ತಸ್'ಬೀಹ್ ನಮಾಜ್ ಒಂಟಿಯಾಗಿ ನಿರ್ವಹಿಸಲ್ಪಡುವ ನಮಾಜ್ ಗಳ ಸಾಲಿಗೆ ಸೇರಿದೆ.ಈ ನಮಾಜಿಗೆ ಬಹಳ ಪ್ರಾಮುಖ್ಯ ತೆಯಿದೆ.ಸಾಧ್ಯವಿರುವವರು ಈ ನಮಾಜನ್ನು ಪ್ರತಿದಿನವೂ ನಿರ್ವಹಿಸಬೇಕು.ಇಲ್ಲವೇ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ, ಈ ಕ್ರಮದಲ್ಲಾದರೂ ಅವರವರ ಸಾಧ್ಯತೆಗನುಗುಣವಾಗಿ ನಿರ್ವಹಿಸಬೇಕು.ಇದ್ಯಾವುದೂ ಸಾಧ್ಯವಾಗದವನು ಅವನ ಬದುಕಿನಲ್ಲೊಂದು ಬಾರಿಯಾದರೂ ನಿರ್ವಹಿಸಬೇಕು.ಇದರ ಮಹಿಮೆಗಳನ್ನು ತಿಳಿದ ಬಳಿಕವೂ ಈ ನಮಾಜನ್ನು ತೊರೆಯುವವನು ಧರ್ಮದಲ್ಲಿ ಶ್ರದ್ಧೆ ಇಲ್ಲದ ಉದಾಸೀನನೇ ಸರಿ ಎಂದು ಉಲಮಾಗಳು ಹೇಳಿದ್ದಾರೆ.
ನಮಾಜಿನ ಕ್ರಮ. ..
ತಸ್'ಬೀಹ್ ನಮಾಜ್ ಗೆ 4 ರಕಅತ್ ಗಳಿವೆ.ಹಗಲು ನಿರ್ವಹಿಸುವುದಾದರೆ 4 ರಕಅತ್ ಗಳನ್ನು ಜೊತೆಯಾಗಿ ಒಂದೇ ಸಲಾಮಿನಲ್ಲಿ ನಿರ್ವಹಿಸುವುದು ಮತ್ತು ರಾತ್ರಿ ಯಾದರೆ ಎರಡು ಸಲಾಮಿನಲ್ಲಿ ತಲಾ 2 ರಕಅತ್ ನಿರ್ವಹಿಸುವುದು ನಮಾಜಿನ ಉತ್ತಮ ಕ್ರಮವಾಗಿದೆ.
ತಸ್'ಬೀಹ್ ನಮಾಜ್ ನ ನಿಯ್ಯತ್.
"ತಸ್ ಬೀಹ್ ನಮಾಜ್ 2 ರಕಅತ್ ಅಲ್ಲಾಹನಿಗಾಗಿ ನಾನು ನಿರ್ವಹಿಸುವೆ"(4 ರಕಅತ್ ಗಳನ್ನು ಒಟ್ಟಿಗೆ ನಿರ್ವಹಿಸುವುದಾದರೆ 4 ರಕಅತ್ ಎಂದು ನಿಯ್ಯತ್ತ್ ಮಾಡಬೇಕು).ಎಂದು ನಿಯ್ಯತ್ ಮಾಡಿ ಕೈಕಟ್ಟಿದ ಬಳಿಕ ದುಆ ಉಲ್ಇಫ್ತಿತಾಹ್(ವಜ್ಜಹ್ತು) ನಂತರ ಸೂರತುಲ್ ಫಾತಿಹಾ ಓದಿ ನಂತರ ಸೂರತುತ್ತ ಕಾಸುರ್(ಅಲ್ ಹಾಕುಮುತ್ತ ಕಾಸುರ್) ಇವುಗಳನ್ನು ಕ್ರಮವಾಗಿ ಓದಬೇಕು.
ನಂತರ "ಸುಬ್'ಹಾನಲ್ಲಾಹಿ ವಲ್ ಹಮ್ದು ಲಿಲ್ಲಾಹಿ ವಲಾ ಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್" ಎಂಬ ತಸ್-ಬೀಹ್ 15 ಬಾರಿ ಹೇಳಬೇಕು.ಆ ಮೇಲೆ ರುಕೂಱ್ ಮಾಡಿ ರುಕೂಱ್ ನ ತಸ್-ಬೀಹ್ ಹೇಳಿದ ಬಳಿಕ ಹತ್ತು ಬಾರಿ ಈ ತಸ್-ಬೀಹ್ ಹೇಳಬೇಕು
ಅನಂತರ ಇಱ್-ತಿದಾಲ್ 2ಸುಜೂದ್,2 ಸುಜೂದ್ ಗಳ ಮಧ್ಯೆಯಿರುವ ಕೂರುವಿಕೆ, ಇವುಗಳೆಲ್ಲೆಲ್ಲಾ ಅವುಗಳ ನಿಶ್ಚಿತ ತಸ್-ಬೀಹ್ ಗಳ ಬಳಿಕ ತಲಾ 10 ಬಾರಿ ಮೇಲಿನ ತಸ್-ಬೀಹ್ ಹೇಳಬೇಕು.
2ನೇ ಸುಜೂದ್ ಮುಗಿದ ಬಳಿಕ 2 ನೇ ರಕ್ಅತಿಗೆ ಎದ್ದೇಳುವಾಗ ಸ್ವಲ್ಪ ಕುಳಿತುಕೊಂಡು 10 ಬಾರಿ ತಸ್-ಬೀಹ್ ಹೇಳಬೇಕು. ಹೀಗೆ ಒಂದು ರಕಅತ್ ನಲ್ಲಿ 75 ತಸ್-ಬೀಹ್ ಪೂರ್ಣವಾಗುತ್ತದೆ.
ಇದೇ ರೀತಿ ನಂತರದ ಎಲ್ಲಾ ರಕಅತ್ ಗಳಲ್ಲೂ ಹೇಳಬೇಕು. ಆದರೆ ಒಂದನೇ ರಕಅತ್ ನಿಂದ ಏಳುವಾಗ ಕುಳಿತು ಹೇಳುವ 10 ತಸ್-ಬೀಹ್ ಗಳನ್ನು 2 ನೇ ರಕಅತ್ ನ ಬಳಿಕ ಅತ್ತಹಿಯ್ಯಾತ್ ಓದುವುದಕ್ಕೆ ಮೊದಲು ಓದಬೇಕು.
ಎರಡೆರಡು ರಕಅತ್ ಗಳನ್ನು ಬೇರೆ ಬೇರೆಯಾಗಿ ನಿರ್ವಹಿಸುವುದಾದರೆ ಅತ್ತಹಿಯ್ಯಾತ್ ಓದಿದ ಬಳಿಕ ಸಲಾಂ ಹೇಳಿ ಪುನಃ ನಿಯ್ಯತ್ತ್ ಮಾಡಿ ಇದೇ ರೀತಿ 2 ರಕಅತ್ ನಮಾಜ್ ನಿರ್ವಹಿಸಬೇಕು. 4 ರಕ್ಅತ್ ಒಟ್ಟಿಗೆ ನಿರ್ವಹಿಸುವುದಾದರೆ 2 ನೇ ರಕ್ಅತ್ ನ ಬಳಿಕ ಅತ್ತಹಿಯ್ಯಾತ್ ಓದಿ ಸಲಾಂ ಹೇಳದೆ ಎದ್ದು 3 ಮತ್ತು 4 ನೇ ರಕ್ಅತ್ ಪೂರ್ಣಗೊಳಿಸಬೇಕು.ಒಂದನೇ ರಕ್ಅತ್ ನಿಂದ ಏಳುವಾಗ ಕುಳಿತು ಹೇಳಿದಂತೆ 3ನೇ ರಕ್ಅತ್ ನಿಂದ ಏಳುವಾಗ ಕುಳಿತು 10 ಬಾರಿ ತಸ್-ಬೀಹ್ ಹೇಳಬೇಕು.
ಹೀಗೆ 4 ರಕ್ಅತ್ ಗಳಲ್ಲಿ 300 ತಸ್ - ಬೀಹ್ ಗಳು ಪೂರ್ಣ ವಾಗುತ್ತದೆ.
ತಸ್ - ಬೀಹ್ ನಮಾಜ್ ನಲ್ಲಿ ಓದಬೇಕಾದ ಸೂರತ್ ಗಳು.⤵
1 ನೇ ರಕ್ಅತ್ ನಲ್ಲಿ ಸೂರತುಲ್ ಕಾಸುರ್(ಅಲ್ ಹಾಕುಮುತ್ತ ಕಾಸುರ್)
2 ನೇ ರಕ್ಅತ್ ನಲ್ಲಿ ಸೂರತುಲ್ ಅಸ್'ರ್(ವಲ್ ಅಸ್'ರಿ)
3 ನೇ ರಕ್ಅತ್ ನಲ್ಲಿ ಸೂರತುಲ್ ಕಾಫಿರ್ (ಕುಲ್ ಯಾ ಅಯ್ಯಹಲ್ ಕಾಫಿರೂನ)
4 ನೇ ರಕಅತ್ ನಲ್ಲಿ ಸೂರತುಲ್ ಇಖ್-ಲಾಸ್(ಕುಲ್ ಹುವಲ್ಲಾಹು ಅಹದ್)
ಸೂರತ್ ಓದಬೇಕು.