ವಿದ್ಯೆ ಕಲಿತವರು ವಿನಯವಂತರಾಗಬೇಕಿತ್ತು,
ಆದರೆ ಹಾಗಾಗಲಿಲ್ಲಾ.
ಹಣವಂತರು ದಾನಿಗಳಾಗಬೇಕಿತ್ತು
ಆದರೆ ಹಾಗಾಗಲಿಲ್ಲಾ .
ಜನರು ಒಬ್ಬ ಗುರು ಮಾರ್ಗದರ್ಶನದಲ್ಲಿ ಹೋಗಬೇಕಿತ್ತು,
ಆದರೆ ಹಾಗಾಗಲಿಲ್ಲಾ .
ಮತ್ತೆಲ್ಲಿ ಪ್ರಭುದ್ಧ ಭಾರತದ ಕನಸು ಮಿತ್ರರೇ?
ಹಿಂದೆ ಒಬ್ಬ ಗುರುವಿರಲಿ ಮುಂದೆ ಒಂದು ಗುರಿ ಇರಲಿ, ನಡುವೆ ನೀವು ದಾರಿ ತಪ್ಪುವುದಿಲ್ಲಾ.
ನಿಂಬೆ ಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡುವಿರಿ.
ಸೊಪ್ಪು ಮಾರುವ ಅಜ್ಜನ ಬಳಿ ಕೊಸರಾಡುವಿರಿ.
ಕಡಲೆ ಕಾಯಿ ಮಾರುವವನ ಹತ್ತಿರ ಜಗಳವಾಡುವಿರಿ.
ಹಣ್ಣು ಮಾರುವವನತ್ತಿರ ಪೌರುಷ ತೋರುವಿರಿ.
ಹೂ ಮಾರುವವಳ ಹತ್ತಿರ ನಿಮ್ಮೆಲ್ಲಾ ಜಿಪುಣತನ ತೋರುವಿರಿ.
ಆದರೆ ಸೀರೆ ಅಂಗಡಿಗೆ ಹೋದರೆ ಕಡಿಮೆ ಬೆಲೆಯ ಸೀರೆಗಳನ್ನು ನೋಡುವುದಿಲ್ಲಾ.
ಚಿನ್ನದ ಅಂಗಡಿಗೆ ಹೋದರೆ ಕೇಳಿದ ಹಣ ಕೊಟ್ಟು ಬರುವಿರಿ.
ಅದೂ ಲಕ್ಷ ಲಕ್ಷ ರೂಪಾಯಿ.
ಹೊಟಲ್ ಗಳಿಗೆ ಹೋದರೆ ಬಿಲ್ ಜೊತೆಗೆ ಟಿಪ್ಸ್ ಬೇರೆ.
ಗೊತ್ತೆ ನಿಮಗೆ ಭತ್ತ ಬೆಳೆಯಲು ಎಷ್ಟು ದಿನ ಬೇಕೆಂದು?
ಗೊತ್ತೇ ನಿಮಗೆ ಅದು ಫಸಲಾಗಲು ಎಷ್ಟು ಜನರು
ಶ್ರಮಪಡಬೇಕೆಂದು?
ಗೊತ್ತೆ ನಿಮಗೆ ಅದಕ್ಕೆ ತಗಲುವ ಖರ್ಚು ಎಷ್ಟೆಂದು?
ಗೊತ್ತೆ ನಿಮಗೆ ಒಂದು ಕೆಜಿ ಅಕ್ಕಿ ಬೆಳೆಯಲು ಬೇಕಾಗುವ ನೀರು ಎಷ್ಟೆಂದು?
ಗೊತ್ತೆ ನಿಮಗೆ ಅದರ ಕಟಾವಿಗೆ ಸುರಿಯುವ ಬೆವರು ಎಷ್ಟೆಂದು.
ಗೊತ್ತೆ ನಿಮಗೆ ಅದರ ಸಾಗಾಣಿಕೆಯ ಕರ್ಮಕಾಂಡ.
ಗೊತ್ತೆ ನಿಮಗೆ ಇಷ್ಟಾದರೂ ಅದಕ್ಕೆ ಸಿಗುವ ಪ್ರತಿಫಲದ ನೋವು?
ನಿಮ್ಮ ಮನೆಯಲ್ಲಿ ಬೇಯುವ ಅನ್ನ Computer ನಲ್ಲಿ ತಯಾರಿಸಿದ್ಧಲ್ಲ.
ನೀವು ತಿನ್ನುವ ತಿಂಡಿ Internet ನಲ್ಲಿ ಬೆಳೆದದ್ದಲ್ಲ.
ಅದು ರೈತರ ಬೆವರ ಹನಿಗಳಿಂದ ಬಸಿದದ್ದು.
ತಾಕತಿದ್ದರೆ ಪಿಜ್ಜಾ ಬರ್ಗರ್ ಗಳಲ್ಲಿ
ಚೌಕಾಸಿ ಮಾಡಿ.
ದೈರ್ಯ ವಿದ್ಧರೆ ಶಾಪಿಂಗ್ ಮಾಲ್ ಗಳಲ್ಲಿ ಕೊಸರಾಡಿ.
ಶಕ್ತಿಯಿದ್ಧರೆ Multplex theatre ಗಳ ಕೌಂಟರ್ ಗಳಲ್ಲಿ ಜಗಳವಾಡಿ.
ಕ್ಷಮಿಸಿ ಇದು ಯಾರ ವಿರುದ್ಧದ ದ್ವೇಷವು ಅಲ್ಲ.
ನಿಮ್ಮ ಮನಸ್ಸಿನ ಜಾಗೃತಿಗಾಗಿ.
ನಿಮ್ಮ ಗಮನ ರೈತರ ಕಡೆ ಸೆಳಯಲು.
ರೈತರ ಶ್ರಮವನ್ನು ನೆನಪಿಗೆ ತರಲು.
ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ, ಪ್ರಬುದ್ಧ ರಾಜ್ಯ, ಪ್ರಬುದ್ಧ ಭಾರತ.!!!!!!!!!!
ಯೋಚಿಸಿ ತೀರ್ಮಾನಿಸಿ.....⏰ ಕಾಲ ಎಲ್ಲರಿಗೂ ನೋವು ಕೊಟ್ಟೇ ಕೊಡುತ್ತದೆ
ಏಕೆಂದರೆ ಗಡಿಯಾರದಲ್ಲಿ ಇರೋದು ಮುಳ್ಳುಗಳು'
ಹೂವುಗಳಲ್ಲ ನೆನಪಿರಲಿ⏰🌵