ಮದುವೆಯಾದ ಮರುದಿನ ಬಹಳ ಖುಷಿಯಿಂದ
ಮದುಮಗ ಸೂಟು-ಬೂಟಲ್ಲಿ ಸ್ನೇಹಿತರೊಡನೆ
ಪೇಟೆಗೆ ಔತಣಕೂಟ ಕೊಡಲು ಹೋದಾಗ
ಅಂಗಡಿಯ ಮುಂದೆಯೊಬ್ಬಳು ಮುಸುಕುದಾರಿ
ಮಹಿಳೆ ಕೈಯೆತ್ತಿ ತೋರಿಸುತ್ತಿದ್ದಳು...
ಮಹಿಳೆಯನ್ನು ಕಂಡ ದುಬಾರಿ ಮದುಮಗ
(ಮನದಲ್ಲಿ) ಬಡ ಗತಿಯಿಲ್ಲದ ಭಿಕ್ಷಕಿ ಇರಬೇಕಿವಳು
ಹತ್ತೊಂದರ ನೋಟನಿಟ್ಟು ಎಂಥ ಬಿಸಿಲೆನ್ನುತ್ತಾ
ತನ್ನ ಕಾರೊಳಗೆ ಕೂತು ಎ.ಸಿ ಜೊತೆ
-ಸಂಗೀತ ಆಲಿಸುತ್ತಿದ್ದನು...
ಬಿಸಿಲ ಧಗೆ ಸಹಿಸದ ಮುಸುಕುದಾರಿ ಮಹಿಳೆ
ತನ್ನ ಮುಸುಕನ್ನು ತೆರೆದು ತನ್ನ ಚೀಲದಲ್ಲಿದ್ದ
ಕುಪ್ಪಿ ತಗೆದು ನೀರನ್ನು ಹೀರಿಕೊಳ್ಳುತ್ತಾ ಹತ್ತು
ರುಪಾಯಿಯ ನೋಟ ತನ್ನ ಚೀಲದೊಳಗೆ
ತುರುಕುವುದನ್ನು ಕಂಡ ದುಬಾರಿ ಮದುಮಗ
ಬೆಚ್ಚಿಬಿದ್ದು ದಿಟ್ಟಿಸಿ ನೋಡಿದ....
ತನಗೆ ಸೂಟು-ಬೂಟು ಕೊಂಡುಕೊಳ್ಳಲು
ಕಾಸು ನೀಡಿದ ತನ್ನ ಮಡದಿಯ ಹೆತ್ತವ್ವ
ಕಣ್ಣ ಮುಂದೆ ಭಿಕ್ಷೆ ಬೇಡುವ ದೃಶ್ಯ ಕಂಡಾಗ
ತಲೆ ಮೇಲೆ ಕೈಯನ್ನಿಟ್ಟು ಯೋಚಿಸಿದನು
ನಾನು ಪಡೆದಿದ್ದು "ವರದಕ್ಷಿಣೆ"ಯಲ್ಲ ಬಡ
ಹೆಣ್ಣೊಬ್ಭಳ ಕಣ್ಣೀರ ಹನಿ!!
ಸಲಾಂ ಸಮ್ಮಿ