ಶನಿವಾರ, ಜೂನ್ 11, 2016

ಸುನ್ನೀಟುಡೇ

ಹಸಿವು ನೀಗಿಸಲು ವೇಶ್ಯಾವೃತ್ತಿ    ಮಾಡುವ ಸಹೋದರಿಯ  
ಕಣ್ಣೀರು ನಮಗೆ ಶಾಪವಾಗಿದೆ:- ಕೂರ್ನಡ್ಕ ಖತೀಬ್


ಹಸಿವು ಮತ್ತು ಬಡತನದಿಂದ ವೇಶ್ಯಾವೃತ್ತಿಗೆ ಇಳಿಯುವ ಸಹೋದರಿ ಇರುವ ಸಮುದಾಯದ ಶ್ರೀಮಂತಿಕೆ ಮತ್ತು ಪ್ರತಿಷ್ಟೆ ಭೂಲೋಕದಲ್ಲಿ ಅಪಮಾನವು, ಪರಲೋಕದಲ್ಲಿ ವಿನಾಶವೂ ಆಗಿದೆ ಎಂದು ಕೂರ್ನಡ್ಕ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು. ಅವರಿಂದು ಜುಮ್ಮಾ ಭಾಷಣದಲ್ಲಿ ಮಾತನಾಡುತ್ತಾ ಹಸಿವು ತುಂಬಿದ ಸಂಸಾರವನ್ನು ದಾಟಿ ಮಸೀದಿಯ ನಮಾಜ್ ಗಾಗಿ ಆಗಮಿಸುವ ಮೂಲಕ ಅಲ್ಲಾಹನ  ತೃಪ್ತಿ ತಲುಪಬಹುದು ಎಂದು ಭಾವಿಸಬೇಡಿ.ಕುಟುಂಬ ಮತ್ತು ಸಮುದಾಯದ ಸ್ಥಿತಿಯ ಬಗ್ಗೆ ಪ್ರಜ್ನೆ ಇಲ್ಲದವರು ಅಲ್ಲಾಹನ ಮುಂದೆ ವಂಚಕರಾಗಿದ್ದಾರೆ ಎಂದರು.

ತನ್ನ ಕುಟುಂಬದಲ್ಲಿ ಮುರಿದು ಬಿದ್ದ ಮನೆಯಲ್ಲಿ ವಾಸಿಸುವ ತನ್ನವರನ್ನು ಮರೆತು ಮಸೀದಿಗೆ ನೀಡುವ ಲಕ್ಷ ಸಂಬಾವನೆ. ತಾಯಿ ಮತ್ತು ಸಹೋದರನ ಸೇವೆ ಮಾಡದೆ ಉಲೆಮಾಗಳ ಸೇವೆ ಮಾಡುವುದು, ಐಷಾರಾಮಿ ಕಾರಿನಲ್ಲಿ ಮಸೀದಿಗೆ ನಮಾಜ್ ಗಾಗಿ ಸಮಯಕ್ಕೆ ಸರಿಯಾಗಿ ಬಂದು ಸಮೀಪದಲ್ಲೇ ಇರುವ ಆಸ್ಪತ್ರೆಯಲ್ಲಿ ನರಳುತ್ತಿರುವ ರೋಗಿಯನ್ನು ಕಡೆಗಣಿಸುವುದು ಈಮಾನಿನ ವಿರುದ್ದವಾಗಿದೆ ಎಂದ ಖತೀಬರು ಒಂದು ಹಜ್ಜ್ ಮತ್ತು ಉಮ್ರಾ ಖಡ್ಡಾಯವಾಗಿದೆ ಎರಡನೇ ಬಾರಿ ಹೋಗುವ ಮೊದಲು ಸಮುದಾಯದ ಅನಾಥರ-ನಿರ್ಗತಿಕರ-ನೊಂದವರ ಬಗ್ಗೆ ಆಲೋಚಿಸಿ ಅವರಿಗೆ ನೆರವಾಗಿ, ಅಲ್ಲಾಹನು ಉದ್ದೇಶಿಸಿದರೆ ಹಜ್ಜ್ ಮಾಡಿದ ಪ್ರತಿಫಲ ಸಿಗಬಹುದು ಎಂದರು.

ಹುಕೂಕಲ್ಲಾಹ್ ಅಂದರೆ ಅಲ್ಲಾಹನ ಭಾಗದಲ್ಲಿ ಮಾಡುವ ಕರ್ಮಗಳಾಗಿದೆ. ನಮಾಜ್, ಉಪವಾಸ, ದ್ಸಿಕ್ರ್ ಇವುಗಳಲ್ಲಿ ಲೋಪವಾದರೆ ಪ್ರಾಯಶ್ಚಿತವಿದೆ ಆದರೆ ಹುಕೂಕುಲ್ ಇಬಾದ್ ಇದು  ಅಲ್ಲಾಹನ ಭಾಗದಿಂದ ನಮ್ಮ ಮೇಲೆ ಅತ್ಯಂತ ದೊಡ್ಡ ಜವಾಬ್ದಾರಿಯಾಗಿದೆ ಇದರ ನಿರ್ವಹಣೆಯಲ್ಲಿ ಲೋಪವಾದರೆ ನೇರವಾದ ಪ್ರಾಯಶ್ಚಿತವಿಲ್ಲ. ಸಂಪತ್ತು ಆಪತ್ತಾಗಿದೆ.ನಮಾಜ್ ಸಮಯಕ್ಕೆ ನಿರ್ವಹಿಸಿ, ಉಪವಾಸ ಮಾಡಿ, ಹಜ್ಜ್ ಮುಗಿಸಿ ಶ್ರೀಮಂತನು ಪರಲೋಕದ ಕ್ಷೇಮ ಹುಡುಕುವುದು ಬೇಡ. ಪ್ರವಾದಿಯವರು ಹೇಳಿರುವುದು ಶ್ರೀಮಂತರು ಅವರ ಸಂಪತ್ತಿನ ಕಾರಣಕ್ಕಾಗಿ ನರಕ ಪ್ರವೇಶಿಸುತ್ತಾರೆ ಎಂದು.

ಇಸ್ಲಾಮಿನಲ್ಲಿ ಸಂಘಟಿತವಾದ ಪ್ರಯತ್ನ ಮತ್ತು ಹಂಚಿ ತಿನ್ನುವುದಕ್ಕೆ ಹೆಚ್ಚು ಮಹತ್ವ. ನಾವು ನಮಾಜ್ ಮಾಡುವಾಗ ಇಹ್ ದಿನ ಸಿರಾತಲ್ ಮುಸ್ತಕೀಮ್ ಎಂದು ಹೇಳುತ್ತೇವೆ ಇದರ ಸಾರಾಂಶ ನಮ್ಮನ್ನೆಲ್ಲರನ್ನೂ ನೇರ ಮಾರ್ಗಕ್ಕೆ ಸೇರಿಸು ಎಂದು. ನನ್ನನ್ನು ಮಾತ್ರ ಎಂದು ಇಲ್ಲಿ ಹೇಳಲಿಲ್ಲ. ಒಳಿತು ಮತ್ತು ಸಂತೋಷವನ್ನು ಎಲ್ಲರಿಗೂ ಬಯಸುವವನೇ ಮುಸ್ಲಿಮ್ ಎಂದ ಖತೀಬರು ಮಸೀದಿಗೆ ನಮಾಜ್ ಗಾಗಿ ದಾವಿಸುವಾಗ ರಸ್ತೆಯಲ್ಲಿ ಅಪಘಾತವಾಗಿ ನರಳುತ್ತಿರುವ ದೃಶ್ಯವನ್ನು ಕಂಡರೆ ಮೊದಲು ಆ ವ್ಯಕ್ತಿಯ ನೆರವಿಗೆ ದಾವಿಸಿ. ಅನಂತರವೇ ನಮಾಜ್ ನಿರ್ವಹಿಸಿ ಇದು ಅಲ್ಲಾಹನಿಗೆ ಅತ್ಯಂತ ಹೆಚ್ಚು ಪ್ರಿಯವಾದ ಕಾರ್ಯವಾಗಿದೆ.

ಹುಕೂಕಲ್ಲಾಹ್ ಮತ್ತು ಹುಕೂಕುಲ್ ಇಬಾದ್ ಬಗ್ಗೆ ಮುಸ್ಲಿಮರಿಗೆ ಹೆಚ್ಚಿನ ಜ್ನಾನವನ್ನು ನೀಡಬೇಕು. ಪ್ರತೀ ಮಸೀದಿ ಮತ್ತು ಕಾರ್ಯಕ್ರಮದಲ್ಲು ಇದನ್ನು ಪ್ರೇರೇಪಿಸಬೇಕು ಎಂದ ಖತೀಬರು  ಹುಕೂಕುಲ್ ಇಬಾದ್ ಸುಖ ಲಬಿಸಿದ ಹೃದಯವೇ ಮಾನವರ ಪೈಕಿ ಸರ್ವಶ್ರೇಷ್ಟ ಹೃದಯ ಎಂದ ಖತೀಬರು ರಿಫಾಯೀ ಶೇಕ್ ರವರು ನಾಯಿಗೆ ಚಿಕಿತ್ಸೆ ಕೊಡಿಸಿದ ಕಾರಣಕ್ಕಾಗಿ ಉನ್ನತ ಸ್ಥಾನೀಯರಾದರು ಹಾಗಾಗಿ ಅಲ್ಲಾಹನ ದೃಷ್ಟಿಯಲ್ಲಿ ಆತನ ಸೃಷ್ಟಿಗಳ ಸೇವೆ ಮಾಡುವವರೇ ಅತ್ಯುನ್ನತರು ಎಂದರು.

✍�ಹನೀಫ್ ಪುತ್ತೂರ್
ಸುನ್ನೀಟುಡೇ