ಮಂಗಳವಾರ, ಜುಲೈ 5, 2016

ರಮಝಾನಿನ ನಂತರ ಮುಂದೇನು?

ಪ್ರತಿಯೊಬ್ಬರು ನಮ್ಮಲ್ಲಿ ನಾವು ಒಂದು ಪ್ರಶ್ನೆಯನ್ನು ಕೇಳಬೇಕಾಗಿದೆ. ಅದೇನೆಂದರೆ "ರಮಝಾನಿನ ನಂತರ ಮುಂದೇನು? ಉತ್ತರ ಸರಳವಾಗಿ ಹೇಳಬಹುದು "ಶವ್ವಾಲ್" ಎಂದು. ಅಲ್ಲ, ಇಲ್ಲಿ ನಾನು ಹೇಳುತ್ತಿರುವುದು ತಿಂಗಳಿನ ಹೆಸರಲ್ಲ. ಬದಲಾಗಿ ನಮ್ಮ ಮುಂದಿನ ಜೀವನ ಯಾವ ರೀತಿ ಇರಬೇಕು ಎಂದು. ಹೌದು, ಓರ್ವ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ ಯ ನಂತರ ಮುಂದೇನು ಮಾಡಬೇಕು ಎಂದು ಆಲೋಚಿಸುವುದು ಅತನ ಫಲಿತಾಂಶದ ಕಾರಣದಿಂದ. ಆ ಕಾರಣದಿಂದಲೇ ಅತನಿಗೆ ಸರಳವಾಗಿ ಅವನ ದಾರಿಯನ್ನು ಕಂಡುಕೊಳ್ಳಬಹುದು.

ಹಾಗೆಯೇ ರಮಝಾನ್ ನಂತರ ಮುಂದೇನು ಮಾಡಬೇಕು ಎಂದು ಕೂಡ ಆಲೋಚಿಸುವುದು ಆ ತಿಂಗಳಲ್ಲಿ ಆತನು ಗಳಿಸಿದ ತಕ್ವಾದ ಆದಾರದಲ್ಲಿ. ರಮಝಾನಿನ ಪರಿಪೂರ್ಣ ಪ್ರಯೋಜನ ಪಡೆಯಲು ಆತನಿಂದ ಸಾದ್ಯವಾಗಿದ್ದರೆ, ಮುಂದಿನ ಜೀವನದಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು ಎಂದು ಪ್ರತ್ಯೇಕವಾಗಿ ವಿವರಿಸಬೇಕಾದ ಅಗತ್ಯ ಕೂಡ ಇರುವುದಿಲ್ಲ. ಯಾಕೆಂದರೆ, ಈಗಾಗಲೇ ಆ ಎಲ್ಲ ಪಾಠವನ್ನು ಅವನ ಜೀವನದಲ್ಲಿ ಅಳವಡಿಸಿಕೊಂಡಿದ್ದಾನೆ.  ಎಸ್.ಎಸ್.ಎಲ್.ಸಿ ಪಾಸಾಗದೆ ಮುಂದಿನ ಶಿಕ್ಷಣವು ಯಾವ ರೀತಿ ಕಷ್ಟವೋ ಅದೇ ರೀತಿ ರಮಝಾನ್ ತಿಂಗಳಲ್ಲಿ ಗಳಿಸದ ತಕ್ವಾ ಮುಂದಿನ ತಿಂಗಳಲ್ಲಿ ಅದನ್ನು ಪಡೆಯಲು ಸಾಧ್ಯವಿಲ್ಲ. ಆ ಕಾರಣದಿಂದಲೇ ಪ್ರವಾದಿ (ಸ) ಜಿಬ್ರೀಲ್ (ಅ) ದುಆಕ್ಕೆ ಆಮೀನ್ ಹೇಳಿದ್ದು, ಯಾರಿಗೆ ರಮಝನ್ ತಿಂಗಳ ಬಾಗ್ಯ ಸಿಕ್ಕಿಯೂ ಅದರ ಪ್ರಯೋಜನ ಪಡೆಯಲಿಲ್ಲವೋ ಆತನು ನಾಶವಾದನು ಎಂದು.

ರಮಝಾನ್ ಸಂಪೂರ್ಣ ಜೀವನ ವ್ಯವಸ್ಥೆಯನ್ನು ಕಲಿಸಿಕೊಟ್ಟಿತು. ದೇಹದ ಎಲ್ಲಾ ಭಾಗಗಳು ಪ್ರಪಂಚದ ಸೃಷ್ಟಿಕರ್ತನಾದ ಅಲ್ಲಾಹನ್ನು ಸ್ಮರಿಸುವುದರೊಂದಿಗೆ ಆತನ ಸೃಷ್ಟಿಯೊಂದಿಗೆ ಯಾವ ರೀರ್ತಿ ವ್ಯವಹರಿಸಬೇಕೆಂದು ಹೇಳಿ ಕೊಟ್ಟಿತು. ಕುಟುಂಬ-ಸಂಬಂಧಿಕರೊಂದಿಗೆ, ನೆರೆಹೊರೆಯವರೊಂದಿಗೆ, ಅನಾಥರೊಂದಿಗೆ, ಬಡವರೊಂದಿಗೆ ಮತ್ತು ಸಮಾಜದೊಂದಿಗೆ ಯಾವ ರೀತಿ ವ್ಯಹರಿಸಬೇಕೆಂದು ಕೂಡ ಹೇಳಿ ಕೊಟ್ಟಿತು. ಅಲ್ಲಾಹನಲ್ಲಿ ಕ್ಷಮೆ ಕೇಳುವುದರ ಜೊತೆ-ಜೊತೆಗೆ ಆತನ ಉನ್ನತ ಸೃಷ್ಟಿಯಲ್ಲಿಯೂ ಕ್ಷಮೆ ಕೇಳಲು ಕಲಿಸಿ ಕೊಟ್ಟಿತು. ಜೀವನದಲ್ಲಿ ಒಂದು ಮಾದರಿ ವ್ಯವಸ್ಥೆಯ ಅವಕಾಶವನ್ನು ಕಲ್ಪಿಸಿ ಕೊಟ್ಟಿತು. ಈ ಅವಕಾಶ ಮತ್ತೆ-ಮತ್ತೆ ನಮ್ಮ ಜೀವನದಲ್ಲಿ ಕೈ ಸೇರುವುದೆಂಬ ಯಾವ ಖಾತರಿ ನಮಗಿಲ್ಲ. 

ರಮಝಾನ್ ತಿಂಗಳಲ್ಲಿಯೇ ಅದೆಷ್ಟೋ ಜನರು ಅವರ ಕುಟುಂಬ ಮಡದಿ-ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಪತ್ರಿಕೆಗಳಲ್ಲಿ ಮತ್ತು ಸಮಾಜ ತಾಣಗಳಲ್ಲಿ ಬೆಚ್ಚಿ ಬೀಳಿಸುವ ಭಯಾನಕ ಮರಣದ ವಾರ್ತೆಯನ್ನು ನಾವು ಕಂಡಿದ್ದೇವೆ. (ಅಲ್ಲಾಹನು ಅವರಿಗೆ ಮಗ್ಫಿರತ್ ನೀಡಿ ಅನುಗ್ರಹಿಸಲಿ)

ಆದ್ದರಿಂದ ರಮಝನ್ ತಿಂಗಳಲ್ಲಿ ನಾವು ಅಳವಡಿಸಿದ ಎಲ್ಲ ಓಳ್ಳೆಯ ತನಗಳು ಜೀವನದ ಕೊನೆಯವರೆಗು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಅದು ಮುಂದುವರಿಯಲಿ ಎಂಬ ದುಆದೊಂದಿಗೆ.....

ತಕಬ್ಬಲಲ್ಲಾಹು ಮಿನ್ನಾ ವಮಿನ್ಕುಮ್ ಅಮಲನ್ ಸ್ವಾಲಿಹಾ...

ಇಬ್ರಾಹಿಂ ಸಈದ್, ಪಕ್ಕಲಡ್ಕ