ಪವಿತ್ರ ರಮಝಾನ್ ತಿಂಗಳಿನ ಲೈಲತ್ ಉಲ್ ಕದರ್ರ್ ಎಂಬ ಮಹತ್ವವಾದ ಘಟ್ಟಕ್ಕೆ ನಾವು ಬಂದು ನಿಂತಿದ್ದೇವೆ ಅಲ್ ಹಂಮ್ದುಲಿಲ್ಲಾಹ್. ಇನ್ನು ಕೇವಲ ಕೊನೆಯ ಹತ್ತು ದಿನಗಳು ಮಾತ್ರವೇ ಬಾಕಿ ಉಳಿದಿದೆ ಈ ಪವಿತ್ರವಾದ ರಮಝಾನ್ ಮುಕ್ತಾಯವಾಗಲು. ಅದರಲ್ಲೂ ವಿಶೇಷವಾಗಿ ರಮಝಾನಿನ ಕೊನೆಯ ಹತ್ತು ರಾತ್ರಿಗಳು ಮಹತ್ವಪೂರ್ಣವಾದ ರಾತ್ರಿಗಳಾಗಿವೆ. ಪವಿತ್ರ ಕುರ್ ಆನ್ ಅಧ್ಯಾಯ 97 ಅಲ್ ಕದ್ರ್ ನ ಮೂರನೇಯ ಸೂಕ್ತದಲ್ಲಿ ಹೇಳಲಾಗಿದೆ ಅದರಲ್ಲಿ ಒಂದು ರಾತ್ರಿಯೂ ಸಾವಿರ ಮಾಸಗಳಿಗಿಂತಲೂ ಶ್ರೇಷ್ಠವಾದ ರಾತ್ರಿಯಾಗಿದೆ. ಆ ರಾತ್ರಿಯನ್ನ "ಲೈಲತ್ ಉಲ್ ಕದರ್" ನ ರಾತ್ರಿಯೆಂದು ಕರೆಯಲ್ಪಡುತ್ತದೆ
ಈ ಒಂದು ನಿರ್ಣಯಿಸಲ್ಪಟ್ಟ ರಾತ್ರಿಯಲ್ಲಿ ಅಲ್ಲಾಹನು ಸುರ ಅಲ್ ಕದರ್ 97ನೇಯ ಅಧ್ಯಾಯದಲ್ಲಿ ಇನ್ನೊಂದು ಸೂಕ್ತದಲ್ಲಿ ಹೇಳುತ್ತಾನೆ: ಈ ನಿರ್ಣಯಿಸಲ್ಪಟ್ಟ ರಾತ್ರಿಯಲ್ಲಿ ಕುರ್ ಆನ್`ನ್ನು ನಾವು ಅವತೀರ್ಣಗೊಳಿಸಿದ್ದೇವೆ. ಅವಿಶ್ವಾಸದಿಂದ ನೈಜ್ಯ ವಿಶ್ವಾಸದ ಕಡೆಗೆ ತೆರಲಿಸುವಂಥ ಅಂತಿಮ ಗ್ರಂಥವಾಗಿದೆ ಈ ಪವಿತ್ರ ಕುರ್ ಆನ್ ಮತ್ತು ಈ ಕುರ್ ಆನ್ ಅವತ್ತೀರ್ಣಗೊಂಡ ರಾತ್ರಿಯಾಗಿದೆ ಈ "ಲೈಲತ್ ಉಲ್ ಕದರ್"..
ಅಲ್ಲಾಹನು, ಪ್ರವಾದಿ (ಸ.ಅ) ಕೇಳುತ್ತಾನೆ ಆ ನಿರ್ಣಯಿಸಲ್ಪಟ್ಟ ರಾತ್ರಿ ಏನೆಂದು ನಿಮಗೆ ತಿಳಿದಿದೆಯೇ? ಆ ನಿರ್ಣಯಿಸಲ್ಪಟ್ಟ ರಾತ್ರಿಯೂ ನೀವು ಕಳೆದ ಸಾವಿರ ತಿಂಗಳಿಗಿಂತಲೂ ಶ್ರೇಷ್ಠವಾದ ರಾತ್ರಿಗಳು, ಈ ರಾತ್ರಿಯಲ್ಲಿ ಮಾಡುವಂತ ಆರಾಧನೆಗಳು ಸಾವಿರ ತಿಂಗಳು ಮಾಡಿದ ಆರಾಧನೆಗಿಂತಲೂ ಶ್ರೇಷ್ಠವಾದ ಆರಾಧನೆಗಳಾಗಿವೆ ಈ ರಾತ್ರಿಯ ಆರಾಧನೆಗಳು. ದೇವಚರರು ಮತ್ತು ದೇವಚರರ ನಾಯಕಾರದ ಜಿಬ್ರೀಲ್ (ಅ.ಸ) ವರು ಅಲ್ಲಾಹನ ಅನುಮತಿಯ ಪ್ರಕಾರ ಎಲ್ಲ ವಿಷಯಗಳಿಗೆ ಸಂಬಧಿಸಿದಂತೆ ಅಲ್ಲಾಹನ ಆಜ್ಞೆಯನ್ನು ಪಡೆದು ಈ ಭೂಲೋಕಕ್ಕೆ ಇಳಿದು ಬರುತ್ತಾರೆ. ಈ ರಾತ್ರಿಯಿಂದ ಬೆಳಗ್ಗಿನವರೆಗೆ ಅಲ್ಲಾಹನ ಶಾಂತಿಯು ಈ ರಾತ್ರಿಯ ಮೇಲೆ ಇರುವುದರ ಬಗ್ಗೆ ಸುರ ಅಲ್ ಕದರ್ರ್ ನ ಐದನೇಯ ಸೂಕ್ತದಲ್ಲಿ ಕಾಣಬಹುದು.
ಈ ಒಂದು ಶ್ರೇಷ್ಠವಾದ ರಾತ್ರಿಯಲ್ಲಿ ನಾವು ಅಲ್ಲಾಹನೊಂದಿಗೆ ಪ್ರಾರ್ಥಿಸಬೇಕು. ಅಲ್ಲಾಹನ ಪವಿತ್ರ ಗ್ರಂಥವಾದ ಕುರ್ ಆನ್ ನನ್ನು ಪಾರಾಯಣ ಮಾಡಬೇಕು. ಮನುಷ್ಯನ ಸಕಲ ಪಾಪಗಳಿಗೆ ಮುಕ್ತಿ ಸಿಗಲು ಸೃಷ್ಟಿಕರ್ತನಲ್ಲಿ ಬೇಡಿಕೊಳ್ಳಲು ಇದೊಂದು ಸುವರ್ಣವಕಾಶವಾಗಿದೆ. ಒಂದು ವೇಳೆ ಈ ಶ್ರೇಷ್ಠವಾದ ರಾತ್ರಿಯಲ್ಲಿ ಆರಾಧನೆಯನ್ನ ಬಿಟ್ಟು ಇನ್ನಿತರ ಚಟುವಟಿಕೆಯಲ್ಲಿ ಕಾಲಹರಣ ಮಾಡುವವರಾದರೆ ನಮ್ಮಷ್ಟು ದುರಾದೃಷ್ಟವಂತರು ಬೇರೆ ಯಾರು ಇರಲಾರರು. ಈ ಮಹತ್ವವಾದ ರಾತ್ರಿ ನಮಗೆ ಬೆಸ ಸಂಖ್ಯೆಯಲ್ಲಿ ಬರಲಿದೆ. ಅದು ರಮಝಾನಿನ 21, 23, 25, 27, 29ನೇಯ ಯಾವುದಾದರೂ ಒಂದು ರಾತ್ರಿಯಲ್ಲಿ ಬರಲಿದೆ. ಆದುದರಿಂದ ಪ್ರವಾದಿ (ಸ.ಅ) ವರು ಈ ಕೊನೆಯ ಹತ್ತು ದಿವಸ ಕೂಡ ಮಸೀದಿಯಲ್ಲಿ ಕುಳಿತು ಆರಾಧನೆಯಲ್ಲಿ ತಲ್ಲಿನರಾಗುತ್ತಿದ್ದರು.
ಪ್ರವಾದಿ (ಸ.ಅ) ಯವರು ಈ ದಿನ ರಾತ್ರಿಗಳಲ್ಲಿ ಅತೀ ಹೆಚ್ಚು ಮಾಡಿದ ಪ್ರಾರ್ಥನೆ ಹೀಗಿದೆ ಅಲ್ಲಾಹುಮ್ಮ ಇನ್ನಕ ಅಫ್ಫುವಂತ ತುಹಿಬ್ಬುಹುಲ್ ಆಫ್ವಾ ಆಫ್ ಅನ್ನೀ "ಅಲ್ಲಾಹನೆ ನೀನು ಅತ್ಯಂತ ಶ್ರೇಷ್ಟವನಾಗಿರುವೆ, ನಾವು ಮಾಡಿದ ಪಾಪ ವಿಮೋಚನೆಗಳನ್ನ ಕ್ಷಮಿಸುವನಾಗಿರುವೆ, ನೀನು ಕ್ಷಮೆಯನ್ನ ಇಷ್ಟಪಡುವವನು ಆಗಿರುವೆ, ಅದುರರಿಂದ ನಾನು ಮಾಡಿದ ಪಾಪಗಳನ್ನ ಕ್ಷಮಿಸಿ ಬಿಡು ಎಂದು ಪ್ರಾರ್ಥಿಸುತ್ತಿದ್ದರು. ಹೀಗಾಗಿ ಈ ಶ್ರೇಷ್ಠವಾದ ರಾತ್ರಿಯಲ್ಲಿ ನಾವು ಮಾಡಿದ ಪಾಪಗಳನ್ನ ಅಲ್ಲಾಹನ ಬಳಿ ಕ್ಷಮೆ ಕೇಳಿದರೆ ಖಂಡಿತವಾಗಿಯೂ ಅವನು ಕ್ಷಮಿಸಿಬಿಡುತ್ತಾನೆ...
ಸಲಾಂ ಸಮ್ಮಿ