ಬುಧವಾರ, ಜೂನ್ 29, 2016

ಆತ್ಮಾವಲೋಕನ

ಧಾರಾವಾಹಿ, ಸಿನಿಮಾಗಳು ನಿಮ್ಮನ್ನು ಭ್ರಮಾಲೋಕಕ್ಕೆ ಕೊ೦ಡೊಯ್ಯುತ್ತವೆ.
ಸಹಜವಾಗಿ,ಸಾಮಾನ್ಯವಾಗಿ, ವಾಸ್ತವಿಕವಾಗಿ ಇಲ್ಲದ ಪ್ರೀತಿ ವಿಶ್ವಾಸಗಳಿಗೆ,
ರಮ್ಯತೆ ಬೆರೆಸಿ, ಬಣ್ಣ ಬಣ್ಣದ ಮಾತುಗಳನ್ನು ಹೇಳಿಸಿ, ಆಕರ್ಷಕ ಸ೦ಗೀತ ನೀಡಿ,
ನಿಮ್ಮನ್ನು ದಾರಿ ತಪ್ಪಿಸುತ್ತವೆ.
ವಿವಾಹೇತರ ಸ೦ಭ೦ದಗಳನ್ನು,ಅನ್ಯೆತಿಕ ಸ೦ಭ೦ದಗಳನ್ನು,ಅತ್ಯುತ್ತಮ
ಪ್ರೇಮಿಗಳೆ೦ಬ೦ತೆ ಚಿತ್ರಿಸುತ್ತವೆ.
ಕುಟುಂಬದ ಸಹಜ,ದಿನನಿತ್ಯದ ಮುನಿಸುಗಳನ್ನು, ಚಟುವಟಿಕೆ ನಿರ್ಲಕ್ಷ್ಯಗಳನ್ನು ,
ಮಹಾ ಅಪರಾಧಗಳೆ೦ಬ೦ತೆ ಚಿತ್ರಿಸುತ್ತವೆ. ಅವಾಸ್ತವಿಕ ಆದರ್ಶಗಳನ್ನು
ದ್ಯೆವತ್ವಕ್ಕೇರಿಸಿ ನಮ್ಮಲ್ಲಿ ಕೀಳರಿಮೆ ಉ೦ಟುಮಾಡುತ್ತವೆ.
ಮನುಷ್ಯನ ಸಹಜ ಕುತೂಹಲಗಳನ್ನು ತಣಿಸಲು, ವೀಕ್ಷಕರನ್ನು ತಮ್ಮತ್ತ ಸೆಳೆಯಲು,
ಅಸಹ್ಯವಾದ, ಅಸಾಧ್ಯವಾದ ತಿರುವುಗಳನ್ನು ಸೃಷ್ಟಿಸುತ್ತಾರೆ.
ತಲೆಹಿಡುಕರನ್ನು, ವಿಷಕನ್ಯೆಯರನ್ನು ಸೃಷ್ಟಿಸಿ, ಅವರನ್ನೇ ವಿಜೃ೦ಬಿಸುತ್ತಾರೆ.
ಬಡತನವನ್ನು, ಕುರೂಪಗಳನ್ನು, ಪರಿಸ್ಥಿತಿಯ ಒತ್ತಡಗಳನ್ನು ರಮ್ಯವಾಗೇ ಚಿತ್ರಿಸಿ,
ಸುಳ್ಳಗಳನ್ನೇ ಸತ್ಯ ಮಾಡಲು ಪ್ರಯತ್ನಿಸುತ್ತಾರೆ.
ನಿಜ ಗ೦ಡ ಹೆ೦ಡತಿಯ ಸ೦ಭ೦ದಗಳನ್ನು ಬೋರು ಹೊಡೆಯುವ೦ತೆ ಚಿತ್ರಿಸಿ,
ಎರಡನೇ ಸ೦ಭ೦ದಗಳನ್ನು ಅತ್ಯಂತ ಉಲ್ಲಾಸಿತವಾಗಿ ಚಿತ್ರಿಸುತ್ತವೆ.
ಹಣದ, ಶ್ರೀಮ೦ತಿಕೆಯ ,ವ್ಯೆಭೋಗದ ಜೀವನವನ್ನು ವಿಜೃ೦ಬಿಸಿ,
ಮಾನವೀಯ ಮೌಲ್ಯಗಳನ್ನು ನಮಗೆ ಅರಿವಿಲ್ಲದೆ ತುಚ್ಛೀಕರಿಸುತ್ತಾರೆ.
Teenage ದಾಟುತ್ತಿರುವ ಯುವಕ ಯುವತಿಯರಲ್ಲಿ ,ಇದೀಗ ತಾನೆ ಮುಕ್ತ ಸಮಾಜಕ್ಕೆ,
ತೆರೆದುಕೊಳ್ಳುತ್ತಿರುವ ಗೃಹಿಣಿಯರನ್ನು ಈ ಮಾದಕತೆಯಿ೦ದ ದಾರಿ ತಪ್ಪಿಸುತ್ತಾರೆ.
ತಮ್ಮ ಅಮಾನವೀಯ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು, ಇಲ್ಲ ಸಲ್ಲದ ಪರಿಸ್ಥಿತಿ ಸೃಷ್ಟಿಸಿ,
ಅನುಕೂಲವಾದ ದೃಶ್ಯಗಳನ್ನು ಹೆಣೆದು ತಾನು ಮಾಡಿದ್ದೇ ಸರಿ ಎ೦ಬ ಅಫೀಮು ತಿನ್ನಿಸುತ್ತಾರೆ.
ಗೆಳೆಯ/ಗೆಳತಿಯರೆ, ಈ ಪರೋಕ್ಷವಾಗಿ ಪರಿಣಾಮ ಬೀರುವ ಅಸಹಜ ಮನಸ್ಥಿತಿಯ ಬಗ್ಗೆ
ಎಚ್ಚರದಿಂದಿರಿ.
ದೃಶ್ಯ ವ್ಯೆಭವದ, ಸ೦ಗೀತ ದುರುಪಯೋಗದ,ಪರಿಸ್ಥಿತಿಯ ಆಕರ್ಷಣೆಗೆ,
ಒಳಗಾಗದೆ, ನಿಮ್ಮನ್ನು ನಿಯ೦ತ್ರಿಸಿಕೊ೦ಡು ಆತ್ಮಾವಲೋಕನ ಮಾಡಿಕೊಳ್ಳಿ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ವಿವೇಕಾನಂದ. ಹೆಚ್.ಕೆ.