ಬುಧವಾರ, ಜೂನ್ 29, 2016

ಹಜ್ಜ್ ಸಬ್ಸಿಡಿ

ಅಲ್ಪ ಸಂಖ್ಯಾತ ಸಮುದಾಯವಾದ ಮುಸ್ಲಿಮ್ ಸಮೂಹ  ಇಂದು ಎದುರಿಸುತ್ತಿರುವ ಪ್ರಮುಖ ಆರೋಪ ಏನೆಂದರೆ   ಹಜ್ಜ್ ಸಬ್ಸಿಡಿ ಎಂಬ ಯೋಜನೆಯಡಿ   ಸರಕಾರದ ಸಂಪತ್ತನ್ನು  ಅನ್ಯಾಯ ವಾಗಿ  ಕೊಳ್ಳೆ ಹೊಡೆಯುತ್ತಿದೆ ಎಂದು !!
ವಾಸ್ತವವಾಗಿ   ಸರಕಾರದ ಈ ಸವಲತ್ತು ಹಜ್ಜ್ ತೀರ್ಥಾಟಕರಿಗೆ  ತಲುಪುತ್ತಿದೆಯೇ ?
ಅವಲೋಕಿಸೋಣ !
ಪ್ರತಿ ವರ್ಷ ಬಜೆಟ್ ನಲ್ಲಿ ಇಂತಿಷ್ಟು ಮೊತ್ತವನ್ನು ಹಜ್ಜ್ ಸಬ್ಸಿಡಿಗೆಂದು ತೆಗೆದಿರಿಸಲಾಗುತ್ತಿದೆ . ಕಳೆದ ವರ್ಷ     ತೆಗೆದಿರಿಸಿದ ಮೊತ್ತ ರೂ 691 ಕೋಟಿ  
ಸೌದಿ ಸರಕಾರವು  ಭಾರತೀಯರಿಗೆ ಅನುಮತಿ ನೀಡಿದ ತೀರ್ಥಾಟಕರ ಸಂಖ್ಯೆ 1.36 ಲಕ್ಷ 
ಅಂದ್ರೆ 691/1.36=50.808 
ಒಬ್ಬ ಹಾಜಿಗೆ ಸರಾಸರಿ 50 ಸಾವಿರ ರೂ ಸರಕಾರ ಸಬ್ಸಿಡಿಯಾಗಿ ನೀಡುತ್ತದೆ ಎಂದರ್ಥ !!
ಹಜ್ಜ್ ಯಾತ್ರೆ ಕೈಗೊಳ್ಳುವ ಒಬ್ಬ ಹಾಜಿ ಸರಕಾರಕ್ಕೆ 1.80  ಲಕ್ಷ ರೂ ಭರಿಸಬೇಕು ಅದರಿಂದ 2 ಸಾವಿರ ಸೌದಿ ರಿಯಾಲ್ ( ಅಂದ್ರೆ ಸರಿ ಸುಮಾರು   36 ಸಾವಿರ ರೂ )   ಸೌದಿ ಅರೇಬಿಯಾ ತಲುಪಿದ ನಂತರ ಹಾಜಿಗಳಿಗೆ ಹಿಂತಿರುಗಿಸಲಾಗುತ್ತಿದೆ . ಬಾಕಿ 1.44 ಲಕ್ಷ ರೂ  ಸರಕಾರದ ಬಳಿಯೇ ಇರುತ್ತದೆ 
ಇನ್ನು  ಖರ್ಚು ವೆಚ್ಚಗಳ ಬಗ್ಗೆ ಅವಲೋಕಿಸೋಣ ! 
ದಿನನಿತ್ಯದ ಊಟೋಪಹಾರ   ಬಸ್ಸು ಹಾಗೂ taxi  ಖರ್ಚು  ಹಾಗೂ ಇನ್ನಿತರ ಖರ್ಚು ಹಾಜಿಗಳು ಸ್ವತಃ ಭರಿಸಬೇಕು!
ಎರಡು ತಿಂಗಳು ಮುಂಚೆ ಮುಂಗಡವಾಗಿ ಕಾಯ್ದಿರಿಸಿದರೆ ಕನಿಷ್ಠ ಪಕ್ಷ  ರೂ 25 ಸಾವಿರದಲ್ಲಿ    ಜಿದ್ದಾ ಗೆ return  ticket   ಲಭಿಸಬಹುದು
ಇನ್ನು ಸರಕಾರ  ಹಾಜಿಗಳಿಗಾಗಿ ವ್ಯಯಿಸುವ ಹಣ
Ticket -  25 ಸಾವಿರ ರೂ
   ಮಕ್ಕಾ ದಲ್ಲಿ ವಾಸದ ಸೌಲಭ್ಯ ಕ್ಕೆ - 50 ಸಾವಿರ ರೂ
ಮದೀನಾದಲ್ಲಿ ವಾಸದ ಸೌಲಭ್ಯ ಕ್ಕೆ -20 ಸಾವಿರ ರೂ
ಇತರ --  25 ಸಾವಿರ ರೂ
ಅಂದ್ರೆ  total  1.20 ಸಾವಿರ   ರೂ
ಬಾಕಿ  24 ಸಾವಿರ ರೂ ಸರಕಾರದ ಕೈಯಲ್ಲಿಯೇ
ಸಬ್ಸಿಡಿ  50 ಸಾವಿರ  ಸೇರಿಸಿ ಮೊತ್ತ 74 ಸಾವಿರ ರೂ   ಒಬ್ಬ ಹಾಜಿಯಿಂದ ................???????? 
ಅಂದ್ರೆ total  1.36*74  ಸಾವಿರ  ರೂ
ಮುಸ್ಲಿಮ್ ಹಜ್ಜ್ ತೀರ್ಥಾಟನೆಯ ಹೆಸರಿನಲ್ಲಿ 
   ಸರಕಾರಗಳು ಬದಲಾವಣೆ ಯಾಗುತ್ತಿದೆಯಷ್ಟೇ  
ಯಾವ ಸರಕಾರ ಬಂದರೂ  ಬಹು ಸಂಖ್ಯಾತರಿದ ಎಷ್ಟೇ ಅವಿರೋಧ ಇದ್ದರೂ ಈ ಸಬ್ಸಿಡಿಯನ್ನು ರದ್ದುಗೊಳಿಸುವ ಗೋಜಿಗೆ  ಹೋಗುವುದಿಲ್ಲ ! 
  ಕಾಲಕ್ಕೆ ತಕ್ಕಂತೆ ಕೋಲ ಕಟ್ಟಿಕೊಂಡು  ಗೆದ್ದೆತ್ತಿನ ಬಾಲ ಹಿಡಿಯುವ  ಕೇವಲ ಮುಸ್ಲಿಮ್ ನಾಮಧಾರಿ ನಾಯಕರು    ಇದಕ್ಕೆ ಇನ್ನಷ್ಟು ತುಪ್ಪ ಸುರಿಸುತ್ತಾವೆ
  ಒಂದೆಡೆ ಸರಕಾರದ ಸಂಪತ್ತನ್ನು ಕೊಳ್ಳೆ ಹೊಡೆಯಬಹುದು
ಇನ್ನೊಂದು ಕಡೆ  ಮುಸ್ಲಿಮ್ ಸಮೂಹವನ್ನು ನಿಂದಿಸುವ ಅವಕಾಶವೂ ಹೌದು
STOP  ಸಬ್ಸಿಡಿ

👆🏻
Abdul Gafoor FB