ಲ" ಇದು ಪರಲೋಕದಲ್ಲಿ ಮಾನವರೊಂದಿಗೆ ಅಲ್ಲಾಹನು ಕೇಳುವ ಪ್ರಶ್ನೆ. ಆಗ ಮಾನವ ಕೇಳುತ್ತಾನೆ, ಓ ಪ್ರಭು,  ನೀನು ಅನ್ನದಾತ , ನಾನಿನಗೆ ಹೇಗೆ ಉಣಿಸಲಿ. ಆಗ ಅಲ್ಲಾಹನು, ನನ್ನ ಇಂತಿಂತಹ ದಾಸ ಹಸಿವಿನಿಂದಿದ್ದ ಅವನಿಗೆ ನೀ ಉಣಿಸಿದ್ದರೆ ಅದು ನನಗೆ ಉಣಿಸಿದಂತಾಗುತ್ತಿತ್ತು" ಎನ್ನುವನು.(ಬುಖಾರಿ, ಮುಸ್ಲಿಮ್)

ಬಡವರಿಗೆ ನೀಡುವ ಆಹಾರ ಅದು ಅಲ್ಲಾಹನಿಗೆ ನೀಡಿದಂತೆ.

"ಯುನಿವೆಫ್ " ಕರ್ನಾಟಕ ಪ್ರತಿ ವರ್ಷ ದ.ಕ. ಜಿಲ್ಲೆಯ  ಸಮುದಾಯದ ಕಡುಬಡವರಿಗೆ ರಮಝಾನ್ ಒಂದು ತಿಂಗಳ "ಆಹಾರ ಸಾಮಾಗ್ರಿ" (ರಮಝಾನ್  ಕಿಟ್)  ಅವರ ಮನೆಬಾಗಿಳಿಲಿಗೆ ತಲುಪಿಸಿತ್ತಾ ಬಂದಿದೆ.
ಈ ವರ್ಷವೂ ಅದು  ಮುಂದುವರಿಸಲು ತೀರ್ಮಾನಿಸಿದೆ.
ಸಮುದಾಯದ ಸ್ಥಿತಿ ವಂತರು ಉದಾರಿಗಳು ಹಾಗು ಹಿತಚಿಂತಕರ ಆರ್ಥಿಕ ಸಹಕಾರ ಹಾಗು ಸಹಾಯದಿಂದ ಸುಮಾರು 400 ಕಡು ಬಡ ಕುಟುಂಬಗಳಿಗೆ ಇದು ತಲುಪುತ್ತದೆ. ಇ.ಅ.
ಈ ವರ್ಷ ಒಂದು ಕಿಟ್ ಗೆ 1000 ರೂ. ನಿಗದಿಪಡಿಸಿದ್ದೇವೆ.
ನಮ್ಮೊಂದಿಗೆ ಈ ಮುಂಚೆ ಸಹಕರಿಸಿದ ಹಾಗು ಇತರೆಲ್ಲ ಸಮುದಾಯದ ಹಿತೈಷಿಗಳಲ್ಲಿ , ಕನಿಷ್ಠ ಒಬ್ಬರು ಒಂದು ಕಿಟ್ , ದಾನ ಮಾಡಬೇಕಾಗಿ ವಿನಂತಿ.

ಕಿಟ್ ನೀಡಲಿಚ್ಚಿಸುವವರು ನಮ್ಮ ಸಂಚಾಲಕರನ್ನು ಸಂಪರ್ಕಿಸ ಬಹುದು.
ಕಿಟ್ ನೀಡುವ ಸಂದರ್ಭದಲ್ಲಿ ನೀವೂ ನಮ್ಮ ಜತೆ ಬರಬಹುದು. ಸಮುದಾಯದ ಬಡಜನರ ವ್ಯಥೆಯನ್ನು ಕಣ್ಣಾರೆ ಕಾಣಬಹುದು.

ದಾನ ಮಾಡಿರಿ ಮಂದಹಾಸ ಮರಳಿಸಿರಿ

ಹನೀಫ್ ಕುದ್ರೋಳಿ
ಸಂಚಾಲಕರು, 
ಸಮಾಜ ಸೇವಾ ವಿಭಾಗ
ಯುನಿವೆಫ್ ಕರ್ನಾಟಕ
98453 28090

ಮುಹಮ್ಮದ್ ಸೈಫುದ್ದೀನ್
ಜಿಲ್ಲಾಧ್ಯಕ್ಷರು
"ಯುನಿವೆಫ್" ಕರ್ನಾಟಕ
99459 13824

ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ
ರಫೀಉದ್ದೀನ್ ಕುದ್ರೋಳಿ
ಅಧ್ಯಕ್ಷರು
ಯುನಿವೆಫ್ ಕರ್ನಾಟಕ
9845209449.
rafeeuddin.90@gmail.com.